Friday, May 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

  • Bengaluru Focus

    ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

    ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: 461 ವಿದ್ಯುತ್ ಕಂಬಗಳು ನೆಲಸಮ, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Makar Sankranthi 2022 | ಸಂಕ್ರಾಂತಿ ಹಬ್ಬಕ್ಕೆ ಮೂರನೇ ಅಲೆಯ ಭೀತಿಯ ಛಾಯೆ….! ಸಂಕ್ರಾಂತಿ ಹಬ್ಬದ ಅಗತ್ಯ ವಸ್ತುಗಳ ಬೆಲೆಗಳ ಡಿಟೇಲ್ಸ್ ಇಲ್ಲಿದೆ ನೋಡಿ…

by Bengaluru Wire Desk
January 14, 2022
in Bengaluru Focus
Reading Time: 3 mins read
1

ಬೆಂಗಳೂರು, (www.bengaluruwire.com) : ಕೋವಿಡ್ ಸೋಂಕು ದಿನೇ ದಿನೇ ಏರಿಕೆಯಾಗಿರುವ ಹೊತ್ತಿನಲ್ಲೇ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ವಿಧಿಸಿರುವ ಹಿನ್ನಲೆಯಲ್ಲಿ ಈ ಬಾರಿ ಸಂಕ್ರಾಂತಿ ಖರೀದಿ ಭರಾಟೆಗೆ ತಣ್ಣೀರು ಎರೆಚಿದಂತಾಗಿದೆ. ಈ ಬಾರಿ ಸಂಕ್ರಾಂತಿ ಹಬ್ಬ ಜನವರಿ 14ರ ಬದಲಾಗಿ 15ನೇ ತಾರೀಖು ಶನಿವಾರ ಬಂದಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಕಾರಣ ಸಂಕ್ರಾಂತಿ ಹಬ್ಬದ ಸಂಭ್ರಮ ಅಡ್ಡಿಯಾಗಿದೆ.

ತಿಥಿಯ ಪ್ರಕಾರ ಉತ್ತರಾಯಣದ ಪುಣ್ಯಕಾಲ ಜ.15ರಂದು ಬಂದಿರುವ ಕಾರಣ ಸಂಕ್ರಾಂತಿ ಹಬ್ಬದ ಆಚರಣೆ ಅಂದೇ ಆಚರಿಸಲಾಗುತ್ತಿದೆ ಎಂದು ರಾಜ್ಯ ಮುಜರಾಯಿ ಇಲಾಖೆ ತಿಳಿಸಿದೆ . ಆದರೆ ಕೇರಳ ಶಬರಿಮಲೆ ದೇವಸ್ಥಾನದಲ್ಲಿ ಮಕರಜ್ಯೋತಿ ಗೋಚರ ಜ.14ರಂದು ಎಂದು ಶಬರಿಮಲೆ ದೇವಸ್ಥಾನದ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.

ಸಂಕ್ರಾಂತಿ ಹಬ್ಬಕ್ಕಾಗಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಟನ್ ಗಟ್ಟಲೆ ಕಬ್ಬು, ಅವರೆಕಾಯಿ, ಕಡಲೆಕಾಯಿ, ಗೆಣಸು ಆಗಮಿಸಿದ್ದರೂ ಕರೋನಾ, ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಜನರ ಖರೀದಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ, ಹೂವು- ಹಣ್ಣು, ಧವಸ ಧಾನ್ಯಗಳ ಬೆಲೆ ತೀವ್ರವಾಗಿ ಏರಿಕೆಯಾಗದಿದ್ದರೂ ಜನರು ಮಾರುಕಟ್ಟೆಗೆ ಆಗಮಿಸುತ್ತಿರುವ ಸಂದರ್ಭಗಳು ಕಡಿಮೆಯಾಗಿದೆ. ಕೆ.ಆರ್.ಮಾರ್ಕೇಟ್, ಮಲ್ಲೇಶ್ವರ, ಗಾಂಧಿಬಜಾರ್, ಯಶವಂತಪುರ, ಮಡಿವಾಳ, ಬಸವನಗುಡಿ, ವಿಜಯನಗರ, ಜಯನಗರ, ಕೆ.ಆರ್.ಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಸುಗ್ಗಿಗಾಗಿ ಅಗತ್ಯ ಹೂವು, ಹಣ್ಣು, ತರಕಾರಿ, ಕಬ್ಬು, ಬಾಳೆದಿಂಡು ಮತ್ತಿತರ ವಸ್ತುಗಳು ಈಗಾಗಲೇ ಆಗಮಿಸಿದ್ದು, ಹಬ್ಬದ ದಿನವಾದ ಜ.15ರಂದು ವೀಕೆಂಡ್ ಕರ್ಫ್ಯೂ ಕಾರಣಕ್ಕೆ ಬೆಂಗಳೂರಿನ ಜನತೆ ಇಂದು ಮತ್ತು ನಾಳೆಯೇ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಖರೀದಿಗೆ ತೆರಳುತ್ತಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೂವಿನ ಸಗಟು ದರ ಪ್ರತಿ ಕೆ.ಜಿ.ಗೆ ಈ ರೀತಿಯಿದೆ :

