Saturday, May 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

    ಅಕ್ಕಿ ಗೋದಾಮುವೊಂದರ ಸಾಂದರ್ಭಿಕ ಚಿತ್ರ.

    ದೇಶದ ಆಹಾರ ಭದ್ರತೆ ಭದ್ರ: ಬಫರ್ ಸ್ಟಾಕ್‌ಗಿಂತ ಮೂರು ಪಟ್ಟು ಹೆಚ್ಚು ಧಾನ್ಯ ಸಂಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಮೊದಲ ಹೈಟೆಕ್ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC) ಲೋಕಾರ್ಪಣೆ

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

  • Bengaluru Focus

    BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

    BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

    GBA News | ಬೆಂಗಳೂರಿಗರಿಗೆ ಬಿಗ್ ರಿಲೀಫ್: ಇ-ಖಾತಾ ಅರ್ಜಿಯಲ್ಲಿ ತಪ್ಪಾಗಿದ್ದರೆ ನೀವೇ ಹಿಂಪಡೆಯಬಹುದು

    ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

    ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

    GBA News | ಬೆಂಗಳೂರು ಮಳೆಗಾಲದ ಮುನ್ನೆಚ್ಚರಿಕೆ: ಅವಘಡ ತಡೆಗೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

ಮೊದಲ ಪ್ಯಾಕೇಜ್‌ನ ತಾಂತ್ರಿಕ ಬಿಡ್ ಮೇ.08ರಂದು ತೇರೆಯಲಾಗಿದೆ; ಜೂನ್ ನಲ್ಲಿ ವರ್ಕ್ ಆರ್ಡರ್ ನೀಡಲು ಬಿಬಿಸಿ ಸಂಸ್ಥೆ ಸಿದ್ಧತೆ.

by Bengaluru Wire Desk
May 9, 2026
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಮೇ.09 www.bengaluruwire.com: ಬೆಂಗಳೂರಿನ ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಅನುಷ್ಠಾನ ಮೂರು ಪ್ಯಾಕೇಜ್ ಗಳ ಪೈಕಿ, ಮಾರ್ಚ್ ನಲ್ಲಿ ಕರೆದಿದ್ದ 3,100 ಕೋಟಿ ರೂ. ಮೌಲ್ಯದ ಮೊದಲ ಪ್ಯಾಕೇಜ್ ತಾಂತ್ರಿಕ ಬಿಡ್ ಮೇ.08ರಂದು ತೆರೆದಿದ್ದು, ಜೂನ್ ವೇಳೆಗೆ ಯೋಜನೆಗೆ ಚಾಲನೆ ದೊರಕಲಿದೆ.

ಒಟ್ಟು 27,000 ಕೋಟಿ ರೂ. ಮೊತ್ತದ ಬೃಹತ್ ಯೋಜಮೆ ಪೈಕಿ ₹10,600 ಕೋಟಿ ಬಿಬಿಸಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ವೆಚ್ಚವಾದರೆ ಉಳಿದ ಹಣವು ಭೂಮಿ ನೀಡಿದ ರೈತರಿಗೆ ಪರಿಹಾರ ಒದಗಿಸಲು ಮೀಸಲಿಡಲಾಗಿದೆ. ಹುಡ್ಕೋ ಸಂಸ್ಥೆಯು ಈ ಯೋಜನೆಗೆ ಸಾಲ ನೀಡುತ್ತಿದೆ. ಈಗಾಗಲೇ ಹುಡ್ಕೋ ಸಾಲ ಮಂಜೂರು ಮಾಡಿದ್ದು, ರೈತರ ಪರಿಹಾರ ನೀಡಲು ಪ್ರಾರಂಭಿಕವಾಗಿ ₹200 ಕೋಟಿ ಹಣವನ್ನು ತೆಗೆಯಲಾಗಿದೆ ಎಂದು ಬಿಬಿಸಿ ಸಂಸ್ಥೆಯು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.

ಬಿಬಿಸಿ ಯೋಜನೆಯು ಬೆಳೆಯುತ್ತಿರುವ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರ ಒದಗಿಸಲಿದ್ದು,  21 ಕಿ.ಮೀ ಉದ್ದದ ಮೊದಲ ಪ್ಯಾಕೇಜ್ 3,100 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತವಾಗಲಿದೆ. 

