Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | Highest Commercial Value Properties | ಕರ್ನಾಟಕದಲ್ಲಿ ಈ ಸ್ಥಳಗಳಲ್ಲಿನ ಸೈಟ್ – ಪ್ರತಿ ಚದರ ಅಡಿ ಬೆಲೆ 22 ಕ್ಯಾರೆಟ್ ಚಿನ್ನಕ್ಕಿಂತ ಹೆಚ್ಚು….! ಇಲ್ಲಿದೆ ಸಂಪೂರ್ಣ ಮಾಹಿತಿ

ಇಡೀ ರಾಜ್ಯದಲ್ಲಿನ ಟಾಪ್-12 ಅತಿಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿದ ಸ್ಥಳಗಳ ಮಾಹಿತಿ ಈ ವಿಶೇಷ ವರದಿಯಲ್ಲಿದೆ.

by Bengaluru Wire Desk
January 12, 2023
in Bengaluru Focus, BW Special, Public interest
Reading Time: 2 mins read
0
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.9 www.bengaluruwire.com : ರಾಜ್ಯದಲ್ಲಿ ಕೋವಿಡ್ ಸೋಂಕಿನ ನಂತರ ಆಸ್ತಿ ನೋಂದಣಿ ಪ್ರಮಾಣ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರವೂ ಕೂಡ ಸಾಕಷ್ಟು ಸುಧಾರಿಸಿದೆ. ಇದೇ ಹೊತ್ತಿನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅತಿಹೆಚ್ಚು ಕರ್ನಾಟಕ ಯಾವ ಸ್ಥಳದಲ್ಲಿ ಅತಿಹೆಚ್ಚಾಗಿದೆ ಅಂತ ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.

ನಿಮ್ಮ ನಿರೀಕ್ಷೆಯಂತೆಯೇ ಇಡೀ ರಾಜ್ಯದಲ್ಲಿ ಅತಿಹೆಚ್ಚು ಸ್ಥಿರಾಸ್ತಿಯ ಗರಿಷ್ಠ ಮಾರುಕಟ್ಟೆ ಬೆಲೆ ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳಲ್ಲಿಯೇ ಇರೋದು. ಇಲ್ಲಿ ಒಂದು ಚದರಡಿ (ಒಂದು ಅಡಿ ಉದ್ದ X ಒಂದು ಅಡಿ ಅಗಲ) ಜಾಗದ ವಾಣಿಜ್ಯ ದರ ನೋಂದಣಿ ಮತ್ತು ಮುದ್ರಾಂಕ (Sub Registrar And Stamps)ದ ಪ್ರಕಾರ ಸಾವಿರಾರು ರೂಪಾಯಿ ಮೌಲ್ಯ ಹೊಂದಿದೆ. ಇನ್ನು ಇವುಗಳ ಮಾರ್ಕೇಟ್ ದರವನ್ನು ನೋಡಿದ್ರೆ ಎರಡರಿಂದ ಮೂರುಪಟ್ಟು ಇರುತ್ತದೆ ಅನ್ನೋದು ರಿಯಲ್ ಎಸ್ಟೇಟ್ ಕ್ಷೇತ್ರದ ಥಂಬ್ ರೂಲ್.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ರಸ್ತೆಯ ಸಾಂದರ್ಭಿಕ ಚಿತ್ರ

ಜಯನಗರ 4ನೇ ಬ್ಲಾಕ್ ವಾಣಿಜ್ಯ ನಿವೇಶನದ ಮೌಲ್ಯ ಅತಿಹೆಚ್ಚು :