ಸೇವಂತಿಗೆ ಹೂವು300 ರೂ.
ಮಲ್ಲಿಗೆ ಮೊಗ್ಗು1,200 ರೂ.
ಕನಕಾಂಬರ800 ರೂ.
ಸುಗಂಧರಾಜ60 ರೂ.
ಕಾಕಡ500 ರೂ.
ಗುಲಾಬಿ ಹೂವು100 ರೂ.

ಹೂವಿನ ಸಗಟು ದರ ಇದಾಗಿದ್ದು, ಚಿಲ್ಲರೆದರವು 20 ರೂ. ನಿಂದ 50 ರೂ.ಗಳ ತನಕ ಹೆಚ್ಚಿಗೆ ಇರಲಿದೆ. ಕಳೆದ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

“ಹೋದವರ್ಷ ಜನವರಿ 2021ರ ಸಂಕ್ರಾಂತಿ ಹಬ್ಬದಲ್ಲಿ ಕರೋನಾ ಸೋಂಕು ಕಡಿಮೆಯಾಗಿತ್ತು. ಹೀಗಾಗಿ ಹೂವಿನ ವ್ಯಾಪಾರ ಚೆನ್ನಾಗಿತ್ತು. ಆದರೆ ಈ ಬಾರಿ ಕರೋನಾ ಸೋಂಕಿನ ಹಿನ್ನಲೆಯಲ್ಲಿ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಹಾಕಿರುವ ಕಾರಣ ಜನರು ಮಾರುಕಟ್ಟೆಯತ್ತ ಆಗಮಿಸುತ್ತಿಲ್ಲ. ಹಬ್ಬದ ರಷ್ ಶೇ.50ರಷ್ಟು ಕಡಿಮೆಯಾಗಿದೆ. ಪ್ರತಿದಿನ ಹೂವು ಕಟ್ಟಿ ಮಾರುವ ಗ್ರಾಹಕರಷ್ಟೇ ಮಾರುಕಟ್ಟೆಗೆ ಬಂದು ಹೂವು ಕೊಂಡೊಯ್ದು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ವ್ಯಾಪಾರ ಡಲ್ ಆಗಿದೆ.”

– ಜಿ.ಎನ್.ದಿವಾಕರ್, ಅಧ್ಯಕ್ಷರು, ಬೆಂಗಳೂರು ಹೂವು ವ್ಯಾಪಾರಿಗಳ ಸಂಘ, ಕೆ.ಆರ್.ಮಾರ್ಕೇಟ್

ಇನ್ನು ವಿವಿಧ ರೀತಿಯ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಬೆಲೆ ಈ ಕೆಳಕಂಡಂತಿದೆ :

