Monday, August 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    “ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

  • Bengaluru Focus

    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BBMP To Start Building Plan Sanction | ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಪ್ರಾರಂಭವಾಗುತ್ತಿದೆ ಕಟ್ಟಡ ನಕ್ಷೆ ಮಂಜೂರಾತಿ ನೀಡಿಕೆ ಪ್ರಕ್ರಿಯೆ…!

ಕಟ್ಟಡ ಪರವಾನಗಿ ಶುಲ್ಕ, ಇತರ ಶುಲ್ಕ ವಿಧಿಸುವಿಕೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ ಹಿನ್ನಲೆಯಲ್ಲಿ ಮತ್ತೆ ಆರಂಭವಾಗಲಿದೆ ನಕ್ಷೆ ಮಂಜೂರಾತಿ |ಕಾನೂನು ತೊಡಕಿನಿಂದ ಐದು ತಿಂಗಳ ಹಿಂದೆ ಕಟ್ಟಡ ನಿರ್ಮಾಣ ಲೈಸೆನ್ಸ್ ನೀಡಿಕೆ ಸ್ಥಗಿತಗೊಂಡಿತ್ತು | ಮಾರ್ಗಸೂಚಿ ದರದ ಆಧಾರದ ಬದಲು ಏಕರೂಪದ ಶುಲ್ಕ ವ್ಯವಸ್ಥೆ ಜಾರಿಗೆ ನಾಗರೀಕರ ಆಗ್ರಹ

by Bengaluru Wire Desk
December 12, 2021
in Bengaluru Focus, Public interest
Reading Time: 2 mins read
0
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಕಟ್ಟಡ ನಕ್ಷೆ ಪರವಾನಗಿ ಹಾಗೂ ಇತರ ಶುಲ್ಕ ವಿಧಿಸುವಿಕೆ ಪ್ರಕ್ರಿಯೆಯು ನಾಳೆಯಿಂದ(ಡಿ.13) ಪುನಃ ಜಾರಿಗೆ ಬರಲಿದೆ.

ಬಿಬಿಎಂಪಿ ಮುಖ್ಯ ಆಯುಕ್ತರು ಇದೇ ಗುರುವಾರದಂದು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆ ಶುಲ್ಕ, ನಕ್ಷೆ ಮಂಜೂರಾತಿ ಶುಲ್ಕ, ಪ್ರಾರಂಭಿಕ ಪ್ರಮಾಣಪತ್ರ ಹಾಗೂ ಸ್ವಾಧಿನಾನುಭವ ಪ್ರಮಾಣಪತ್ರ ಸೇರಿದಂತೆ ನಾನಾ ಶುಲ್ಕಗಳನ್ನು ಸಂಬಂಧಿಸಿದ ಸ್ವತ್ತಿನ ಚಾಲ್ತಿ ಮಾರ್ಗಸೂಚಿ ದರಗಳಿಗೆ ಅನುಗುಣವಾಗಿ ಪಾವತಿಸಿಕೊಳ್ಳುವಂತೆ ಕಚೇರಿ ಆದೇಶ ಹೊರಡಿಸಿದ್ದಾರೆ.

2015ರ ಸೆಪ್ಟೆಂಬರ್ ನಲ್ಲಿ ವಿಧಿಸಿದ ಮಾರ್ಗಸೂಚಿ ದರದ ಶೇಕಡವಾರು ಪ್ರಮಾಣದ ಲೆಕ್ಕಚಾರವನ್ನೇ ಮುಂದುವರೆಸಲು ಆದೇಶದಲ್ಲಿ ತಿಳಿಸಲಾಗಿದೆ. ಕಟ್ಟಡ ಪರವಾನಗಿ ಶುಲ್ಕ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಚದರ ಮೀಟರ್ ಒಂದಕ್ಕೆ ನಿಗಧಿಪಡಿಸಿದ ಹಾಲಿ ಮಾರ್ಗಸೂಚಿದರವನ್ನು ಪರಿಗಣಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ಕಚೇರಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ನಕ್ಷೆ ಮಂಜೂರಾತಿ ಹಂತದಲ್ಲಿ ಕಟ್ಟಡದ ಒಟ್ಟು ನಿರ್ಮಾಣ ವಿಸ್ತೀರ್ಣವನ್ನು ಮಾರ್ಗಸೂಚಿ ದರದ ಶೇಕಡವಾರು ಪ್ರಮಾಣದ ಲೆಕ್ಕವನ್ನು ಪರಿಗಣಿಸಿ, ವಸತಿ ಕಟ್ಟಡ, ವಸತಿಯೇತರ ಅಥವಾ ವಾಣಿಜ್ಯ ಕಟ್ಟಡಗಳ ಪರಿಶೀಲನಾ ಶುಲ್ಕ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ಸಾಮಗ್ರಿಗಳನ್ನು ಹಾಕಲು ನೆಲಬಾಡಿಗೆ, ಲೈಸೆನ್ಸ್ ಶುಲ್ಕ, ಪ್ರಾರಂಭಿಕ ಪ್ರಮಾಣಪತ್ರ ಶುಲ್ಕಗಳನ್ನು ವಿಧಿಸುವಂತೆ ಮುಖ್ಯ ಆಯುಕ್ತರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

“ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಆದೇಶದಂತೆ, ಸೋಮವಾರದಿಂದ ಕಟ್ಟಡ ಪರವಾನಗಿ ಶುಲ್ಕ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು. ಆಗಸ್ಟ್ ಪ್ರಾರಂಭದಿಂದ ಕಟ್ಟಡ ನಕ್ಷೆ ಮಂಜೂರಾತಿ ಸ್ಥಗಿತಗೊಳಿಸಲಾಗಿದ್ದು, ಪುನಃ ಪ್ರಾರಂಭ ಮಾಡಲಾಗುತ್ತದೆ” ಎಂದು ಬಿಬಿಎಂಪಿ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ರಘು ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.

ಭೂಮಾಲೀಕರಿಂದ, ರಿಯಲ್ ಎಸ್ಟೇಟ್ ಡೆವಲಪರ್ ಗಳಿಂದ ನೆಲಬಾಡಿಗೆ, ಪರವಾನಗಿ ಶುಲ್ಕ, ಭದ್ರತಾ ಶುಲ್ಕ, ಭದ್ರತಾ ಠೇವಣಿ ಸೇರಿದಂತೆ ಇತರ ಶುಲ್ಕಗಳನ್ನು ಸಂಗ್ರಹಿಸಲು ಬಿಬಿಎಂಪಿ ಬೈಲಾಗಳಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಆ ಬಳಿಕ ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡುವುದನ್ನು ಪಾಲಿಕೆಯು ನಿಲ್ಲಿಸಿತ್ತು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪಾಲನೆಗೆ ಸಂಬಂಧಿಸಿದಂತೆ ಎದುರಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಯಲ್ಲಿ ಆಗಸ್ಟ್ ಆರಂಭದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾನ್ ಸಾಂಕ್ಷನ್ ಮಾಡುವುದನ್ನು ಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗ ಸ್ಥಗಿತಗೊಳಿಸಿತ್ತು.

ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ :

  • ವಿಧಾನಸೌಧದ ಸಾಂದರ್ಭಿಕ ಚಿತ್ರ

ನವೆಂಬರ್ ನಲ್ಲಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಕೆಎಂಸಿ ಕಾಯ್ದೆ ಹಾಗೂ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದಿತ್ತು. ಇದರಿಂದಾಗಿ ಬಿಬಿಎಂಪಿಯು ಕಟ್ಟಡ ಪರವಾನಗಿ ಶುಲ್ಕ ಸೇರಿದಂತೆ ನಾನಾ ಶುಲ್ಕ ವಿಧಿಸಲು ಅನುವು ಮಾಡಿಕೊಟ್ಟಿತ್ತು. ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಈಗಾಗಲೇ ಭೂಮಾಲೀಕರು, ರಿಯಲ್ ಎಸ್ಟೇಟ್ ಡೆವಲಪರ್ ಹಾಗೂ ಮತ್ತಿತರರಿಂದ ಶುಲ್ಕ, ದಂಡ ಶುಲ್ಕ ಮಾತ್ತದ ರೂಪದಲ್ಲಿ ಬಿಬಿಎಂಪಿಯು ಸಂಗ್ರಹಿಸಿದ 2,000 ಕೋಟಿ ರೂಪಾಯಿ ಮೊತ್ತವನ್ನು ವಾಪಸ್ ಮಾಡುವ ತೂಗುಗತ್ತಿಯಿಂದ ತಪ್ಪಿಸಿಕೊಂಡಂತಾಗಿದೆ.

