ನವದೆಹಲಿಯಲ್ಲಿ ಆಯೋಜಿಸಲಾಗಿದ್ದ “ಮಿಸೆಸ್ ಇಂಡಿಯಾ ಒನ್ ಇನ್ ಮಿಲಿಯನ್” ಸೌಂದರ್ಯ ಸ್ಪರ್ಧೆಯಲ್ಲಿ ಡಾ.ಟಿ.ಎಲ್.ವಿಜಯಲಕ್ಷ್ಮಿ “ಮಿಸೆಸ್ ಕರ್ನಾಟಕ” ಕಿರೀಟವನ್ನು ಮುಡಿಗೇರಿಸಿಕೊಂಡರು.
ಬೆಂಗಳೂರಿನಲ್ಲಿ ನೆಲೆಸಿರುವ ವಿಜಯ್ ಲಕ್ಷ್ಮಿ ಇಬ್ಬರು ಹೆಣ್ಣುಮಕ್ಕಳ ತಾಯಿ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸೌಂದರ್ಯ ಸ್ಪರ್ಧೆಯ ಗೋಲ್ಡ್ ಕೆಟಗರಿಯಲ್ಲಿ ಡಾ.ಟಿ.ಎಲ್.ವಿಜಯಲಕ್ಷ್ಮಿ ಅವರು ಮಿಸೆಸ್ ಕರ್ನಾಟಕ ಕಿರೀಟವನ್ನು ತಮ್ಮದಾಗಿಸಿಕೊಂಡರು.
ಪ್ರಶಾಂತ್ ಚೌಧರಿ ಮತ್ತು ಸ್ವಾತಿ ದೀಕ್ಷಿತ್ ಸ್ಥಾಪಿಸಿದ ಟಿಸ್ಕಾ ಪೀಜಿಯಂಟ್ಸ್ ಸಂಸ್ಥೆಯು “ಮಿಸೆಸ್ ಇಂಡಿಯಾ ಒನ್ ಇನ್ ಎ ಮಿಲಿಯನ್” ಸೌಂದರ್ಯ ಸ್ಪರ್ಧೆಯ 2ನೇ ಸೀಸನನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ 103 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಾಜಿ ಮಿಸೆಸ್ ವಲ್ರ್ಡ್ ಮತ್ತು ಬಾಲಿವುಡ್ ನಟಿ ಅದಿತಿ ಗೋವಿಟ್ರಿಕರ್ ಅವರು ಸಿಲೆಬ್ರಟಿ ಜ್ಯೂರಿ ಆಗಿದ್ದರು. ವಲ್ರ್ಡ್ ಡಿಸೈನ್ ಯೂನಿವರ್ಸಿಟಿಯ ಖ್ಯಾತ ಶಿಕ್ಷಣ ತಜ್ಞೆ ಪ್ರೊ.ಅಂಬಿಕಾ ಮಗೋತ್ರಾ ಅವರು ಇನ್ನೊಬ್ಬ ಜ್ಯೂರಿಯಾಗಿದ್ದರು. ಅರ್ಚನಾ ಸಿನ್ಹಾ, ಸಚಿನ್ ಖುರಾನಾ, ರೋಹಿತ್ ಧಿಂಗ್ರಾ, ಪಾಯಲ್ ಸಿಂಗ್, ಅಂಜಲಿ ಸಾಹ್ನಿ, ಪ್ರಶಾಂತ್ ಚೌಧರಿ ಅವರು ಇತರ ಜ್ಯೂರಿಗಳಾಗಿದ್ದರು. ಕಾಂತಿ ಸ್ವೀಟ್ಸ್‍ನ ಎಂ.ಡಿ ಶಿಖಾ ಶರ್ಮಾ ಅವರು ಮುಖ್ಯ ಅತಿಥಿಯಾಗಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಪ್ರೇಕ್ಷಕರು ವರ್ಚುವಲ್ ಮೂಲಕ ಈ ಸೌಂದರ್ಯ ಸ್ಪರ್ಧೆಯನ್ನು ವೀಕ್ಷಿಸಿದರು.
























