Wednesday, April 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ISRO PSLV C52 ROCKET LAUNCH | ಇಸ್ರೋದ ಈ ವರ್ಷದ ಮೊದಲ ಪಿಎಸ್ ಎಲ್ ವಿ-ಸಿ52 ರಾಕೆಟ್ ಉಡಾವಣೆ ಯಶಸ್ವಿ

ಭೂ- ಪರಿವೀಕ್ಷಣಾ ಉಪಗ್ರಹ-04 ಸೇರಿದಂತೆ ನಿಗಧಿತ ಕಕ್ಷೆ ಸೇರಿದ ಮೂರು ಸ್ಯಾಟಲೈಟ್ ಗಳು | ಪಿಎಸ್ಎಲ್ ವಿಯ 54ನೆಯ ಕಾರ್ಯಾಚರಣೆ

by Bengaluru Wire Desk
February 15, 2022
in News Wire, Public interest
Reading Time: 2 mins read
0

ಶ್ರೀಹರಿಕೋಟ, (www.bengaluruwire.com) :
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಇಂದು ಬೆಳಗ್ಗೆ ಪಿಎಸ್ ಎಲ್ ವಿ -ಸಿ52 (PSLV C52) ರಾಕೆಟ್ ಮೂಲಕ ಭೂ- ಪರಿವೀಕ್ಷಣಾ ಉಪಗ್ರಹ (Earth observation Satellite- 04) ಹಾಗೂ ಎರಡು ಸಣ್ಣ ಉಪಗ್ರಹ ಸೇರಿದಂತೆ ಮೂರು ಸ್ಯಾಟಲೈಟ್ ಗಳನ್ನು ಯಶಸ್ವಿಯಾಗಿ ಹಾರಿಬಿಟ್ಟಿದೆ. ಇದು ಇಸ್ರೋ ಈ ವರ್ಷ ಹಾರಿಬಿಟ್ಟ ಮೊದಲ ರಾಕೆಟ್ ಉಡಾವಣೆಯಾಗಿದೆ.

ಈ ಯಶಸ್ವಿ ಉಡಾವಣೆಯನ್ನು ಇಸ್ರೋ “ಅದ್ಭುತ ಸಾಧನೆ” ಎಂದು ಬಣ್ಣಿಸಿದೆ. ಸೋಮವಾರ ಮುಂಜಾನೆ 5.59ಕ್ಕೆ ಶ್ರೀಹರಿಕೋಟಾದಿಂದ ಇಸ್ರೋ ಉಡಾವಣಾ ವಾಹನ ಪಿಎಸ್ ಎಲ್ ವಿ ಮೂಲಕ ಕತ್ತಲೆಯ ಆಕಾಶದಲ್ಲೇ ಮೂರು ಉಪಗ್ರಹವನ್ನು ಹಾರಿಬಿಡಲಾಯಿತು. ರಾಕೆಟ್ ಉಡಾವಣೆಯಾದ 19 ನಿಮಿಷದಲ್ಲೇ ಈ ಮೂರು ಸ್ಯಾಟಲೈಟ್ ಗಳನ್ನು‌ ನಿಗಧಿತ ಕಕ್ಷೆಗೆ ತಲಿಪಿಸುವಲ್ಲಿ ಯಶಸ್ವಿಯಾಯಿತು‌ ಎಂದು ಇಸ್ರೋ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ಇಒಎಸ್-04 ಉಪಗ್ರಹವನ್ನು ಭೂಮಿಯಿಂದ 529 ಕಿ.ಮೀ ಎತ್ತರದಲ್ಲಿರುವ ಸೂರ್ಯ ಕೇಂದ್ರಿತ ಧೃವೀಯ ಕಕ್ಷೆಗೆ ಬೆಳಗ್ಗೆ 6.17ಕ್ಕೆ ತಲುಪಿತು. ಈ ಸಂದರ್ಭದಲ್ಲಿ ವರ್ಷದ ಮೊದಲ ರಾಕೆಟ್ ಉಡಾವಣೆಯ ಯಶಸ್ವಿ ಕಾರ್ಯಾಚರಣೆಯನ್ನು ಇಸ್ರೊ ವಿಜ್ಞಾನಿಗಳು ಕುತೂಹಲದಿಂದ ಗಮನಿಸಿ, ಹರ್ಷ ವ್ಯಕ್ತಪಡಿಸಿದರು.

