Saturday, August 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

  • Bengaluru Focus

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

DEMAND FOR FREE TICKET IN BMTC BUS | ಮಹಿಳೆಯರು, ವಿದ್ಯಾರ್ಥಿಗಳು ಮತ್ತಿತರರಿಗೆ ಬಸ್ ಪ್ರಯಾಣ ಉಚಿತ : ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯಿಂದ ಸರ್ಕಾರಕ್ಕೆ ಆಗ್ರಹ

ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ಬಿಎಂಟಿಸಿಗೆ 100 ಕೋಟಿ ರೂ. ಹಣ ಮೀಸಲಿಗೆ ಒತ್ತಾಯ | ಜನಸಾಮಾನ್ಯರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ತೀರ್ಪುಗಾರರ ಮಂಡಳಿ ಬಿಎಂಟಿಸಿ ಸೇವೆ ಕುರಿತು ಸರ್ಕಾರಕ್ಕೆ ಹಲವು ಶಿಫಾರಸ್ಸು ಮಾಡಿದೆ

by Bengaluru Wire Desk
February 24, 2022
in Bengaluru Focus
Reading Time: 1 min read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಬಸ್ ಗಳಲ್ಲಿ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರೀಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ನಗರದ ಜನಸಾಮಾನ್ಯರ ಅಭಿಪ್ರಾಯವನ್ನು ಕ್ರೋಢೀಕರಿಸಿ ಹೇಳಿದೆ.

ನಗರದಲ್ಲಿ ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಸಿಂಥಿಯಾ ಸ್ಟೀಫನ್, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯು ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರ ವಿಚಾರಣೆ ನಡೆಸಿ, ಅವರ ಅಭಿಪ್ರಾಯಗಳ ಸಾರಾಂಶವನ್ನು ಪಡೆಯಲಾಗಿದೆ. ಅದರಂತೆ ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ಪ್ರಯಾಣಕ್ಕಾಗಿ ಉಚಿತ ಬಸ್ ಪ್ರಯಾಣ ಸೇವೆ ಒದಗಿಸುವಂತೆ ಜ್ಯೂರಿ ಶಿಫಾರಸ್ಸು ಮಾಡುತ್ತಿದೆ ಎಂದರು.

ಇದರಿಂದ ನಗರದ ಮಹಿಳೆಯರ ಆರೋಗ್ಯ ರಕ್ಷಣೆ, ಅವರ ಘನತೆಯ ಹಕ್ಕು ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಬಲಪಡಿಸಿದಂತಾಗುತ್ತದೆ. ಸಾಮಾನ್ಯ ಬಸ್ ಪ್ರಯಾಣಿಕರಿಗೆ ಹೆಚ್ಚಿನ ದರವನ್ನು ಪಾವತಿಸುವಂತೆ ಮಾಡುವ ಬದಲು ಅರ್ಧದಷ್ಟು ಪ್ರಯಾಣ ದರವನ್ನು ನಿಗಧಿ ಮಾಡಬೇಕು. ಬಿಎಂಟಿಸಿ ಬಸ್ ನಗರದ ಜೀವನಾಡಿಯಾಗಿದ್ದರೂ ಮೆಟ್ರೊ ರೈಲಿಗೆ ಸಿಗುವ ಮಹತ್ವವನ್ನು ಸರ್ಕಾರ ಬಿಎಂಟಿಸಿ ಸೇವೆಗೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆ (IISC) ಯ ಪ್ರಾಧ್ಯಾಪಕ ಪ್ರೊ.ಆಶಿಶ್ ಶರ್ಮ ಮಾತನಾಡಿ, ಸರ್ಕಾರ ಬಿಎಂಟಿಸಿ ಬಸ್ ಸೇವೆಯನ್ನು ಲಾಭ- ನಷ್ಟದ ದೃಷ್ಟಿಕೋನದಿಂದ ಪರಿಗಣಿಸುತ್ತಿದೆ. ಬಿಎಂಟಿಸಿಯು ಸಾರಿಗೆ ಸೇವೆ ಒದಗಿಸಲು ಸ್ವಂತ ಆದಾಯವನ್ನು ಬಳಸುವುದರಿಂದ ಹೆಚ್ಚಿನ ದರಗಳನ್ನು ನಿಗದಿಪಡಿಸುತ್ತಿದೆ. ಕೇವಲ ಲಾಭ ಸಿಗುವ ರೂಟ್ ಗಳಲ್ಲಿ ಮಾತ್ರವೇ ಬಸ್ ಸೇವೆ ಒದಗಿಸುತ್ತಿದೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಸಾಮಾನ್ಯ ಪ್ರಯಾಣಿಕ ಬಸ್ ಟಿಕೇಟ್ ದರವನ್ನು ಭರಿಸಲಾಗದೆ ಮತ್ತೊಂದೆಡೆ ಬಿಎಂಟಿಸಿ ಸೇವೆಯ ನಡುವಣ ಅಂತರ ಸೃಷ್ಟಿಯಾಗಲು ಕಾರಣವಾಗಿದೆ. ಇದರಿಂದಾಗಿ ಜನಸಾಮಾನ್ಯರು ಕೆಲಸಕ್ಕೆ ತಡವಾಗಿ ತಲುಪುವುದು, ವಿದ್ಯಾರ್ಥಿಗಳು ಸರಿಯಾದ ಬಸ್ ಸೇವೆಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ನಾನಾ ಸಾಮಾಜಿಕ, ಆರ್ಥಿಕ ಪರಿಣಾಮಗಳಿಗೆ ಕಾರಣವಾಗುವುದರಿಂದ ಬಿಎಂಟಿಸಿ ಬಸ್ ಸೇವೆಯನ್ನು ಸೇವೆಯ ರೀತಿಯಲ್ಲಿ ಪರಿಗಣಿಸಬೇಕೇ ವಿನಃ ಲಾಭ- ನಷ್ಟ ದೃಷ್ಟಿಕೋನದಿಂದಲ್ಲ. ಆದ ಕಾರಣ ಈ ನಿಟ್ಟಿನಲ್ಲಿ ಬಿಎಂಟಿಸಿಗೆ ಈ ಬಾರಿಯ ಬಜೆಟ್ ನಲ್ಲಿ 100 ಕೋಟಿ ರೂ. ನಷ್ಟು ಹಣ ಮೀಸಲಿಡಬೇಕು ಎಂದು ಪ್ರೊ.ಆಶಿಶ್ ಮಿಶ್ರಾ ಅವರು ಬಸ್ ಪ್ರಯಾಣಿಕರ ವೇದಿಕೆ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಸ್ ನಲ್ಲಿ ನಿತ್ಯ ಪ್ರಯಾಣಿಸುವ ಬಸ್ ಪ್ರಯಾಣಿಕರ ಕಷ್ಟ- ನಷ್ಟಗಳು, ಬಿಎಂಟಿಸಿಗೆ ಬಜೆಟ್ ಮೀಸಲಿಡುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರದ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಬಸ್ ಪ್ರಯಾಣಿಕರ ವೇದಿಕೆ ನಿರ್ಧರಿಸಿದೆ ಎಂದು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ತಿಳಿಸಿದ್ದಾರೆ.

