Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಜಾತಿ ಗಣತಿ: ಸಮೀಕ್ಷೆ ನಿರಾಕರಿಸಿದವರಿಗೆ ‘ದೃಢೀಕರಣ ಪತ್ರ’ ಕಡ್ಡಾಯವೇ?

ಸರ್ಕಾರದ ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

by Bengaluru Wire Desk
October 14, 2025
in News Wire, Public interest
Reading Time: 2 mins read
0

ಬೆಂಗಳೂರು, .14 www.bengaluruwire.com: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯ ಪ್ರಕ್ರಿಯೆಯು ವಿವಿಧ ಕಾರಣಗಳಿಂದಾಗಿ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಸಮೀಕ್ಷೆಗೆ ಮಾಹಿತಿ ನೀಡಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ, ಗಣತಿಯಿಂದ ದೂರ ಉಳಿಯುವವರಿಗೆ ‘ದೃಢೀಕರಣ ಪತ್ರ’ ಕಡ್ಡಾಯಗೊಳಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (Karnataka Backward Classes Commission) ಗಂಭೀರ ಚಿಂತನೆ ನಡೆಸಿದೆ.

ದೃಢೀಕರಣ ಪತ್ರ ಕಡ್ಡಾಯದ ಹಿಂದಿನ ಉದ್ದೇಶವೇನು? :

ದಿನೇ ದಿನೇ ಜಾತಿ ಗಣತಿಯಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪ್ರತಿ ಮನೆಗೆ ಭೇಟಿ ನೀಡಿದ್ದರೂ ಸಮೀಕ್ಷೆ ಅಪೂರ್ಣ ಎಂಬ ಸಾಧ್ಯತೆಗಳನ್ನು ಇದು ನಿವಾರಿಸಲಿದೆ. ಈ ಹಿನ್ನೆಲೆಯಲ್ಲಿ, ಸಮೀಕ್ಷೆಗೆ ನಿರಾಕರಿಸಿದವರ ಮನೆಗೆ ಗಣತಿದಾರರು ಮತ್ತೊಂದು ಸುತ್ತು ಭೇಟಿ ನೀಡಿ, ಸಹಿಯೊಂದಿಗಿನ ದೃಢೀಕರಣ ಪತ್ರ (Confirmation Letter) ಪಡೆಯಲು ಆಯೋಗ ಮುಂದಾಗಿದೆ.

ಜಿಬಿಎ ಹೊರತುಪಡಿಸಿ ರಾಜ್ಯದಾದ್ಯಂತ ಸೆ.22 ರಿಂದ ಜಾತಿ ಗಣತಿ ಆರಂಭವಾಗಿದ್ದು ಈತನಕ ಒಟ್ಟು ಮನೆಗಳ ಗುರಿ 1,47,88,831 ಆಗಿದ್ದು, ಅ.13ರ ಮಾಹಿತಿ ಪ್ರಕಾರ ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ 1,33,70,651 ಆಗಿದ್ದು, ಶೇಕಡಾವಾರು ಪ್ರಗತಿಯು ಶೇ.90.26 ರಷ್ಟಾಗಿದೆ.

ಈ ಮೊದಲೇ, ಮಾಹಿತಿ ನೀಡಲು ನಿರಾಕರಿಸಿದಲ್ಲಿ ಅಂತಹವರಿಂದ ಲಿಖಿತವಾಗಿ ಸ್ಪಷ್ಟೀಕರಣ ಪಡೆಯಲು ಸೂಚಿಸಲಾಗಿತ್ತಾದರೂ, ಅದು ಕಡ್ಡಾಯ ಮಾಡಿರರಲಿಲ್ಲ. ಹಾಗಾಗಿ ಹಲವು ಕಡೆಗಳಲ್ಲಿ ನಿರಾಕರಿಸುವುದರ ಜತೆಗೆ, ಬರೆದುಕೊಡಲಿಕ್ಕೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ಗಣತಿದಾರರಿಗೆ ನೀಡಿದ್ದ ಯುಎಚ್‌ಐಡಿ (UHID) ಪಟ್ಟಿಯೊಂದಿಗೆ ಗಣತಿಯನ್ನು ತಾಳೆ ಹಾಕಲಾಗುತ್ತದೆ. ಆಗ ಕೈಬಿಟ್ಟ ಮನೆಗಳಿಗೆ ಪುನಃ ಭೇಟಿ ನೀಡಿ ಮುಚ್ಚಳಿಕೆ ಅಥವಾ ದೃಢೀಕರಣ ಪತ್ರ ಪಡೆಯುವುದರಿಂದ ಸಮೀಕ್ಷೆ ನೂರಕ್ಕೆ ನೂರರಷ್ಟು ಪೂರ್ಣಗೊಂಡಂತಾಗಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯದಲ್ಲಿ (ಗ್ರೇಟರ್ ಬೆಂಗಳೂರು ಹೊರತುಪಡಿಸಿ – GBA) ಸಮೀಕ್ಷೆಯ ಪ್ರಗತಿಯು ಗಮನಾರ್ಹ ಮಟ್ಟಕ್ಕೆ ತಲುಪಿದೆ. ಜಿಬಿಎ ವ್ಯಾಪ್ತಿಯಲ್ಲಿ ಗಣತಿಯ ಪ್ರಗತಿಯು ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ.