ಬಿಬಿಎಂಪಿ ಆಯುಕ್ತರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಗೆ, ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆ ಮತ್ತಿತರ ದರ ನಿಗಧಿ ಕುರಿತಂತೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ನಗರಾಭಿವೃದ್ಧಿ ಇಲಾಖೆಯು, ಬಿಬಿಎಂಪಿ ಮುಖ್ಯ ಆಯುಕ್ತರು ಕೆಎಂಸಿ ಕಾಯ್ದೆ ಹಾಗೂ ಹೊಸ ಬಿಬಿಎಂಪಿ ಕಾಯ್ದೆಯಂತೆ, ಶುಲ್ಕ ದರ ನಿಗಧಿ, ದಂಡ ವಿಧಿಸುವಿಕೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆದೇಶ ಹೊರಡಿಸಲು ಅಧಿಕಾರ ಹೊಂದಿರುವುದಾಗಿ ಕಾಯ್ದೆಗೆ ತಿದ್ದುಪಡಿ ತಂದಿತ್ತು.

ಅಪಾರ್ಟ್ ಮೆಂಟ್ ಬಿಲ್ಡರ್ ಬಿಟ್ಟು ಹೋದ ಬಾಕಿ ಶುಲ್ಕ ಕಟ್ಟುವ ಹೊರೆ ಯಾರ ಮೇಲೆ? :

ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಹೊಸ ಕಟ್ಟಡಗಳ ನಕ್ಷೆ ಮಂಜೂರಾತಿ ಮತ್ತಿತರ ಕಾರ್ಯಗಳಿಗಿದ್ದ ತೊಡಕು ಸದ್ಯದ ಮಟ್ಟಿಗೆ ನಿವಾರಣೆಯಾಗಿದೆ ನಿಜ. ಆದರೆ ಕೆಲವು ಬಿಲ್ಡರ್ ಗಳು ಪಾಲಿಕೆ ಕಟ್ಟಡ ಮಂಜೂರಾತಿ ಶುಲ್ಕ ನಿಗಧಿಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿ ಈಗಾಗಲೇ ಕಟ್ಟಡ ನಕ್ಷೆ ಮಂಜೂರಾತಿ, ಪರಿಷ್ಕೃತ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧಿನಾನುಭವ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಆದರೆ ಪಾಲಿಕೆಗೆ ನಿಗಧಿತ ಕಟ್ಟಡ ಪರವಾನಗಿ ಶುಲ್ಕ ಪಾವತಿಸದೆ ಅಪಾರ್ಟ್ ಮೆಂಟ್ ಗಳನ್ನು ಗ್ರಾಹಕರಿಗೆ ಮಾರಿ ಹೊರ ನಡೆದಿರುವ ಪ್ರಕರಣದಲ್ಲಿ ಪಾಲಿಕೆಗೆ ಬಾಕಿ ಶುಲ್ಕ ನೀಡುವುದು ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಈ ಹಂತದಲ್ಲಿ ಬಿಬಿಎಂಪಿ ನಗರ ಯೋಜನಾ ವಿಭಾಗದ ಅಧಿಕಾರಿಗಳು ಒಂದೊಮ್ಮೆ ಬಾಕಿ ಶುಲ್ಕ ಕಟ್ಟುವಂತೆ ಅಪಾರ್ಟ್ ಮೆಂಟ್ ಕೊಂಡ ಗ್ರಾಹಕರಿಗೆ ನೋಟಿಸ್ ನೀಡಿದರೆ ಸಾಲ- ಸೋಲ ಮಾಡಿ ಮನೆ ಕೊಂಡ ಸಾಮಾನ್ಯ ಜನರಿಗೆ ಲಕ್ಷಾಂತರ ರೂಪಾಯಿ ಹಣ ಕಟ್ಟುವ ಹೊರೆ ಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಮಾರ್ಗಸೂಚಿ ದರದ ಆಧಾರದ ಬದಲು ಏಕರೂಪದ ಶುಲ್ಕ ವ್ಯವಸ್ಥೆ ಜಾರಿ ತಂದರೆ ಉತ್ತಮ :