ಜೋಡಿ ಕಬ್ಬು150 ರಿಂದ 250 ರೂ.
ಬಾಳೆ ಕಂಬ ಜೋಡಿಗೆ80 ರಿಂದ 100 ರೂ.
ಬಾಳೆ ಎಲೆ ಒಂದಕ್ಕೆ2ರೂ. ನಿಂದ 10 ರೂ.
ಬಾಳೆಹಣ್ಣು ಕೆ.ಜಿಗೆ60 ರೂ.
ಸೇಬು120 ರೂ. ನಿಂದ 150 ರೂ.
ಕಿತ್ತಳೆಹಣ್ಣು100 ರೂ. ನಿಂದ 120 ರೂ.
ಟೊಮೊಟೋ30 – 40 ರೂ.
ಬದನೆಕಾಯಿ40 – 60 ರೂ.
ಅವರೆಕಾಯಿ70 – 80 ರೂ.
ಕ್ಯಾರೇಟ್50 – 80 ರೂ.
ದೊಡ್ಡಮೆಣಸಿನಕಾಯಿ55- 80 ರೂ.
ಹೂಕೋಸು25 – 50 ರೂ.
ಹುರುಳಿಕಾಯಿ80 ರೂ.
ಕೊತ್ತಂಬರಿ ಒಂದು ಕಟ್ಟು20 ರೂ.
ಹಸಿಶುಂಠಿ ಕೆ.ಜಿ.ಗೆ10 – 12 ರೂ.
ಹಸಿಮೆಣಸಿನಕಾಯಿ40 ರೂ.
ಕುಂಬಳಕಾಯಿ30 – 60 ರೂ.

ಸಂಕ್ರಾಂತಿ ಹಬ್ಬ ಅಂದರೆ ಕಬ್ಬು, ಅವರೆಕಾಯಿ, ಕಡಲೆಕಾಯಿ, ಗೆಣಸು ಹಾಗೂ ಎಳ್ಳು-ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ. ಆದರೆ ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಕಬ್ಬಿನ ಬೇಡಿಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಈ ಬಾರಿ ಅಧಿಕ ಮಳೆಯಿಂದಾಗಿ ಕಬ್ಬಿನ ಇಳುವರಿ ಚೆನ್ನಾಗಿಯಾದರೂ, ಕಡಲೆಕಾಯಿ, ಅವರೆಕಾಯಿ ಬೆಳೆಗೆ ಹಾನಿ ಉಂಟಾಗಿದೆ. ಆದ್ದರಿಂದ ಉತ್ತಮ ಇಳುವರಿಯಿಲ್ಲ ಎಂದು ರೈತ ಸಂಘಟನೆಗಳು ಹೇಳುತ್ತಿವೆ.

“ಕರೋನಾ ಸೋಂಕಿನಿಂದಾಗಿ ರೈತರಿಗೆ ಉತ್ತಮ ಕಬ್ಬು ಬೆಳೆ ಬಂದರೂ, ಕಳೆದ ವರ್ಷಕ್ಕಿಂತ ಈ ವರ್ಷ ಕಬ್ಬಿಗೆ ಬೇಡಿಕೆ ಶೇಕಡ 50ರಷ್ಟು ಕಡಿಮೆಯಾಗಿದೆ. ಬೆಂಗಳೂರಿಗೆ ಸಾಮಾನ್ಯವಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತಿತರ ಕಡೆಗಳಿಂದ ಹಬ್ಬಕ್ಕಾಗಿ ಕಬ್ಬು ಪೂರೈಕೆಯಾಗುತ್ತದೆ. ಆದರೆ ಈಗ ಜನರಿಗೆ ಕರೋನಾ ಹಿನ್ನಲೆಯಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿ ಮಾಡಬೇಕಾ? ಅಥವಾ ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.  ಒಟ್ಟಾರೆ ಸಂಕ್ರಾಂತಿ ಹಬ್ಬದ ಕಳೆಯೇ ಇಲ್ಲದಂತಾಗಿದೆ. “

– ಕುರಬೂರು ಶಾಂತಕುಮಾರ್, ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ

ಸಂಕ್ರಾಂತಿ ಹಬ್ಬಕ್ಕೆ ಹಾಪ್ ಕಾಮ್ಸ್ ಸಂಕ್ರಾಂತಿ ಮೇಳ :

ಸಂಕ್ರಾಂತಿ ಹಬ್ಬದಲ್ಲಿ ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲಿ ರೈತರು ಬೆಳದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಸಂಕ್ರಾಂತಿ ಮೇಳ ಆಯೋಜಿಸಲಾಗುತ್ತಿತ್ತು. ಕೋವಿಡ್ ಸೋಂಕು ತೀವ್ರವಾಗಿ ಹೆಚ್ಚಾಗಿರುವ ಕಾರಣದಿಂದ ಹಾಪ್ ಕಾಮ್ಸ್ ಮೇಳವನ್ನು ರದ್ದು ಮಾಡಿ, ಸಂಕ್ರಾಂತಿ ಹಬ್ಬಕ್ಕೆ ಜನರು ಬಳಸುವ ಉತ್ಪನ್ನಗಳನ್ನೇ ವಿಶೇಷ ದರಕ್ಕೆ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾರಲು ಅಗತ್ಯ ವ್ಯವಸ್ಥೆ ಕಲ್ಪಿಸಿದೆ.