ಪಿಎಸ್ ಎಲ್ ವಿ ಸಿ52 ರಾಕೆಟ್ ಒಳಗಿನ ಭಾಗ

ಇಒಎಸ್-04 ಉಪಗ್ರಹ ನಿಗಧಿತ ಕಕ್ಷೆಗೆ ಸೇರಿದ ಬಳಿಕ ಇನ್ ಸ್ಪೈರ್-1 (INSPIREsat-1)ಹಾಗೂ ಐಎನ್ ಎಸ್ -2ಟಿಡಿ (INS-2TD) ಸಣ್ಣ ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಸೇರ್ಪಡೆಗೊಳಿಸಲಾಯಿತು. ಇಸ್ರೋ ಪಿಎಸ್ಎಲ್ ವಿಯ ಸೋಮವಾರದ ಕಾರ್ಯಾಚರಣೆ, 54ನೆಯದ್ದಾಗಿದೆ.

ಇಸ್ರೋ ನೂತನ ಅಧ್ಯಕ್ಷ ಎಸ್.ಸೋಮನಾಥ್ ಏನಂತಾರೆ? :

“ಪಿಎಸ್ ಎಲ್ ವಿ -ಸಿ52 (PSLV C52) ರಾಕೆಟ್ ಮೂಲಕ ಭೂ- ಪರಿವೀಕ್ಷಣಾ ಉಪಗ್ರಹ ಹಾಗೂ ಎರಡು ಸಣ್ಣ ಉಪಗ್ರಹ ಸೇರಿದಂತೆ ಮೂರು ಸ್ಯಾಟಲೈಟ್ ಗಳನ್ನು ಯಶಸ್ವಿಯಾಗಿ ನಿಗಧಿತ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದೇವೆ. ಪಿಎಸ್ ಎಲ್ ವಿ ರಾಕೆಟ್ ದೇಶಸೇವೆಗೆ ಅತಿದೊಡ್ಡ ಆಸ್ತಿಯಾಗಿದೆ.” ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಎಸ್.ಸೋಮನಾಥ್ ಇಸ್ರೋ ಅಧ್ಯಕ್ಷರಾಗಿ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊತ್ತ ಮೊದಲ ರಾಕೆಟ್ ಲಾಂಚ್ ಆಗಿದೆ.

ಇಒಎಸ್-04 ಸ್ಯಾಟಲೈಟ್, ಪಿಎಸ್ ಎಲ್ ವಿ ಸಿ52 ರಾಕೆಟ್ ನಿಂದ ಬೇರ್ಪಡೆಗೊಂಡಾಗಿನ ಚಿತ್ರ

ಈ ಯೋಜನೆಯ ನಿರ್ದೇಶಕ ಎಸ್.ಆರ್.ಬಿಜು ಮಾತನಾಡಿ, ಇಂದಿನ ಮೂರು ಉಪಗ್ರಹಗಳ ಅದ್ಭುತ ಯಶಸ್ವಿ ಸಾಧಿಸಿದ್ದೇವೆ ಎಂದಿದ್ದಾರೆ.

ಇಒಎಸ್-04 ಉಪಗ್ರಹದ ವಿವರ :

ಭಾನುವಾರ ಬೆಳಗ್ಗೆ 4.29ರಿಂದಲೇ ಪಿಎಸ್ ಎಲ್ ವಿ ಸಿ52 ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭಿಸಲಾಗಿತ್ತು. ಇಒಎಸ್-04 ಉಪಗ್ರಹ ಒಟ್ಟು 1,710 ಕೆಜಿ ಭಾರವಾಗಿದ್ದು, 10 ವರ್ಷಗಳ ಕಾಲ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಈ ರಾಡಾರ್ ಚಿತ್ರಗಳನ್ನು ತೆಗೆಯುವ ಉಪಗ್ರಹವು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಕೇಂದ್ರಕ್ಕೆ ರವಾನಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಪ್ರವಾಹ ನಕ್ಷೆಗೆ ಈ ಉಪಗ್ರಹ ಒದಗಿಸುವ ಚಿತ್ರಗಳನ್ನು ಬಳಸಬಹುದಾಗಿದೆ.

ಇಸ್ರೊ ರಾಕೆಟ್ ಉಡಾವಣೆ ಟ್ರಾಕಿಂಗ್ ಮಾಡುತ್ತಿರುವ ಚಿತ್ರ

ಇನ್ ಸ್ಪೈರ್-1 ಸಣ್ಣ ಉಪಗ್ರಹ ಕೊಲರೆಡೊ ಬೌಲ್ಡರ್ ಯೂನಿವರ್ಸಿಟಿ ವಾಯುಮಂಡಲ ಪ್ರಯೋಗಾಲಯ ಮತ್ತು ಬಾಹ್ಯಾಕಾಶ ಭೌತವಿಜ್ಞಾನ ವಿಭಾಗ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಸೇರಿದ್ದಾಗಿದೆ. ಇನ್ನು ಐಎನ್ ಎಸ್ -2ಟಿಡಿ ಉಪಗ್ರಹವು ಇಸ್ರೊದ ತಂತ್ರಜ್ಞಾನ ಪ್ರದರ್ಶಕ ಸ್ಯಾಟಲೈಟ್ ಆಗಿದೆ.

