Monday, August 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    “ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

  • Bengaluru Focus

    ಬೆಂಗಳೂರಿನಲ್ಲಿ ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಶಾಕ್: ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರೀ ದಂಡ!! ಜಿಬಿಎ ಕೊನೆಯ ಎಚ್ಚರಿಕೆ

    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರು ನಗರ ಜಿಲ್ಲೆಯ ಕರೋನಾ ಸೋಂಕು ನಿಯಂತ್ರಣಕ್ಕೆ ಯಶಸ್ವಿ ಕ್ರಮ ; ಹಳ್ಳಿಗಳ ಪ್ರತಿ ಮನೆ ಮನೆಗೂ ವೈದ್ಯರ ತಂಡ ಭೇಟಿ

ಜಿಲ್ಲಾಧಿಕಾರಿಗಳ ಸೂಚನೆ ; ಹೆಚ್ಚು ಸೋಂಕು ಪತ್ತೆಯಾದ ಹಳ್ಳಿಗಳ ಪ್ರತಿ ಮನೆಗಳಿಗೂ ವೈದ್ಯರ ತಂಡ ಭೇಟಿ, ಕೋವಿಡ್ ಟಾಸ್ಕ್ ಫೋರ್ಸ್ ನಿಂದ ಸರ್ವೆ | 321 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಗಳು | 100 ವಾರ್ಡ್ ಗಳಲ್ಲಿ ತಲಾ 10 ಕ್ಕಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣ

by Bengaluru Wire Desk
May 29, 2021
in Bengaluru Focus, Public interest
Reading Time: 1 min read
0

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 6ಕ್ಕಿಂತ ಹೆಚ್ಚು ಕರೋನಾ ಪ್ರಕರಣಗಳಿರುವ ಹಳ್ಳಿಗಳಲ್ಲಿ ವೈದ್ಯರ ತಂಡ, ಮನೆ ಮನೆಗೆ ತೆರಳಿ ಕರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಆ ವೈದ್ಯರ ತಂಡದಲ್ಲಿ ಒಬ್ಬ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರೆಯರು, ಅಗತ್ಯ ಔಷಧಿ, ಉಪಕರಣದೊಂದಿಗೆ ತೆರಳಿ ಕರೋನಾ ಪರೀಕ್ಷೆ, ಸೋಂಕು ಪತ್ತೆ ಕಾರ್ಯ, ಔಷಧಿ ನೀಡಿಕೆ ಹಾಗೂ ಚಿಕಿತ್ಸೆ ನೀಡುತ್ತಿದೆ. ಅಲ್ಲದೆ ಅಗತ್ಯವಿದ್ದವರಿಗೆ ಹತ್ತಿರದ ಕೋವಿಡ್ ಆರೈಕೆ ಕೇಂದ್ರ ಹಾಗೂ ಆಸ್ಪತ್ರೆಗೆ ದಾಖಲಿಸುವ ಕೆಲಸದಲ್ಲಿ ನಿರತವಾಗಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,038 ಗ್ರಾಮೀಣ ಜನ ವಸತಿಯಿರುವ ಹಳ್ಳಿಗಳಿವೆ. ಇರುವ 93 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 816 ಕಂದಾಯ ಗ್ರಾಮಗಳಿವೆ.‌ ಆ ಪೈಕಿ (ಮೇ.28 ವರದಿಯಂತೆ) ಕಳೆದ 10 ದಿನಗಳಲ್ಲಿ 152 ಗ್ರಾಮಗಳು ಕರೋನ ಮುಕ್ತವಾಗಿದೆ. 236 ಗ್ರಾಮಗಳಲ್ಲಿ ತಲಾ 5 ಕ್ಕಿಂತ‌ ಕಡಿಮೆ ಕೋವಿಡ್ ಪ್ರಕರಣಗಳು ಕಂಡು ಬಂದಿದೆ. 107 ಕಂದಾಯ ಗ್ರಾಮಗಳಲ್ಲಿ 6 ರಿಂದ 10 ಪ್ರಕರಣಗಳು ಹಾಗೂ 321 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಗಳು ಕಂಡು ಬಂದಿದೆ.