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಾದ್ಯಂತ 253 ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಹೊಂದಿದೆ. ಆ ಕಚೇರಿಗಳ ಪೈಕಿ ಜಯನಗರ ಮತ್ತು ಶಿವಾಜಿನಗರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಗರಿಷ್ಠ ಮಾರುಕಟ್ಟೆ ಬೆಲೆ ಹೊಂದಿದ ಸ್ಥಿರಾಸ್ತಿಗಳಿರುವ ಪ್ರದೇಶವನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಗುರ್ತಿಸಿದೆ. ಅವುಗಳ ಪೈಕಿ ಜಯನಗರ 4ನೇ ಬ್ಲಾಕ್ ವಾಣಿಜ್ಯ ನಿವೇಶನದ ದರ ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಇದು, ಮೊದಲ ಸ್ಥಾನದಲ್ಲಿದೆ. ಇಲ್ಲಿನ ಕಮರ್ಷಿಯಲ್ ನಿವೇಶನದ ದರ ಪ್ರತಿ ಚದರ ಅಡಿಗೆ ಬರೋಬ್ಬರಿ 42,493 ರೂಪಾಯಿಯಾಗಿದೆ. ಇದು ಸಬ್ ರಿಜಿಸ್ಟ್ರಾರ್ ಇಲಾಖೆ ನಿಗಧಿಪಡಿಸಿರುವ ಗರಿಷ್ಠ ಮಾರ್ಗಸೂಚಿ ದರವಾಗಿದೆ. ಇವತ್ತಿನ ಬೆಂಗಳೂರು ಚಿನ್ನದ ಮಾರುಕಟ್ಟೆ ದರದಲ್ಲಿ 22 ಕ್ಯಾರೆಟ್ ಚಿನ್ನ 9 ಗ್ರಾಮ್ ಗಳಿಗೆ (ಪ್ರತಿ ಗ್ರಾಮ್ ಚಿನ್ನದ ದರ 4,760 ರೂ.) ಹೆಚ್ಚು ಕಮ್ಮಿ ಜಯನಗರ 4ನೇ ಬ್ಲಾಕ್ ಬಳಿಯಲ್ಲಿನ ನಿವೇಶನದ ದರಕ್ಕೆ ಸಮನಾಗಿದೆ.

ಹಾಗಾದ್ರೆ ಬೆಂಗಳೂರಿನ ಟಾಪ್-12 ಅತಿಹೆಚ್ಚು ಮಾರುಕಟ್ಟೆ ದರ ಹೊಂದಿದ ವಾಣಿಜ್ಯ ನಿವೇಶನಗಳಿರುವ ಪ್ರದೇಶಗಳು ಹಾಗೂ ಅಲ್ಲಿ ಪ್ರತಿ ಚದರಡಿ ನಿಗಧಿಪಡಿಸಿರುವ ದರವನ್ನು ಈ ಕೆಳಗೆ ನೀಡಲಾಗಿದೆ :

