Wednesday, June 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

  • Bengaluru Focus

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

    Defence News | ಬೆಂಗಳೂರು: ಎಎಸ್‌ಸಿ ಸೆಂಟರ್‌ನಲ್ಲಿ 8ನೇ ಬ್ಯಾಚ್‌ನ ಅಗ್ನಿವೀರರ ನಿರ್ಗಮನ ಪಥಸಂಚಲನ ಸಂಪನ್ನ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    BMTC News | ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಂಗನಹಳ್ಳಿ ಕ್ರಾಸ್ ಬಳಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸಾವು: ರಸ್ತೆ ಉಬ್ಬು ಅಳವಡಿಕೆಗೆ ಆಗ್ರಹ

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನ ಉತ್ತಮ ಹವಾಮಾನ ಪರಿಸ್ಥಿತಿ ಪುನರ್ ಸ್ಥಾಪನೆಗೆ ಬಿಬಿಎಂಪಿ ಕಾರ್ಯತಂತ್ರ : ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು

ಹವಾಮಾನ ಕ್ರಿಯಾ ಕೋಶ(CAC)ಕ್ಕಾಗಿ "7 ಮಂದಿಗೆ ಫೆಲೋಶಿಪ್" : ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್.

by Bengaluru Wire Desk
October 14, 2024
in Bengaluru Focus, Public interest
Reading Time: 2 mins read
0
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14 www.bengaluruwire.com : ರಾಜಧಾನಿ ಬೆಂಗಳೂರಿನ ಹವಾಮಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದೆ. ಈ ಸಂಬಂಧ ಪಾಲಿಕೆಯು ಬೆಂಗಳೂರು ಹವಾಮಾನ ಕ್ರಿಯಾ ಕೋಶ (Bengaluru climate action cell – CAC)ವನ್ನು ಈಗಾಗಲೇ ಪ್ರಾರಂಭಿಸಿದೆ. ನಗರದ ಹವಾಮಾನ ಪರಿಸ್ಥಿತಿ ಸುಧಾರಿಸಲು ಸೂಕ್ತ ಪಾಲುದಾರರೊಂದಿಗೆ ಸಮನ್ವಯ, ಪ್ರತ್ಯೇಕ ವೆಬ್ ಸೈಟ್, ನಗರದಲ್ಲಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳ ದತ್ತಾಂಶ ಸಂಗ್ರಹ, ಹವಾಮಾನ ಕುರಿತ ವಿವಿಧ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಸ್ನೇಹಿತರ ವೇದಿಕೆ, ಫೆಲೋಶಿಪ್ ನೀಡಿಕೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ರಾಜಧಾನಿಯಲ್ಲಿ ಬಿಬಿಎಂಪಿಯು ಈಗಾಗಲೇ ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ (Bengaluru Climate Action and Resilience Plan- BCAP) ಒಂದು ಮಹತ್ವಾಕಾಂಕ್ಷೆಯ ಸಮಗ್ರ ವಿಧಾನವನ್ನು ಪ್ರಾರಂಭಿಸಿದೆ. ಅಲ್ಲದೆ ಈ ವಿಧಾನ ಕಾರ್ಯಗತಗೊಳಿಸಲು ಬೆಂಗಳೂರು ಹವಾಮಾನ ಕ್ರಿಯಾ ಕೋಶವನ್ನು ಫೆಬ್ರವರಿ 2024ರಲ್ಲಿ ಸ್ಥಾಪಿಸಲಾಗಿತ್ತು. ನಗರದಲ್ಲಿ ಹಸಿರು ಮನೆ ಅನಿಲ (Green house gases – GHG) ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನದಿಂದ ಉಂಟಾಗುವ ಅಪಾಯಗಳಿಗೆ ನಗರದ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಅನೇಕ ಕಾರ್ಯಗಳನ್ನು ಕೈಗೊಂಡಿದೆ. ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಅವರ ಮೇಲ್ವಿಚಾರಣೆಯಲ್ಲಿ ಸಿಎಸಿ ಕಾರ್ಯನಿರ್ವಹಿಸುತ್ತಿದೆ. 

ಹವಾಮಾನ ಕ್ರಿಯಾ ಕೋಶವು, ಹವಾಮಾನ ಕ್ರಮಗಳ ಪ್ರಗತಿಯ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ವರದಿಯನ್ನು ಮಾಡುತ್ತದೆ ಮತ್ತು ಹವಾಮಾನ ಆಯವ್ಯಯದೊಂದಿಗೆ ಪಾಲಿಕೆ ಮತ್ತು ಇತರೆ ಸರ್ಕಾರಿ ಇಲಾಖೆಗಳೊಂದಿಗೆ ಸಂಯೋಜನೆ ಕಲ್ಪಿಸುವ ಕಾರ್ಯ ಕೈಗೊಂಡಿದೆ.