ಅನಧಿಕೃತ ಗೈರು ಹಾಜರಾತಿಗೆ ಅಮಾನತಿನ‌ ಶಿಕ್ಷೆ :

ಬೆಂಗಳೂರು ನಗರದಲ್ಲಿ ಸುಮಾರು 46 ಲಕ್ಷ ಮನೆಗಳಿಗೆ ಸಮೀಕ್ಷೆ ನಡೆಸಬೇಕಿದ್ದು, ಇದಕ್ಕಾಗಿ ಸುಮಾರು 21,000 ಸಮೀಕ್ಷಾದಾರ(Enumerators)ರನ್ನು ನಿಯೋಜಿಸಲಾಗಿದೆ. ಈ ಸಮೀಕ್ಷಾದಾರರಲ್ಲಿ 18,000 ಕ್ಕೂ ಹೆಚ್ಚು ಮಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಆದರೆ, ಪ್ರತಿದಿನ ಪದೇ ಪದೇ ನೋಟೀಸ್ ಗಳು ಹಾಗೂ ಎಸ್ ಎಂಎಸ್ ಮೂಲಕ ಸಂದೇಶಗಳನ್ನು ನೀಡುತ್ತಿದ್ದರೂ ಕೂಡಾ ಸುಮಾರು 2,300 ಸಮೀಕ್ಷದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಗೈರುಹಾಜರಿದ್ದಾರೆ. ಇಂತಹವರ ನಡೆ ಗಂಭೀರ ಶಿಸ್ತುಉಲ್ಲಂಘನೆಯಾಗಿದೆ. ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅವರ ಅನಧಿಕೃತ ಗೈರುಹಾಜರಿ ಅವಧಿಯ ವೇತನವನ್ನು “ಕೆಲಸ ಮಾಡದಿದ್ದರೆ – ವೇತನವಿಲ್ಲ”(No Work – No Pay) ತತ್ವದ ಪ್ರಕಾರ ನಿರಾಕರಿಸುವಂತೆ ಆದೇಶ ಹೊರಡಿಸಿದ್ದಾರೆ.

ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಹಾಗೂ ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಜಾತಿ ಗಣತಿ: ಪ್ರಗತಿ ವಿವರ (ಅ. 13, 2025 ರವರೆಗೆ)

ರಾಜ್ಯದ ಪ್ರಗತಿ (GBA ಹೊರತುಪಡಿಸಿ) 

ಒಟ್ಟು ಮನೆಗಳ ಗುರಿ : 1,47,88,831 

ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ : 1,33,70,651  

ಶೇಕಡಾವಾರು ಪ್ರಗತಿ : 90.26% 

ಒಟ್ಟು ಜನಸಂಖ್ಯೆ (ಸಮೀಕ್ಷೆ) : 4,93,49,806  

GBA (ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಗತಿ)

ಒಟ್ಟು ಮನೆಗಳ ಗುರಿ : 39,82,335 

ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ : 13,17,176 

ಶೇಕಡಾವಾರು ಪ್ರಗತಿ : 29.35% 

ಒಟ್ಟು ಜನಸಂಖ್ಯೆ (ಸಮೀಕ್ಷೆ) : 41,31,585

ಸಮೀಕ್ಷೆಯ ಪ್ರಮುಖ ಪ್ರಶ್ನೆಗಳು ಮತ್ತು ಅಗತ್ಯ ದಾಖಲೆಗಳು :

ಜಾತಿ ಗಣತಿ ಸಮೀಕ್ಷೆಯು ಮುಖ್ಯವಾಗಿ ಈ ಮೂರು ವರ್ಗದ ಪ್ರಶ್ನೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ:

 * ಸಾಮಾಜಿಕ ಮತ್ತು ಜಾತಿ ವಿವರ:

   * ಕುಟುಂಬದ ಸದಸ್ಯರ ಹೆಸರು, ಲಿಂಗ, ವಯಸ್ಸು, ಕೌಟುಂಬಿಕ ಸಂಬಂಧ, ಮಾತೃಭಾಷೆ.

