Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BWSSB WATER THEFT | ಬೆಂಗಳೂರಿನಲ್ಲಿ ಅಕ್ರಮ ನೀರಿನ ಸಂಪರ್ಕಗಳು ಎಷ್ಟಿವೆ ಗೊತ್ತಾ? ಯಾವ ಪ್ರಮಾಣದಲ್ಲಾಗುತ್ತಿದೆ ನೀರು ಸೋರಿಕೆ?

ಮೊದಲಿಗೆ 53,865 ಅಕ್ರಮ ನೀರಿನ ಸಂಪರ್ಕ ಪತ್ತೆ | 39,854 ಸಂಪರ್ಕ ಸಕ್ರಮಗೊಳಿಸಿದ ಜಲಮಂಡಳಿ |ನೀರಿನ ಕಳ್ಳತನ ಮಾಡಿದವರ ಮೇಲೆ ಬಿಎಂಟಿಎಫ್ ನಲ್ಲಿ 4.457 ಪ್ರಕರಣ ದಾಖಲು |ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಆಗದಿದ್ದರೆ 2030 ಇಸವಿ ನಂತರ ಬೆಂಗಳೂರು ಬದುಕು ಕಷ್ಟ ಕಷ್ಟ....!

by Bengaluru Wire Desk
January 6, 2022
in Bengaluru Focus, BW Special
Reading Time: 2 mins read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು, (www.bengaluruwire.com) : ಇನ್ನು ಎರಡು ತಿಂಗಳು ಕಳೆದರೆ ನಗರದಲ್ಲಿ ಬೇಸಿಗೆ ಬಿಸಿಗೆ ನೀರಿನ ಹಾಹಾಕಾರ ತಲೆಯತ್ತಲಿದೆ. ಈ ಮಧ್ಯೆ ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಕಳ್ಳತನ ಎಗ್ಗಿಲ್ಲದೆ ಮುಂದುವರೆಯುತ್ತಲೇ ಇದೆ. ಇದನ್ನು ತಪ್ಪಿಸಲು ಜಲಮಂಡಳಿ ಸಾಕಷ್ಟು ಸರ್ಕಸ್ ಮಾಡುತ್ತಿದೆ. ಆದರೆ ಅಕ್ರಮವಾಗಿ ಕಾವೇರಿ ನೀರು ಕದಿಯುವವರ ಸಂಖ್ಯೆ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ರಾಜಧಾನಿಯಲ್ಲಿ ಪ್ರಸ್ತುತ ಬರೋಬ್ಬರಿ 9,558 ಅಕ್ರಮ ನೀರಿನ ಸಂಪರ್ಕಗಳಿರುವುದಾಗಿ ಜಲಮಂಡಳಿ ತಿಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದಲ್ಲಿ ಒಟ್ಟು 12 ವಿಭಾಗಗಳನ್ನು ಹೊಂದಿದ್ದು ಅವುಗಳನ್ನು ಪೂರ್ವ ಮತ್ತು ಪಶ್ಚಿಮ ವಲಯಗಳಾಗಿ ವಿಂಗಡಿಸಿದೆ. ಈ ವ್ಯಾಪ್ತಿಯಲ್ಲಿ 110 ಹಳ್ಳಿಗಳನ್ನು ಒಳಗೊಂಡು ನಗರದಲ್ಲಿನ 12.9 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಇದೇ ವೇಳೆ ಅಕ್ರಮವಾಗಿ ಕಾವೇರಿ ನೀರಿಗೆ ಅಧಿಕೃತವಾಗಿ ಶುಲ್ಕ ಕಟ್ಟಿ, ಮೀಟರ್ ಹಾಕಿಸಿಕೊಂಡು ನೀರು ಪಡೆಯುವವರ ಮಧ್ಯೆ ಅಕ್ರಮವಾಗಿ ಪೈಪ್ ಎಳೆದು ನೀರು ಬಳಸುತ್ತಿರುವವರಿಗೇನು ಕಮ್ಮಿ ಇಲ್ಲ. ಇಂತಹ ಸಂಪರ್ಕಗಳ ಬಗ್ಗೆ ಬೆಂಗಳೂರು ಜಲಮಂಡಳಿ ನಿರಂತರವಾಗಿ ಪರಿಶೀಲನೆ ನಡೆಸಿದಾಗ ಬರೋಬ್ಬರಿ 53,865 ಅಕ್ರಮ ಸಂಪರ್ಕಗಳನ್ನು ಗುರ್ತಿಸಿದ್ದರು.