ಯೋಜನೆಯ ಕುರಿತಂತೆ ಬೆಂಗಳೂರು ವೈರ್ ಜೊತೆ ಮಾತನಾಡಿದ ಬಿಬಿಸಿ ಅಧ್ಯಕ್ಷ ಎಲ್.ಕೆ.ಅತೀಕ್, “ಮೇ.08ರಂದು ಮೊದಲ ಪ್ಯಾಕೇಜ್ ತಾಂತ್ರಿಕ ಬಿಡ್ ತೆರೆಯಲಾಗಿದ್ದು, ಶಂಕರನಾರಾಯಣ ಕನ್ ಸ್ಟ್ರಕ್ಷನ್ ಹಾಗೂ ವಿಶ್ವ ಸಮುದ್ರ ಇಂಜಿನಿಯರಿಂಗ್ ಸಂಸ್ಥೆಯು ಟೆಂಡರ್ ನಲ್ಲಿ ಪಾಲ್ಗೊಂಡಿದೆ. ಎರಡು ಸಂಸ್ಥೆಗಳ ತಾಂತ್ರಿಕ ಮೌಲ್ಯಮಾಪನ ನಡೆಸಿ ಬಳಿಕ ಆರ್ಥಿಕ ಬಿಡ್ ತೆರೆದು ಮೌಲ್ಯಮಾಪನ ಕೈಗೊಂಡು ಜೂನ್- ಜುಲೈ ವೇಳೆಗೆ ಕಾರ್ಯಾದೇಶ ನೀಡಲಾಗುತ್ತೆ. ಜೂನ್ ಕೊನೆಯಲ್ಲಿ ಎರಡನೇ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.

“ಪಿಆರ್ ಆರ್-1 ಯೋಜನೆಯಲ್ಲಿ ಶೇ.80ರಷ್ಟು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ನೂರಾರು ರೈತರು, ಬಿಬಿಸಿ ನೀಡಿರುವ ವಿವಿಧ ರೀತಿಯ ಅವಕಾಶಗಳನ್ನು ಬಳಸಿಕೊಂಡು ಭೂಪರಿಹಾರ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಮೂರು ಪ್ಯಾಕೇಜ್ ಗಳಡಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಎರಡು ಪ್ಯಾಕೇಜ್ ಟೆಂಡರ್ ನೀಡುವ ಕಾರ್ಯ ಪೂರ್ಣಗೊಂಡಿರುತ್ತದೆ” ಎಂದು ಅತೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪಿಆರ್ ಆರ್-1 ಬಿಬಿಸಿ ಯೋಜನೆಗಾಗಿ ಮೊದಲ ಪ್ಯಾಕೇಜ್ ನಲ್ಲಿನ  ರಸ್ತೆಯು ಸಿಗ್ನಲ್ ಮುಕ್ತ ರಸ್ತೆಯಾಗಲಿದ್ದು, ರಸ್ತೆಯು ಅಡ್ಡ ರಸ್ತೆಗಳಿಂದ ನೇರವಾಗಿ ಛೇದಿಸಲ್ಪಡುವುದಿಲ್ಲ. ಇದು 8 ಎಕ್ಸ್‌ಪ್ರೆಸ್ ಲೇನ್‌ಗಳನ್ನು ಹೊಂದಿರುವ ಟೋಲ್ ರಸ್ತೆಯಾಗಲಿದೆ. ವಾಹನಗಳು ಇಂಟರ್‌ಚೇಂಜ್‌ಗಳಲ್ಲಿ ಮಾತ್ರ ಸೇವಾ ರಸ್ತೆಗಳ ಮೂಲಕ ಎಕ್ಸ್‌ಪ್ರೆಸ್ ಲೇನ್‌ಗಳನ್ನು ಸೇರಬಹುದು. 73 ಕಿಮೀ ಉದ್ದದ ಈ ರಸ್ತೆಯು 10 ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ, ಅವುಗಳಲ್ಲಿ ಹೆಚ್ಚಿನವು ಕ್ಲೋವರ್ ಲೀಫ್ ಇಂಟರ್-ಚೇಂಜ್‌ಗಳಾಗಿವೆ.

ಪಿಆರ್ ಆರ್-1 ಅಂದರೆ ಬಿಬಿಸಿ ಪ್ಯಾಕೇಜ್-1 ಯೋಜನೆಯಡಿ ಬರುವ 10 ರಸ್ತೆಗಳೆಂದರೆ:

1. ಹೊಸೂರು ರಸ್ತೆ ಜಂಕ್ಷನ್ (ಎಲೆಕ್ಟ್ರಾನಿಕ್ ಸಿಟಿ ಪಾಯಿಂಟ್‌ನಲ್ಲಿ ನೈಸ್ ಇಂಟಿಗ್ರೇಷನ್ ಮತ್ತು ಹುಸ್ಕೂರ್ ಹೊಸೂರು ಕಡೆಗೆ 3 ಕಿ.ಮೀ ಕೆಳಗೆ) 2. ಸರ್ಜಾಪುರ, 3. ಗುಂಜೂರು 4. ವೈಟ್‌ಫೈಲ್ಡ್ 5. ಹಳೆ ಮದ್ರಾಸ್ ರಸ್ತೆ 6. ಹೆಣ್ಣೂರು ರಸ್ತೆ 7. ಬಳ್ಳಾರಿ ರಸ್ತೆ 8. ದೊಡ್ಡಬಳ್ಳಾಪುರ ರಸ್ತೆ 9. ಹೆಸರಘಟ್ಟ 10. ಮಾದವರ NH4 ನಲ್ಲಿ ನೈಸ್ ಇಂಟಿಗ್ರೇಷನ್ 11. NH4 ನಲ್ಲಿ #PRR2 ಕಡೆಗೆ ಮಾದನಾಯಕನ ಹಳ್ಳಿ ಕಡೆಗೆ ಸಾಗುವ ತನಕ ಈ ಯೋಜನೆ ವ್ಯಾಪ್ತಿ ಇರಲಿದೆ.