   * ಜಾತಿ ಮತ್ತು ಉಪಜಾತಿ, ಧರ್ಮ, ಇತ್ಯಾದಿ.

 * ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ:

   * ಕುಟುಂಬದ ಸದಸ್ಯರ ಶೈಕ್ಷಣಿಕ ಮಟ್ಟ (ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಇತ್ಯಾದಿ).

   * ಪ್ರಸ್ತುತ ಉದ್ಯೋಗದ ಸ್ವರೂಪ (ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ, ಕೂಲಿ, ಇತ್ಯಾದಿ).

 * ಆರ್ಥಿಕ ಮತ್ತು ಜೀವನ ಮಟ್ಟದ ಮಾಹಿತಿ:

   * ಮಾಸಿಕ ಆದಾಯ, ಕೃಷಿ ಭೂಮಿಯ ವಿವರ.

   * ಕುಟುಂಬದ ಆಸ್ತಿ, ಮನೆ ಮಾಲೀಕತ್ವ, ಕುಡಿಯುವ ನೀರಿನ ಮೂಲ, ಇತ್ಯಾದಿ.

ಸಮೀಕ್ಷೆಗೆ ತೋರಿಸಬೇಕಿರುವ ದಾಖಲೆಗಳು:

 * ಆಧಾರ್ ಕಾರ್ಡ್/ಸಂಖ್ಯೆ

 * ಪಡಿತರ ಚೀಟಿ (Ration Card)

 * ವಿಕಲಚೇತನ ಯುಐಡಿ/ಪ್ರಮಾಣಪತ್ರ

 * ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು (ಲಭ್ಯವಿದ್ದರೆ)

 * ಮತದಾರರ ಗುರುತಿನ ಚೀಟಿ

ಆನ್‌ಲೈನ್ ಸ್ವಯಂ ಸಮೀಕ್ಷೆಯ ಅವಕಾಶ:

ಸರ್ಕಾರವು ಗಣತಿ ಪ್ರಕ್ರಿಯೆಗೆ ಪಾರದರ್ಶಕತೆ ನೀಡುವ ಸಲುವಾಗಿ, ನಿವಾಸಿಗಳಿಗೆ ನಿರ್ದಿಷ್ಟ ಅವಧಿಗೆ ಆನ್‌ಲೈನ್ ಮೂಲಕವೂ ತಮ್ಮ ಮಾಹಿತಿಯನ್ನು ನಮೂದಿಸಲು ಸ್ವಯಂ-ಸಮೀಕ್ಷೆಯ (Online Self-Survey) ಅವಕಾಶವನ್ನು ನೀಡಿತ್ತು. ಇದು ಗಣತಿದಾರರ ಭೇಟಿ ಕಷ್ಟಕರವಾದವರಿಗೆ ಅನುಕೂಲ ಒದಗಿಸಿದೆ.

WhatsApp Join our WhatsApp Channel
Previous Post

Silver Record Price | ದಾಖಲೆಯ ಏರಿಕೆ: ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹1,85,100ಕ್ಕೆ ಜಿಗಿದು ಹೊಸ ಇತಿಹಾಸ ಸೃಷ್ಟಿ

Next Post

BW Special | ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಗರ ಯೋಜನೆ ಜವಾಬ್ದಾರಿ ಹಸ್ತಾಂತರ: ಬಿಡಿಎಗೆ ಮುಕ್ತಿ

Next Post

BW Special | ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಗರ ಯೋಜನೆ ಜವಾಬ್ದಾರಿ ಹಸ್ತಾಂತರ: ಬಿಡಿಎಗೆ ಮುಕ್ತಿ

GBA News | ನ.1 ರಿಂದ 100 ದಿನಗಳ ಕಾಲ ‘ಎ’ ಖಾತಾ ಅಭಿಯಾನ: ಬಿ ಖಾತೆಗಳು ಎ ಖಾತೆಗೆ ಪರಿವರ್ತನೆ - ಡಿಸಿಎಂ ಡಿ.ಕೆ. ಶಿವಕುಮಾರ್

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group