ಅವುಗಳ ಪೈಕಿ ಜಲಮಂಡಳಿಯು 39,854 ನೀರಿನ ಸಂಪರ್ಕಗಳನ್ನು ದಂಡ ಶುಲ್ಕ ಕಟ್ಟಿಸಿಕೊಂಡು ಸಕ್ರಮಗೊಳಿಸಿತ್ತು. ಆದರೆ 9,558 ಅಕ್ರಮ ಸಂಪರ್ಕಗಳು ಈವರೆಗೂ ಸಕ್ರಮವಾಗಿಲ್ಲ. ಅನಧಿಕೃತವಾಗಿ ನೀರಿನ ಸಂಪರ್ಕ ತೆಗೆದುಕೊಂಡವರ ಮೇಲೆ ಜಲಮಂಡಳಿಯು ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್ ಫೋರ್ಸ್ (BMTF) ನಲ್ಲಿ 4,457 ಪ್ರಕರಣಗಳನ್ನು ದಾಖಲಿಸಿದೆ.

ಸಾಂದರ್ಭಿಕ ಚಿತ್ರ

ಬಿಡಬ್ಲ್ಯುಎಸ್ ಎಸ್ ಬಿ ಪ್ರಸ್ತುತ ನಗರಕ್ಕೆ ಪ್ರತಿದಿನ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು ಈ ಮೆಟ್ರೊಪಾಲಿಟನ್ ಸಿಟಿಗೆ ಪೂರೈಕೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಶೇ.35ರಷ್ಟು ನೀರು ಅನಗತ್ಯವಾಗಿ ಸೋರಿಕೆಯಾಗಿಯೋ, ಅಕ್ರಮ ನೀರಿನ ಸಂಪರ್ಕದಿಂದಾಗಿ ಹೀಗೆ ನಾನಾ ಕಾರಣಕ್ಕೆ ನಗರದಲ್ಲಿ ಲೆಕ್ಕಕ್ಕೇ ಸಿಗುತ್ತಿಲ್ಲ ಎಂದು ಜಲಮಂಡಳಿಯು ಹೇಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಜಲಮಂಡಳಿಯು ನಿರಂತರವಾಗಿ ನಗರದಲ್ಲಿ ಅಕ್ರಮವಾಗಿ ನೀರು ಸಂಪರ್ಕ ಪಡೆದಿರುವುದನ್ನು ಗುರುತಿಸಿ ಸಕ್ರಮಗೊಳಿಸುವತ್ತಲೂ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಜಯರಾಮ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರು

“ಕಾವೇರಿ ನೀರು ಅಕ್ರಮ ಸಂಪರ್ಕದ ಬಗ್ಗೆ ನಿರಂತರವಾಗಿ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದುಕೊಂಡವರನ್ನು ಪತ್ತೆಹಚ್ಚುವ ಕಾರ್ಯ ಆರಂಭವಾಗಿದೆ. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಸಕ್ರಮಗೊಳಿಸುವ ಕಾರ್ಯವಾಗುತ್ತಿದೆ. ಅದೇ ರೀತಿ ದೋಷಪೂರಿತ ನೀರಿನ ಮೀಟರ್ ಗಳನ್ನು ಬದಲಾಯಿಸಿ ಸ್ಮಾರ್ಟ್ ಮೀಟರ್ ಗೆ ಬದಲಾವಣೆ ಮಾಡಲಾಗುತ್ತಿದೆ. ಒಟ್ಟಾರೆ ನೀರಿನ ಸೋರಿಕೆ ತಡೆದು ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡುವುದು ಜಲಮಂಡಳಿ ಉದ್ದೇಶವಾಗಿದೆ.”

