Sunday, August 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

    Science News | ಚಂದ್ರನಲ್ಲಿ ಮಾನವನ ವಸಾಹತು: ನಾಸಾದ ಮೂನ್ ಬೇಸ್ ಯೋಜನೆಗೆ ಇಸ್ರೋಗೆ ಆಹ್ವಾನ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

    ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಅರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ: ನಿಯಮ ಉಲ್ಲಂಘಿಸಿದರೆ ಬೀಗ

    ​’ಡಬಲ್ ಬಿಲ್ ಮಾಡುವವರನ್ನು ಬಡಿದು ಹಾಕುವೆ, ನಾವೆಲ್ಲರೂ ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡೋಣ” ಸರ್ಕಾರಿ ನೌಕರರಿಗೆ ಡಿಕೆಶಿ ಕಿವಿಮಾತು

  • Bengaluru Focus

    ಬೆಂಗಳೂರಿನಲ್ಲಿ ಹಾರಾಡಲಿವೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು: ಬೆಸ್ಟ್ ಮತ್ತು ಸಾರ್ಲಾ ಏವಿಯೇಷನ್ ನಡುವೆ ಐತಿಹಾಸಿಕ ಒಪ್ಪಂದ

    ಲೋಕಾಯುಕ್ತರ ಮಿಂಚಿನ ದಾಳಿ: ಖಜಾನೆ ಇಲಾಖೆಯಲ್ಲಿ ಬಟಾಬಯಲಾದ ಭ್ರಷ್ಟಾಚಾರ, ಫೋನ್‌ಪೇನಲ್ಲಿ ಲಕ್ಷಾಂತರ ರೂ. ವಹಿವಾಟು ಪತ್ತೆ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

    ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಇಲಾಖೆ ಭರ್ಜರಿ ದಾಳಿ: Zomato, Zepto ಹಾಗೂ ಇಂದಿರಾ ಕ್ಯಾಂಟೀನ್‍ಗಳಿಗೆ ಶಾಕ್

    ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಅರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ: ನಿಯಮ ಉಲ್ಲಂಘಿಸಿದರೆ ಬೀಗ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

ಬೆಂಗಳೂರಿನ ಮಂಗನಹಳ್ಳಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ 57 ವರ್ಷದ ವ್ಯಕ್ತಿಯ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ದುರ್ಮರಣ.

by Bengaluru Wire Desk
June 19, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಜೂ.19 www.bengaluruwire.com: ರಾಜಧಾನಿಯಲ್ಲಿ ಬಿಎಂಟಿಸಿ (BMTC) ಬಸ್ಸುಗಳ ಮರಣ ಮೃದಂಗ ಮುಂದುವರಿದಿದೆ. ಉಲ್ಲಾಳ ವಾರ್ಡಿನ ಮಂಗನಹಳ್ಳಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ 57 ವರ್ಷದ ವ್ಯಕ್ತಿಯೊಬ್ಬರ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜೂನ್ 18ರ ರಾತ್ರಿ ಸಂಭವಿಸಿದೆ.

​ಮೃತ ದುರ್ದೈವಿಯನ್ನು ಉಲ್ಲಾಳ ನಿವಾಸಿ ರಾಜು (57 ವರ್ಷ) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಸುಮಾರು 7.30ರ ಸಂದರ್ಭದಲ್ಲಿ ಕೆ.ಆರ್. ಮಾರುಕಟ್ಟೆಯಿಂದ ಉಲ್ಲಾಳ ಉಪನಗರದ ಕಡೆಗೆ ತೆರಳುತ್ತಿದ್ದ ಡಿಪೋ 16ರ ಗುತ್ತಿಗೆ ಆಧಾರಿತ ಎಲೆಕ್ಟ್ರಿಕ್ ಬಸ್ (KA51 AK 7336), ಮಂಗನಹಳ್ಳಿ ಕ್ರಾಸ್ ಬರುವ ಮುನ್ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಬಲ ತಿರುವು ಪಡೆಯುತ್ತಿತ್ತು. ಈ ವೇಳೆ ರಸ್ತೆ ದಾಟುತ್ತಿದ್ದ ರಾಜು ಅವರಿಗೆ ಡಿಕ್ಕಿ ಹೊಡೆದ ಬಸ್, ಅವರ ಹೊಟ್ಟೆಯ ಮೇಲೆಯೇ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಗುರುವಾರ ರಾತ್ರಿ ಬಿಎಂಟಿಸಿ ಬಸ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಸ್ಥಳದಲ್ಲಿ ರಕ್ತದ ಕಲೆಯ ಮೇಲೆ ಬಿಳಿ ಮರಳು ಹಾಕಿರುವ ನೋಟ.

