Tuesday, April 28, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | CMs Multi- Storeyed Housing Scheme | ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಬಗ್ಗೆ ನಿಮಗೊಂದು ಗುಡ್ ನ್ಯೂಸ್….! ಇಲ್ಲಿದೆ ಫುಲ್ ಡಿಟೇಲ್ಸ್

ಮೊದಲ ಹಂತದ ಜಿ+14 ಮಾದರಿ ವಸತಿ ಸಂಕೀರ್ಣದಲ್ಲಿ 42,334 ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ | ಎರಡನೇ ಹಂತದ ಜಿ+3 ಮಾದರಿಯಲ್ಲಿ 5,684 ಮನೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ | ಈವರೆಗೆ ಯೋಜನೆಗಾಗಿ 1,088 ಕೋಟಿ ರೂ. ವೆಚ್ಚವಾಗಿದೆ

by Bengaluru Wire Desk
August 16, 2022
in Bengaluru Focus, BW Special
Reading Time: 2 mins read
0

ಬೆಂಗಳೂರು, ಆ.16 www.bengaluruwire.com : ರಾಜಧಾನಿಯಲ್ಲಿ ತಲೆ ಮೇಲೊಂದು ಸೂರು ಪಡೆಯಲು ಇನ್ನಿಲದ ಕಸರತ್ತು ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೊಂದು ಖುಷಿಯ ಸಂಗತಿ.  ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಒಂದು ಬಿಎಚ್ ಕೆ  ಫ್ಲಾಟ್ ಗಳಿಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳು ಪಾವತಿಸಬೇಕಾದ ನಿಗದಿತ ಪ್ರಾರಂಭಿಕ ಠೇವಣಿಯನ್ನು ರಾಜ್ಯ ಸರ್ಕಾರ ಒಂದು ಲಕ್ಷ ರೂ. ನಿಂದ 50 ಸಾವಿರ ರೂ.ಗಳಿಗೆ ಇಳಿಕೆ ಮಾಡಿದೆ.

ಆದರೆ ನಿಗಧಿತ ಪ್ರಾರಂಭಿಕ ಠೇವಣಿ ಪರಿಷ್ಕರಣೆಯು ಭವಿಷ್ಯದಲ್ಲಿ ಒಂದು ಬಿಎಚ್ ಕೆ ಫ್ಲಾಟ್ ಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಅನ್ವಯವಾಗುತ್ತದೆ.

ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಮನೆ ಅಥವಾ ಫ್ಲಾಟ್ ಆಯ್ಕೆ ಮಾಡಿಕೊಳ್ಳಲು ನಿಗಧಿಪಡಿಸಿರುವ 1 ಲಕ್ಷ ರೂ. ಆರಂಭಿಕ ಠೇವಣಿ ಪಾವತಿಸುವುದು ಕಷ್ಟಕರವಾಗುತ್ತಿದೆ ಎಂದು ಹಲವು ನಾಗರೀಕರು ಹಾಗೂ ನಾಗರೀಕ ಸಂಘ ಸಂಸ್ಥೆಗಳು, ಆಟೊ ಚಾಲಕರು ಸೇರಿದಂತೆ ವಿವಿಧ ದುಡಿಯುವ ವರ್ಗ ಸರ್ಕಾರಕ್ಕೆ ಮನವಿ ಮಾಡಿದ್ದವು.

ಅಲ್ಲದೆ 2017-18ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಮುಖಾಂತರ ವಸತಿ ಇಲಾಖೆಯು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಇಲ್ಲಿಯವರೆಗೂ ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಲಾಗಿರುವ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಇಲ್ಲಿಯವರೆಗೂ ಆನ್ ಲೈನ್ ಮುಖಾಂತರ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಕಾರಣಾಂತರಗಳಿಂದ ರದ್ದುಗೊಳಿಸಿತ್ತು.

ಆದರೆ 23 ಆಗಸ್ಟ್ 2021 ರಿಂದ ಹೊಸದಾಗಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಆರಂಭಿಸಿತ್ತು. ಆದರೂ ಹೆಚ್ಚಿನ ಅರ್ಜಿಗಳು ಬಾರದ ಕಾರಣ, ಸರ್ಕಾರ ವಸತಿ ರಹಿತ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ನಿಗದಿತ ಪ್ರಾರಂಭಿಕ ಠೇವಣಿ ಮೊತ್ತವನ್ನು ಇನ್ನು ಮುಂದೆ ಅರ್ಜಿ ಸಲ್ಲಿಸುವವರಿಗೆ ಒಂದು ಲಕ್ಷ ರೂ.ನಿಂದ 50 ಸಾವಿರ ರೂ.ಗಳಿಗೆ ಇಳಿಕೆ ಮಾಡಿದೆ.