– ಜಯರಾಮ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರು

ನೀರು ಸೋರಿಕೆ ತಡೆಗೆ ಗುರಿ ಮತ್ತು ಜವಾಬ್ದಾರಿ ನಿಗಧಿಪಡಿಸಲು ಸರ್ಕಾರಕ್ಕೆ ತಜ್ಞರ ಸಲಹೆ :

ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರು ಜಲಮಂಡಳಿಯ ಪ್ರಗತಿ ಪರಿಶೀಲನೆ ವೇಳೆ ನಗರದಲ್ಲಿ ಲೆಕ್ಕಕ್ಕೆ ಸಿಗದೆ ಪೋಲಾಗುತ್ತಿರುವ ನೀರಿನ ಪ್ರಮಾಣವನ್ನು ಶೇಕಡ 20ಕ್ಕೆ ಇಳಿಸುವಂತೆ ಸೂಚನೆ ನೀಡಿದ್ದರು. ಆಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಲಮಂಡಳಿ ಅಧಿಕಾರಿಗಳು ತಲೆಯಾಡಿಸಿ ಬಂದಿದ್ದರು. ಲೆಕ್ಕಕ್ಕೆ ಸಿಗದ ನೀರು (UFW) ಕಡಿತಗೊಳಿಸುವ ಯೋಜನೆಯನ್ನು 2013ರಲ್ಲಿ ಜಾರಿಗೆ ಬಂತು. ಆಗ ಕಳ್ಳತನ ಅಥವಾ ನೀರಿನ ಸೋರಿಕೆಯಿಂದ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಬೆಂಗಳೂರಿನಲ್ಲಿ ಶೇಕಡ 51ರಷ್ಟು ಇತ್ತು. ಇದೀಗ ಅವುಗಳ ಪ್ರಮಾಣ ಶೇಕಡ 35ಕ್ಕೆ ಇಳಿದಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಯುಎಫ್ ಡಬ್ಲ್ಯು ಯೋಜನೆ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ. ಪರಿಣಾಮಕಾರಿಯಾಗಿ ಕಾವೇರಿ ನೀರಿನ ನಿರ್ವಹಣೆಯನ್ನು ಜಲಮಂಡಳಿ ಮಾಡುತ್ತಿಲ್ಲ ಎಂದು ನೀರಿನ ತಜ್ಞರು ಆರೋಪಿಸುತ್ತಿದ್ದಾರೆ.

ಕ್ಯಾಪ್ಟನ್ ರಾಜಾರಾವ್, ಜಲ ತಜ್ಞರು

“ಜಲಮಂಡಳಿಯಲ್ಲಿ ನೀರು ಸರಬರಾಜು ಮಾಡುವುದೇ ಪ್ರಮುಖ ಆದಾಯ ಮೂಲ. ಹೀಗಿರುವಾಗ ಇಲ್ಲಿ ನೀರಿನ ಸೋರಿಕೆ ನಿಯಂತ್ರಿಸಿದರೆ ಬಿಡಬ್ಲ್ಯುಎಸ್ ಎಸ್ ಬಿಯು ಹೊರಗಿನಿಂದ ನೂರಾರು ಕೋಟಿ ರೂಪಾಯಿ ಕರ್ಚು ಮಾಡಿ ನೀರು ತರುವ ಪ್ರಮೇಯ ಬರುವುದಿಲ್ಲ. ನಗರದಲ್ಲಿರುವ 57 ನೆಲಮಟ್ಟದ ಜಲಾಗಾರಗಳಲ್ಲಿ ನೀರು ಸೋರಿಕೆ ಬಗ್ಗೆ ಸ್ವತಂತ್ರ್ಯ ಸಂಸ್ಥೆಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಬೇಕು. ಅಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಗಳಿವೆ. ಅಕ್ರಮ ನೀರಿನ ಸಂಪರ್ಕ, ನೀರಿನ ಸೋರಿಕೆ ಎರಡನ್ನು ಪರಿಣಾಮಕಾರಿಯಾಗಿ ತಡೆಯಲು ಜಲಮಂಡಳಿ ಅಧ್ಯಕ್ಷರು, ಪ್ರಧಾನ ಎಂಜನಿಯರ್ ಗಳು ಸೇರಿದಂತೆ ಎಲ್ಲರಿಗೂ ಸರ್ಕಾರ ನಿರೀಕ್ಷಿತ ಗುರಿಯನ್ನು ನೀಡಿ, ಜವಾಬ್ದಾರಿಯನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸಂಸ್ಕರಿಸಿ ತ್ಯಾಜ್ಯ ನೀರಿನ ಮರುಬಳಕೆಯನ್ನು ಯಶಸ್ವಿಯಾಗಿ ಬಳಕೆಯಾಗುತ್ತಿಲ್ಲ. ಯುಎಫ್ ಡಬ್ಲ್ಯು ಯೋಜನೆ ಜಾರಿಯು ತೃಪ್ತಿದಾಯಕವಾಗಿಲ್ಲ. ಹೀಗೆ ಆದರೆ 2030ಕ್ಕೆ ಬೆಂಗಳೂರಿನ ಭವಿಷ್ಯ ಕಷ್ಟವಿದೆ”

