Friday, July 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

    Energy News | ರಾಜ್ಯದಲ್ಲಿ ಮಳೆ ಕೊರತೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ

    ಎಲ್ ನಿನೋ ಭೀತಿ: ಬರ ಎದುರಿಸಲು ಕರ್ನಾಟಕ ಸರ್ಕಾರದ ‘ಮಾಸ್ಟರ್ ಪ್ಲಾನ್’ ಏನು?

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ ರಚನೆ, ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್: ಸಚಿವ ಯು.ಟಿ. ಖಾದರ್

    ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ: ಕೇಂದ್ರದ ಸಿಜಿಹೆಚ್ಎಸ್ (CGHS) ಪರಿಷ್ಕೃತ ದರಗಳ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶ

    ಉಡುಪಿಯ ಕೋಟದಲ್ಲಿ ಸರ್ವರ್ ಸಮಸ್ಯೆಯಿಂದ ಸಾಲಿನಲ್ಲಿ ನಿಂತರೂ ಪಡಿತರ ಪಡೆಯಲು ಆಗದೆ ಅಸಹಾಯಕರಾಗಿ ನಿಂತ ಪಡಿತರ ಚೀಟಿದಾರರು

    Lokayukta News | ರಾಜ್ಯದ ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

    Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

  • Bengaluru Focus

    PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

    KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ₹5,000 ದಂಡ ಏರಿಕೆ ಮಾಡಿ, ನಿಯಮ ಬಿಗಿಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಪತ್ರ

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್ ವರದಿ ಹಿನ್ನಲೆ: ಶಿವಾಜಿನಗರ ಪಾದಾಚಾರಿ ಮಾರ್ಗ ಒತ್ತುವರಿ ತೆರವು: ಪಾಲಿಕೆ ಅಧಿಕಾರಿಗಳ ಮೇಲೆ ಪುಂಡರ ಅಟ್ಯಾಕ್ ಅಕ್ಷಮ್ಯ!!

    Namma Metro Green Train

    Namma Metro News | ನಮ್ಮ ಮೆಟ್ರೋ ಹಸಿರು ಮಾರ್ಗ: ವಿದ್ಯುತ್ ವ್ಯತ್ಯಯ ಸರಿಪಡಿಸಿದ ಬೆನ್ನಲ್ಲೇ ಸೇವೆ ಪುನರಾರಂಭ

    BWSSB News | ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ಬುಧವಾರ ಕಾವೇರಿ ನೀರು ಇರಲ್ಲ

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ ರಚನೆ, ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್: ಸಚಿವ ಯು.ಟಿ. ಖಾದರ್

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW SPECIAL | ಉಡುಪಿ ಪರ್ಯಾಯ ವೈಭವ: ಸರ್ವಜ್ಞ ಪೀಠವೇರಿದ ಶೀರೂರು ಶ್ರೀ ವೇದವರ್ಧನ ತೀರ್ಥರು

ಕೃಷ್ಣಮಠದಲ್ಲಿ ಸಂಭ್ರಮದ 253ನೇ ಪರ್ಯಾಯ ಮಹೋತ್ಸವ; ಅಕ್ಷಯ ಪಾತ್ರೆ ಸ್ವೀಕರಿಸಿ ಪೂಜಾಧಿಕಾರ ವಹಿಸಿಕೊಂಡ ಶೀರೂರು ಶ್ರೀಗಳು

by Bengaluru Wire Desk
January 19, 2026
in BW Special, News Wire, Public interest
Reading Time: 2 mins read
0

ಉಡುಪಿ, ಜ.18 www.bengaluruwire.com : ಭಾನುವಾರ ಬೆಳಗಿನ ಜಾವದ ಬ್ರಾಹ್ಮೀ ಮುಹೂರ್ತದಲ್ಲಿ ದ್ವೈತ ಮತ ಸಿದ್ದಾಂತದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವಾದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಐತಿಹಾಸಿಕ ಕ್ಷಣವೊಂದು ದಾಖಲಾಯಿತು. 