ಬಿಬಿಸಿಯ ಪ್ರಮುಖ 3-ಪ್ಯಾಕೇಜ್ ವಿವರಗಳು (ಯೋಜನೆಯ ರಚನೆ) ಹೀಗಿವೆ:

ಪ್ಯಾಕೇಜ್ 1: ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗಿನ ಉತ್ತರದ ಭಾಗವನ್ನು (19.37 ಕಿ.ಮೀ) ಒಳಗೊಂಡಿದೆ.

ಪ್ಯಾಕೇಜ್ 2: ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ (18 ಕಿ.ಮೀ) ವಿಸ್ತರಿಸುತ್ತದೆ.

ಪ್ಯಾಕೇಜ್ 3: ಹಳೆ ಮದ್ರಾಸ್ ರಸ್ತೆಯನ್ನು ಹೊಸೂರು ರಸ್ತೆಗೆ ಸಂಪರ್ಕಿಸುತ್ತದೆ (27.75 ಕಿ.ಮೀ). 

ಹೇಗಿರಲಿದೆ ಈ ರಸ್ತೆಗಳು?

​8 ಎಕ್ಸ್‌ಪ್ರೆಸ್‌ ಲೇನ್‌ಗಳು: ಇದು ಸಂಪೂರ್ಣ ಸಿಗ್ನಲ್ ಮುಕ್ತ ರಸ್ತೆಯಾಗಲಿದ್ದು, ಟೋಲ್ ಪಾವತಿಸಬೇಕಾಗುತ್ತದೆ.

​ಇಂಟರ್‌ಚೇಂಜ್‌ಗಳು: 10 ಪ್ರಮುಖ ಜಂಕ್ಷನ್‌ಗಳಲ್ಲಿ ಕ್ಲೋವರ್ ಲೀಫ್ ಮಾದರಿಯ ಇಂಟರ್‌ಚೇಂಜ್‌ಗಳು ಇರಲಿವೆ.

​ಮೆಟ್ರೋ ಸಂಪರ್ಕ: ರಸ್ತೆಯ ಮಧ್ಯಭಾಗದಲ್ಲಿ (Median) ಭವಿಷ್ಯದ ಮೆಟ್ರೋ ಯೋಜನೆಗೆ 5 ಮೀಟರ್ ಜಾಗ ಮೀಸಲಿಡಲಾಗಿದೆ.

​ಪ್ರಮುಖ ಸಂಪರ್ಕಗಳು: ಹೊಸೂರು ರಸ್ತೆ, ವೈಟ್‌ಫೀಲ್ಡ್, ಸರ್ಜಾಪುರ, ಬಳ್ಳಾರಿ ರಸ್ತೆ ಮತ್ತು ತುಮಕೂರು ರಸ್ತೆಗಳನ್ನು ಇದು ಜೋಡಿಸಲಿದೆ.

​ಭೂಪರಿಹಾರದ ಆಯ್ಕೆಗಳು

​ರೈತರ ವಿರೋಧವನ್ನು ಶಮನಗೊಳಿಸಲು ಸರ್ಕಾರ ಮೂರು ರೀತಿಯ ಪರಿಹಾರಗಳನ್ನು ನೀಡುತ್ತಿದೆ:

​ನಗದು ಪರಿಹಾರ: ಮಾರುಕಟ್ಟೆ ದರದ ದುಪ್ಪಟ್ಟು ಹಣ.

​TDR: ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು.

​ಅಭಿವೃದ್ಧಿಪಡಿಸಿದ ಭೂಮಿ: ಭೂಮಿ ನೀಡಿದ ರೈತರಿಗೆ ಲೇಔಟ್‌ಗಳಲ್ಲಿ ಶೇ. 40ರಷ್ಟು ಅಭಿವೃದ್ಧಿಪಡಿಸಿದ ಜಾಗ.

ಒಟ್ಟಿನಲ್ಲಿ ದಶಕಗಳ ಕಾಲ ವಿಳಂಬವಾಗಿದ್ದ ಪಿಆರ್ ಆರ್ ರಸ್ತೆ ಯೋಜನೆ ಕಾಮಗಾರಿ ಜೂನ್ ನಲ್ಲಿ ಆರಂಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Join our WhatsApp Channel
Previous Post

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

Please login to join discussion

Like Us on Facebook

Follow Us on Twitter

Recent News

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026

ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

May 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group