ಕ್ರಮಸಂಖ್ಯೆಜಯನಗರ ನೋಂದಣಿ ಜಿಲ್ಲೆ ವ್ಯಾಪ್ತಿಯ ಸ್ಥಿರಾಸ್ತಿಗಳ ವಿವರಪ್ರತಿ ಚದರ ಅಡಿಗೆ ರೂ.ಗಳಲ್ಲಿ
1)ಜಯನಗರ 4ನೇ ಬ್ಲಾಕ್, 11ನೇ ಮುಖ್ಯರಸ್ತೆ42,493 ರೂ.
2)ಜಯನಗರ ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆ41,499 ರೂ.
3)ಜಯನಗರ 11ನೇ ಮುಖ್ಯರಸ್ತೆ (33ನೇ ಅಡ್ಡರಸ್ತೆಯಿಂದ ಜೆಪಿ ನಗರದ ತನಕ)33,993 ರೂ.
4)ಬನ್ನೇರುಘಟ್ಟ ರಸ್ತೆ33,993 ರೂ.
5)ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ)31,995 ರೂ.
6)ಸೌತ್ ಎಂಡ್ ರಸ್ತೆ (ಜಯನಗರ 3ನೇ ಬ್ಲಾಕ್ ವೃತ್ತದಿಂದ ಸೌತ್ ಎಂಡ್ ವೃತ್ತದವರೆಗೆ, ಆನೆ ಬಂಡೆ ರಸ್ತೆ 3ನೇ ಬ್ಲಾಕ್ ಸರ್ಕಲ್ ನಿಂದ ಸೌತ್ ಎಂಡ್ ವೃತ್ತದವರೆಗೆ)28,493 ರೂ.
7)ಅಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ (10ನೇ ಮುಖ್ಯರಸ್ತೆ) 100 ಅಡಿ ರಸ್ತೆ26,495 ರೂ.
 ಶಿವಾಜಿನಗರ ನೋಂದಣಿ ಜಿಲ್ಲೆ ವ್ಯಾಪ್ತಿಯ ಸ್ಥಿರಾಸ್ತಿಗಳ ವಿವರಪ್ರತಿ ಚದರ ಅಡಿಗೆ ರೂ.ಗಳಲ್ಲಿ
8)ಕನ್ನಿಂಗ್ ಹ್ಯಾಮ್ ರಸ್ತೆ (ಸಂಪಂಗಿ ರಾಮಸ್ವಾಮಿ ದೇವಸ್ಥಾನ)26,012 ರೂ.
9)ಕಮರ್ಷಿಯಲ್ ಸ್ಟ್ರೀಟ್25,752 ರೂ.
10)ಎಂ.ಜಿ.ರಸ್ತೆ (ಕಸ್ತೂರಬಾ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ)25,418 ರೂ.
11)ರೆಸಿಡೆನ್ಸಿ ರಸ್ತೆ20,029 ರೂ.
12)ಸೆಂಟ್ ಮಾರ್ಕ್ಸ್ ರಸ್ತೆ19,732 ರೂ.
ಡಾ.ಬಿ.ಆರ್.ಮಮತ ಐಎಎಸ್

ವಾಣಿಜ್ಯ ನಿವೇಶನ ಮತ್ತು ಕಟ್ಟಡಗಳ ಮಾರ್ಗಸೂಚಿ ದರ ಹೇಗೆ ನಿಗಧಿಯಾಗುತ್ತೆ?

“ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರೀಯ ಮೌಲ್ಯಮಾಪನ ಸಮಿತಿಯು ವಾಣಿಜ್ಯ ದರ ನಿಗದಿಪಡಿಸದ ಪ್ರದೇಶಗಳಲ್ಲಿ ವಾಣಿಜ್ಯ ನಿವೇಶನಗಳಿದ್ದರೆ, ಆ ಪ್ರದೇಶದ ಮಾರ್ಗಸೂಚಿ ದರದ ಶೇ.40ರಷ್ಟು ಹೆಚ್ಚುವರಿ ದರವನ್ನು ಸೇರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಒಂದೊಮ್ಮೆ ಮಾಲ್, ವಾಣಿಜ್ಯ ಕಾಂಪ್ಲೆಕ್ಸ್ ಇದ್ದಲ್ಲಿ, ಆ ಪ್ರದೇಶದ ಮಾರ್ಗಸೂಚಿದರದ ಶೇ.30ರಷ್ಟನ್ನು ವಾಣಿಜ್ಯ ಕಟ್ಟಡದ ಸೂಪರ್ ಬಿಲ್ಟಪ್ ಏರಿಯಾವನ್ನು ಗಣನೆಗೆ ತೆಗೆದುಕೊಂಡು ರಿಜಿಸ್ಟ್ರೇಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ನಿಗದಿ ಮಾಡಲಾಗುತ್ತದೆ.”