ಶೀರೂರು ಮಠದ 31ನೇ ಯತಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ತಮ್ಮ ಪ್ರಥಮ ಪರ್ಯಾಯ ಪೂಜಾಧಿಕಾರವನ್ನು ಅಧಿಕೃತವಾಗಿ ಸ್ವೀಕರಿಸಿದರು.

ಇದು ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ನಡೆಯುತ್ತಿರುವ 253ನೇ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವಾಗಿದ್ದು, ಅತ್ಯಂತ ಕಿರಿಯ ವಯಸ್ಸಿನ ಯತಿಯೊಬ್ಬರು ಸರ್ವಜ್ಞ ಪೀಠವೇರಿರುವುದು ಈ ಬಾರಿಯ ವಿಶೇಷವಾಗಿದೆ.

ಅಕ್ಷಯ ಪಾತ್ರೆ ಹಸ್ತಾಂತರ ಮತ್ತು ಪೀಠಾರೋಹಣ:

ನೂತನ ಪರ್ಯಾಯ ಮಠಾಧೀಶರಾದ ಶೀರೂರು ಶ್ರೀಗಳಿಗೆ ಅಕ್ಷಯ ಪಾತ್ರೆ’ ಹಾಗೂ ಬೆಳ್ಳಿಯ ಸಟ್ಟುಗ ಮತ್ತು ಬೀಗದ ಕೈಯನ್ನು ಹಸ್ತಾಂತರಿಸಿದ ಶ್ರೀ ಸುಗುಣೇಂದ್ರ ತೀರ್ಥರು.

ಪರ್ಯಾಯ ಪೂಜಾಧಿಕಾರವನ್ನು ಪೂರ್ಣಗೊಳಿಸಿದ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ನೂತನ ಪರ್ಯಾಯ ಮಠಾಧೀಶರಾದ ಶೀರೂರು ಶ್ರೀಗಳನ್ನು ಕೃಷ್ಣಮಠದ ದ್ವಾರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಬೆಳಗ್ಗೆ 5:45ರ ಸುಮಾರಿಗೆ ಮಧ್ವಾಚಾರ್ಯರಿಂದ ಪರಂಪರಾಗತವಾಗಿ ಬಂದಿರುವ ‘ಅಕ್ಷಯ ಪಾತ್ರೆ’ ಹಾಗೂ ಬೆಳ್ಳಿಯ ಸಟ್ಟುಗ ಮತ್ತು ಬೀಗದ ಕೈಯನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹ ವರ್ಗಾವಣೆ ಪ್ರಕ್ರಿಯೆ ನೆರವೇರಿತು. ನಂತರ ಶೀರೂರು ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಶುಭ ಹಾರೈಸಲಾಯಿತು. ಶ್ರೀ ವೇದವರ್ಧನ ತೀರ್ಥರು ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.

ಸರ್ವಜ್ಞ ಪೀಠದಲ್ಲಿ ವಿರಾಜಮಾನರಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ.

ಬಡಗು ಮಾಳಿಗೆಯ ಅರಳು ಗದ್ದುಗೆಯನ್ನು ತೆಂಗಿನ ಮರದ ಗರಿಯಲ್ಲಿ ಸಿಂಗರಿಸಲಾಗಿತ್ತು. ಈ ಗದ್ದುಗೆಯಲ್ಲಿ ಉಡುಪಿ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ಕೈಗೊಳ್ಳಲಾಯಿತು.

ಬಡಗು ಮಾಳಿಗೆಯಲ್ಲಿ ಅಷ್ಠಮಠಗಳ ಯತಿಗಳಿಂದ ನಡೆದ ಸಾಂಪ್ರದಾಯಿಕ ದರ್ಬಾರ್.

