Monday, August 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    “ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

  • Bengaluru Focus

    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

#KashiVishwanathCorridor | ಕಾಶಿ ವಿಶ್ವನಾಥನ ನವೀಕೃತ ನಗರ ಡಿ.13ಕ್ಕೆ ಪ್ರಧಾನಿ‌ ನರೇಂದ್ರ ಮೋದಿಯಿಂದ ಉದ್ಘಾಟನೆ

ವಿವಿಧ ರಾಜ್ಯಗಳ ನೂರಾರು ಧರ್ಮಾಚಾರ್ಯರು, ಸಾಧು ಸಂತರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಭಾಗಿ | ದೇಶದ್ಯಂತ ಕಾರ್ಯಕ್ರಮ ವೀಕ್ಷಣೆಗೆ 51,000 ಸ್ಥಳಗಳಲ್ಲಿ ಬೃಹತ್ ಎಲ್ ಇಡಿ ಪರದೆ | ಬಿಜೆಪಿಯಿಂದ ದೇಶಾದ್ಯಂತ ಒಂದು ತಿಂಗಳ ವೈವಿಧ್ಯಮಯ ಕಾರ್ಯಕ್ರಮ

by Bengaluru Wire Desk
December 11, 2021
in News Wire, Photo Gallery, Public interest
Reading Time: 3 mins read
0

ಬೆಂಗಳೂರು, (www.bengaluruwire.com) : ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ನಿರ್ಣಯವು “ಕಾಶಿ ವಿಶ್ವನಾಥ ಧಾಮ” (Kashi Vishwanath Dham) ದ ರೂಪ ಪಡೆದಿದ್ದು, ಡಿಸೆಂಬರ್ 13 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ನವೀಕೃತ ನಗರವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ನಗರದ ಬಿಜೆಪಿಯ ಜಗನ್ನಾಥ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ಅತ್ಯಂತ ಪ್ರಾಚೀನ- ಪೌರಾಣಿಕ ನಗರವಾಗಿದ್ದು, ಇದು ಗಂಗಾ ಮಾತೆಯ ದಡದಲ್ಲಿದೆ. ಭಗವಾನ್ ಶಿವನ ಶಿರದಿಂದ ಹುಟ್ಟಿಕೊಂಡಿದೆ. ವಾರಣಾಸಿಯನ್ನು ಪವಿತ್ರ ‘ಸಪ್ತಪುರಿ’ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಚಿತ್ರಕೃಪೆ : ಕಾಶಿ ವಿಶ್ವನಾಥ ದೇವಸ್ಥಾನ

ಶ್ರೀ ಕಾಶಿ ವಿಶ್ವನಾಥನ ಜ್ಯೋರ್ತಿಲಿಂಗ

ಈ ಮಹಾನ್ ನಗರದ ಕುರಿತು ಋಗ್ವೇದ, ಸ್ಕಂದ ಪುರಾಣ, ರಾಮಾಯಣ ಮತ್ತು ಮಹಾಭಾರತ ಮತ್ತು ಮತ್ಸ್ಯ ಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಉಲ್ಲೇಖ ಕಂಡುಬರುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕನಸು ಕಂಡು, “ದಿವ್ಯ ಕಾಶಿ, ಭವ್ಯ ಕಾಶಿ”ಯ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಬಿಜೆಪಿಯ ಜಗನ್ನಾಥನ ಭವನದಲ್ಲಿ ಪತ್ರಿಕಾಗೋಷ್ಠಿ ಕಾರ್ಯಕ್ರಮ

ಭಗವಾನ್ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ, ಒಂದೆನಿಸಿದ ಪುರಾತನವಾದ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣದ ಅದ್ಭುತ ಕೆಲಸಗಳು ನಡೆದಿದ್ದು, ಈ ನವೀಕೃತ ಧಾರ್ಮಿಕ ನಗರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರು ಇದೇ ಡಿಸೆಂಬರ್ 13 ರಂದು ಉದ್ಘಾಟಿಸಲಿದ್ದಾರೆ. ಅಂದಿನಿಂದ ಮೂರು ದಿನಗಳ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಾರ್ಯಕ್ರಮ ವಿವರ ನೀಡಿದರು.

ಕಾಶಿಯಲ್ಲಿ ನಡೆಯುವ ಈ ಮಹಾ ಕಾರ್ಯಕ್ರಮದಲ್ಲಿ ಧರ್ಮಾಚಾರ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಸಾಧು-ಸಂತರು, ಬುದ್ಧಿಜೀವಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಅಲ್ಲಿನ ಸಚಿವರು ಮತ್ತು ಕೇಂದ್ರ ಸಚಿವರು ನೇರವಾಗಿ ಭಾಗವಹಿಸಲಿದ್ದಾರೆ.

