Tuesday, May 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

    Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

    ​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

    ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವರವಾದ ಹೊಸ ಇಂಜೆಕ್ಷನ್: ಇನ್ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ, ಕೇವಲ 7 ನಿಮಿಷದಲ್ಲಿ ಚಿಕಿತ್ಸೆ

    ರಾಜ್ಯಕ್ಕೆ 1,122 ಹೊಸ ವೈದ್ಯಕೀಯ ಸೀಟುಗಳ ಬಂಪರ್; ‘ನೀಟ್’ ರದ್ದತಿಗೆ ಸರ್ಕಾರದ ಬಲವಾದ ಆಗ್ರಹ

    ಮಾಲಿನ್ಯಕ್ಕೆ ಬ್ರೇಕ್: ದೆಹಲಿಯಲ್ಲಿ ಇನ್ನು ಮುಂದೆ ಇ-ಆಟೋಗಳದ್ದೇ ಪಾರುಪತ್ಯ

    ​ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಮನ್ನಣೆ: 2022ರ ವಿವಾದಿತ ವಸ್ತ್ರಸಂಹಿತೆ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ

  • Bengaluru Focus

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

ಡಿಜಿಟಲ್ ಕ್ರಾಂತಿ ಹಾಗೂ ಕೃಷಿ ಭಾಗ್ಯ ಯೋಜನೆ ಮೂಲಕ ರೈತರ ಆದಾಯ ದುಪ್ಪಟ್ಟುಗೊಳಿಸಲು ಸರ್ಕಾರ ಬದ್ಧ; ಶೀಘ್ರದಲ್ಲೇ ಕೃಷಿ ಸಮಸ್ಯೆಗಳಿಗೆ ಪರಿಹಾರ ನೀಡುವ 'ಅಗ್ರಿ ಬಾಟ್' ತಂತ್ರಜ್ಞಾನ ಲೋಕಾರ್ಪಣೆ.

by Bengaluru Wire Desk
May 18, 2026
in News Wire, Public interest
Reading Time: 1 min read
0

ಬೆಂಗಳೂರು, ಮೇ.18 www.bengaluruwire.com: ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿ, ಅದನ್ನು ಕೇವಲ ಬದುಕಿನ ಅನಿವಾರ್ಯತೆಯನ್ನಾಗಿಸದೆ ಗೌರವಯುತ ಮತ್ತು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

​ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕೃಷಿ – ಮಾಧ್ಯಮ ಸಂವಾದ”ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ ಕೃಷಿ ಇಲಾಖೆಯ ಕಳೆದ ಮೂರು ವರ್ಷಗಳ ಸಾಧನೆಗಳ ಸುದೀರ್ಘ ಮಾಹಿತಿಯನ್ನು ಹಂಚಿಕೊಂಡ ಸಚಿವರು, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆಗೆ (Value Addition) ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

​ಕೃಷಿ ಭಾಗ್ಯ ಮತ್ತು ಡಿಜಿಟಲ್ ಕ್ರಾಂತಿ

​ಕಳೆದ 3 ವರ್ಷಗಳಲ್ಲಿ ಸರ್ಕಾರದ ದಕ್ಷ ಆಡಳಿತದಿಂದಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಇಲಾಖೆಯ ಮಹತ್ವಾಕಾಂಕ್ಷಿ ‘ಕೃಷಿ ಭಾಗ್ಯ’ ಯೋಜನೆಯಡಿ ₹435.05 ಕೋಟಿ ಸಹಾಯಧನದೊಂದಿಗೆ 36,213 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಯಾಂತ್ರೀಕರಣಕ್ಕೆ ವೇಗ ನೀಡಲು ₹173 ಕೋಟಿ ವೆಚ್ಚದಲ್ಲಿ 524 ‘ಹೈಟೆಕ್ ಹಾರ್ವೆಸ್ಟರ್ ಹಬ್’ಗಳನ್ನು ಸ್ಥಾಪಿಸಲಾಗಿದೆ. 

ತಂತ್ರಜ್ಞಾನ ಬಳಕೆಯಲ್ಲಿ ಕ್ರಾಂತಿ ಸೃಷ್ಟಿಸಿರುವ ಸರ್ಕಾರ QR Code, FID ಮತ್ತು ‘ಇ-ಸ್ಯಾಪ್’ (e-SAP) ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪಾರದರ್ಶಕ ಡಿಜಿಟಲ್ ವ್ಯವಸ್ಥೆಯನ್ನು ತಂದಿದೆ ಎಂದು ಸಚಿವರು ವಿವರಿಸಿದರು.