ಸಣ್ಣ ಉಪಗ್ರಹಗಳ ವಿಶೇಷತೆ ಮತ್ತು ಅನುಕೂಲಗಳೇನು? :

ಇನ್ ಸ್ಪೈರ್-1 ಸಣ್ಣ ಉಪಗ್ರಹ ಒಟ್ಟು 8.1 ಕೆಜಿ ತೂಕ ಹೊಂದಿದ್ದು, ಅಯಾನುಗೋಳದ ಡೈನಮಿಕ್ಸ್ ಹಾಗೂ ಸೂರ್ಯನ ಕರೋನ ಭಾಗದಲ್ಲಿ ತಾಪಮಾನದ ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲಿದ್ದು, ಒಂದು ವರ್ಷ ಕಾರ್ಯನಿರ್ವಹಿಸಲಿದೆ. ಭೂಮಿಯ ಮೇಲಿನ 80 ಕಿಮೀ. ನಿಂದ 600 ಕಿ.ಮೀ ವಾತಾವರಣದ ಮಧ್ಯದಲ್ಲಿ ಅಯಾನುಗೋಳ ಬರಲಿದೆ.‌

ಈ ವಾತಾವರಣದಲ್ಲಿ ಅಲ್ಟ್ರಾವಾಯ್ಲೆಟ್ ಕಿರಣ ಹಾಗೂ ಸೂರ್ಯನ ಎಕ್ಸ್ ರೇ ವಿಕಿರಣದ ಅಣು ಮತ್ತು ಪರಮಾಣುವನ್ನು ಅಯಾನಿಕರಿಸುತ್ತದೆ. ಅಯಾನುಗೋಳವು ಸಂಪರ್ಕ ಹಾಗೂ ನ್ಯಾವಿಗೇಷನ್ ಗಾಗಿ ಬಳಸುವ ರೇಡಿಯೋ ತರಂಗಾಂತರಗಳನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತಿಸುವ ಬಹುಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.

ಐಎನ್ ಎಸ್ -2ಟಿಡಿ ಸಣ್ಣ ಉಪಗ್ರಹವು ಒಟ್ಟು 17.5 ಕೆಜಿ. ತೂಕ ಹೊಂದಿದ್ದು, 6 ತಿಂಗಳುಗಳ ಜೀವಿತಾವಧಿ ಹೊಂದಿದೆ. ಈ ಸ್ಯಾಟಲೈಟ್ ನಲ್ಲಿ ಚಿತ್ರ ತೆಗೆಯುವ ಗುಣಮಟ್ಟದ ಕ್ಯಾಮರಾ ಅಳವಡಿಸಲಾಗಿದೆ. ಈ ಸ್ಯಾಟಲೈಟ್ ಒದಗಿಸುವ ಚಿತ್ರಗಳಿಂದ ಭೂ ಮೇಲ್ಮೈ ತಾಪಮಾನ ಮೌಲ್ಯಮಾಪನ, ಜೌಗು ಅಥವಾ ಕೆರೆಯ ಜಲ ಮೇಲ್ಮೈ ಉಷ್ಣಾಂಶ, ಬೆಳೆ ಹಾಗೂ ಅರಣ್ಯದ ವರ್ಣನೆ, ರಾತ್ರಿ ಮತ್ತು ಬೆಳಗಿನ ಉಷ್ಣಾಂಶ ಮತ್ತಿತರ ಕಾರ್ಯಗಳಿಗೆ ಸಹಾಯಕವಾಗಲಿದೆ.

India’s Polar Satellite Launch Vehicle PSLV-C52 injected Earth Observation Satellite EOS-04, into an intended sun synchronous polar orbit of 529 km altitude at 06:17 hours IST on February 14, 2022 from Satish Dhawan Space Centre, SHAR, Sriharikota. https://t.co/BisacQP8Qf

— ISRO (@isro) February 14, 2022
WhatsApp Join our WhatsApp Channel
Previous Post

BW IMPACT | ರಾಜ್ಯಾದ್ಯಂತ ಹದ್ದುಬಸ್ತು ಶುಲ್ಕವನ್ನು ಇಳಿಕೆ ಮಾಡಿದ ಕಂದಾಯ ಇಲಾಖೆ

Next Post

ILLEGAL LIQUOR SALES IN KARNATAKA | ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗಿವೆ !!

Next Post
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ಸಾಂದರ್ಭಿಕ ಚಿತ್ರ)

ILLEGAL LIQUOR SALES IN KARNATAKA | ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಹೆಚ್ಚಾಗಿವೆ !!

Bengaluru International Film Festival | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3ರಿಂದ ಆರಂಭ

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group