Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

  • Bengaluru Focus

    ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | Rain Water Reservoir | ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ನಡುವೆಯೇ ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಲಾಗಿದೆ ಮಳೆ ನೀರು ಜಲಾಶಯ….!

ಮಳೆ ನೀರು ಸಂರಕ್ಷಿಸಿ ಸದುಪಯೋಗಪಡಿಸಿಕೊಳ್ಳಲು ನರೇಗಾ, ಜಲಜೀವನ್ ಯೋಜನೆಯಡಿ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಳೆನೀರು ಜಲಾಶಯ ನಿರ್ಮಿಸಲಾಗಿದೆ.

by Bengaluru Wire Desk
September 17, 2022
in Bengaluru Focus, BW Special
Reading Time: 2 mins read
0
ವಣಕನಹಳ್ಳಿ ಗ್ರಾಮ ಪಂಚಾಯಿತಿ ಕಿರು ಅಣೆಕಟ್ಟಿನ ಚಿತ್ರ

ವಣಕನಹಳ್ಳಿ ಗ್ರಾಮ ಪಂಚಾಯಿತಿ ಕಿರು ಅಣೆಕಟ್ಟಿನ ಚಿತ್ರ

ಬೆಂಗಳೂರು, ಸೆ.17 www.bengaluruwire.com : ರಾಜಧಾನಿ ಬೆಂಗಳೂರು ಒಂದು ಕಾಲದಲ್ಲಿ ನೂರಾರು ಕೆರೆಗಳಿದ್ದರೂ, ಹಲವು ಕೆರೆಗಳು ಸದ್ದಿಲ್ಲದೆ ಒತ್ತುವರಿಯಾಗಿ ಅವುಗಳ ಮೇಲೆ ರಸ್ತೆ, ಕಟ್ಟಡ, ಕಾಂಪ್ಲೆಕ್ಸ್ ನಿಂತುಕೊಂಡಿದ್ದರೆ, ಮತ್ತೊಂದೆಡೆ ರಾಜಕಾಲುವೆ ದಾರಿಗಳೇ ಹಲವು ಕಡೆ ಮುಚ್ಚಿಹೋಗಿವೆ. ಹೀಗಾಗಿ ನಗರದಲ್ಲಿ ಕೆಲವು ಹೊತ್ತು ಜೋರು ಮಳೆ ಸುರಿದರೂ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗುತ್ತಿದೆ. ಬಿದ್ದ ಮಳೆ ನೀರು ಮೋರಿ ಸೇರುತ್ತಿದೆ.

ಇದನ್ನು ಮನಗಂಡ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ನರೇಗಾ ಯೋಜನೆಯಡಿ ಆನೇಕಲ್ ತಾಲೂಕು ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಗೆ ಬಿದ್ದ ಮಳೆ ನೀರನ್ನೇ ಸದ್ಬಳಕೆ ಮಾಡಿಕೊಳ್ಳಲು ಮಳೆ ನೀರು ಜಲಾಶಯವನ್ನು ನಿರ್ಮಿಸಿ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದ್ದಾರೆ.

