Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

GBA News | ಬೆಂಗಳೂರಿನ ನೂತನ ಆಡಳಿತದಲ್ಲಿ ಭಾರೀ ಬದಲಾವಣೆ : ಜಿಬಿಎಗೆ 15 ಐಎಎಸ್ ಮತ್ತು 2 ಐಪಿಎಸ್ ಹುದ್ದೆಗಳು ಮರು ಹಂಚಿಕೆ

ಈ ಹಿಂದೆ ಬಿಬಿಎಂಪಿ ಆಡಳಿತದಲ್ಲಿ 16 ಐಎಎಸ್ ಹಾಗೂ 2 ಐಪಿಎಸ್ ಹುದ್ದೆಗಳನ್ನು ಮಂಜೂರಾಗಿತ್ತು. ಈಗ ಐಎಎಸ್ ನಲ್ಲಿ 1 ಹುದ್ದೆ ಕಡಿತವಾಗಿ, ಉಳಿದ ಹುದ್ದೆಗಳು ಜಿಬಿಎಗೆ ಮರು ಹಂಚಿಕೆಯಾಗಿದೆ.

by Bengaluru Wire Desk
August 31, 2025
in Bengaluru Focus
Reading Time: 1 min read
0

ಬೆಂಗಳೂರು, ಆ.31 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರದ್ದಾದ ನಂತರ, ನೂತನವಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಐದು ನಗರ ಪಾಲಿಕೆಗಳಿಗೆ ಅಧಿಕೃತವಾಗಿ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಹುದ್ದೆಗಳನ್ನು ಮರುಹಂಚಿಕೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಈ ಆದೇಶದ ಅನ್ವಯ, ಒಟ್ಟು 15 ಐಎಎಸ್ ಮತ್ತು 2 ಐಪಿಎಸ್ ಹುದ್ದೆಗಳನ್ನು ಜಿಬಿಎ ಮತ್ತು ಹೊಸದಾಗಿ ಸ್ಥಾಪಿಸಲಾದ ಐದು ನಗರ ಪಾಲಿಕೆಗಳಿಗೆ (ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ಮತ್ತು ದಕ್ಷಿಣ) ಹಂಚಿಕೆ ಮಾಡಲಾಗಿದೆ. ಈ ಹಿಂದೆ ಬಿಬಿಎಂಪಿ ಆಡಳಿತದಲ್ಲಿ 16 ಐಎಎಸ್ ಹಾಗೂ 2 ಐಪಿಎಸ್ ಹುದ್ದೆಗಳನ್ನು ಮಂಜೂರಾಗಿತ್ತು. ನೂತನ ಹುದ್ದೆಗಳು ಐದು ನಗರ ಪಾಲಿಕೆ ರಚನೆ ಕುರಿತಂತೆ ಅಂತಿಮ ಅಧಿಸೂಚನೆ ಹೊರಡಿಸುವ ದಿನಾಂಕದಿಂದ ಅನ್ವಯವಾಗಲಿದೆ. ಇದೇ ರೀತಿ ಬಿಬಿಎಂಪಿಯಲ್ಲಿ 19 ಕೆಎಎಸ್ ಹುದ್ದೆಗಳ ಪೈಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಆಯ್ಕೆ ಶ್ರೇಣಿ, ಹಿರಿಯ ಶ್ರೇಣಿ ಹಾಗೂ ಕಿರಿಯ ಶ್ರೇಣಿ ಸೇರಿದಂತೆ 17 ಕೆಎಎಸ್ ಹಾಗೂ 1 ಕೆಎಸ್ ಪಿಎಸ್ ಹುದ್ದೆಯನ್ನು ಮರು ಹಂಚಿಕೆ ಮಾಡಲಾಗಿದೆ.