ಬಿಜೆಪಿಯಿಂದ ದೇಶಾದ್ಯಂತ ಒಂದು ತಿಂಗಳ ವೈವಿಧ್ಯಮಯ ಕಾರ್ಯಕ್ರಮ :

ಈ ಕಾರ್ಯಕ್ರಮವು ವಿಶಿಷ್ಟತೆಯನ್ನು ಪಡೆದಿದ್ದು, ಭಾರತೀಯ ಸಂಸ್ಕೃತಿಯ ಸಾಮರಸ್ಯ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿರುತ್ತದೆ ಎಂದು ವಿವರಿಸಿದರು.
ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಜೀ ಅವರು ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ.

ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಅವು 13ನೇ ಡಿಸೆಂಬರ್ 2021ರಿಂದ ಪ್ರಾರಂಭವಾಗಿ, ಜನವರಿ 14 ರ ಮಕರ ಸಂಕ್ರಾಂತಿವರೆಗೆ ಮುಂದುವರಿಯುತ್ತದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದು, ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದರು.

51,000 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್‍ಇಡಿ ಪರದೆ‌ :

ಡಿಸೆಂಬರ್ 13ರ ಸಮಾರಂಭವನ್ನು ವೀಕ್ಷಿಸಲು ದೇಶದಾದ್ಯಂತ ಸುಮಾರು 51,000 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್‍ಇಡಿ ಪರದೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ “ದಿವ್ಯ ಕಾಶಿ, ಭವ್ಯ ಕಾಶಿ” ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಇದಲ್ಲದೆ, ದೊಡ್ಡ ಪರದೆಗಳು ಇರುತ್ತವೆ. ಎಲ್ಲಾ ಪ್ರಮುಖ ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ವೀಕ್ಷಿಸಲು ಅವಕಾಶವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಂಡಲಗಳಲ್ಲಿ ಕಾರ್ಯಕ್ರಮದ ಪ್ರಸಾರ ವ್ಯವಸ್ಥೆ ಇರಲಿದೆ.

ಸಾಧು-ಸಂತರು ಮತ್ತು ಬುದ್ಧಿಜೀವಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಸಾರ್ವಜನಿಕರು ಈ ನೇರಪ್ರಸಾರ ವೀಕ್ಷಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ‘ದಿವ್ಯ ಕಾಶಿ – ಭವ್ಯ ಕಾಶಿ’ ಕುರಿತು ಮಾಹಿತಿಯನ್ನೂ ನೀಡಲಾಗುವುದು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಧಾರ್ಮಿಕ ಮುಖಂಡರು ಮತ್ತು ಸಂತರನ್ನು ಪಕ್ಷದಿಂದ ಸನ್ಮಾನಿಸಲಾಗುವುದು. ಉತ್ತರ ಪ್ರದೇಶ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ರವಿಕುಮಾರ್ ತಿಳಿಸಿದರು.

ಕಾಶಿ ವಿಶ್ವನಾಥನ ಸನ್ನಿಧಿ ಪಕ್ಷಿನೋಟ

ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೋತ್ಸವ :

ಡಿ.13ರ ಕಾಶಿ ವಿಶ್ವನಾಥ ಧಾಮ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಜನರು ಶಿವನನ್ನು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪೂಜಿಸುತ್ತಾರೆ. ಬಿಜೆಪಿ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೋತ್ಸವ ಮಾಡಲು ಪ್ರಚಾರ ಮಾಡುತ್ತಿದೆ. “ಹಣತೆ ವಿತರಣೆ” ಕಾರ್ಯಕ್ರಮ ಯಶಸ್ವಿಯಾಗಿದೆ. ಹಣತೆ ವಿತರಣೆಯ ವ್ಯವಸ್ಥೆಗೆ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು ಎಂದು ವಿವರಿಸಿದರು.

ಡಿ.14ರಂದು ಬಿಜೆಪಿ ಸಿಎಂ, ಡಿಸಿಎಂಗಳ‌ ಸಮ್ಮೇಳನ :

ಡಿಸೆಂಬರ್ 14 ರಂದು, ಬಿಜೆಪಿ ಆಡಳಿತ ಇರುವ ಪ್ರಸ್ತುತ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಮ್ಮೇಳನವನ್ನು ಸಂಘಟಿಸಲಾಗುವುದು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಪಸ್ಥಿತರಿರುವರು. ಈ ಕಾರ್ಯಕ್ರಮವು ತರುಣ್ ಚುಗ್ ಮತ್ತು ಸಹ-ಪ್ರಭಾರಿ ಆಶಿಶ್ ಸೂದ್ ಅವರ ಉಸ್ತುವಾರಿಯಲ್ಲಿ ನಡೆಯಲಿದೆ.