ರಾಜ್ಯದ ಅನೇಕ ಕಡೆ ನರೇಗಾ ಯೋಜನೆ ಹಣವನ್ನು ರಸ್ತೆ ನಿರ್ಮಾಣ ಮತ್ತು ಗುಂಡಿ ತೆಗೆಯುವಂತಹ ಕಾಮಗಾರಿಗಳ ನೆಪದಲ್ಲಿ ದುರ್ಬಳಕೆ ಮಾಡಿಕೊಂಡಿರುವ ಸಾಕಷ್ಟು ದೂರುಗಳಿವೆ. ಇಂತಹ ಆರೋಪಗಳ ನಡುವೆಯೇ  ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ನರೇಗಾದ ನೆರವಿನಲ್ಲೇ ಶಾಶ್ವತ ನೀರಿನ ಸೆಲೆಯ ತಾಣವನ್ನೇ ನಿರ್ಮಿಸಿದೆ. ಅಂದರೆ ಬೆಂಗಳೂರು ಸುತ್ತಮುತ್ತ ಸುರಿದು ಹರಿಯುವ ಮಳೆ ನೀರು ಸದ್ಬಳಕೆ ಮಾಡಿಕೊಳ್ಳಲು ಕಿರು ಅಣೆಕಟ್ಟೆಯನ್ನೇ ನಿರ್ಮಿಸಲಾಗಿದೆ. ಈ ಕಿರು ಜಲಾಶಯದಿಂದಾಗಿ ಸಣ್ಣಪುಟ್ಟ ಕಣಿವೆಗಳ ಮೂಲಕ ಹರಿದು ಪೋಲಾಗುವ ನೀರನ್ನು ಸೂಕ್ತ ರೀತಿ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಆನೇಕಲ್ ತಾಲೂಕು ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಿರು ಅಣೆಕಟ್ಟು

ಬೆಂಗಳೂರು ಸುತ್ತಮುತ್ತ ಸುರಿಯುವ ಮಳೆ ನೀರು ವೃಥಾ ತಮಿಳುನಾಡಿನ ಮೂಲಕ ಸಮುದ್ರ ಸೇರುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಂಡಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್  ಅವರ ಪರಿಕಲ್ಪನೆಯನ್ನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಅವರು ನರೇಗಾ ಮುಖ್ಯಸ್ಥರು ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶಿಲ್ಪಾನಾಗ್ ಸಹಕಾರ ಮತ್ತು ವಿಶೇಷ ಆಸಕ್ತಿಯಿಂದಾಗಿ ಈ ಮಳೆನೀರು ಆಧಾರಿತ ಜಲಾಶಯ ಇದೀಗ ತಲೆ ಎತ್ತಿ ನಿಂತಿದೆ. ಆ ಮೂಲಕ ನರೇಗಾ ಹಣವನ್ನು ಹೀಗೂ ಬಳಸಿಕೊಳ್ಳಬಹುದು ಎಂದು ನರೇಗಾದಲ್ಲಿ  31ನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲಾಪಂಚಾಯಿತಿಯನ್ನೇ ನಾಚಿಸುವ ರೀತಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ ಜಲಜೀವನ್, ನರೇಗಾ ಯೋಜನೆಯಡಿ ಬೆಂಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ 200 ಕೆರೆಗಳ ಸಂಪೂರ್ಣ ಅಭಿವೃದ್ಧಿ ಮಾಡಿ, ಅಂತರ್ಜಲ ಮಟ್ಟ ಏರಿಕೆ ಮಾಡಿ ಪ್ರತಿಯೊಬ್ಬರಿಗೂ ಗುಣಮಟ್ಟದ ನೀರು ಒದಗಿಸಲು ಯೋಜಿಸಲಾಗಿದೆ. ಅದರಂತೆ ರಾಜಕಾಲುವೆ ಒತ್ತುವರಿ ತೆರವು, ಶುದ್ಧೀಕರಣ ಹಾಗೂ ಕೆರೆಗಳಲ್ಲಿ ಹೂಳು ತೆಗೆದು ಆ ಕೆರೆಗಳ ಪುನರುಜ್ಜೀವನ ಮಾಡಲಾಗುತ್ತದೆ. ಈ 200 ಕೆರೆಗಳ ಸಮೀಕ್ಷೆ ನಡೆಸಿ, ಕಾರ್ಯಯೋಜನೆ ನೀಡುವಂತೆ ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಗೆ ತಿಳಿಸಲಾಗಿದೆ. ಆ ಸಂಸ್ಥೆಯು ನೀಡುವ ಸಮೀಕ್ಷೆ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಮೊದಲನೆಯದಾಗಿ ಆನೇಕಲ್ ತಾಲೂಕಿನಲ್ಲಿ ಮಳೆ ನೀರು ಕಿರು ಅಣೆಕಟ್ಟೆ ನಿರ್ಮಿಸಲಾಗಿದೆ.”