ಸಿಎಸಿಗಾಗಿ ಪ್ರತ್ಯೇಕ ವೆಬ್ ಸೈಟ್:

ಹವಾಮಾನ ಕ್ರಿಯಾ ಕೋಶವು ನಿರಂತರವಾಗಿ ವಿವಿಧ  ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹವಾಮಾನ ಕ್ರಿಯಾ ಯೋಜನೆಯ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪಾಲಿಕೆ ವೆಬ್ ಸೈಟಿನಲ್ಲಿ ಸಿಎಸಿ ಗಾಗಿ ಹೊಸ ಮೈಕ್ರೋ ವೆಬ್ಸೈಟ್ ( https://apps.bbmpgov.in/bcap/ )  ಅನ್ನು ತೆರೆಯಲಾಗಿದೆ. ಇದರಲ್ಲಿ ಬಿಕ್ಯಾಪ್ ಮತ್ತು ಸಿಎಸಿ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆದ್ಯತೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು ಬಿಕ್ಯಾಪ್ ಮತ್ತು ಸಂಬಂಧಿತ ಸಂಪನ್ಮೂಲಗಳು, ಸಭೆಯಗಳ ವಿವರ, ಚಟುವಟಿಕೆಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.

ಬಿಬಿಎಂಪಿಯ ಬಿಪ್ಯಾಕ್ ಯೋಜನೆಯ ಅಂಗವಾಗಿ ಹವಾಮಾನ ಕ್ರಿಯಾ ಯೋಜನೆ ಕುರಿತಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿರುವ ಚಿತ್ರ.

ಸ್ಥಳೀಯ ಸಮುದಾಯಗಳ ಸಹಯೋಗ :

ಸ್ಥಳೀಯ ಸಮುದಾಯಗಳ ಸಹಯೋಗ ಹಾಗೂ ತಂತ್ರಜ್ಞಾನದೊಂದಿಗೆ ನಗರದಾದ್ಯಂತ ನೀರಿನ ಅಭಾವವನ್ನು ನೀಗಿಸಲು ತೆರೆದ ಬಾವಿಗಳನ್ನು ಮರುಸ್ಥಾಪಿಸುವ, ಕೆರೆಗಳು, ಉದ್ಯಾನವನಗಳು ಹಾಗೂ ಸಮುದಾಯಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು, ಅಲ್ಲದೇ ಸಸಿಗಳನ್ನು ನೆಡಲು ಸೂಕ್ತವಾದ ಸ್ಥಳಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ತೆರೆದ ಸ್ಥಳಗಳುಮ ಕೆರೆಗಳು, ಉದ್ಯಾನವನಗಳಲ್ಲಿ 80000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.

ಹ್ಯಾಕಥಾನ್ ಆಯೋಜನೆ:

ಬಿಬಿಎಂಪಿಯ ವಿವಿಧ ವಾರ್ಡ್ ಗಳು ಹಾಗೂ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹೆಚ್ಚು ಶಾಖೋತ್ಪನ್ನವಾಗುವುದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ನಗರದಲ್ಲಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳ ಬಗ್ಗೆ ಗಮನ ಹರಿಸಲು, ನಾಗರಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಹ್ಯಾಕಥಾನ್(ಡೇಟಾ ಜಾಮ್) ಅನ್ನು ನಡೆಸಲಾಗಿದೆ.

ಹವಾಮಾನ ಕ್ರಿಯಾ ಕೋಶದ ಸ್ನೇಹಿತರ ವೇದಿಕೆ ರಚನೆ:

ಬೆಂಗಳೂರಿನಲ್ಲಿ ಹವಾಮಾನ ಕ್ರಮಗಳಲ್ಲಿ ಈಗಾಗಲೇ ನಾಗರೀಕರು ಹಾಗೂ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಇವರನ್ನೆಲ್ಲ ಒಟ್ಟುಗೂಡಿಸಲು ಮತ್ತು ಬಿಸಿಎಪಿ ನಲ್ಲಿ ವಿವರಿಸಿರುವ ಹವಾಮಾನ ಕ್ರಿಯೆಗಳೊಂದಿಗೆ ಅವರ ಕಾರ್ಯಗಳನ್ನು ಕೈ ಜೋಡಿಸಲು, ‘ಸಿಎಸಿ ಸ್ನೇಹಿತರು’ ಎಂಬ ಹೊಸ ವೇದಿಕೆಯನ್ನು ರಚಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾಗರೀಕರು ಮತ್ತು ಸಾಮಾಜಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಸೇರಿದಂತೆ 500ಕ್ಕೂ ಹೆಚ್ಚು ಸಂಸ್ಥೆಗಳು  ಮತ್ತು ಕಾರ್ಪೊರೇಟ್ ಘಟಕಗಳು ನಮ್ಮ ಜೊತೆ ಕೈ ಜೋಡಿಸಿವೆ. ಇದರಿಂದ ಉತ್ತಮ  ಕಾರ್ಯಗಳ ಕುರಿತು ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಒಂದು ಸೂಕ್ತ ವೇದಿಕೆಯಾಗಿದೆ ಎಂದು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