ವಿ.ಸೋಮಣ್ಣ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು

‘ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಬೆಂಗಳೂರು ನಗರ ಎಂಬ ಭೌಗೋಳಿಕ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಎಂಬುದಾಗಿ ವಿಸ್ತರಿಸಿ, ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು 87,500 ರೂ.ನಿಂದ 3 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಇದೀಗ ಫ್ಲಾಟ್ ಆಯ್ಕೆ ಮಾಡಿಕೊಳ್ಳಲು ನಿಗದಿಪಡಿಸಲಾಗಿರುವ 1 ಲಕ್ಷ ರೂ. ಆರಂಭಿಕ ಠೇವಣಿಯನ್ನು ಬಡ ವಸತಿರಹಿತ ಅರ್ಜಿದಾರರಿಗೆ ಹೊರೆಯಾಗದಂತೆ 50 ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗಿದೆ. ಇದರ ಲಾಭವನ್ನು ಅರ್ಹ ನಾಗರೀಕರು ಸದುಪಯೋಗಪಡಿಸಿಕೊಳ್ಳಬೇಕು.’

ವಿ.ಸೋಮಣ್ಣ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು

ಯೋಜನೆಯ ಸದ್ಯದ ಸ್ಥಿತಿಗತಿಯೇನು?

ಆಗಸ್ಟ್ 2021ರಿಂದ ಹೊಸದಾಗಿ ಬಹು ಮಹಡಿ ಮನೆಗಳ ಬೇಡಿಕೆಗಾಗಿ ಆನ್ ಲೈನ್ ಮುಖಾಂತರ ಇಲ್ಲಿಯ ತನಕ 44,366 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈತನಕ 8,709 ಅರ್ಹ ಫಲಾನುಭವಿಗಳು ನಿಗಧಿಪಡಿಸಿರುವ ಪ್ರಾರಂಭಿಕ ಮೊತ್ತವನ್ನು ಪಾವತಿಸಿದ್ದಾರೆ. ಈ ಪೈಕಿ 6,427 ಅರ್ಹ ಫಲಾನುಭವಿಗಳು ಆನ್ ಲೈನ್ ಮುಖಾಂತರ ಒಂದು ಬಿಎಚ್ ಕೆ ಫ್ಲಾಟ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ 79.37 ಕೋಟಿ ರೂ. ವಂತಿಗೆಯನ್ನು ಫಲಾನುಭವಿಗಳು ಕಟ್ಟಿದ್ದಾರೆ.

ಏನಿದು ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ ?

ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ವಸತಿ ಕಲ್ಪಿಸಲು ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ‘ವಾಜಪೇಯಿ ನಗರ ವಸತಿ ಯೋಜನೆ’ ಹಾಗೂ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)- ಸರ್ವರಿಗೂ ಸೂರು’ ಯೋಜನೆಯ ಅನುದಾನವನ್ನು ಸಂಯೋಜಿಸಿಕೊಂಡು ಹಾಗೂ ಫಲಾನುಭವಿಗಳ ವಂತಿಕೆಯೊಂದಿಗೆ ಮತ್ತು ಯೋಜನೆಯಡಿ ನಿರ್ಮಿಸುವ ನಿವೇಶನ ಅಥವಾ ಬಹುಮಹಡಿ ಮನೆಗಳ ಅಥವಾ ಉಳಿಕೆ ಜಮಿನನ್ನು ಮಾರಾಟ ಮಾಡಿ ಬರುವ ಮೊತ್ತದಿಂದ ವಸತಿ ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಯಾರು ಯಾರಿಗೆ ಎಷ್ಟೆಷ್ಟು ಸಬ್ಸೀಡಿ ಲಭಿಸಲಿದೆ?

ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಾಣದ 1 ಲಕ್ಷ ಬಹುಮಹಡಿ ವಸತಿ ಸಂಕೀರ್ಣದ ಸಾಂದರ್ಭಿಕ ಚಿತ್ರ

ಒಂದು ಬಿಎಚ್ ಕೆ ಫ್ಲಾಟ್ ಗೆ ಒಟ್ಟಾರೆ 10.60 ಲಕ್ಷ ರೂ.ಗಳಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಪ್ರತಿ ಮನೆಗೆ 1.50 ರೂ. ನೀಡಿದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಪ್ರತಿ ಮನೆಗೆ ರಾಜ್ಯ ಸರ್ಕಾರವು 2 ಲಕ್ಷ ರೂ.ಗಳನ್ನು ಸಹಾಯಧನ ನೀಡುತ್ತದೆ. ಸಾಮಾನ್ಯ ವರ್ಗದವರ ಪ್ರತಿ ಮನೆಗೆ 1.20 ಲಕ್ಷ ರೂ. ನೀಡುತ್ತದೆ. ಅಲ್ಲಿಗೆ ಎಸ್ ಸಿ ಅಥವಾ ಎಸ್ ಟಿ ಸಮುದಾಯದ ಫಲಾನುಭವಿ 7.10 ಲಕ್ಷ ರೂ. ಕಟ್ಟಬೇಕು. ಸಾಮಾನ್ಯ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ಫಲಾನುಭವಿಯಾದರೆ ತನ್ನ ಕೈಯಿಂದ 7.90 ಲಕ್ಷ ರೂ.ಗಳನ್ನು ಕಟ್ಟಬೇಕಾಗುತ್ತದೆ.

 ಜಿ+14 ವಸತಿ ಸಂಕೀರ್ಣದಲ್ಲಿ ವಿವಿಧೆಡೆ 46,499 ಫ್ಲಾಟ್ ಗಳ ನಿರ್ಮಾಣ :

ಮೊದಲ ಹಂತದಲ್ಲಿ ಜಿ+14 ಮಹಡಿಗಳವರೆಗಿನ 46,499 ಫ್ಲಾಟ್ ಗಳ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಪೈಕಿ 38,403 ಒಂದು ಬಿಎಚ್ ಕೆ ಫ್ಲಾಟ್ ಗಳಾಗಿದ್ದರೆ, 8,096 ಎರಡು ಬಿಎಚ್ ಕೆ ಫ್ಲಾಟ್ ಗಳಾಗಿದೆ. 5,035.35 ಕೋಟಿ ರೂ.ಗಳ ಯೋಜನೆಗೆ ಗುತ್ತಿಗೆದಾರರರೊಂದಿಗೆ ಕರಾರು ಮಾಡಿಕೊಂಡು ವಸತಿ ಇಲಾಖೆಯು ಕಾರ್ಯಾದೇಶ ನೀಡಿದೆ. ವಸತಿ ಸಮುಚ್ಛಯ ನಿರ್ಮಾಣ ಕಾರ್ಯದ ಪೈಕಿ 42,334 ಮನೆಗಳ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇದಕ್ಕಾಗಿ ವಸತಿ ಇಲಾಖೆಯು ಗುತ್ತಿಗೆದಾರರಿಗೆ ವಿವಾದ ರಹಿತ 313 ಎಕರೆ ವಿಸ್ತೀರ್ಣದ ಭೂಮಿಯನ್ನು ಹಸ್ತಾಂತರಿಸಿದೆ. 46,499 ಫ್ಲಾಟ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪಾಲು 576.04 ಕೋಟಿ ರೂ. ಆದರೆ, ರಾಜ್ಯ ಸರ್ಕಾರದ ಪಾಲು 583.72 ಕೋಟಿ ರೂ.ಗಳಾಗಿದೆ. ಫಲಾನುಭವಿಗಳ ಪಾಲು 3,875.59 ಕೋಟಿ ರೂ.ಗಳಾಗಿರುತ್ತದೆ.