– ಡಾ.ಬಿ.ಆರ್.ಮಮತ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು

ಮೇಲೆ ತಿಳಿಸಿದ ಸ್ಥಿರಾಸ್ತಿ ಮಾರ್ಗಸೂಚಿ ದರ ಸರ್ಕಾರ ನಿಗದಿಪಡಿಸಿದ್ದಾಗಿದೆ. ಆದ್ರೆ ಮಾರುಕಟ್ಟೆ ಬೆಲೆಯು ಅದಕ್ಕಿಂತ ಒಂದೂವರೆ ಎರಡು ಪಟ್ಟು ಹೆಚ್ಚು ಇರುತ್ತೆ. ಏಪ್ರಿಲ್ 2016ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯಾದ್ಯಂತ ಪರಿಷ್ಕೃತ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಿತ್ತು. ಇದಾದ 3 ವರ್ಷದ ಬಳಿಕ ರಾಜ್ಯ ಸರ್ಕಾರ 2019ರ ಜನವರಿಯಿಂದ ಜಾರಿಗೆ ಬರುವಂತೆ ಪರಿಷ್ಕೃತ ಮಾರ್ಗಸೂಚಿ ದರವನ್ನು ಪ್ರಕಟಿಸಿತ್ತು. ಅದಾದ ಬಳಿಕ ಪರಿಷ್ಕೃತ ದರವನ್ನು ನಿಗದಿ ಮಾಡಿಲ್ಲ. 2023ರ ಇಸವಿಯಲ್ಲಿ ಸಾರ್ವತ್ರಿಕ ಚುನಾವಣಾ ವರ್ಷವಾಗಿರುವ ಕಾರಣ ನೂತನ ಪರಿಷ್ಕೃತ ಮಾರ್ಗಸೂಚಿ ದರವನ್ನು ಜಾರಿಗೆ ತರುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕುವ ಗೋಜಿಗೆ ಹೋಗದು ಎಂದು ಹೇಳಲಾಗುತ್ತಿದೆ.

ಕ್ರೆಡಾಯ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷರು ಈ ಬಗ್ಗೆ ಏನಂತಾರೆ?

ಸುರೇಶ್ ಹರಿ

“ಸ್ಥಿರಾಸ್ತಿಗಳ ಮಾರ್ಗಸೂಚಿ ದರ ನಿಗದಿ ಮಾಡುವುದು ಹಿಂದೆಲ್ಲ ಆದಾಯ ತೆರಿಗೆ ಇಲಾಖೆಯ ಲೆಕ್ಕಾಚಾರಕ್ಕಾಗಿ ಮಾಡಲಾಗಿತ್ತು. ಆದರೀಗ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಎಂಬುದು ಸರ್ಕಾರಕ್ಕೆ ಮುಂದ್ರಾಂಕ ಶುಲ್ಕ ಸಂಗ್ರಹ ಮಾಡಿಕೊಳ್ಳುವ ಒಂದೂ ಟೂಲ್ ಆಗಿ ಬದಲಾಗಿದೆ. ಬೇಡಿಕೆ ಹೆಚ್ಚಿರುವ ಕಡೆ ಸಾಮಾನ್ಯವಾಗಿ ವಾಣಿಜ್ಯ ನಿವೇಶನ ದರ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಸಬ್ ರಿಜಿಸ್ಟ್ರಾರ್ ಇಲಾಖೆ ದರ ನಿಗಧಿ ಮಾಡಿದೆ. ಆದರೆ ಆ ಪ್ರದೇಶದಲ್ಲಿ ಒಂದೊಂದು ಆಸ್ತಿಯ ಬೆಲೆ ಒಂದೊಂದು ದರಕ್ಕೆ ಮಾರಾಟವಾಗುತ್ತದೆ. ಮಾರುಕಟ್ಟೆದರಕ್ಕೂ ಮತ್ತು ಮಾರ್ಗಸೂಚಿ ದರಕ್ಕೆ ಶೇ.20ರಷ್ಟು ವ್ಯತ್ಯಾಸ ಇರುತ್ತೆ. ರಿಯಲ್ ಎಸ್ಟೇಟ್ ಉದ್ಯಮ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.”