ವೈಭವದ ಪರ್ಯಾಯ ಮೆರವಣಿಗೆ:

ಇದಕ್ಕೂ ಮುನ್ನ ಬೆಳಗಿನ ಜಾವ 1:30ಕ್ಕೆ ಕಾಪು ತಾಲೂಕಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮುಗಿಸಿದ ಶೀರೂರು ಶ್ರೀಗಳು, ಜೋಡುಕಟ್ಟೆಯಿಂದ ಬೆಳಗ್ಗೆ 3 ಗಂಟೆಗೆ ಆರಂಭವಾದ ವೈಭವದ ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಂಡರು. 90ಕ್ಕೂ ಅಧಿಕ ಸಾಂಸ್ಕೃತಿಕ ಕಲಾತಂಡಗಳು, ಆಕರ್ಷಕ ಸ್ತಬ್ಧಚಿತ್ರಗಳು, ಭಜನಾ ಮಂಡಳಿಗಳು ಮೆರವಣಿಗೆಗೆ ಮೆರುಗು ನೀಡಿದವು. ಶೀರೂರು ಶ್ರೀಗಳು ಮೇನೆಯಲ್ಲಿ (ಪಲ್ಲಕ್ಕಿ) ಕುಳಿತು ಸಾಗಿದರೆ, ಉಳಿದ ಆರು ಮಠಾಧೀಶರು ವಾಹನ ಪಲ್ಲಕ್ಕಿಯಲ್ಲಿ ಹಿಂಬಾಲಿಸಿದರು. ದಿವಂಗತ ಶೀರೂರು ಲಕ್ಷ್ಮೀವರ ತೀರ್ಥರ ಪ್ರತಿಕೃತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ:

ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಶೀರೂರು ಶ್ರೀಗಳು.

ಮೆರವಣಿಗೆಯ ಮೂಲಕ ರಥಬೀದಿ ಪ್ರವೇಶಿಸಿದ ಶ್ರೀಗಳು, ಬೆಳಗ್ಗೆ 5:15ಕ್ಕೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕೃಷ್ಣಮಠ ಪ್ರವೇಶಿಸಿದರು.

ರಾಜಾಂಗಣದಲ್ಲಿ ಅದ್ಧೂರಿ ದರ್ಬಾರ್:

ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್.

ಪೀಠಾರೋಹಣದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 6.15ಕ್ಕೆ ಆರಂಭವಾದ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಅಷ್ಟಮಠಾಧೀಶರು, ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕರಾದ ರಘುಪತಿ ಭಟ್, ಇನ್ನಿತರ ರಾಜಕೀಯ ಗಣ್ಯರು, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್.ಭಟ್, ಕೆನರಾ ಬ್ಯಾಂಕ್ ಎಂಡಿ ಹರಿದೀಪ್ ಸಿಂಗ್ ಅಹ್ಲುವಾಲಿಯಾ, ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಎಂಡಿ ಡಾ.ಪ್ರತಾಪ್ ಮಧುಕರ್ ಕಾಮತ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ತಿರುಪತಿ, ಮಂತ್ರಾಲಯ, ಶ್ರೀರಂಗಮ್ ಸೇರಿದಂತೆ ದೇಶದ ಪ್ರಮುಖ ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯತಿಗಳಿಗೆ ಸಮರ್ಪಿಸಲಾಯಿತು.

ನೂತನ ಪರ್ಯಾಯ ವಹಿಸಿಕೊಂಡ‌ ನಂತರ ಶ್ರೀ ವೇದವರ್ಧನ ಸ್ವಾಮೀಜಿ ಶ್ರೀಕೃಷ್ಣನಿಗೆ ಮೊದಲ‌ ಪೂಜೆ ಸಲ್ಲಿಸಿದರು.

ಅಷ್ಟಮಠಾಧೀಶರ ಆಶೀರ್ವಚನ ಸಾರಾಂಶ:

ಶ್ರೀ ವಿದ್ಯಾಸಾಗರ ತೀರ್ಥರು (ಕೃಷ್ಣಾಪುರ ಮಠ): “ಸ್ವಯಂ ಉದ್ಧಾರ ಎಂದರೆ ಪ್ರಚಾರದ ದಾನ-ಧರ್ಮವಲ್ಲ. ದೇವರ ಪ್ರೀತಿಗಾಗಿ ಪ್ರಚಾರವಿಲ್ಲದೆ ಮಾಡುವ ಕಾರ್ಯವೇ ನಿಜವಾದ ಸೇವೆ. ಶೀರೂರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಧರ್ಮ ಜಾಗೃತಿಯಾಗಲಿ.”