ಅದೇ ರೀತಿ ಒಂದು ನಗರಸಭೆ, 6 ಪುರಸಭೆಗಳಲ್ಲಿ ಒಟ್ಟು 173 ವಾರ್ಡ್ ಗಳಿದೆ. ಆ ಪೈಕಿ 5 ವಾರ್ಡ್ ಗಳು ಕರೋನಾ ಮುಕ್ತವಾಗಿದೆ. 40 ವಾರ್ಡ್ ಗಳಲ್ಲಿ ತಲಾ 5ಕ್ಕಿಂತ ಕಡಿಮೆ ಕರೋನಾ ಸೋಂಕಿತರಿದ್ದಾರೆ. 28 ವಾರ್ಡ್ ಗಳಲ್ಲಿ ತಲಾ 6 ರಿಂದ 10 ಕೇಸ್ ಗಳು, 100 ವಾರ್ಡ್ ಗಳಲ್ಲಿ ತಲಾ 10 ಕ್ಕಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ.

ಇದನ್ನು‌ ಮನಗಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹಾಗೂ ಅಧಿಕಾರಿಗಳು ಸೇರಿ 6ಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದ ಗ್ರಾಮಗಳ ಮ್ಯಾಪಿಂಗ್ ಮಾಡಿ, ಪ್ರತಿ ಮನೆಗಳಿಗೆ ವೈದ್ಯರ ತಂಡವನ್ನು ಕಳುಹಿಸಿ ಕರೋನಾ ಸೋಂಕು ಪತ್ತೆ, ವೈದ್ಯೋಪಚಾರ, ಚಿಕಿತ್ಸೆ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ.

ವೈದ್ಯರ ತಂಡದ ಜೊತೆಗೆ ಪಂಚಾಯ್ತಿ ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿರುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ ಶಾಲಾ ಶಿಕ್ಷಕರು, ಕಂದಾಯ, ಪಂಚಾಯ್ತಿ ಅಧಿಕಾರಿಗಳು ಕೋವಿಡ್ ಪ್ರಕರಣಗಳು ಹೆಚ್ಚಿರುವ ಗ್ರಾಮದ ಮನೆ ಮನೆಗೆ ಹೋಗಿ ಸರ್ವೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆ, ಜಿಲ್ಲಾಧಿಕಾರಿ ಜೆ.ಮಂಜುನಾಥ್

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಿರಿದಾದ ಮನೆಗಳಲ್ಲಿ 3 ರಿಂದ 4 ಮಂದಿ ಒಂದು ಮನೆಯಲ್ಲಿ ವಾಸಿಸುತ್ತಾರೆ. ಆಕಸ್ಮಾತ್ ಒಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದರೆ ಅಂತಹ ವ್ಯಕ್ತಿಯನ್ನು ವೈದ್ಯರ ತಂಡ ಪ್ರತ್ಯೇಕಿಸಿ ಕೋವಿಡ್ ಆರೈಕೆ ಕೇಂದ್ರ (ಸಿಸಿಸಿ)ಕ್ಕೆ ಕಳುಹಿಸಿ ಕೊಡುತ್ತಿದ್ದಾರೆ. ಅಲ್ಲದೆ ಸೋಂಕಿತನ ಪ್ರಾಥಮಿಕ ಸಂಪರ್ಕ ಹೋಂದಿದವರ ಮೇಲೆ ನಿಗಾ ಇರಿಸುತ್ತಿದೆ. ಸಿಸಿಸಿ ಕೇಂದ್ರದಲ್ಲಿ ಅಗತ್ಯ ಆಮ್ಲಜನಕ ವ್ಯವಸ್ಥೆ ಇದ್ದು, ತರಬೇತಿ ಹೊಂದಿದ ವೈದ್ಯಕೀಯ ತಂಡವಿರುತ್ತದೆ. ಇದರಿಂದ ಪರಿಣಾಮಕಾರಿಯಾಗಿ ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಾಗಿ ಗುಣವಾಗುತ್ತಿದ್ದಾರೆ.