– ಸುರೇಶ್ ಹರಿ, ಅಧ್ಯಕ್ಷ, ಕ್ರೆಡಾಯ್ ಬೆಂಗಳೂರು

ರಿಯಲ್ ಎಸ್ಟೇಟ್ ಮಾರುಕಟ್ಟೆ ಬಿದ್ದಾಗ ಮಾರ್ಗೂಸೂಚಿ ದರವನ್ನು ಕಡಿಮೆ ಮಾಡಬೇಕು. ಕರೋನಾ ಸೋಂಕಿನ ಕಾಲಾವಧಿ ನಂತರ ರಿಯಲ್ ಎಸ್ಟೇಟ್ ಕ್ಷೇತ್ರದ ಚೇತರಿಕೆಗೆ ಒಂದು ವರ್ಷಗಳ ಕಾಲ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿ ಘೋಷಿಸಬೇಕು ಎಂದು ಕ್ರೆಡಾಯ್ ಸಂಸ್ಥೆಯಿಂದ ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಮೂರು ಮೂರು ತಿಂಗಳಿಗೆ ವಿಸ್ತರಣೆ ಮಾಡುತ್ತಿದೆ. ಆಸ್ತಿ ಖರೀದಿ- ಮಾರಾಟ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ರಿಯಾಯಿತಿ ಕಾಲಾವಧಿ ನಿಗದಿ ಮಾಡಿದರೆ ಒಳ್ಳೆಯದು ಎಂದು ಸುರೇಶ್ ಹರಿ ಅಭಿಪ್ರಾಯಪಟ್ಟಿದ್ದಾರೆ.

WhatsApp Join our WhatsApp Channel
Previous Post

#Bangalore Traffic | ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಕುರಿತು ಸಮನ್ವಯ ಸಭೆ : ನಿರಂತರ ಮಳೆಯ ಕಾರಣ ಕೋಲ್ಡ್ ಮಿಕ್ಸ್ ಬಳಸಿ ರಸ್ತೆ ಗುಂಡಿ ಮುಚ್ಚಲು ನಿರ್ಧಾರ

Next Post

#HarGharTiranga | “ಹರ್ ಘರ್ ತಿರಂಗಾ” ಅಭಿಯಾನದ ಹಿನ್ನಲೆ ; ನಗರದ ಯಾವ್ಯಾವ ಮಾಲ್ ಗಳಲ್ಲಿ ರಾಷ್ಟ್ರಧ್ವಜ ಸಿಗುತ್ತೆ? ಇಲ್ಲಿದೆ ಮಾಹಿತಿ….!

Next Post

#HarGharTiranga | "ಹರ್ ಘರ್ ತಿರಂಗಾ" ಅಭಿಯಾನದ ಹಿನ್ನಲೆ ; ನಗರದ ಯಾವ್ಯಾವ ಮಾಲ್ ಗಳಲ್ಲಿ ರಾಷ್ಟ್ರಧ್ವಜ ಸಿಗುತ್ತೆ? ಇಲ್ಲಿದೆ ಮಾಹಿತಿ....!

ಲಿಂಗನಮಕ್ಕಿ ಅಣೆಕಟ್ಟಿನ ಸಾಂದರ್ಭಿಕ ಚಿತ್ರ

Linganamakki Reservoir KPCL Warning | ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲಿರುವ ಸಾರ್ವಜನಿಕರೇ ಎಚ್ಚರ : ಅಣೆಕಟ್ಟಿನ ನೀರಿನ ಮಟ್ಟ ಏರಿಕೆ ಬಗ್ಗೆ ಕೆಪಿಸಿಎಲ್ ಹೊರಡಿಸಿದೆ ಎರಡನೇ ಮುನ್ನೆಚ್ಚರಿಕೆ...!

Please login to join discussion

Like Us on Facebook

Follow Us on Twitter

Recent News

ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

June 18, 2026

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

June 18, 2026

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group