Sunday, May 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

    Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

    ​ಪೇಪರ್ ವಿತರಕನಿಂದ ಸಿಎಂ ಮಾಧ್ಯಮ ಸಲಹೆಗಾರರವರೆಗೆ: ನಡೆದು ಬಂದ ಹಾದಿ ಬಿಚ್ಚಿಟ್ಟ ಕೆ.ವಿ.ಪ್ರಭಾಕರ್

    ರಾಜ್ಯದಲ್ಲಿ 50,000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ಭೂಮಿ ವಶ: ಅರಣ್ಯ ಸಿಬ್ಬಂದಿಗೆ ಸುರಕ್ಷಾ ಕ್ಯಾಬಿನ್ ವಿತರಣೆ

    BDA News | ಬಿಡಿಎ ಭರ್ಜರಿ ಕಾರ್ಯಾಚರಣೆ: ದೊಮ್ಮಲೂರು, ದೂಕನಹಳ್ಳಿಯಲ್ಲಿ ₹12 ಕೋಟಿ ಮೌಲ್ಯದ ಆಸ್ತಿ ವಶ

    ಎವರೆಸ್ಟ್ ಶಿಖರದಲ್ಲಿ ಮೊಳಗಿದ ‘ವಂದೇ ಮಾತರಂ’: ಬಿಎಸ್‌ಎಫ್‌ನ ಮೊದಲ ಮಹಿಳಾ ತಂಡದಿಂದ ಐತಿಹಾಸಿಕ ಸಾಧನೆ

    ತಮಿಳುನಾಡು ಸಚಿವ ಸಂಪುಟ ವಿಸ್ತರಣೆ: 23 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ

    ಸಫಾರಿಯಲ್ಲಿ ಇನ್ನು ಮುಂದೆ ತೆರೆದ ವಾಹನಗಳಿಗೆ ಬ್ರೇಕ್: ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಕಡ್ಡಾಯಗೊಳಿಸಿದ ಸಚಿವ ಈಶ್ವರ ಖಂಡ್ರೆ

    ಬೆಂಗಳೂರು-ಜ್ಯೂರಿಕ್ ನೇರ ವಿಮಾನ: ಅಕ್ಟೋಬರ್‌ನಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ಸುಲಭ ಪ್ರಯಾಣ

  • Bengaluru Focus

    ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ರೈಲ್ವೆ ಅಧಿಕಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

    GBA NEWS | ಗ್ರೇಟರ್ ಬೆಂಗಳೂರು ಚುನಾವಣೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಚಾಟಿ, ಆಗಸ್ಟ್ 31 ಅಂತಿಮ ಗಡುವು

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ರಾಜಕಾಲುವೆ ಹೂಳು ತೆರವು ಮತ್ತು ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆಗಳು ಚುರುಕುಗೊಳಿಸಿವೆ.

by Bengaluru Wire Desk
May 23, 2026
in Bengaluru Focus, News Wire
Reading Time: 1 min read
0

​ಬೆಂಗಳೂರು, ಮೇ.23 www.bengaluruwire.com: ಮುಂಗಾರು ಪ್ರವೇಶಕ್ಕೂ ಮುನ್ನವೇ ಸಂಭಾವ್ಯ ಪ್ರವಾಹ ಹಾಗೂ ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ, ಬೆಂಗಳೂರು ಪೂರ್ವ ಹಾಗೂ ಕೇಂದ್ರ ನಗರ ಪಾಲಿಕೆಗಳು ಪೂರ್ವಸಿದ್ಧತಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ.

​ಗೆದ್ದಲಹಳ್ಳಿಯಲ್ಲಿ ಬಾಕಿ ಉಳಿದಿರುವ ರೈಲ್ವೆ ವೆಂಟ್ ಕಾಮಗಾರಿಯನ್ನು ಮೇ ಮಾಸಾಂತ್ಯದೊಳಗೆ ಪೂರ್ಣಗೊಳಿಸುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ಗಡುವು ನೀಡಿದ್ದರೆ, ಇತ್ತ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.

