Sunday, August 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

INS ARIGHAT | ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಬಂತು ಮತ್ತಷ್ಟು ಬಲ : ಐಎನ್ಎಸ್ ಅರಿಘಾಟ್ ಜಲಂತರ್ಗಾಮಿ ನೌಕೆ ಕಡಲ ಸೇವೆಗೆ

ಪರಮಾಣು ಕ್ಷಿಪಣಿ ಹೊತ್ತೊಯ್ಯುವ ಬಹುಪಯೋಗಿ ಜಲಂರ್ತಗಾಮಿ ನೌಕೆಯಾಗಿರುವ ಐಎನ್ಎಸ್ ಅರಿಘಾಟ್ ಐಎನ್ಎಸ್ ಅರಿಂಹತ್ ಸುಧಾರಿತ ಆವೃತ್ತಿಯಾಗಿದೆ.

by Bengaluru Wire Desk
August 29, 2024
in News Wire, Public interest
Reading Time: 2 mins read
0
INS Arighat submarine

ಪರಮಾಣು ಸಿಡಿತಲೆ ಕ್ಷಿಪಣಿಯನ್ನು ಹೊಂದಿರುವ ಅತ್ಯಾಧುನಿಕ ಜಲಂತರ್ಗಾಣಿ ನೌಕೆ ಐಎನ್ಎಸ್ ಅರಿಘಾಟ್ ಸಮುದ್ರದಲ್ಲಿ ಕಾರ್ಯಾಚರಿಸುತ್ತಿರುವ ಸಾಂದರ್ಭಿಕ ಚಿತ್ರ.

ನವದೆಹಲಿ, ಆ.29 www.bengaluruwire.com : ದೇಶದ ಕಡಲ ತೀರದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಿದೆ.  ಭಾರತೀಯ ನೌಕಾಪಡೆಯ ಎರಡನೇ ಪರಮಾಣು ಸಿಡಿತಲೆ ಕ್ಷಿಪಣಿ ಆಧಾರಿತ ಜಲಾಂತರ್ಗಾಮಿ ಎಸ್‌ಎಸ್‌ಬಿಎನ್ (ಹಡಗು, ಜಲಂತರ್ಗಾಮಿ, ಸ್ಪೋಟಕ, ಪರಮಾಣು) ಐಎನ್‌ಎಸ್ ಅರಿಘಾಟ್ (INS Arighat) ಬಹುಪಯೋಗಿ ಹಡಗು ದೇಶದ ಸೇವೆಗೆ ಅಧಿಕೃತವಾಗಿ  ಸೇರ್ಪಡೆಯಾಗಿದೆ.

ಎಸ್-3 ಎಂದೂ ಕರೆಯಲ್ಪಡುವ, ಐಎನ್ಎಸ್ ಅರಿಘಾಟ್ ಭಾರತದ ಮೊದಲ ಐಎನ್ಎಸ್ ಅರಿಹಂತ್ ಸುಧಾರಿತ ಆವೃತ್ತಿಯಾಗಿದೆ. ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಐಎನ್ಎಸ್ ಅರಿಘಾಟ್ ಜಲಂತರ್ಗಾಮಿ ನೌಕೆಯನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇವೆಗೆ ನಿಯೋಜಿಸಲಾಗಿದೆ.

ಭಾರತೀಯ ನೌಕಾಪಡೆ ಸೇರ್ಪಡೆಯಾದ ಐಎನ್ಎಸ್ ಅರಿಘಾಟ್ ಸಮುದ್ರದಲ್ಲಿ ಕಾರ್ಯಾಚರಣೆ ಆರಂಭಿಸಿದ ಚಿತ್ರ.

ಐಎನ್ಎಸ್ ಅರಿಘಾಟ್ ಸಾಮರ್ಥ್ಯ ಹಾಗೂ ವಿಶೇಷತೆಗಳೇನು ? :