ಮೊದಲ ಹಂತದ ಕಾಮಗಾರಿ ವಿವರ :

ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಿರುವ ಸಂಖ್ಯೆ42,334
ಛಾವಣಿ ಹಂತದಲ್ಲಿರುವ ಮನೆಗಳು (Roof Casted)11,299
ಪ್ಲಿಂತ್/ವಾಲಿಂಗ್ ಮಟ್ಟದ ಮನೆಗಳ ಸಂಖ್ಯೆ13,525
ತಳಪಾಯದ ಹಂತದಲ್ಲಿರುವ ಮನೆಗಳ ಸಂಖ್ಯೆ4,525
ಮಣ್ಣು ಅಗೆತದ ಹಂತದಲ್ಲಿರುವ ಮನೆಗಳ ಸಂಖ್ಯೆ4,558
ಜಮೀನು ಸಮತಟ್ಟು ಹಂತದಲ್ಲಿರುವ ಮನೆಗಳು8,427

ಜಿ+3 ಮಾದರಿಯಲ್ಲಿ 53,501 ಮನೆ ನಿರ್ಮಾಣ ಯಾವ ಹಂತದಲ್ಲಿದೆ?

ವಸತಿ ಇಲಾಖೆಯು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಎರಡನೇ ಹಂತದಲ್ಲಿ ಜಿ+3 ಮಾದರಿಯಲ್ಲಿ 53,501 ಮನೆಗಳನ್ನು ನಿರ್ಮಿಸಲು 16-01-2020ರಲ್ಲೆ ಸರ್ಕಾರ ಮಂಜೂರಾತಿ ನೀಡಿದೆ. ಈ ಪೈಕಿ 14,332 ಮನೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಇವುಗಳ ನಿರ್ಮಾಣದ ಅಂದಾಜು ಮೊತ್ತ 1,623.51 ಕೋಟಿ ರೂ.ಗಳಾಗಿದೆ. ಈ ಪೈಕಿ 5,684 ಮನೆಗಳ ಕಾಮಗಾರಿಯನ್ನು ರಾಜೀವ್ ಗಾಂಧಿ ವಸತಿ ನಿಗಮವು ಪ್ರಾರಂಭಿಸಿದೆ. ಹಾಗೆಯೇ 1,624 ಮನೆಗಳ ಕಾಮಗಾರಿಯನ್ನು ಇನ್ನಷ್ಟೇ ಪ್ರಾರಂಭಿಸಬೇಕಿದೆ. 7,024 ಮನೆಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮಕ್ಕೆ 40,000 ಮನೆಗಳನ್ನು ಕಟ್ಟಲು 398 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ, ಅದನ್ನು ನಿಮಗಕ್ಕೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು/ ತಹಸೀಲ್ದಾರ್ ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಬಿಡಿಎನ 150 ಎಕರೆ ಜಮೀನಿನಲ್ಲಿ 15,000 ಮನೆಗಳನ್ನು ನಿರ್ಮಿಸಬಹುದೆಂದು ಅಂದಾಜಿಸಲಾಗಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

2 ಬಿಎಚ್ ಕೆ ಮನೆಗಳ ವಿವರ :

ಮೊದಲ ಹಂತದಲ್ಲಿ 2 ಬಿಎಚ್ ಕೆಯ 8,096 ಮನೆಗಳು 8 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಾಣವಾಗಲಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಕಡಿಮೆ ಆದಾಯ ವರ್ಗದ ವಸತಿ ರಹಿತರಿಗೆ ಹಂಚಿಕೆ ಮಾಡಲು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಯೋಜಿಸಿದೆ. ಈ ಹಿನ್ನಲೆಯಲ್ಲಿ ನಗರದ 16 ಕಡೆಗಳಲ್ಲಿ ಜಿ+3ಯಿಂದ ಹಿಡಿದು ಎಸ್+14 ಮಹಡಿಗಳ ವಸತಿ ಸಂಕೀರ್ಣ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಇನ್ನು 3 ಕಡೆಗಳಲ್ಲಿ 2 ಬಿಎಚ್ ಕೆಯ ಮನೆ ನಿರ್ಮಾಣ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

2 ಬಿಎಚ್ ಕೆ ಫ್ಲಾಟ್ ವೊಂದರ ದರ 15 ರಿಂದ 14 ಲಕ್ಷ ರೂ.ಗೆ ಇಳಿಕೆ :

