Sunday, August 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

    Science News | ಚಂದ್ರನಲ್ಲಿ ಮಾನವನ ವಸಾಹತು: ನಾಸಾದ ಮೂನ್ ಬೇಸ್ ಯೋಜನೆಗೆ ಇಸ್ರೋಗೆ ಆಹ್ವಾನ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

    ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಅರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ: ನಿಯಮ ಉಲ್ಲಂಘಿಸಿದರೆ ಬೀಗ

    ​’ಡಬಲ್ ಬಿಲ್ ಮಾಡುವವರನ್ನು ಬಡಿದು ಹಾಕುವೆ, ನಾವೆಲ್ಲರೂ ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡೋಣ” ಸರ್ಕಾರಿ ನೌಕರರಿಗೆ ಡಿಕೆಶಿ ಕಿವಿಮಾತು

  • Bengaluru Focus

    ಬೆಂಗಳೂರಿನಲ್ಲಿ ಹಾರಾಡಲಿವೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು: ಬೆಸ್ಟ್ ಮತ್ತು ಸಾರ್ಲಾ ಏವಿಯೇಷನ್ ನಡುವೆ ಐತಿಹಾಸಿಕ ಒಪ್ಪಂದ

    ಲೋಕಾಯುಕ್ತರ ಮಿಂಚಿನ ದಾಳಿ: ಖಜಾನೆ ಇಲಾಖೆಯಲ್ಲಿ ಬಟಾಬಯಲಾದ ಭ್ರಷ್ಟಾಚಾರ, ಫೋನ್‌ಪೇನಲ್ಲಿ ಲಕ್ಷಾಂತರ ರೂ. ವಹಿವಾಟು ಪತ್ತೆ

    ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಇಲಾಖೆ ಭರ್ಜರಿ ದಾಳಿ: Zomato, Zepto ಹಾಗೂ ಇಂದಿರಾ ಕ್ಯಾಂಟೀನ್‍ಗಳಿಗೆ ಶಾಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಭಾರಿ ಅನಾಹುತ ಪಾರು, ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ. ಖಾದರ್ ಆದೇಶ

ದಾವಣಗೆರೆಯ ಚಿಗಟೇರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಉಪಕರಣಗಳು ಭಸ್ಮವಾಗಿವೆ. ತಕ್ಷಣ ಎಚ್ಚೆತ್ತ ಸಿಬ್ಬಂದಿಯಿಂದಾಗಿ ಪ್ರಾಣಹಾನಿ ತಪ್ಪಿದೆ.

by Bengaluru Wire Desk
June 30, 2026
in News Wire, Public interest
Reading Time: 1 min read
0

ಬೆಂಗಳೂರು/ದಾವಣಗೆರೆ, ಜೂ.30 www.bengaluruwire.com: ದಾವಣಗೆರೆಯ ಪ್ರತಿಷ್ಠಿತ ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್​ನಲ್ಲಿ (Operation Theatre) ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಸಂಭವಿಸಿದ ಈ ಸ್ಫೋಟದಿಂದಾಗಿ ಆಪರೇಷನ್ ಥಿಯೇಟರ್‌ನಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಸುಟ್ಟು ಕರಕಲಾಗಿವೆ. 

ಅದೃಷ್ಟವಶಾತ್, ಯಾವುದೇ ರೋಗಿಗಳು ಆಪರೇಷನ್ ಥಿಯೇಟರ್‌ನಲ್ಲಿ ಇರದ ಕಾರಣ ಬಹುದೊಡ್ಡ ಪ್ರಾಣಹಾನಿ ತಪ್ಪಿದೆ. ​ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

​ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಸಚಿವ ಯು.ಟಿ. ಖಾದರ್:

​ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, “ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ರಾಜ್ಯಮಟ್ಟದ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ, ಕೂಲಂಕುಶ ತನಿಖೆಗೆ ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.