9 ಪ್ರಸ್ತಾವನೆಗಳ ಸ್ವೀಕಾರ:

ಸಿಎಸಿ  ಸ್ನೇಹಿತರಾಗುವ ಸಲುವಾಗಿ ನಗರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸಿಎಸಿಯಿಂದ ವಿವಿಧ ಸಂಸ್ಥೆಗಳಿಂದ ಸಹಯೋಗವನ್ನು ಆಹ್ವಾನಿಸಿದ್ದು, ಇದುವರೆಗೆ ಅಂತಹ 9 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಸಿಎಸಿನ ಸ್ನೇಹಿತರಾಗಲು,  bit.ly/friendsofcac  ಲಿಂಕ್ ಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು.

ಸಿಎಸಿಗಾಗಿ 7 ಮಂದಿ ಫೆಲೋಶಿಪ್ ಗಳ ನಿಯೋಜನೆ :

ಹವಾಮನಾ ಬದಲಾವಣೆ ಹಾಗೂ ನಾಗರೀಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆಲೋಚನೆ, ಕೌಶಲ್ಯ ಹಾಗೂ ನಾವೀನ್ಯತೆಗಳಿಂದ ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹವಾಮಾನ ಕ್ರಿಯಾ ಕೋಶಕ್ಕೆ ಸಹಾಯ ಮಾಡಲು ಹಾಗೂ ಸಬಲಗೊಳಿಸುವ ಸಲುವಾಗಿ “ಹವಾಮಾನ ಕ್ರಿಯಾ ಯೋಜನೆ ಫೆಲೋಶಿಪ್” ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ ಅರ್ಹರಾದ ಏಳು ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಫೆಲೋಶಿಪ್ ನೀಡಲಾಗಿದೆ. ನವೆಂಬರ್ ತಿಂಗಳಿಂದ ಇವರು ಸಿಎಸಿಗಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಉದ್ಯಾನವನಗಳ ಸಮಯ ಬದಲು:

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಜೂನ್ 2024ರಲ್ಲಿ ಉದ್ಯಾನವನಗಳ ಸಮಯವನ್ನು ಪರಿಷ್ಕರಿಸಲು ಸಿಎಸಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ಉದ್ಯಾನವನಗಳು ತೆರೆದಿರುತ್ತದೆ.

WhatsApp Join our WhatsApp Channel
Previous Post

#BBK11 | ಬಿಗ್ ಬಾಸ್ 11ನೇ ಆವೃತ್ತಿಯೇ ಕೊನೆ : ನಿರೂಪಕನ ಸ್ಥಾನ ತ್ಯಜಿಸುವುದಾಗಿ ಅಧಿಕೃತ ಘೋಷಣೆ ಮಾಡಿದ ಕಿಚ್ಚ ಸುದೀಪ್

Next Post

ಭಾರತ – ಚೀನಾ ನಡುವೆ ನೇರ ವಿಮಾನಯಾನ ಸೇವೆ ಆರಂಭಕ್ಕೆ ಉಭಯ ದೇಶಗಳಿಂದ ಪ್ರಯತ್ನ

Next Post

ಭಾರತ - ಚೀನಾ ನಡುವೆ ನೇರ ವಿಮಾನಯಾನ ಸೇವೆ ಆರಂಭಕ್ಕೆ ಉಭಯ ದೇಶಗಳಿಂದ ಪ್ರಯತ್ನ

ರಾಜಧಾನಿ ಬೆಂಗಳೂರಲ್ಲಿ ಈ ವಾರ ನಿರಂತರ ಮಳೆ ಮುನ್ಸೂಚನೆ ನೀಡಿದ ಐಎಂಡಿ

Please login to join discussion

Like Us on Facebook

Follow Us on Twitter

Recent News

Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

June 24, 2026

​ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಚಾಲನೆ: ಅಗತ್ಯ ದಾಖಲೆಗಳ ವಿವರ ಇಲ್ಲಿದೆ

June 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

June 24, 2026

​ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಚಾಲನೆ: ಅಗತ್ಯ ದಾಖಲೆಗಳ ವಿವರ ಇಲ್ಲಿದೆ

June 24, 2026

ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

June 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group