ಬಸ್ ಸೇವೆ ನೀಡಿಕೆಯಲ್ಲಿನ ಅಸಮತೋಲನ ನಿವಾರಿಸಲು ಆಗ್ರಹ :

ಬಡವರು, ಶೋಷಿತ ಸಮುದಾಯಗಳು ನೆಲೆಸುವ ಪ್ರದೇಶಗಳಲ್ಲಿ ಕಳಪೆ ಗುಣಮಟ್ಟದ ಬಸ್ ಸೇವೆಯಿದೆ. ಆದರೆ ಶ್ರೀಮಂತರು ವಾಸಿಸುವ ಸುಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ಉತ್ತಮ ಸೇವೆಯಿದ್ದು, ಇಲ್ಲೆಲ್ಲಾ ಗುಣಮಟ್ಟದ ಬಸ್ಸುಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಈ ಅಸಮತೋಲನವನ್ನು ಸರ್ಕಾರ ನಿವಾರಿಸಬೇಕು. ಅಸಮರ್ಪಕ ಸೇವೆಗಳಿರುವ ಸ್ಥಳಗಳಲ್ಲಿ ಹೆಚ್ಚುವರಿ ಮಾರ್ಗಗಳು ಹಾಗೂ ಶೆಡ್ಯೂಲ್ ಗಳನ್ನು ನೀಡಬೇಕು ಎಂದು ಬಸ್ ಪ್ರಯಾಣಿಕರ ವೇದಿಕೆಯ ತೀರ್ಪುಗಾರರ ಮಂಡಳಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಈ ತೀರ್ಪುಗಾರರ ಮಂಡಳಿಯಲ್ಲಿ ಸಾರಿಗೆ ತಜ್ಞರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡಿದ್ದು, ಹಲವಾರು ಜನಸಾಮಾನ್ಯರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ನಗರದ ಬಿಎಂಟಿಸಿ ಬಸ್ ಸೇವೆಯನ್ನು ಅವಲೋಕನಕ್ಕೆ ಒಳಪಡಿಸಿ, ಸರ್ಕಾರಕ್ಕೆ ಈ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಅದನ್ನು ಜಾರಿಗೆ ತರುವಂತೆ ತೀರ್ಪುಗಾರರು ಆಗ್ರಹಿಸಿದ್ದಾರೆ.

 ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ವಿಜಯಕುಮಾರಿ, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಬಾಬು, ಡಾ.ಮನು ಮಥಾಯ್ ಸೇರಿದಂತೆ ಮತ್ತಿತರರು ಮಾತನಾಡಿದರು.

WhatsApp Join our WhatsApp Channel
Previous Post

DEFENCE NEWS | ಪ್ಯಾರಚ್ಯೂಟ್ ರೆಜಿಮೆಂಟ್ ನಾಲ್ಕು ಬೆಟಾಲಿಯನ್ ಗಳಿಗೆ ಪ್ರತಿಷ್ಠಿತ “ಪ್ರೆಸಿಡೆಂಟ್ಸ್ ಕರ್ಲರ್ಸ್” ಪ್ರಶಸ್ತಿ ವಿತರಿಸಿದ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ

Next Post

New British Deputy High Commissioner | ಅನಾ ಶಾಟ್ ಬೋಲ್ಟ್ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟನ್ ಡೆಪ್ಯುಟಿ ಹೈಕಮಿಷನರ್ ಆಗಿ ಅಧಿಕಾರ ಸ್ವೀಕಾರ

Next Post

New British Deputy High Commissioner | ಅನಾ ಶಾಟ್ ಬೋಲ್ಟ್ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟನ್ ಡೆಪ್ಯುಟಿ ಹೈಕಮಿಷನರ್ ಆಗಿ ಅಧಿಕಾರ ಸ್ವೀಕಾರ

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ದೃಶ್ಯ

Karnataka 91 MBBS Students Stranded in Ukraine | ಉಕ್ರೇನ್ ದೇಶದಲ್ಲಿ ಕರ್ನಾಟಕದ 91 ವೈದ್ಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ : ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

Please login to join discussion

Like Us on Facebook

Follow Us on Twitter

Recent News

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026

BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

August 7, 2026

ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

August 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group