ಜಿಬಿಎನಲ್ಲಿ ಆಯ್ಕೆ ಶ್ರೇಣಿಯ ಉಪ ಆಯುಕ್ತರ ಒಂದು ಹುದ್ದೆ (ಆಡಳಿತ, ಚುನಾವಣೆ ಮತ್ತು ಐಟಿ) ಹಾಗೂ ಕಿರಿಯ ಶ್ರೇಣಿಯ ಸಹಾಯಕ ಆಯುಕ್ತರ (ಆಡಳಿತ, ಚುನಾವಣೆ ಮತ್ತು ಐಟಿ) ಒಂದು ಹುದ್ದೆಯನ್ನು ಮರುವಿನ್ಯಾಸ ಮಾಡಿ ಹಂಚಿಕೆ ಮಾಡಲಾಗಿದೆ. ಉಳಿದಂತೆ 5 ನಗರ ಪಾಲಿಕೆಗಳಿಗೆ ತಲಾ ಒಂದೊಂದರಂತೆ ಅಪರ ಆಯುಕ್ತರ (ಕಂದಾಯ) ಹುದ್ದೆ ಹಾಗೂ ಐದು ಮಹಾನಗರ ಪಾಲಿಕೆಗಳ ಪ್ರತಿ ಎರಡು ವಲಯಗಳಿಗೆ ತಲಾ ಎರಡು ಹಿರಿಯ ಶ್ರೇಣಿಯ ವಲಯ ಜಂಟಿ ಆಯುಕ್ತರ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.

ಜಿಬಿಎಗೆ ಹಂಚಿಕೆಯಾದ ಐಎಎಸ್ ಹುದ್ದೆಗಳು ಹೀಗಿವೆ :

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಒಟ್ಟು 5 ಐಎಎಸ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳ ವಿವರ ಹೀಗಿದೆ:

 * ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಯನ್ನು ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ನಿರ್ವಹಿಸಲಿದ್ದಾರೆ.

 * ವಿಶೇಷ ಆಯುಕ್ತರು (ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ), ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಗೆ ಒಬ್ಬರು ವಿಶೇಷ ಆಯುಕ್ತರನ್ನು ನೇಮಿಸಲಾಗುವುದು.

 * ವಿಶೇಷ ಆಯುಕ್ತರು (ಆರೋಗ್ಯ ಮತ್ತು ಶಿಕ್ಷಣ), ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಆರೋಗ್ಯ ಮತ್ತು ಶಿಕ್ಷಣ ವಿಭಾಗದ ಮೇಲ್ವಿಚಾರಣೆಗೆ ಒಬ್ಬರು ವಿಶೇಷ ಆಯುಕ್ತರು ಇರುತ್ತಾರೆ.

 * ವಿಶೇಷ ಆಯುಕ್ತರು (ಎಫ್‌ಇ.ಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ), ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಯೂ ಒಬ್ಬರು ವಿಶೇಷ ಆಯುಕ್ತರಿಗೆ ಮೀಸಲಾಗಿದೆ.

 * ವಿಶೇಷ ಆಯುಕ್ತರು (ಹಣಕಾಸು) ಹಾಗೂ ಮುಖ್ಯ ಹಣಕಾಸು ಅಧಿಕಾರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಯನ್ನು ವಿಶೇಷ ಆಯುಕ್ತರು ನಿರ್ವಹಿಸಲಿದ್ದು, ಇವರು ಮುಖ್ಯ ಹಣಕಾಸು ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಐದು ನಗರ ಪಾಲಿಕೆಗಳಿಗೆ ಐಎಎಸ್ ಹುದ್ದೆಗಳ ಹಂಚಿಕೆ:

ಹೊಸದಾಗಿ ರಚನೆಯಾದ ಬೆಂಗಳೂರಿನ ಐದು ನಗರ ಪಾಲಿಕೆಗಳಾದ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಪಾಲಿಕೆಗಳಿಗೆ ಒಟ್ಟು 10 ಐಎಎಸ್ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

 * ಪಾಲಿಕೆಗಳ ಆಯುಕ್ತರು: ಪ್ರತಿಯೊಂದು ಪಾಲಿಕೆಗೂ ಒಬ್ಬರಂತೆ, ಒಟ್ಟು ಐದು ಆಯುಕ್ತರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಹುದ್ದೆಗಳು ಕಾರ್ಯದರ್ಶಿ ಶ್ರೇಣಿ ಅಥವಾ ಅಗತ್ಯಾನುಸಾರ ಇತರೆ ಶ್ರೇಣಿಯ ಐಎಎಸ್ ಅಧಿಕಾರಿಗಳಿಗೆ ಮೀಸಲಾಗಿದೆ.