​ದೇಶಿ ತಳಿ ಸಂರಕ್ಷಣೆ ಮತ್ತು ಸಾವಯವ ಕೃಷಿ

​’ಬೀಜ ಪರಂಪರೆ’ ಕಾರ್ಯಕ್ರಮದ ಮೂಲಕ 2,100 ದೇಶಿ ತಳಿಗಳನ್ನು ಸಂರಕ್ಷಿಸುವ ಮೂಲಕ ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗಿದೆ. ಜೋಯಿಡಾ ಮತ್ತು ಪಾಂಡವಪುರ ತಾಲ್ಲೂಕುಗಳನ್ನು ಸಂಪೂರ್ಣ ಸಾವಯವ ತಾಲ್ಲೂಕುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸಿರಿಧಾನ್ಯ ಮೇಳಗಳ ಆಯೋಜನೆಯ ಮೂಲಕ ₹335 ಕೋಟಿಗೂ ಅಧಿಕ ಮೊತ್ತದ ವಾಣಿಜ್ಯ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. 

ಲಕ್ಷಾಂತರ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕರ್ನಾಟಕಕ್ಕೆ ರಾಷ್ಟ್ರಮಟ್ಟದ ಗೌರವ ಲಭಿಸಿದೆ ಎಂದು ಹೆಮ್ಮೆಯಿಂದ ಹಂಚಿಕೊಂಡರು.

​ಆದಾಯ ದುಪ್ಪಟ್ಟು ಹಾಗೂ ನೂತನ ‘ಅಗ್ರಿ ಬಾಟ್‌’ ತಂತ್ರಜ್ಞಾನ

​ಮುಂದಿನ ದಿನಗಳಲ್ಲಿ ‘ಡಿಜಿಟಲ್ ಕೃಷಿ’ ಮೂಲಕ ರೈತರ ಉತ್ಪಾದನಾ ವೆಚ್ಚ ತಗ್ಗಿಸಿ ಆದಾಯ ದುಪ್ಪಟ್ಟುಗೊಳಿಸಲು ಶ್ರಮಿಸಲಾಗುವುದು. ಕಳೆದೆರಡು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳ ಪ್ರಗತಿಪರ ರೈತರ ಮನೆ, ತೋಟಗಳಿಗೆ ಭೇಟಿ ನೀಡಿ ಸುದೀರ್ಘ ವಿಚಾರ ವಿನಿಮಯ ಮಾಡಿದ್ದೇನೆ. ಈ ಸಂವಾದಗಳಿಂದ ಕಲಿತ ಅನೇಕ ಸಂಗತಿಗಳು ನಮ್ಮ ನೂತನ ಕೃಷಿ ನೀತಿ ಹಾಗೂ ಯೋಜನೆಗಳಾಗಿ ರೂಪುಗೊಂಡಿವೆ.

​ವಿಶೇಷವೆಂದರೆ, ವೈಜ್ಞಾನಿಕ ಮತ್ತು ಸಾವಯವ ಕೃಷಿ ಮಾಡುತ್ತಿರುವ ಯಾವೊಬ್ಬ ರೈತನೂ ಆರ್ಥಿಕ ತೊಂದರೆಗೆ ಸಿಲುಕಿಲ್ಲ. ಇಂತಹ ಪ್ರಗತಿಪರ ರೈತರು ಪ್ರತಿ ಹಳ್ಳಿಯಲ್ಲೂ ಹೆಚ್ಚಾಗಬೇಕಿದೆ. ಕೃಷಿಯಲ್ಲಿನ ಇಂತಹ ಅತ್ಯುತ್ತಮ ಪದ್ಧತಿಗಳನ್ನು ಪ್ರತಿಯೊಬ್ಬ ರೈತರೂ ಕಲಿತು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಇದನ್ನು ಇಡೀ ಸಮುದಾಯಕ್ಕೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. 

ಇದರ ಜೊತೆ ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಹಾಗೂ ಮಾಹಿತಿ ಕಲ್ಪಿಸುವ ದಿಶೆಯಲ್ಲಿ ವಿನೂತನವಾಗಿ ಅಗ್ರಿ ಬಾಟ್‌ (Agri Bot) ಎನ್ನುವ ತಂತ್ರಜ್ಞಾನವನ್ನು ಶೀಘ್ರದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಸಚಿವರು ಪ್ರಕಟಿಸಿದರು.

ಕೃಷಿ ಇಲಾಖೆಯ ​ನಿರ್ದೇಶಕರಾದ ಜಿಟಿ ಪುತ್ರ, ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್, ಅಧ್ಯಕ್ಷರಾದ ಬಿ ಹೆಚ್‌ ಹರೀಶ್‌ ಸಹಿತ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

Next Post

ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

Next Post
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

Please login to join discussion

Like Us on Facebook

Follow Us on Twitter

Recent News

ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

May 19, 2026

Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

May 18, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

May 19, 2026

Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

May 18, 2026

​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

May 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group