Sunday, September 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಸೌಜನ್ಯ ಪ್ರಕರಣ: ಮರುತನಿಖೆಗೆ ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆ

    ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

  • Bengaluru Focus

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

Ganesh Chaturthi | ಗಣೇಶ ಚತುರ್ಥಿ ಕೇವಲ ಒಂದು ಹಬ್ಬವಲ್ಲ : ಇದಕ್ಕೆ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಹಿನ್ನಲೆಯಿದೆ

by Bengaluru Wire Desk
August 30, 2022
in Public interest
Reading Time: 1 min read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಸನಾತನ ಧರ್ಮದಲ್ಲಿ ಎಲ್ಲ ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ಹಬ್ಬಗಳನ್ನು ಆಚರಿಸುವ ಕಾಲ, ಮಾಸ, ತಿಥಿ, ನಕ್ಷತ್ರಗಳಲ್ಲಿಯೇ ನಾವು ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅದರ ವಿಧಾನಗಳ ಬಗ್ಗೆಯೂ ವೈಜ್ಞಾನಿಕ, ಐತಿಹಾಸಿಕ, ಐಕ್ಯತೆ ಮೂಡಿಸುವ ಹಾಗೂ ಪರಂಪರೆಯ ಹಿನ್ನಲೆಯಿದೆ ಎಂಬುದು ಅವುಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಅರಿವಾಗುತ್ತದೆ. ಅಷ್ಟೆ ಅಲ್ಲ ಹಬ್ಬ ಮಾಡುವುದಕ್ಕಾಗಿ ನಾವು ಹಬ್ಬವನ್ನು ಆಚರಿಸುತ್ತಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

ನಮ್ಮ ಸನಾತನ ಧರ್ಮದಲ್ಲಿ ಗಣಪತಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಗಣಪತಿಯನ್ನು ಬುದ್ಧಿ, ಜ್ಞಾನ, ವಿವೇಕ, ವಿನಯ ಹೀಗೆ ಗುಣಸಂಪನ್ನನಾಗಿಯೂ ಕಾಣುವುದರ ಜೊತೆಗೆ ಏಕದಂತನ ಪೂಜೆ ನಿರ್ಲಕ್ಷಿಸಿದರೆ, ಹೇಗೆ ನಮಗೆ  ಒಳಿತಾಗುತ್ತದೆ? ಎಂಬ ಧ್ವನಿ ಸಂಕೇತವೇ ಗಣಪತಿಯ ಆರಾಧನೆ ಎಷ್ಟು ಮುಖ್ಯವಾದದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗಲೇ ಲಂಬೋದರ ಎನ್ನುವ ಶಕ್ತಿಯ ದಿವ್ಯತೆಯ ಅರಿವಾಗುತ್ತದೆ.

ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷ ಚತುರ್ಥಿಯ ದಿನದಂದು ಗಣಪತಿಯ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಭೂಮಿಯು ನೆನೆದು ಹಸನಾಗಿ, ಬೆಳೆದ ಫಸಲು ಸಂವೃದ್ಧಿಯಾಗಿ, ಹಚ್ಚಹಸಿರು ಎಲ್ಲೆಡೆ ಕಂಗೊಳಿಸುವ ಸುಸಂದರ್ಭವಾಗಿರುತ್ತದೆ. ಇಂತಹ ಸಮಯದಲ್ಲಿ ತಾಯಿ ಗೌರಿಯ ಜೊತೆಗೆ ಆಕೆಯ ಮಾನಸಪುತ್ರ, ಭವಿಷ್ಯವನ್ನು ರೂಪಿಸುವ ವಿನಾಯಕ ನಮ್ಮ ಭೂಮಿಗೆ ಬರುತ್ತಿದ್ದಾನೆ ಎನ್ನುವ ವಿಚಾರದಲ್ಲೂ ಅರ್ಥವಿದೆ, ಮಹತ್ವವಿದೆ. ಜಗನ್ಮಾತೆ ಎನಿಸಿದ ಪಾರ್ವತಿಯ ಮೈಬೆವರಿನಿಂದ ಹುಟ್ಟಿದವನು ನಮ್ಮ ಗಣಪ.