ಕಾಶಿ ವಿಶ್ವನಾಥನ ಶೃಂಗಾರ ಆರತಿ ಸಂದರ್ಭದ ಅಲಂಕಾರ

ಕಾಶಿ ವಿಶ್ವನಾಥ ಧಾಮದಲ್ಲಿ ಮೇಯರ್ ಗಳ ಸಮ್ಮೇಳನ :

ಕೇಂದ್ರ ಸಚಿವಾಲಯದ ವತಿಯಿಂದ ಡಿಸೆಂಬರ್ 17ರಂದು, ಮೇಯರ್ ಗಳ ಸಮ್ಮೇಳನ ಕಾಶಿ ವಿಶ್ವನಾಥ ಧಾಮದಲ್ಲಿ ನಡೆಯಲಿದೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯಗಳು ಇದನ್ನು ಆಯೋಜಿಸಲಿವೆ.

ಡಿಸೆಂಬರ್ 23ರಂದು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಕಾಶಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಇದರಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ದೇಶದಾದ್ಯಂತದ ಕೃಷಿ ತಜ್ಞರು ಭಾಗವಹಿಸುತ್ತಾರೆ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಕೃಷಿ ಕ್ಷೇತ್ರ ಮತ್ತು ಅವರ ಹೊಸ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.

ವಿವೇಕಾನಂದರ ಜನ್ಮದಿನದ ಪ್ರಯುಕ್ತ ಜ.12ಕ್ಕೆ ಯುವ ಸಮಾವೇಶ :

ಸ್ವಾಮಿ ವಿವೇಕಾನಂದರ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ 2022 ರ ಜನವರಿ 12ರಂದು ಕಾಶಿಯಲ್ಲಿ ಯುವ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಮತ್ತು ರಾಜ್ಯ ಮಾಧ್ಯಮ ಸಹ ಸಂಚಾಲಕರಾದ ಬಿ.ಎನ್. ರಾಘವೇಂದ್ರ ಪಾಲ್ಗೊಂಡಿದ್ದರು.

ಹೇಗಿದ್ದ ಕಾಶಿ ಹೇಗಾಯ್ತು ನೋಡಿ :

2017 ರಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನವಿರುವ ಪಟ್ಟಣ 2019, 2020 ಹಾಗೂ 2021 ರಲ್ಲಿ ಹೇಗೆ ರೂಪಾಂತರವಾಯಿತು ಎಂದು ನೆಟ್ಟಿಗರೊಬ್ಬರು ನಾಲ್ಕು ಫೊಟೊಗಳನ್ನು ಟ್ವಿಟ್ ಮಾಡಿದ್ದಾರೆ.

Four pictures to show the #KashiVishwanathCorridor in a loop.

Mahadev 🙏 pic.twitter.com/jtKfYV5szG

— Shashank Shekhar Jha (@shashank_ssj) December 8, 2021
WhatsApp Join our WhatsApp Channel
Previous Post

TTD – Devotee Offers Gold Worth 3 Crore | ತಿರುಪತಿಯ ಶ್ರೀ ವೆಂಕಟೇಶ್ವರನಿಗೆ 3 ಕೋಟಿ ರೂ. ಬೆಲೆ ಬಾಳುವ ಬಂಗಾರದ ಕೈ ಅರ್ಪಿಸಿದ ಅನಾಮಿಕ ಭಕ್ತ…!

Next Post

BBMP To Start Building Plan Sanction | ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಪ್ರಾರಂಭವಾಗುತ್ತಿದೆ ಕಟ್ಟಡ ನಕ್ಷೆ ಮಂಜೂರಾತಿ ನೀಡಿಕೆ ಪ್ರಕ್ರಿಯೆ…!

Next Post
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

BBMP To Start Building Plan Sanction | ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಪ್ರಾರಂಭವಾಗುತ್ತಿದೆ ಕಟ್ಟಡ ನಕ್ಷೆ ಮಂಜೂರಾತಿ ನೀಡಿಕೆ ಪ್ರಕ್ರಿಯೆ...!

Miss Universe-2021 | 21 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವಸುಂದರಿ ಕಿರೀಟ : ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್-2021

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026

ಭಾರತೀಯರ ಮನೆಗಳಲ್ಲಿನ ಒಟ್ಟಾರೆ ಚಿನ್ನದ ಸಂಗ್ರಹ ಬೆಟ್ಟದಷ್ಟು ಎತ್ತರವಿದೆ!!

August 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group