​ಇದರ ಜೊತೆಗೆ, ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದ್ದು, ಎರಡೂ ವರದಿಗಳು ಬಂದ ಬಳಿಕ ಇಲಾಖೆಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

​ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ವೈದ್ಯರ ಮಾಹಿತಿ:

​ಬೆಳಗ್ಗೆ 8:30ರ ಸುಮಾರಿಗೆ ಇಎನ್‌ಟಿ (ಕಿವಿ, ಮೂಗು, ಗಂಟಲು) ಆಪರೇಷನ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಆಸ್ಪತ್ರೆಯ ಡಿಎಸ್ ಡಾ. ನಾಗೇಂದ್ರಪ್ಪ ಅವರ ಪ್ರಕಾರ, “ವರ್ಕ್ ಸ್ಟೇಷನ್​ನಲ್ಲಿ ಸಣ್ಣ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿದೆ. ಆಕ್ಸಿಜನ್ ಮತ್ತು ನೈಟ್ರೋಜನ್ ಅನಿಲಗಳಿದ್ದ ಕಾರಣ ಬೆಂಕಿ ಬೇಗನೇ ವ್ಯಾಪಿಸಿರಬಹುದು. ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, ತಜ್ಞ ಇಂಜಿನಿಯರ್‌ಗಳು ಪರಿಶೀಲನೆ ನಡೆಸಲಿದ್ದಾರೆ” ಎಂದರು.

​ಕ್ಷಣಾರ್ಧದಲ್ಲಿ ಪಾರಾದ ವೈದ್ಯಕೀಯ ಸಿಬ್ಬಂದಿ:

​ಬೆಳಗ್ಗೆ 9 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. 8:45ಕ್ಕೆ ಆಪರೇಷನ್ ಥಿಯೇಟರ್ ಪ್ರವೇಶಿಸಿ ಉಪಕರಣಗಳನ್ನು ಪರಿಶೀಲಿಸುತ್ತಿದ್ದ ಅರಿವಳಿಕೆ ತಜ್ಞೆ ಡಾ. ಶಿಲ್ಪಾಶ್ರೀ ಹಾಗೂ ಇತರ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

​”ನಾವು ಆಕ್ಸಿಜನ್ ಪರಿಶೀಲಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ನಾವೆಲ್ಲರೂ ಹೊರಗೆ ಓಡಿಬಂದೆವು. ಕೆಲವೇ ನಿಮಿಷಗಳಲ್ಲಿ ಎರಡು ಆಕ್ಸಿಜನ್ ಸಿಲಿಂಡರ್‌ಗಳು ಸ್ಫೋಟಗೊಂಡವು. ರೋಗಿಗಳನ್ನು ಪಕ್ಕದ ಸಿದ್ಧತಾ ಕೋಣೆಯಲ್ಲಿ ಇರಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ” ಎಂದು ಡಾ. ಶಿಲ್ಪಾಶ್ರೀ ಆತಂಕದ ಕ್ಷಣಗಳನ್ನು ವಿವರಿಸಿದರು.

​ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಪರೇಷನ್ ಥಿಯೇಟರ್ ಸುತ್ತಮುತ್ತಲಿನ ಕೊಠಡಿಗಳಿಗೂ ಹಾನಿಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.

WhatsApp Join our WhatsApp Channel
Previous Post

GBA News | ​ಜುಲೈ 1ರಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು: 90 ಕಿ.ಮೀ ಫುಟ್‌ಪಾತ್ ಅಭಿವೃದ್ಧಿಗೆ ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಜಿ ಸೂಚನೆ

Next Post

120 ಕೋಟಿ ನಾಯಿ ಸಂತಾನಹರಣ ಗೋಲ್ಮಾಲ್, ನಾಪತ್ತೆಯಾದ 20 ಲಕ್ಷ ಗಿಡಗಳು: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ

GBA News | ಚಿಕ್ಕಪೇಟೆಯಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಸರ್ವೆಗೆ ಹೈ-ಪವರ್ ಟೀಮ್ ರಚನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

Please login to join discussion

Like Us on Facebook

Follow Us on Twitter

Recent News

ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

August 15, 2026

Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

August 15, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

August 15, 2026

Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

August 15, 2026

“ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

August 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group