– ಎಲ್.ಕೆ.ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

446 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸಂಜೀವಿನಿಯಂತಾಗಿದೆ :

ಸುಮಾರು 1.2 ಕೋಟಿ ರೂ ವೆಚ್ಚದಲ್ಲಿ ಈ ಕಿರು ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಬೆಂಗಳೂರು ಜಿಲ್ಲಾ ಪಂಚಾಯತಿ ನರೇಗಾ ಮೂಲಕ ನೆರವು ಒದಗಿಸಿದೆ. ಹಾಗೆಯೇ ಇದರ ನಿರ್ಮಾಣ ಕಾಲದಲ್ಲಿ ಕಾಮಗಾರಿಯ ಮೂಲಕ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡಿದೆ. ಉಳಿದಂತೆ ಯುನೈಟೆಡ್ ವೆ (United Way) ಮತ್ತು ಕಾಂಟಿನೆಂಟಲ್ (continental) ಎಂಬ ಖಾಸಗಿ ಸಂಸ್ಥೆಗಳಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನೆರವು ಪಡೆದು ಕಿರು ಜಲಾಶಯ ನಿರ್ಮಿಸಲಾಗಿದೆ. ಈ ಮೂಲಕ ಯುನೈಟೆಡ್ ವೆ ಮತ್ತು ಕಾಂಟಿನೆಂಟಲ್ ಸಂಸ್ಥೆಗಳು ಮಳೆ ನೀರು ಸದ್ಬಳಕೆ ಮಾಡುವ ವಿನೂತನ ಯೋಜನೆಗೆ ಸಿಎಎಸ್ ಆರ್ ನೆರವು ನೀಡಿ ಸಾಮಾಜಿಕ ಹೊಣೆಗಾರಿಕೆಯನ್ನೂ ಹೀಗೂ ಮಾಡಬಹುದು ಎಂದು  ತೋರಿಸಿಕೊಟ್ಟಿವೆ.

2500 ಎಕರೆ ಜಲಾನಯನ ಪ್ರದೇಶ ಹೊಂದಿರುವ ಈ ಅಣೆಕಟ್ಟೆಯಿಂದ ಸುಮಾರು 446 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸಬಹುದಾಗಿದೆ. ಬೆಂಗಳೂರು ದಕ್ಷಿಣ ಭಾಗದ ಸಾವಿರಾರು ಕುಟುಂಬಗಳಿಗೆ ಜೀವನದಿಯಂತೆ ಗೋಚರವಾಗುತ್ತಿದೆ.  ಸಾವಿರಾರು ಕುಟುಂಬಗಳಿಗೆ ದಿನಬಳಕೆ ನೀರನ್ನು ಈ ಮಳೆನೀರು ಜಲಾಶಯ ಪೂರೈಸಲಿದೆ.

 ಏನಿದು ಮಳೆನೀರು ಜಲಾಶಯ ಯೋಜನೆ?

ಬೆಂಗಳೂರು ದಕ್ಷಿಣ ಭಾಗದ ಆನೇಕಲ್ ತಾಲೂಕಿನ ಸುತ್ತಮುತ್ತ ಬೇಸಿಗೆ ಬಂತೆಂದರೆ ಸಾಕು ನೀರಿನ ಬವಣೆ ವಿಪರೀತ.  ಇಲ್ಲಿ ಭಾರೀ ಮಳೆ ಸುರಿದರೂ ನೀರು ನಿಲ್ಲುವುದಿಲ್ಲ. ಕಾರಣ ಇಲ್ಲಿ ಬೆಟ್ಟ, ಗುಡ್ಡ ಕಣಿವೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹರಿದು ಬರುವ ನೀರು ಸಣ್ಣಪುಟ್ಟ ಕೆರೆ ತೊರೆಗಳ ಮೂಲಕ ತಮಿಳುನಾಡು ಸೇರುತ್ತದೆ. ಇದನ್ನು ಅರಿತು, ಆ ಮಳೆ ನೀರನ್ನು ಬಳಸಿಕೊಳ್ಳಲು ಯಾವುದೇ ಪ್ರಚಾರವಿಲ್ಲದೆ ಕಿರು ಅಣೆಕಟ್ಟೆಯನ್ನ ನಿರ್ಮಿಸಲಾಗಿದೆ. 

