Thursday, June 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

  • Bengaluru Focus

    PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

    ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

ಕೆಂಪೇಗೌಡ ಬಡಾವಣೆಯ ಮುಖ್ಯ ಸಂಪರ್ಕ ರಸ್ತೆ ಕುಸಿದಿದೆ ಎಂಬ ವೈರಲ್ ಫೋಟೋಗಳು ಹಳೆಯವು. ಕೇವಲ ಮುಖ್ಯ ರಸ್ತೆ ಮಾತ್ರ ಉದ್ಘಾಟನೆಗೊಳ್ಳುತ್ತಿದ್ದು, ವಾಹನ ಸಂಚಾರಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬಿಡಿಎ ಸ್ಪಷ್ಟನೆ ನೀಡಿದೆ.

by Bengaluru Wire Desk
June 25, 2026
in Bengaluru Focus
Reading Time: 1 min read
0

ಬೆಂಗಳೂರು, ಜೂ.25 www.bengaluruwire.com: ಬಹುನಿರೀಕ್ಷಿತ ನಾಡಪ್ರಭು ಕೆಂಪೇಗೌಡ ಬಡಾವಣೆಯ (Nadaprabhu Kempegowda Layout) ಮುಖ್ಯ ಸಂಪರ್ಕ ರಸ್ತೆಯ (MAR) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ, ರಸ್ತೆಯೊಂದು ಕುಸಿದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. 

ಈ ಕುರಿತು ಸಾರ್ವಜನಿಕರಲ್ಲಿ ಆತಂಕ ಮತ್ತು ಗೊಂದಲ ಮೂಡಿದ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಎಚ್ಚೆತ್ತುಕೊಂಡಿದ್ದು, ಈ ವೈರಲ್ ಫೋಟೋಗಳ ಹಿಂದಿನ ನೈಜ ಸತ್ಯಾಂಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

​ವೈರಲ್ ಫೋಟೋಗಳ ಹಿಂದಿನ ಸತ್ಯಾಂಶವೇನು?:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಇತ್ತೀಚಿನದ್ದಲ್ಲ, ಬದಲಾಗಿ ಅವು ಕಾಮಗಾರಿ ನಡೆಯುತ್ತಿದ್ದ ಹಿಂದಿನ ಹಂತದ ಫೋಟೋಗಳಾಗಿವೆ ಎಂದು ಬಿಡಿಎ ಸ್ಪಷ್ಟಪಡಿಸಿದೆ. ಉದ್ಘಾಟನೆಗೆ ಸಜ್ಜಾಗಿರುವುದು ‘ಮುಖ್ಯ ಕ್ಯಾರೇಜ್ ವೇ’ (Main Carriageway) ಮಾತ್ರ. ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ 5 ಕಡೆ ಸರ್ವೀಸ್ ರಸ್ತೆಗಳ ಕಾಮಗಾರಿ ಅಪೂರ್ಣವಾಗಿದೆ. ಹೀಗಾಗಿ, ಸರ್ವೀಸ್ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುತ್ತಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.

ಎಂಎಆರ್ ರಸ್ತೆಗೆ ಡಾಂಬರ್ ಹಾಕುತ್ತಿರುವ ದೃಶ್ಯ.

​ಸರ್ವೀಸ್ ರಸ್ತೆಯಲ್ಲಿ ಕುಸಿತ ಉಂಟಾಗಲು ಕಾರಣವೇನು?:

ಹರಿದಾಡುತ್ತಿರುವ ಫೋಟೋದಲ್ಲಿರುವ ಸ್ಥಳವು 6.40 ಕಿ.ಮೀ. ಚೈನೇಜ್ ಬಳಿಯ ಎಡಭಾಗದ (LHS) ಸರ್ವೀಸ್ ರಸ್ತೆಯಲ್ಲಿದೆ. ಇದು ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ, ಕೇಂದ್ರ ಪರಿಸರ ಇಲಾಖೆಯ (MoEF&CC) ಷರತ್ತಿನಂತೆ ವನ್ಯಜೀವಿಗಳ ಓಡಾಟಕ್ಕಾಗಿ 4×4 ಮೀಟರ್ ಅಳತೆಯ ‘ಆರ್.ಸಿ.ಸಿ ಅನಿಮಲ್ ಕ್ರಾಸಿಂಗ್ ಬಾಕ್ಸ್’ (RCC Animal Crossing Box) ಹಾಗೂ 2 ಕಲ್ವರ್ಟ್ ಗಳನ್ನು ನಿರ್ಮಿಸಲಾಗಿದೆ.