1 ಬಿಎಚ್ ಕೆ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಬ್ಸೀಡಿ ದರದಲ್ಲಿ ಮನೆಗಳನ್ನು ಹಂಚಿಕೆ ಮಾಡುತ್ತಿದೆ. ಆದರೆ 2 ಬಿಎಚ್ ಕೆ ಗೆ ಯಾವುದೇ ಸಬ್ಸೀಡಿ ನೀಡುತ್ತಿಲ್ಲ. ಯೋಜನೆಯ ಫಲಾನುಭವಿಗಳು ಕಡಿಮೆ ಆದಾಯ ವರ್ಗಕ್ಕೆ ಸೇರಿರುವುದರಿಂದ ರಾಜ್ಯ ಸರ್ಕಾರವು ಈ ಹಿಂದೆ ಪ್ರತಿ ಮನೆಗೆ ನಿಗಧಿಪಡಿಸಿದ್ದ 15 ಲಕ್ಷ ರೂ.ಗಳ ದರವನ್ನು ಒಂದು ಲಕ್ಷ ರೂ. ಇಳಿಕೆ ಮಾಡಿ 14 ಲಕ್ಷ ರೂ.ಗೆ ನಿಗಧಿ ಮಾಡಿದೆ. ಈ ಕುರಿತಂತೆ ಸಚಿವ ಸಂಪುಟದಲ್ಲಿ ಇತ್ತೀಚೆಗಷ್ಟೇ ಅನುಮೋದನೆಯಾಗಿತ್ತು. ಆದರೆ 2 ಆಗಸ್ಟ್ 2022ರಂದು ಈ ಕುರಿತಂತೆ ಸರ್ಕಾರಿ ಆದೇಶವಾಗಿದೆ.

ವಸತಿ ಯೋಜನೆಗೆ ಈವರೆಗೆ 1,088 ಕೋಟಿ ರೂ. ವೆಚ್ಚ :

ಒಟ್ಟಾರೆ ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಗೆ ಇಲ್ಲಿಯ ತನಕ ಕೇಂದ್ರ ಸರ್ಕಾರ 1,500 ಕೋಟಿ ರೂ. ತಾನು ನೀಡಬೇಕಿರುವ ಹಣ ಪೈಕಿ 600 ಕೋಟಿ ರೂ.ಗಳನ್ನು ನೀಡಿದ್ದರೆ, ರಾಜ್ಯ ಸರ್ಕಾರವು 1,520 ಕೋಟಿ ರೂ.ಗಳ ಪೈಕಿ 466.98 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಫಲಾನುಭವಿಗಳ ವಂತಿಕೆ 79.37 ಕೋಟಿ ರೂ. ನಿಗಮಕ್ಕೆ ಸಂದಾಯವಾಗಿದೆ. ಒಟ್ಟಾರೆ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 1,088 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗುತ್ತಿಗೆದಾರರಿಗೆ 148.92 ಕೋಟಿ ರೂ. ಬಾಕಿ ಬಿಲ್ಲುಗಳನ್ನು ಪಾವತಿಸಬೇಕಾಗಿದೆ.

ಈ ವಸತಿ ಯೋಜನೆ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ https://ashraya.karnataka.gov.in/index.aspx ಜಾಲತಾಣಕ್ಕೆ ಭೇಟಿ ನೀಡಬಹುದು.

WhatsApp Join our WhatsApp Channel
Previous Post

ಬಿಬಿಎಂಪಿಯಲ್ಲಿ ಅದ್ಧೂರಿಯಾಗಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ

Next Post

BSY IN TO BJP PARLIAMENTARY BOARD | ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ : ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ – ಮತ್ತೆ ಪವರ್ ಪುಲ್ ಆದ ಮಾಜಿ ಸಿಎಂ

Next Post
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ ಬಿ.ಎಸ್.ಯಡಿಯೂರಪ್ಪ

BSY IN TO BJP PARLIAMENTARY BOARD | ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ : ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ – ಮತ್ತೆ ಪವರ್ ಪುಲ್ ಆದ ಮಾಜಿ ಸಿಎಂ

ಆನೆಯೊಂದು ತನ್ನ ಸೋಂಡಲಿನ ಮೂಲಕ ಮಗುವಿನ ಶೂ ವಾಪಸ್ ಮಾಡುತ್ತಿರುವ ಚಿತ್ರ. (ಚಿತ್ರಕೃಪೆ :  ನೋ ದಿಸ್ ನ್ಯೂಸ್/ಇನ್ ಸ್ಟಾಗ್ರಾಮ್)

Viral Video : ಮಗುವಿನ ಶೂವನ್ನು ತನ್ನ ಸೋಂಡಿಲಿನಿಂದ ಎತ್ತಿ ವಾಪಸ್ ನೀಡಿದ ಆನೆ...!

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group