ಐಎನ್ಎಸ್ ಅರಿಘಾಟ್ ಜಲಾಂತರ್ಗಾಮಿ ನೌಕೆಯಾದ ಅರಿಹಂತ್ ವರ್ಗದ ಸ್ಥಳೀಯ ಪರಮಾಣು ಜಲಾಂತರ್ಗಾಮಿ ನೌಕೆಗಳ ಎರಡನೇ ಆವೃತ್ತಿ ಇದಾಗಿದೆ. 2009 ರಲ್ಲಿ ಸೇರ್ಪಡೆಗೊಂಡು ಅಸ್ತಿತ್ವದಲ್ಲಿರುವ ಐಎನ್ಎಸ್ ಅರಿಹಂತ್ ಅನ್ನು ಇದು ಬೆಂಬಲಿಸುತ್ತದೆ. ಹಿಂದೂಸ್ಥಾನ್ ವರದಿಯ ಪ್ರಕಾರ, ಐಎನ್ಎಸ್ ಅರಿಘಾಟ್ ಸಮುದ್ರ ಮೇಲ್ಮೈಯಲ್ಲಿ ಗರಿಷ್ಠ 12-15 ನಾಟಿಕಲ್  (22-28 ಕಿ.ಮೀ/ಪ್ರತಿ ಗಂಟೆಗೆ) ವೇಗವನ್ನು ತಲುಪಬಹುದು ಮತ್ತು ಜಲಂತರ್ಗಾಮಿಯಾಗಿ ಮುಳುಗಿದಾಗ 24 ನಾಟಿಕಲ್ ವೇಗದಲ್ಲಿ (44 ಕಿ.ಮೀ/ಪ್ರತಿ ಗಂಟೆಗೆ) ಸಾಗಲಿದೆ. ಐಎನ್ಎಸ್ ಅರಿಹಂತ್‌ನಂತೆಯೇ, ಐಎನ್ಎಸ್ ಅರಿಘಾಟ್ ತನ್ನ ತೆಕ್ಕೆಯಲ್ಲಿ ನಾಲ್ಕು ಉಡಾವಣಾ ಟ್ಯೂಬ್‌ಗಳನ್ನು ಹೊಂದಿದೆ ಮತ್ತು 3,500 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸುವ ನಾಲ್ಕು ಪರಮಾಣು ಸಾಮರ್ಥ್ಯದ ಕೆ-4 ಎಸ್ಎಲ್ ಬಿಎಂ (K-4 Submarine Launched Ballistic Missiles -SLBM)ಗಳನ್ನು ಅಥವಾ 750 ಕಿ.ಮೀ ದೂರದವರೆಗೆ ಕ್ರಮಿಸುವ ಹನ್ನೆರಡು K-15 SLBM ಕ್ಷಿಪಣಿಗಳನ್ನು ಸಾಗಿಸಬಲ್ಲದು. 

2017 ರಲ್ಲಿ ವಿಶಾಖಪಟ್ಟಣಂನ ಶಿಪ್ ಬಿಲ್ಡಿಂಗ್ ಸೆಂಟರ್ (ಎಸ್‌ಬಿಸಿ) ಯಲ್ಲಿ ಉಡಾವಣೆಯಾದಾಗಿನಿಂದ ನಿರ್ಮಾಣ ಮತ್ತು ಪರೀಕ್ಷೆಯ ಹಂತದಲ್ಲಿರುವ ಐಎನ್‌ಎಸ್ ಅರಿಘಾಟ್ ಸಹ ಟಾರ್ಪಿಡೊಗಳಿಂದ ಶಸ್ತ್ರಸಜ್ಜಿತವಾಗಿರುತ್ತದೆ. (ಟಾರ್ಪಿಡೊ ಎಂಬುದು ಜಲಂತಾರ್ಗಾಮಿ ನೌಕೆಯಲ್ಲಿ ಬಳಸುವ ಆಯುಧವಾಗಿದ್ದು, ನೀರಿನ ಮೇಲ್ಮೈ ಮೇಲೆ ಅಥವಾ ಕೆಳಗೆ ಉಡಾವಣೆಯಾಗುವ ಹಾಗೂ ಗುರಿಯತ್ತ ಸ್ವಯಂ ಚಾಲಿತವಾಗಿ ಸಾಗುವ ಸಾಮರ್ಥ್ಯ ಹೊಂದಿರುತ್ತದೆ.) ಯುದ್ಧದ ಸನ್ನಿವೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳು ಮತ್ತು ಮೇಲ್ಮೈ ಹಡಗುಗಳ ವಿರುದ್ಧ ಕಾದಾಡುವ ಸಾಮರ್ಥ್ಯ ಹೊಂದಿದೆ.

ಐಎನ್ಎಸ್ ಅರಿಘಾಟ್‌ನ ಸೇರ್ಪಡೆಯೊಂದಿಗೆ, ಭಾರತವು ಎರಡು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದಂತಾಗಿದೆ. ಒಂದು ಐಎನ್ಎಸ್ ಅರಿಹಂತ್ (S-2) ಮತ್ತು ಐಎನ್ಎಸ್ ಅರಿಘಾಟ್ (ಏ-3). ಈ ನೌಕೆಗಳು ಸಾಗರಗಳಲ್ಲಿ ಸಕ್ರಿಯವಾಗಿ ಗಸ್ತು ತಿರುಗುತ್ತದೆ. ಭಾರತವು ಈಗಾಗಲೇ ಅಗ್ನಿ ಸರಣಿಯಂತಹ ಭೂ ಆಧಾರಿತ ಪರಮಾಣು ಕ್ಷಿಪಣಿಗಳನ್ನು ಮತ್ತು ವಾಯು ಉಡಾವಣಾ ನ್ಯೂಕ್ಲಿಯರ್ ಮಿಸೈಲ್ ಸಾಮರ್ಥ್ಯವನ್ನು ಹೊಂದಿರುವುದರಿಂದ, ನೂತನ ಎಸ್ಎಸ್ ಬಿಎನ್ ಜಲಂತರ್ಗಾಮಿ ನೌಕೆಯ ಸೇರ್ಪಡೆಯಿಂದ ಭಾರತ ಭೂ, ವಾಯು ಹಾಗೂ ಜಲಮಾರ್ಗಗಳಲ್ಲಿ ಪರಮಾಣು ತ್ರಿಕೋನವನ್ನು ಹೊಂದಿದಂತಾಗಿದೆ.