​ಮೇ 31ರ ಡೆಡ್‌ಲೈನ್: ತ್ವರಿತಗತಿಯಲ್ಲಿ ಬಾಕ್ಸ್ ಪುಶಿಂಗ್ ಕಾಮಗಾರಿ

​ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆ ನಿರ್ವಹಣೆ ಕುರಿತು ಆಯುಕ್ತರಾದ ರಮೇಶ್ ಡಿ.ಎಸ್. ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

​ಈ ವೇಳೆ ಮಾತನಾಡಿದ ಅವರು, “ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಉಳಿದಿರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ (Box Pushing) ಕಾರ್ಯವನ್ನು ಮೇ 31ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು,” ಎಂದು ಕಾರ್ಯಪಾಲಕ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಿಸಿ, ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರೆ ಸುತ್ತಮುತ್ತಲ ಪ್ರದೇಶದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿವರಿಸಿದರು.

​ಯುದ್ಧೋಪಾದಿಯಲ್ಲಿ ರಾಜಕಾಲುವೆ ಹೂಳು ತೆರವು

​ಗೆದ್ದಲಹಳ್ಳಿ ಬಳಿಯ ರಾಜಕಾಲುವೆಯಲ್ಲಿ ನಡೆಯುತ್ತಿರುವ ವಾರ್ಷಿಕ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸಿದ ಆಯುಕ್ತರು, ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

​ಸರ್ವಜ್ಞನಗರ ಗಡಿಭಾಗದಲ್ಲಿ ಸಮನ್ವಯ: ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದಲೂ ನೀರು ಹರಿದು ಬರುವುದರಿಂದ, ಮೇಲ್ಭಾಗದ ಹೂಳು ಕೆಳಗೆ ಬಂದು ಪ್ರವಾಹ ಸೃಷ್ಟಿಯಾಗುವ ಅಪಾಯವಿರುತ್ತದೆ. ಹೀಗಾಗಿ, ಅಲ್ಲಿನ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಕಾಲುವೆ ನಿರ್ವಹಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

​ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.

​ಕೇಂದ್ರ ನಗರ ಪಾಲಿಕೆ: ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ

​ಇನ್ನೊಂದೆಡೆ, ಮಳೆ-ಗಾಳಿಗೆ ಉರುಳಿಬೀಳುವ ಮರಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮುಂದಾಗಿದೆ. ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ವ್ಯಾಪ್ತಿಯಾದ್ಯಂತ ಅಪಾಯಕಾರಿ ಮರಗಳು, ಒಣಗಿದ ರೆಂಬೆ-ಕೊಂಬೆಗಳು ಹಾಗೂ ಈಗಾಗಲೇ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ಚುರುಕಿನಿಂದ ಸಾಗಿದೆ.

​ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಂದಿರಾನಗರದ ಸಿಎಂಎಚ್ (CMH) ರಸ್ತೆ, ಶ್ರೀರಾಮ ದೇವಸ್ಥಾನ ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ, ನ್ಯೂ ತಿಪ್ಪಸಂದ್ರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಅಪಾಯಕಾರಿಯಾಗಿದ್ದ ಮರಗಳ ರೆಂಬೆಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.

WhatsApp Join our WhatsApp Channel
Previous Post

Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

May 23, 2026

Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

May 23, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

May 23, 2026

Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

May 23, 2026

​ಪೇಪರ್ ವಿತರಕನಿಂದ ಸಿಎಂ ಮಾಧ್ಯಮ ಸಲಹೆಗಾರರವರೆಗೆ: ನಡೆದು ಬಂದ ಹಾದಿ ಬಿಚ್ಚಿಟ್ಟ ಕೆ.ವಿ.ಪ್ರಭಾಕರ್

May 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group