– ಜೆ.ಮಂಜುನಾಥ್, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ

ತಲಾ 10ಕ್ಕಿಂತ ಹೆಚ್ಚು ಪ್ರಕರಣ ವರದಿಯಾದ ವಾರ್ಡ್ ಗಳಲ್ಲಿ‌ ಕೋವಿಡ್ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಕರೋನಾ ಮುಕ್ತ ಹಳ್ಳಿಗಳು ಹಾಗೂ ವಾರ್ಡ್ ಗಳಲ್ಲಿ ಜಿಲ್ಲಾಡಳಿತ ಕರೋನಾ ಕುರಿತಂತೆ ಜಾಗೃತಿ ಮೂಡಿಸುತ್ತಿದೆ.

ಬೆಂಗಳೂರು ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ತಲಾ‌ 6 ರಿಂದ‌ 10 ಹಾಸಿಗೆಗಳ‌ ಸಾಮರ್ಥ್ಯದ 36 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಲಾ 30 ರಿಂದ‌ 60 ಹಾಸಿಗೆಗಳ ಸಾಮರ್ಥ್ಯದ ಮೂರು ಸಮುದಾಯ ಆರೋಗ್ಯ ಕೇಂದ್ರಗಳು, ತಲಾ 100 ಹಾಸಿಗೆಗಳ ಮೂರು ತಾಲೂಕು ಆಸ್ಪತ್ರೆಗಳಿವೆ. ಕರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಟೊಂಕ ಕಟ್ಟಿ ನಿಂತು ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ 77 ಸರ್ಕಾರಿ, 60 ಗುತ್ತಿಗೆ, 80 ಸರ್ಕಾರೇತರ ಸಂಸ್ಥೆಯ ವೈದ್ಯರು ಸೇರಿದಂತೆ ಒಟ್ಟು 217 ಡಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ನಗರ ಜಿಲ್ಲೆಯ ಮೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೇ.5 ರಿಂದ ಎರಡು ವಾರಗಳ ಅವಧಿಯಲ್ಲಿ 28 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿರುವುದು ಜಿಲ್ಲಾಧಿಕಾರಿಗಳ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಗಳ ಪಿಎಂ ಕೇರ್ಸ್ ನಿಧಿ ಬಳಸಿ ಈ ವ್ಯವಸ್ಥೆ ಕಲ್ಪಿಸಿರುವುದು ಹಳ್ಳಿ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

WhatsApp Join our WhatsApp Channel
Previous Post

OFC CABLE MAFIA | ಬೆಂಗಳೂರಿನ ರಸ್ತೆಗಳಲ್ಲಿ ಭೂಗತವಾಗಿ ಅಳವಡಿಸಲಾಗಿದೆ 5,629 ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್….!

Next Post

ಬಿಬಿಎಂಪಿಯಲ್ಲಿ ಹೀಗೊಬ್ಬ “ಮಹಾರಾಜ”..!!

Next Post

ಬಿಬಿಎಂಪಿಯಲ್ಲಿ ಹೀಗೊಬ್ಬ "ಮಹಾರಾಜ"..!!

ಬೆಂಗಳೂರು ಜಿಲ್ಲಾಧಿಕಾರಿಗಳಿಂದ ಉತ್ತರ - ದಕ್ಷಿಣ ತಾಲೂಕು ಕಚೇರಿಗೆ ಹಠಾತ್ ಭೇಟಿ ಪರಿಶೀಲನೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಶಾಕ್: ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರೀ ದಂಡ!! ಜಿಬಿಎ ಕೊನೆಯ ಎಚ್ಚರಿಕೆ

August 10, 2026

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಶಾಕ್: ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರೀ ದಂಡ!! ಜಿಬಿಎ ಕೊನೆಯ ಎಚ್ಚರಿಕೆ

August 10, 2026

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group