ಶ್ರೀ ವಿದ್ಯಾಧೀಶ ತೀರ್ಥರು (ಪಲಿಮಾರು ಮಠ): “ಗೋವುಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ವಾಮನ ಪರಂಪರೆಯ ಶೀರೂರು ಶ್ರೀಗಳು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಹೊತ್ತಿದ್ದು, ದೇಶಕ್ಕೆ ಒಳಿತಾಗಲಿ.”

ಶ್ರೀ ವಿಶ್ವಪ್ರಸನ್ನ ತೀರ್ಥರು (ಪೇಜಾವರ ಮಠ): “ನಮ್ಮ ಗುರುಗಳು ಪರ್ಯಾಯ ಸ್ವೀಕರಿಸುವಾಗ ಇದ್ದ ವಯಸ್ಸು ಈಗಿನ ಶೀರೂರು ಶ್ರೀಗಳದ್ದು. ಪುಟ್ಟ ಕೈಗಳಲ್ಲಿ ದೊಡ್ಡ ಜವಾಬ್ದಾರಿ ಇದೆ, ಇದಕ್ಕೆ ನಾವೆಲ್ಲರೂ ಬೆಂಬಲ ನೀಡುತ್ತೇವೆ.”

ಮೈಸೂರು ಮಹಾರಾಜ ಯದುವೀರ್ ಒಡೆಯರ್: “ಮೈಸೂರು ಸಂಸ್ಥಾನ ಮತ್ತು ಉಡುಪಿ ಕೃಷ್ಣಮಠಕ್ಕೆ 200 ವರ್ಷಗಳ ಅವಿನಾಭಾವ ಸಂಬಂಧವಿದೆ. ಧಾರ್ಮಿಕ ರಕ್ಷಣೆಯ ವಿಷಯದಲ್ಲಿ ಮೈಸೂರು ಅರಮನೆ ಸದಾ ಕೃಷ್ಣಮಠದ ಜತೆಗಿರುತ್ತದೆ,” ಎಂದು ಭರವಸೆ ನೀಡಿದರು.

ಬೆಳಿಗ್ಗೆ 10:30ಕ್ಕೆ ನೂತನ ಪರ್ಯಾಯ ಯತಿಗಳಿಂದ ಶ್ರೀಕೃಷ್ಣನಿಗೆ ಪ್ರಥಮ ಮಹಾಪೂಜೆ ನೆರವೇರಿತು.

View this post on Instagram
WhatsApp Join our WhatsApp Channel
Previous Post

Lokayukta Raid | 75 ಲಕ್ಷ ಲಂಚಕ್ಕೆ ಬೇಡಿಕೆ: 25 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ

Next Post

ಬಿಗ್‌ ಬಾಸ್‌ 12ರ ಕಿರೀಟ ‘ಗಿಲ್ಲಿ’ ನಟನ ಮುಡಿಗೆ; 50 ಲಕ್ಷ ನಗದು, ಕಾರು ಗೆದ್ದರೂ ಕೈಗೆ ಸಿಗೋ ಹಣವೆಷ್ಟು ಗೊತ್ತಾ?

Next Post

ಬಿಗ್‌ ಬಾಸ್‌ 12ರ ಕಿರೀಟ 'ಗಿಲ್ಲಿ' ನಟನ ಮುಡಿಗೆ; 50 ಲಕ್ಷ ನಗದು, ಕಾರು ಗೆದ್ದರೂ ಕೈಗೆ ಸಿಗೋ ಹಣವೆಷ್ಟು ಗೊತ್ತಾ?

DGP Suspend | ರಾಸಲೀಲೆ ಆರೋಪ: ಸಿಎಂ ಖಡಕ್ ಸೂಚನೆ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅಮಾನತು

Please login to join discussion

Like Us on Facebook

Follow Us on Twitter

Recent News

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

July 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

July 24, 2026

KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

July 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group