ಸಾಂದರ್ಭಿಕ ಚಿತ್ರ

ಅಂದರೆ ಪ್ರಕೃತಿ ಮಾತೆ ಪಾರ್ವತಿ ಈ ಭೂಮಿ. ಈ ಭೂಮಿಯಿಂದ ಮಾಡಲ್ಪಡುವ ಮಣ್ಣಿನ ಮೂರ್ತಿಯ ಗಣಪತಿ ನಮ್ಮೆಲ್ಲರ ಶ್ರಮದ ಸಂಕೇತ. ಬೆಳೆಯುವ ಫಸಲು ಆಗಬಹುದು, ನಮ್ಮ ಇನ್ಯಾವುದೇ ರೂಪದ ದುಡಿಮೆಯಾಗಿರಬಹುದು, ಅದು ನಮ್ಮ ಕೈಗೆ ಎಟುಕಬೇಕಾದರೆ ಶ್ರಮವು ಫಲಕಾರಿಯಾಗಬೇಕಾದರೆ, ಭರವಸೆ ಎನ್ನುವ ಗಣಪತಿಯನ್ನು ಆರಾಧಿಸುವುದು, ನಮ್ಮ ಪೂರ್ವಿಕರ ನಂಬಿಕೆಯಾಗಿ ಗಣೇಶ ಚತುರ್ಥಿಯ ಹಬ್ಬದ ಆಚರಣೆ ಪರಂಪರೆಯಾಗಿ ನಡೆದುಕೊಂಡು ಬಂದಿದೆ.

ಆದುದರಿಂದಲೇ ಮಳೆಗಾಲದಲ್ಲಿ ಮಳೆಯ ಮೋಡ ತುಂಬಿ ಆಕಾಶವು ಕಪ್ಪಾಗಿರಬೇಕೇ ಹೊರತು, ಬೆಳ್ಳಗಿರುವ ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವಂತಾದರೆ, ಆ ಮಾಸ, ಆ ಕಾಲ ಮಳೆಯಿಂದ ವಂಚಿತವಾಗಿ, ಫಸಲಿಗೆ ಧಕ್ಕೆಯಾದರೆ, ಅದು ಅಕಾಲವಲ್ಲದೆ ಮತ್ತಿನ್ನೇನು ಆಗಲು ಸಾಧ್ಯ? ಹಾಗಾಗಿಯೇ ಶ್ರಮಿಕ ರೂಪದ ಸಂಕೇತದ ಗಣೇಶ. ಗಣೇಶ ಹಬ್ಬದಂದು ಚಂದ್ರನನ್ನು ಕಂಡರೆ, ಅದು ಅಶುಭದ ಸಂಕೇತವೆಂದು ಅಂದು ಯಾರು ಚಂದ್ರನನ್ನು ಕಾಣಲು ಯಾರೂ ಇಷ್ಟಪಡುವುದಿಲ್ಲ.

ಇನ್ನು ಇಂತಹ ಗಣಪತಿಯನ್ನು ಸೃಷ್ಟಿಸಿದ ಪ್ರಕೃತಿ ಮಾತೆ ಪಾರ್ವತಿಯು ಭೂಮಿಗೆ ಬರುವುದು ಸಹ, ಜನರ ಸುಖ, ನೆಮ್ಮದಿ, ಸೌಭಾಗ್ಯವನ್ನು ಕಾಣುವುದಕ್ಕಾಗಿಯೇ. ಆದ್ದರಿಂದ ಯಾವುದೇ ತಾರತಮ್ಯವಿಲ್ಲದೆ, ಬೇಧಬಾವವಿಲ್ಲದೆ, ಎಲ್ಲಾ ವರ್ಗದ ಜನರು ಸಹ ಪೂಜಿಸಿ, ಬರ ಮಾಡಿಕೊಳ್ಳುವ, ಆರಾಧಿಸುವ ಹಬ್ಬವೇ ಗಣೇಶ ಚತುರ್ಥಿ ಎನಿಸಿದೆ. ಗಣೇಶ ಹಬ್ಬದ ದಿನದಂದು, ಗಣಪತಿ ವೃತವನ್ನು ಆಚರಿಸುವವರು, ಪುರೋಹಿತರ ಮುಖಾಂತರವಾಗಲಿ ಅಥವಾ ತಾವೇ ಸ್ವತಃ ಮಾಡುವವರಾಗಲೀ, ‘ಸಂಕಲ್ಪ’ ಮಾಡಬೇಕು.