 * ಅಪರ ಆಯುಕ್ತರು (ಅಭಿವೃದ್ಧಿ): ಪ್ರತಿ ಪಾಲಿಕೆಗೂ ಒಬ್ಬರಂತೆ, ಒಟ್ಟು ಐದು ಅಪರ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಈ ಹುದ್ದೆಗಳನ್ನು ಹಿರಿಯ ಅಥವಾ ಜೆಎಜಿ ಶ್ರೇಣಿಯ ಅಧಿಕಾರಿಗಳು ನಿರ್ವಹಿಸಲಿದ್ದಾರೆ.

ಜಿಬಿಎಗೆ ಹಂಚಿಕೆಯಾದ ಐಪಿಎಸ್ ಹುದ್ದೆಗಳು:

ಬೆಂಗಳೂರು ಮಹಾನಗರ ಕಾರ್ಯಪಡೆ (BMTF) ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ತರಲಾಗಿದ್ದು, ಇಲ್ಲಿನ ಎರಡು ಐಪಿಎಸ್ ಹುದ್ದೆಗಳನ್ನು ಜಿಬಿಎಗೆ ಮರು ಹಂಚಿಕೆ ಮಾಡಲಾಗಿದೆ.

 * ಎಡಿಜಿಪಿ, ಬಿಎಂಟಿಎಫ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಯು ಎಡಿಜಿಪಿ ಶ್ರೇಣಿಯ ಅಧಿಕಾರಿಗೆ ಮೀಸಲಾಗಿದೆ.

 * ಎಸ್.ಪಿ, ಬಿಎಂಟಿಎಫ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಈ ಹುದ್ದೆಯು ಎಸ್.ಪಿ ಶ್ರೇಣಿಯ ಅಧಿಕಾರಿಗೆ ಮೀಸಲಾಗಿದೆ.

ಒಟ್ಟಾರೆಯಾಗಿ, ಬಿಬಿಎಂಪಿ ವಿಸರ್ಜನೆಯ ಬಳಿಕ ಹೊಸ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಈ ಹುದ್ದೆಗಳ ಮರುಹಂಚಿಕೆ ಅನಿವಾರ್ಯವಾಗಿತ್ತು. ಈ ಆದೇಶವು ಜಿಬಿಎ ಮತ್ತು ನೂತನ ಪಾಲಿಕೆಗಳ ಆಡಳಿತಾತ್ಮಕ ಕಾರ್ಯಗಳಿಗೆ ಚಾಲನೆ ನೀಡಲಿದೆ ಎಂದು ತಿಳಿಯಬಹುದು.

WhatsApp Join our WhatsApp Channel
Previous Post

ಜಿಬಿಎ ಪ್ರಧಾನ ಕಚೇರಿಯ ನವೀಕೃತ ಮೀಟಿಂಗ್ ಹಾಲ್-1 ಸಿದ್ಧ : ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್ ರಚನೆ 

Next Post

ಆರ್ಟ್ ಆಫ್ ಲಿವಿಂಗ್‌ನಲ್ಲಿ ಭಾರತೀಯ ಸೇನಾಪಡೆಗೆ ಆಧ್ಯಾತ್ಮಿಕ ಮತ್ತು ಮಾನಸಿಕ ಬಲ ನೀಡುವ ಕಾರ್ಯಾಗಾರ

Next Post
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಆಧ್ಯಾತ್ಮಿಕ ಕಾರ್ಯಾಗಾರದಲ್ಲಿ  ಭಾರತೀಯ ಸೇನೆಯ ಸೈನಿಕರು ಹಾಗೂ ಅವರ ಕುಟುಂಬದವರು ಪಾಲ್ಗೊಂಡು ಗ್ರೂಪ್ ಫೊಟೋಗೆ ಪೋಸ್ ನೀಡಿದ್ದು ಹೀಗೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ಭಾರತೀಯ ಸೇನಾಪಡೆಗೆ ಆಧ್ಯಾತ್ಮಿಕ ಮತ್ತು ಮಾನಸಿಕ ಬಲ ನೀಡುವ ಕಾರ್ಯಾಗಾರ

ಜಿಎಸ್‌ಟಿ ಕಡಿತ ನಿರೀಕ್ಷೆ, ಗೃಹೋಪಯೋಗಿ ವಸ್ತುಗಳ ಖರೀದಿಗೆ ಕಾದು ನೋಡುವ ತಂತ್ರ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group