ನೌಕಾಪಡೆಯ ಭವಿಷ್ಯದ ಯೋಜನೆ ಹಾಗೂ ಕಾರ್ಯತಂತ್ರ :

ಇಂಡೋ ಪೆಸಿಫಿಕ್‌ನ ಹೃದಯಭಾಗದಲ್ಲಿರುವ ಭಾರತದ ಕಾರ್ಯತಂತ್ರದ ಭಾಗವಾಗಿ ಎರಡು ಎಸ್ಎಸ್ ಬಿಎನ್ ನೌಕೆಗಳು ಸಮುದ್ರ ಪ್ರದೇಶದಲ್ಲಿ ಗಣನೀಯ ಹತೋಟಿಯನ್ನು ಸಾಧಿಸಲಿದೆ. ದೇಶದ ಕಡಲ ಹಿತಾಸಕ್ತಿಗಳಿಗೆ ಸವಾಲು ಹಾಕಲು ಪ್ರಯತ್ನಿಸುವ ಯಾವುದೇ ನೌಕಾ ಪಡೆಗಳಿಗೆ ಘಾತಕವಾಗಿ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ. ಐಎನ್ಎಸ್ ಅರಿಹಂತ್ ವರ್ಗದ ಎರಡೂ ಜಲಾಂತರ್ಗಾಮಿ ನೌಕೆಗಳು ಸ್ವದೇಶಿ ಪರಮಾಣು ರಿಯಾಕ್ಟರ್‌ಗಳಿಂದ ಕೂಡಿದ ಹಾಗೂ ದೇಶೀಯವಾಗಿ  ಅಭಿವೃದ್ಧಿಪಡಿಸಲಾದ ಪರಮಾಣು ಕ್ಷಿಪಣಿಗಳನ್ನು ಹೊಂದಿವೆ. ಐಎನ್ಎಸ್ ಅರಿಹಂತ್ ತಾಂತ್ರಿಕ ಪ್ರದರ್ಶಕರಾಗಿ ಸೇವೆ ಸಲ್ಲಿಸಿದರೆ,  ಐಎನ್ಎಸ್ ಅರಿಘಾಟ್ ಹಿಂದಿನ ಎಲ್ಲಾ ತಾಂತ್ರಿಕ ಸವಾಲುಗಳನ್ನು ಮೆಟ್ಟಿನಿಂತು ಹೆಚ್ಚು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿನ ಹೊಸ ಆವೃತ್ತಿಯಾಗಿದೆ.

ಇದನ್ನೂ ಓದಿ : ನೀವು ಜಮೀನು, ನಿವೇಶನ, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಸುತ್ತಿದ್ದೀರಾ? ಗಮನಿಸಿ, ಈ ಎಲ್ಲಾ ಕಾನೂನು ದಾಖಲೆಗಳು ಮುಖ್ಯ

ಈ ನಿಟ್ಟಿನಲ್ಲಿ ಮುಂದೆ ಎಸ್ಎಸ್ ಬಿಎನ್ ಎಸ್-4 ಕಾರ್ಯಾರಂಭದ ನಂತರ, ಭಾರತವು ಹೊಸ ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣವನ್ನು ಪ್ರಾರಂಭಿಸಲು ಸಜ್ಜಾಗುತ್ತದೆ. ಅವು 3,000 ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕೊಂಡೊಯ್ಯುವ ಹಾಗೂ ಹೆಚ್ಚುವರಿ ಕ್ಷಿಪಣಿಯನ್ನು ಹೊಂದುವಷ್ಟು ದೊಡ್ಡ ಮಟ್ಟದಲ್ಲಿ ನೌಕೆ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.  

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ಎಂಟು ವಲಯಗಳ ಅತಿಹೆಚ್ಚು ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡವರ ಪಟ್ಟಿ ಪ್ರಕಟಿಸಿದ ಬಿಬಿಎಂಪಿ

Next Post

Video News | ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ 4 ಕಾರುಗಳ ಕಿಟಕಿ ಗಾಜು ಒಡೆದು ಕಳ್ಳತನ : ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

Next Post

Video News | ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ 4 ಕಾರುಗಳ ಕಿಟಕಿ ಗಾಜು ಒಡೆದು ಕಳ್ಳತನ : ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

Billionaire Gautam Adani | ದೇಶದ ಅತಿದೊಡ್ಡ ಶ್ರೀಮಂತ ಪಟ್ಟಕ್ಕೇರಿದ ಗೌತಮ್ ಅದಾನಿ

Please login to join discussion

Like Us on Facebook

Follow Us on Twitter

Recent News

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group