ಮಣ್ಣಿನ ಗಣಪತಿಗೆ ವಿಶೇಷ ಪೂಜೆ- ಪುನಸ್ಕಾರ ಮಾಡಿ, ಭಕ್ಷ್ಯ ಭೋಜ್ಯಗಳಿಂದ, ಗೀತ ಗಾಯನಗಳಿಂದ ಆರಾಧಿಸಿ, ನಂತರ ಖುಷಿ ಖುಷಿಯಾಗಿ ಗಣಪತಿ ಭಪ್ಪಾ ಮೋರಿಯಾ ಎಂದು ನೀರಿನಲ್ಲಿ ವಿಸರ್ಜನೆ ಮಾಡುವುದರಲ್ಲೂ ಬದುಕಿನ ರಹಸ್ಯ ಅಡಗಿದೆ. ನಮ್ಮ ಬದುಕು ಸಹ ಅಷ್ಟೆ, ಈ ದೇಹ ಪಂಚಭೂತಗಳಿಂದ ಆಗಿದ್ದು, ಇರುವಷ್ಟು ದಿನ ಖುಷಿಯಾಗಿ ಬದುಕಿ ನಂತರ ಮಣ್ಣಿನಲ್ಲಿ ಲೀನವಾಗುವಂತೆ, ಮಣ್ಣಿಂದ ಕಾಯ ಮಣ್ಣಿಗೆ ಎನ್ನುವ ಸತ್ಯವನ್ನು ಈ ಗಣೇಶ ಹಬ್ಬ ಧ್ವನಿಸುತ್ತದೆ.

ಗಣಪತಿಯ ಮಣ್ಣಿನ ವಿಗ್ರಹದಲ್ಲಿ, ಪಂಚಭೂತವೆನಿಸಿದ ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ ತತ್ವವು ಅಡಗಿದೆ. ನಾವು ಅಷ್ಟೆ, ಪಂಚಭೂತಗಳಿಂದ ಹುಟ್ಟಿ, ಪಂಚಭೂತಗಳಲ್ಲಿಯೇ ನಮ್ಮ ದೇಹ ಲೀನವಾಗುತ್ತದೆ. ಲಂಬೋದರನ ಪ್ರತಿ ಅಂಗಾಂಗಗಳೂ ಸಹ ಜ್ಞಾನ, ಬುದ್ದಿವಂತಿಕೆ, ಏಕಾಗ್ರತೆ, ದಕ್ಷತೆಯನ್ನು ಪ್ರತಿ ಪಾದಿಸುತ್ತದೆ. ಅವನ ಆಯುಧಗಳಾದ ಸಹ ಪಾಶ, ಅಂಕುಶ, ಸಂಯಮದೊಂದಿಗೆ ಆಧ್ಯಾತ್ಮಿಕ ಮಾರ್ಗದತ್ತ ಸೂಚಿಸುವ ಸಂಕೇತಗಳಾಗಿದೆ.