​ಇಲ್ಲಿ ರಸ್ತೆಯು ಸುಮಾರು 7 ಮೀಟರ್ ಎತ್ತರವಿದ್ದು, ಅರಣ್ಯ ಪ್ರದೇಶವಾದ್ದರಿಂದ ಭಾರಿ ಯಂತ್ರಗಳನ್ನು ಬಳಸಿ ಮಣ್ಣು ಗಟ್ಟಿಗೊಳಿಸಲು (Compaction) ಸಾಧ್ಯವಾಗಿರಲಿಲ್ಲ. ವೈಬ್ರೇಟರಿ ರೋಲರ್‌ಗಳನ್ನು ಬಳಸಿದರೆ ಕಂಪನದಿಂದ ಆರ್.ಸಿ.ಸಿ ಬಾಕ್ಸ್‌ಗಳಿಗೆ ಹಾನಿಯಾಗುವ ಭೀತಿ ಇತ್ತು. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಮಣ್ಣು ಗಟ್ಟಿಯಾಗಿರಲಿಲ್ಲ. ಇದೇ ವೇಳೆ ಸುರಿದ ಭಾರಿ ಮಳೆಯಿಂದಾಗಿ ಅನಿಮಲ್ ಕ್ರಾಸಿಂಗ್ ಬಾಕ್ಸ್ ಪಕ್ಕದ ಮಣ್ಣು ಸುಮಾರು 300 ಮಿ.ಮೀ (30 ಸೆಂ.ಮೀ) ನಷ್ಟು ಕುಸಿದಿತ್ತು. ಆದರೆ, ಯಾವುದೇ ಆರ್.ಸಿ.ಸಿ ರಚನೆಗಳಿಗೆ ಹಾನಿಯಾಗಿರಲಿಲ್ಲ.

​ತಕ್ಷಣವೇ ಸರಿಪಡಿಸಿದ ಬಿಡಿಎ:

ಮಳೆಯಿಂದ ಮಣ್ಣು ಕುಸಿದ ತಕ್ಷಣವೇ ಎಚ್ಚೆತ್ತ ಬಿಡಿಎ, ಗುತ್ತಿಗೆದಾರರ ಮೂಲಕ ಹಾನಿಗೊಳಗಾದ ಪ್ರದೇಶಕ್ಕೆ ಸೂಕ್ತ ಮಣ್ಣು ತುಂಬಿ, ಗಟ್ಟಿಗೊಳಿಸಿ, ಡಾಂಬರೀಕರಣ ಮಾಡಿ ರಸ್ತೆಯನ್ನು ಮೊದಲಿನ ವಿನ್ಯಾಸಕ್ಕೆ ತಂದಿದೆ. ಉದ್ಘಾಟನೆಗೊಳ್ಳಲಿರುವ ಮುಖ್ಯ ರಸ್ತೆಯು ಅತ್ಯುನ್ನತ ಎಂಜಿನಿಯರಿಂಗ್ ಮಾನದಂಡಗಳೊಂದಿಗೆ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ. ಕಾಮಗಾರಿ ಪೂರ್ಣಗೊಂಡ 2 ವರ್ಷಗಳವರೆಗೆ ಏನೇ ನ್ಯೂನತೆ ಕಂಡುಬಂದರೂ ಅದನ್ನು ಸರಿಪಡಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಹಳೆಯ ಫೋಟೋಗಳನ್ನು ನೋಡಿ ತಪ್ಪು ತಿಳುವಳಿಕೆಗೆ ಒಳಗಾಗಬಾರದು ಎಂದು ಬಿಡಿಎ ಮನವಿ ಮಾಡಿದೆ.

WhatsApp Join our WhatsApp Channel
Previous Post

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

Next Post

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

Next Post

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

Please login to join discussion

Like Us on Facebook

Follow Us on Twitter

Recent News

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

June 25, 2026

ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

June 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

June 25, 2026

ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

June 25, 2026

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

June 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group