​ಹೆದರಿ ಪರಾರಿಯಾದ ಬಿಎಂಟಿಸಿ ಸಿಬ್ಬಂದಿ:

ಅಪಘಾತ ಸಂಭವಿಸಿದ ಕೂಡಲೇ ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ಆದರೆ ಘಟನೆಯ ಭೀಕರತೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಬೆದರಿದ ಬಸ್ ಚಾಲಕ, ನಿರ್ವಾಹಕ ಹಾಗೂ ತಪಾಸಣೆಗೆ ಬಂದಿದ್ದ ಸಿಬ್ಬಂದಿ ಬಸ್‌ನಿಂದ ಇಳಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ‘ಬೆಂಗಳೂರು ವೈರ್’ಗೆ (BengaluruWire) ತಿಳಿಸಿದ್ದಾರೆ. ರಾತ್ರಿ 8.20ರ ಸುಮಾರಿಗೆ ನಿರ್ವಾಹಕರು ಘಟನೆಯ ಕುರಿತು ಬಿಎಂಟಿಸಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

​ಸ್ಥಳೀಯರ ಆಕ್ರೋಶ ಹಾಗೂ ಆರೋಪ:

ಇದೇ ಪ್ರದೇಶದಲ್ಲಿ ಈ ಹಿಂದೆಯೂ ಬಿಎಂಟಿಸಿ ಬಸ್ ಹರಿದು ತಾಯಿ-ಮಗಳು ಪ್ರಾಣ ಕಳೆದುಕೊಂಡಿದ್ದರು. ಈ ಭಾಗದಲ್ಲಿ ಬಿಎಂಟಿಸಿ ಚಾಲಕರು ಅತಿವೇಗ ಹಾಗೂ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಾರೆ. ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ, ಒಮ್ಮೆಯೇ ಒಂದರ ಹಿಂದೊಂದರಂತೆ ಸಾಲುಗಟ್ಟಿ ಬರುತ್ತವೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಸಿಬ್ಬಂದಿ ಕೂಡ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹ:

ನಿರಂತರ ಅಪಘಾತಗಳ ಹಿನ್ನೆಲೆಯಲ್ಲಿ, ಜನರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ರಸ್ತೆ ನಿಯಮಾವಳಿ ಪ್ರಕಾರ ದುರ್ಘಟನೆ ನಡೆದ ಸ್ಥಳದಲ್ಲಿ ತಕ್ಷಣವೇ ‘ರಸ್ತೆ ಉಬ್ಬು’ (Speed Breakers) ಅಳವಡಿಸುವಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹಾಗೂ ನಗರ ಸಂಚಾರಿ ಪೊಲೀಸ್ ಇಲಾಖೆಯನ್ನು ನಾಗರಿಕರು ಹಾಗೂ ಸ್ಥಳೀಯ ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು ಒತ್ತಾಯಿಸಿವೆ.

ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ:

​ಘಟನೆಯ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಇಂತಹ ಭೀಕರ ಅಪಘಾತ ನಡೆದರೂ ಬಿಎಂಟಿಸಿ 16ನೇ ಘಟಕದ ಅಧಿಕಾರಿಗಳಿಗಾಗಲೀ, ಬಿಎಂಟಿಸಿ ಅಪಘಾತ ಘಟಕದವರ ಬಳಿಯಾಗಲೀ ಘಟನೆಯ ಸಂಬಂಧ ಸೂಕ್ತ ಮಾಹಿತಿ, ಅಪಘಾತ ನಂತರದ ವಿಡಿಯೋ, ಫೊಟೊಗಳಾಗಲಿ ಇಲ್ಲದಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಅವರ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುವಂತಿದೆ. ಇದೇ ಭಾಗದಲ್ಲೇ ಪದೇ ಪದೇ ಬಿಎಂಟಿಸಿ ಬಸ್ ಗಳಿಂದ ಅಪಘಾತಗಳಾಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. (Main Image Recreated from Gemini AI – ಸಾಂದರ್ಭಿಕ ಚಿತ್ರ)

WhatsApp Join our WhatsApp Channel
Previous Post

ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

Next Post

ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

Next Post
ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

Please login to join discussion

Like Us on Facebook

Follow Us on Twitter

Recent News

ಅಬ್ಬಾ! ಕಳೆದುಹೋದ ಚಪ್ಪಲಿ ಹುಡುಕಲು ChatGPT ಮೊರೆ ಹೋದ ವ್ಯಕ್ತಿ: ವೈರಲ್ ಆಯ್ತು ವಿಚಿತ್ರ ಐಡಿಯಾ

August 16, 2026

ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

August 15, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಅಬ್ಬಾ! ಕಳೆದುಹೋದ ಚಪ್ಪಲಿ ಹುಡುಕಲು ChatGPT ಮೊರೆ ಹೋದ ವ್ಯಕ್ತಿ: ವೈರಲ್ ಆಯ್ತು ವಿಚಿತ್ರ ಐಡಿಯಾ

August 16, 2026

ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

August 15, 2026

Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

August 15, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group