ಗಣಪತಿಯ ಕಥೆಗಳು ಸಹ ಹೇಗೆ ತಂದೆ- ತಾಯಿಯರಿಗೆ ಗೌರವ ನೀಡಬೇಕು ಎಂಬುದನ್ನು ಪ್ರತಿಪಾದಿಸಿದರೆ, ಅವನ ನಡೆ-ನುಡಿಯು ಎಂತೆಂತಹ ಸಂದರ್ಭದಲ್ಲಿ ಜಾಣ್ಮೆ, ವಿವೇಕ, ಸಹನೆಯನನು ಬಳಸಬೇಕು ಎಂಬುದನ್ನು ಕಥೆಯ ರೂಪದಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ಇಲಿಯು ವಾಹನವೆನಿಸಿದರೂ, ಅದರಲ್ಲೂ ವಿಶೇಷ ಅರ್ಥವಿದೆ. ಇಲಿಯೆಂಬ ವಾಹನ  ಚಂಚಲವೆನ್ನುವ ಆಸೆಗಳಾಗಿದ್ದು, ಅದನ್ನು ನಾವು ಹಿಡಿತದಲ್ಲಿಟ್ಟುಕೊಂಡು ಸವಾರಿ ಮಾಡಬೇಕು. ಕತ್ತಲೆಯಂತಹ ಅಜ್ಞಾನದಲ್ಲಿ ಕಣ್ಣರಳಿಸಿ ಓಡುವ ಇಲಿಯಂತೆ, ಅಂಧಕಾರದಿಂದ ಹೊರಬಂದು ಬೆಳಕಿನತ್ತ ಬರುವ ಸೂಚನೆಯನ್ನು ಕೂಡುತ್ತದೆ.

ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

ಹೀಗೆ ಗಣಪತಿಯು ವಿಘ್ನನಿವಾರಕನಾಗಿಯೂ, ಸಕಲ ಗುಣ ಸಂಪನ್ನನಾಗಿ ಸಮಷ್ಠಿ ರೂಪದಲ್ಲಿ ನಮಗೆ ಕಾಣುವುದರಿಂದಲೇ ಚಿಕ್ಕಮಕ್ಕಳಿಂದ ವೃದ್ಧರವರೆಗೂ, ಪಾಮರರಿಂದ ಪಂಡಿತರವರೆಗೂ, ಯಾವುದೇ ಬೇಧಬಾವವಿಲ್ಲದೆ ಮೆಚ್ಚುಗೆಯಾಗುತ್ತಾನೆ. ಎಲ್ಲರಿಗೂ ಪ್ರಿಯವಾಗುತ್ತಾನೆ. ‘ಭಕ್ತಾನಾಂ ಕಂಪಿನಂ ದೇವಂ ಜಗತ್ಕಾರಣಮಚ್ಯುತಂ’ ಎನ್ನುವ ನಂಬಿಕೆ, ಶ್ರದ್ಧೆಯಲ್ಲಿ ಗಣೇಶನ ಆರಾಧನೆ, ಪೂಜೆಯಿದೆ.

  • ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು

 (ಆಹಾರ ಇಲಾಖೆ ನಿವೃತ್ತ ಉಪ ನಿರ್ದೇಶಕ ಹಾಗೂ ಸಾಹಿತಿಗಳು)

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

KMF MILK RATE HIKE PROPOSAL | ಕೆಎಂಎಫ್ ಪ್ರತಿ ಲೀಟರ್ ಹಾಲಿನ ದರ 3 ರೂ. ಏರಿಕೆಗೆ ಪ್ರಸ್ತಾಪ

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

Next Post

#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?

KIAL Airport | ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಹಿನ್ನಲೆ ; ಪೂರ್ವಭಾವಿ ಉದ್ಘಾಟನಾ ಅಭಿಯಾನಕ್ಕೆ ಸಿಎಂ ಚಾಲನೆ

Please login to join discussion

Like Us on Facebook

Follow Us on Twitter

Recent News

ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

September 26, 2026

Inspiring News | ​ಸ್ವಿಗ್ಗಿಯಿಂದ ಸೀಫುಡ್ ಸಾಮ್ರಾಜ್ಯಕ್ಕೆ: ಬೆಂಗಳೂರಿನ ಯುವಕನ ಸ್ಪೂರ್ತಿದಾಯಕ ಯಶೋಗಾಥೆ

September 26, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

September 26, 2026

Inspiring News | ​ಸ್ವಿಗ್ಗಿಯಿಂದ ಸೀಫುಡ್ ಸಾಮ್ರಾಜ್ಯಕ್ಕೆ: ಬೆಂಗಳೂರಿನ ಯುವಕನ ಸ್ಪೂರ್ತಿದಾಯಕ ಯಶೋಗಾಥೆ

September 26, 2026

ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

September 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d