– ಕ್ಯಾಪ್ಟನ್ ರಾಜಾರಾವ್, ಜಲ ತಜ್ಞರು

ದೊಡ್ಡ ದೊಡ್ಡ ಕೈಗಾರಿಕೆಗಳು, ಉದ್ಯಮ ನಡೆಸುವವರು, ಕಟ್ಟಡ ನಿರ್ಮಾಣ ಸಂಸ್ಥೆಗಳು ತಮ್ಮ ದೈನಂದಿನ ನೀರಿನ ಅವಶ್ಯಕತೆಗಳಿಗಾಗಿ ಅಕ್ರಮ ನೀರಿನ ಸಂಪರ್ಕ ಪಡೆದು ದೊಡ್ಡ ಮಟ್ಟದಲ್ಲಿ ನೀರಿಗೆ ಕನ್ನ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ನಿಟ್ಟಿನಲ್ಲಿ ಜಲಮಂಡಳಿ ಪರಿಶೀಲನೆ ನಡೆಸಿ, ನೀರಿನ ಸೋರಿಕೆಯನ್ನು ತಡೆಗಟ್ಟಿ ನಗರದ ಜನತೆಗೆ ಗುಣಮಟ್ಟದ, ಶುದ್ಧ ನೀರು ಪೂರೈಕೆ ಮಾಡಬೇಕೆಂಬುದು ಪ್ರಜ್ಞ ನಾಗರೀಕರ ಅಭಿಪ್ರಾಯವಾಗಿದೆ.

WhatsApp Join our WhatsApp Channel
Previous Post

Karnataka Covid Updates | ಕೋವಿಡ್ ಪ್ರಕರಣ ಏರಿಕೆ ಹಿನ್ನಲೆ : ಬುಧವಾರದಿಂದಲೇ ನೈಟ್ ಕರ್ಫ್ಯೂ ಎರಡು ವಾರ ಮುಂದುವರಿಕೆ

Next Post

2023 Election Politics | ಜನರನ್ನು ಸೆಳೆಯಲು ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಜಲಾಸ್ತ್ರ ಪ್ರಯೋಗ – ಬಿಜೆಪಿ ಸರ್ಕಾರದಿಂದ ಕೋವಿಡ್ ಅಸ್ತ್ರ ಬಳಕೆ

Next Post
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಗಂಗಾರಥವನ್ನು ಶುಕ್ರವಾರ ಅನಾವರಣಗೊಳಿಸಲಾಯಿತು. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿತ್ರದಲ್ಲಿದ್ದಾರೆ.

2023 Election Politics | ಜನರನ್ನು ಸೆಳೆಯಲು ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಜಲಾಸ್ತ್ರ ಪ್ರಯೋಗ – ಬಿಜೆಪಿ ಸರ್ಕಾರದಿಂದ ಕೋವಿಡ್ ಅಸ್ತ್ರ ಬಳಕೆ

Mekedatu Multipurpose Project Reality | ಮೇಕೆದಾಟು ಬಹುದ್ದೇಶಿತ ಯೋಜನೆ ವಾಸ್ತವಾಂಶವೇನು? ಕಾವೇರಿ ನೀರು ಕುಡಿಯುವ ಮುನ್ನ ಬೆಂಗಳೂರಿಗರು ಈ ಸುದ್ದಿಯನ್ನು ಪೂರ್ತಿ ಓದಿ

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group