ಜಲಾಶಯದಿಂದಾಗುವ ಲಾಭಗಳೇನು ?

ಸಾವಿರಾರು ಎಕರೆ ಪ್ರದೇಶದ ರೈತರಿಗೆ ನೀರು ಬೇಸಿಗೆಯಲ್ಲೂ ಲಭ್ಯವಾಗಲಿದೆ. ಜೀವ ವೈವಿಧ್ಯತೆಯ ರಕ್ಷಣೆಗೆ ಅವಕಾಶವಾಗಲಿದೆ. ಸಣ್ಣ ಪುಟ್ಟ  ಕೆರೆಕಟ್ಟೆಗಳ ಸಂರಕ್ಷಣೆ, ಅಂತರ್ಜಲ ಅಭಿವೃದ್ಧಿಗೆ ಸಹಾಯಕವಾಗಲಿದೆ. ಕಾವೇರಿ ನೀರಿನ ಸದ್ಬಳಕೆಗೆ ಅವಕಾಶವಾಗುತ್ತದೆ. ಬಹಳ ಪ್ರಮುಖವಾಗಿ ಕೆರೆಕುಂಟೆಗಳ ಒತ್ತುವರಿಗೆ ತಡೆ ಬೀಳಲಿದೆ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು.

ಅಧಿಕಾರಿಗಳು ಏನಂತಾರೆ?

“ಬೆಂಗಳೂರಿನಲ್ಲಿ ಮುಂದೆ ಎದುರಾಗಬಹುದಾದ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಇಲಾಖೆ ಮುಖ್ಯಸ್ಥರಾದ ಅತೀಕ್ ಅವರ ಮಾರ್ಗದರ್ಶನದಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದ್ದು, ಇದನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. “

– ಸಂಗಪ್ಪ,  ಬೆಂಗಳೂರು ಜಿಲ್ಲಾಪಂಚಾಯಿತಿ ಸಿಇಒ

WhatsApp Join our WhatsApp Channel
Previous Post

Beware On Fake Banking App | ಮೊಬೈಲ್ ಬ್ಯಾಂಕಿಂಗ್ ಹೊಸ ಟ್ರೋಜನ್ ವೈರಸ್ ಬಗ್ಗೆ ಎಚ್ಚರವಹಿಸಿ ; ನಿರ್ಲಕ್ಷಿಸಿದರೆ ಬ್ಯಾಂಕ್ ಅಕೌಂಟ್ ಖಾಲಿಯಾಗುತ್ತೆ ಹುಷಾರು!!

Next Post

Mysore Dasara 2022 | ಮೈಸೂರು ದಸರಾಗೆ ರಾಷ್ಟ್ರಪತಿಗಳು ಆಗಮಿಸುವ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್.ಟಿ.ಸೋಮಶೇಖರ್

Next Post

Mysore Dasara 2022 | ಮೈಸೂರು ದಸರಾಗೆ ರಾಷ್ಟ್ರಪತಿಗಳು ಆಗಮಿಸುವ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೋಲಿಕೆಯಂತಿರುವ ರಾಜಾಜಿನಗರ ಬಿಜೆಪಿ ಮುಖಂಡ ಮಂಜುನಾಥ್ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು

JDS HD Kumarswamy | ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಸೇರಿಕೊಂಡ್ರಾ?

Please login to join discussion

Like Us on Facebook

Follow Us on Twitter

Recent News

Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

June 18, 2026

ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

June 18, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

June 18, 2026

ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

June 18, 2026

ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

June 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group