ಬೆಂಗಳೂರಿನ ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು, ಪ್ರಜ್ಞಾವಂತ ನಾಗರೀಕರು, ಬಿಬಿಎಂಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗಧಿಪಡಿಸಿದ ಮಾರ್ಗಸೂಚಿ ದರದ ಆಧಾರದ ಮೇಲೆ ಕಟ್ಟಡ ಪರವಾನಗಿ ಶುಲ್ಕ ವಿಧಿಸುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದಿನೇ ದಿನೇ ದುಬಾರಿಯಾಗುತ್ತಿರುವ ಕಟ್ಟಡ ಸಾಮಗ್ರಿಗಳಿಂದಾಗಿ ಮನೆ ಕಟ್ಟಲು ಪರಿಪಾಡಲು ಪಡುತ್ತಿರುವ ಸಾಮಾನ್ಯ ನಾಗರೀಕರಿಗೆ ಕಟ್ಟಡ ಪರವಾನಗಿ ಶುಲ್ಕವೇ ಲಕ್ಷಗಟ್ಟಲೆ ಬಂದಲ್ಲಿ ಸ್ವಂತ ಸೂರು ಹೊಂದುವುದಾದರೂ ಹೇಗೆ? ಉದಾಹರಣೆಗೆ ರಾಜಾಜಿನಗರದಲ್ಲಿ 30*40 ನಿವೇಶನದಲ್ಲಿ ಕಟ್ಟಡ ಕಟ್ಟಲು, ಬಿಬಿಎಂಪಿಗೆ ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೆ, ಆತ ಕಡಿಮೆಯೆಂದರೂ 3 ರಿಂದ 4 ಲಕ್ಷ ರೂ. ಶುಲ್ಕ ಪಾವತಿಸಬೇಕು. ಇದರ ಬದಲು ನಗರದಾದ್ಯಂತ 30*40 ವಿಸ್ತೀರ್ಣದ ನಿವೇಶನದ ತನಕ ವೈಯುಕ್ತಿಕ ಮನೆ ಅಥವಾ ಕಟ್ಟಡ ಕಟ್ಟುವವರಿಗೆ ಸರ್ಕಾರ ಅಥವಾ ಬಿಬಿಎಂಪಿಯು ಏಕರೂಪದ ಶುಲ್ಕ ವ್ಯವಸ್ಥೆಯನ್ನು ಜಾರಿಗೆ ತಂದರೆ ಲಕ್ಷಾಂತರ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಾಗಾಗಿ ಈ ವ್ಯವಸ್ಥೆ ಜಾರಿಗೆ ತರುವಂತೆ ಅಭಿಪ್ರಾಯ ವ್ಯಕ್ತವಾಗಿದೆ.

WhatsApp Join our WhatsApp Channel
Previous Post

#KashiVishwanathCorridor | ಕಾಶಿ ವಿಶ್ವನಾಥನ ನವೀಕೃತ ನಗರ ಡಿ.13ಕ್ಕೆ ಪ್ರಧಾನಿ‌ ನರೇಂದ್ರ ಮೋದಿಯಿಂದ ಉದ್ಘಾಟನೆ

Next Post

Miss Universe-2021 | 21 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವಸುಂದರಿ ಕಿರೀಟ : ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್-2021

Next Post

Miss Universe-2021 | 21 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವಸುಂದರಿ ಕಿರೀಟ : ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್-2021

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಟ್ರಸ್ಟ್ ಸ್ಥಾಪಿಸಿ 12.5 ಲಕ್ಷ ರೂ. ಶಾಶ್ವತ ನಿಧಿಗೆ ದೇಣಿಗೆ ನೀಡಿದ ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣಭಟ್

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026

ಭಾರತೀಯರ ಮನೆಗಳಲ್ಲಿನ ಒಟ್ಟಾರೆ ಚಿನ್ನದ ಸಂಗ್ರಹ ಬೆಟ್ಟದಷ್ಟು ಎತ್ತರವಿದೆ!!

August 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group