ಹಾಪ್ ಕಾಮ್ಸ್ ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಲ್ಲಿನ ಮಳಿಗೆಗಳಲ್ಲಿ ಮಾರಲಾಗುತ್ತಿರುವ ಉತ್ಪನ್ನಗಳು ಮತ್ತು ಬೆಲೆ ವಿವರ ಕೆ.ಜಿಗೆ ಈ ಮುಂದಿನಂತಿದೆ : ಅವರೆಬೇಳೆ (ಬಿಡಿಸಿದ್ದು) 270ರೂ., ಒಣಕೊಬ್ಬರಿ 250 ರೂ., ಎಳ್ಳು-ಬೆಲ್ಲ ಮತ್ತಿತರ ಮಿಶ್ರಣ – 190 ರೂ., ಕಡಲೆಕಾಯಿ 99 ರೂ., ಗೆಣಸು 40 ರೂ., ಅವರೆಕಾಯಿ 70 ರೂ., ಕಬ್ಬು 40 (ಒಂದಕ್ಕೆ) ರೂ., ಏಲಕ್ಕಿಬಾಳೆ 44ರೂ., ಪಚ್ಚಬಾಳೆ 22 ರೂ. ಎಂದು ನಿಗಧಿಪಡಿಸಿದೆ.

ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ ದವಸ ಧಾನ್ಯಗಳ ಬೆಲೆ ವಿವರ :

ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದವಸ ಧಾನ್ಯಗಳ ಹೋಲ್ ಸೇಲ್ ಬೆಲೆ ಪ್ರತಿ ಕೆ.ಜಿಗೆ ಈ ಮುಂದಿನಂತಿದೆ : ತೊಗರಿಬೇಳೆ 85 ರೂ. ನಿಂದ 100 ರೂಪಾಯಿ, ಕಡ್ಲೆಬೇಳೆ  65- 75, ಹೆಸರುಬೇಳೆ 90- 95, ಉದ್ದಿನಬೇಳೆ 90- 120 ರೂ., ಹೆಸರುಕಾಳು 85- 90 ರೂ., ಕಡ್ಲೆಕಾಳು 64 ರೂ., ಕಾಬೂಲ್ ಕಡಲೆ 100 ರೂ., ಹುರಿಗಡಲೆ 75- 80ರೂ., ಕಡ್ಲೆಕಾಯಿ ಬೀಜ 115- 130 ರೂ., ಸಕ್ಕರೆ 36- 38 ರೂ. ಹಾಗೂ ಬೆಲ್ಲ 40 ರೂ. ನಷ್ಟಿದೆ.

“ಕಳೆದ ಎರಡು ವರ್ಷಗಳಿಂದ ಧವಸ ಧಾನ್ಯಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಕಳೆದ ಎರಡು ತಿಂಗಳನಿಂದ ಮದುವೆ, ಮುಂಜಿ ಮತ್ತಿತರ ಶುಭಕಾರ್ಯಗಳಿಂದಾಗಿ ಕ್ಯಾಟರಿಂಗ್ ಕ್ಷೇತ್ರ ಚೇತರಿಸಿಕೊಂಡಿತ್ತು. ಅದೇ ರೀತಿ ಹೋಟೆಲ್ ಗಳಲ್ಲೂ ವ್ಯಾಪಾರ ಸುಧಾರಿಸುತ್ತಾ ಬಂದಿತ್ತು. ಇದೀಗ ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವಿಧಿಸಿದ್ದರಿಂದಾಗಿ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಯಾಗಿದೆ. ಮೊದಲ ಎರಡು ಕರೋನಾ ಅಲೆಯಿಂದ ಶೇ.20ರಷ್ಟು ವ್ಯಾಪಾರಸ್ಥರು ತಮ್ಮ ವ್ಯಾಪಾರ ಬಂದ್ ಮಾಡಿದ್ದಾರೆ. ಮೂರನೇ ಅಲೆಯಿಂದ ವ್ಯಾಪಾರದ ಮೇಲೆ ಮತ್ತೆ ತೊಂದರೆಯಾಗದಿದ್ದರೆ ಅಷ್ಟೆ ಸಾಕು.”

– ರಮೇಶ್ ಚಂದ್ರ ಲಹೋಟಿ, ಅಧ್ಯಕ್ಷರು, ಯಶವಂತಪುರ ಎಪಿಎಂಸಿ ಒಕ್ಕೂಟ

ಒಟ್ಟಾರೆ ಈ ಬಾರಿಯ ಸಂಕ್ರಾಂತಿ ಹಬ್ಬದ ಸಡಗರಕ್ಕೆ ಕರೋನಾ ಸೋಂಕು ವಕ್ಕರಿಸಿ ಜನರ ಸಂಭ್ರಮಕ್ಕೆ ಹಾಗೂ ಹಬ್ಬದ ವಸ್ತುಗಳ ಖರೀದಿಯ ಉತ್ಸಾಹಕ್ಕೆ ಕೊಡಲಿಪೆಟ್ಟು ಕೊಟ್ಟಿದೆ. ಸಾಧ್ಯವಾದಷ್ಟು ಜನರು ಬೆಂಗಳೂರಿನ ದೊಡ್ಡ ಮಾರುಕಟ್ಟೆಗಳಿಗೆ ಹೆಚ್ಚಾಗಿ ಖರೀದಿಗೆ ಬರುವುದಕ್ಕಿಂತ ಮನೆ ಸುತ್ತಮುತ್ತಲಿನ ಅಂಗಡಿ, ಬೀದಿ ವ್ಯಾಪಾರಿಗಳ ಬಳಿಯೇ ಹೂವು, ಹಣ್ಣು, ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಒಲವು ತೋರಿಸಿದ್ದಾರೆ. ಹಬ್ಬದ ದಿನವಾದ ಜ.15ರಂದು ವೀಕೆಂಡ್ ಕರ್ಫ್ಯೂ ಕೂಡ ಸಡಗರದಿಂದ ತಮ್ಮ ಬಂದು ಬಾಂಧವರು, ಸ್ನೇಹಿತರ ಮನೆಗಳಿಗೆ ತೆರಳಿ ಹಬ್ಬ ಆಚರಿಸಲು ತೊಡಕಾಗಿದೆ.

WhatsApp Join our WhatsApp Channel
Previous Post

ISRO Gaganyan News | ಇಸ್ರೋ ಗಗನಯಾನದ ಕ್ರಯೋಜಿನಿಕ್ ಎಂಜಿನ್ ಯಶಸ್ವಿ ಪರೀಕ್ಷೆ

Next Post

BENGALURU WIRE 1ST Anniversary | ಜನಮನ ಗೆದ್ದ “ಬೆಂಗಳೂರು ವೈರ್” ಗೆ ಒಂದನೇ ವಾರ್ಷಿಕೋತ್ಸವದ ಸಂಭ್ರಮ

Next Post

BENGALURU WIRE 1ST Anniversary | ಜನಮನ ಗೆದ್ದ "ಬೆಂಗಳೂರು ವೈರ್" ಗೆ ಒಂದನೇ ವಾರ್ಷಿಕೋತ್ಸವದ ಸಂಭ್ರಮ

Motor Vehicle Airbags | ಸಾಮಾನ್ಯ ಕಾರುಗಳಲ್ಲಿಯೂ ಇನ್ನು ಮುಂದೆ 6 ಏರ್ ಬ್ಯಾಗ್ ಗಳ ಅಳವಡಿಕೆ ಖಡ್ಡಾಯ

Please login to join discussion

Like Us on Facebook

Follow Us on Twitter

Recent News

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

May 1, 2026

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: 461 ವಿದ್ಯುತ್ ಕಂಬಗಳು ನೆಲಸಮ, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ

April 30, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

May 1, 2026

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: 461 ವಿದ್ಯುತ್ ಕಂಬಗಳು ನೆಲಸಮ, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ

April 30, 2026

ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

April 30, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group