Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

ಕಾಶ್ಮೀರದ ಪರ್ವತ ಸಾಲುಗಳಲ್ಲಿ, ಪೆಹಲ್ಗಾಮ್ ನಾಡಿನಲ್ಲಿ ಝೇಂಕರಿಸಿದ ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ!!

ಕನ್ನಡಾಭಿಮಾನದ ಮನಸುಗಳನು ಒಗ್ಗೂಡಿಸಿದ ಜಿಬಿಎ ಅಧಿಕಾರಿ ಮತ್ತು ನೌಕರರ ಸಂಘ | ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ಮೂಡಿಸಿದ ಭಯವನು ಅಳಿಸಿದ ಕನ್ನಡ ಕಾರ್ಯಕ್ರಮ

by Bengaluru Wire Desk
November 22, 2025
in BW Special, News Wire, Public interest
Reading Time: 2 mins read
0

ಪೆಹಲ್ಗಾಮ್, (ಜಮ್ಮು ಮತ್ತು ಕಾಶ್ಮೀರ) ನ.22 www.bengaluruwire.com : ಜಮ್ಮು ಮತ್ತು ಕಾಶ್ಮೀರ ಕಣಿವೆ ರಾಜ್ಯದ ಪಹಲ್ಗಾಮ್ ನಲ್ಲಿ ಕನ್ನಡದ ಕಂಪನ್ನು, ಸಾಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿದು ಕನ್ನಡಿಗರ ಸ್ವಾಭಿಮಾನವನ್ನು ಕಾಶ್ಮೀರಿಗರಿಗೆ ತಿಳಿಸುವಲ್ಲಿ ಗ್ರೇಟರ್ ಬೆಂಗಳೂರ ಪ್ರಾಧಿಕಾರ ನಗರಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘವು, ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಹಾಗೂ ದುರ್ಘಟನೆಯಲ್ಲಿ ಹತರಾದವರಿಗೆ ನುಡಿನಮನ ಕಾರ್ಯಕ್ರಮ ನಡೆಸಿಕೊಡುವಲ್ಲಿ ಯಶಸ್ವಿಯಾಯಿತು.

ಡೋಲು ಬಡಿಯುವ ಮೂಲಕ ಗಣ್ಯರೆಲ್ಲರೂ ಅದ್ಧೂರಿಯಾಗಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನವೆಂಬರ್ ತಿಂಗಳ ಇಲ್ಲಿನ ರಕ್ತಹೆಪ್ಪುಗಟ್ಟುವ ಕೊರೆಯುವ ಚಳಿಯಲ್ಲೂ ಪಹಲ್ಗಾಮ್ ಕ್ಲಬ್ ನಲ್ಲಿ ನಿರ್ಮಿಸಿದ್ದ ದೊಡ್ಡ ಡೇರೆಯಲ್ಲಿ ಗಾಯಕಿ ಭಾಗ್ಯಶ್ರೀ ಅವರು ಮತ್ತು ಗಾಯಕಿ ಅನುರಾಧ ಭಟ್ ಅವರ “ಗೊಂಬೆ ಹೇಳುತೈತೆ…ಮತ್ತೆ ಹೇಳುತೈತೆ…ನೀನು ರಾಜಕುಮಾರ” ಹಾಡಿಗೆ ಪಾಲಿಕೆ ಅಧಿಕಾರಿ ನೌಕರರು ಮೊಬೈಲ್ ಟಾರ್ಚ್ ಹಾಕಿ, ಹಾಡಿಗೆ ಕೋರಸ್ ನಲ್ಲಿ ಹಾಡಿ ಸಾಥ್ ನೀಡಿದರು.

ಕೆ.ಎಸ್.ನರಸಿಂಹಮೂರ್ತಿಯವರ “ದೀಪವೂ ನಿಮ್ಮದೆ…ಗಾಳಿಯೂ ನಿನ್ನದೇ” ಯಂತಹ ಹಲವು ಭಾವಗೀತೆ, “ಕನ್ನಡ ನಾಡಿನ ಜೀವನದಿ ಕಾವೇರಿ” ಯಂತಹ ಹಲವು ಕನ್ನಡ ಚಲನಚಿತ್ರ ಗೀತೆಗಳು ನೆರದಿದ್ದ 350ಕ್ಕೂ ಹೆಚ್ಚು ಸಂಘದ ಸದಸ್ಯರ ಮನಸ್ಸು, ಅವರ ನರನಾಡಿಗಳಲ್ಲಿ ಕನ್ನಡಾಭಿಮಾನ ಮೂಡಿಸುವಲ್ಲಿ ಸಫಲವಾಯಿತು. 

ಗಾಯಕಿ ಅನುರಾಧ ಭಟ್ ಅವರ “ಗೊಂಬೆ ಹೇಳುತೈತೆ ಹಾಡಿಗೆ ಮಾಜಿ ಮೇಯರ್ ಸಂಪತ್ ರಾಜ್, ಗೌತಮ್ ಆದಿಯಾಗಿ ನೆರೆದಿದ್ದವರಿಂದ ಮೊಬೈಲ್ ಟಾರ್ಚ್ ಆನ್ ಮಾಡಿ ಬೆಂಬಲ ಸೂಚಿಸಿದರು.

ಡಾ.ರಾಜ್ ಕುಮಾರ್ ಮತ್ತು ಮಂಜುಳ ಅವರ ಅಭಿನಯದ ಎರಡು ಕನಸು ಚಲನಚಿತ್ರದ “ಎಂದೆಂದೂ ನಿನ್ನನು ಮರೆತು ಬದುಕಿರಲಾರೆನು” ಎಂಬ ಗೀತೆಗೆ ಪಾಲಿಕೆ ನಗರ ಯೋಜನೆ ಅಧಿಕಾರಿ ತಿಪ್ಪೇಶ್ ದಂಪತಿಗಳು ಅವರ ನೃತ್ಯವು ಎಲ್ಲರ ಗಮನ ಸೆಳೆಯಿತು.

ಜಿಬಿಎ ಹಿರಿಯ ಎಂಜಿನಿಯರ್ ತಿಪ್ಪೇಶ್ ದಂಪತಿಗಳಿಂದ ಎರಡು ಕನಸು ಚಲನಚಿತ್ರದ ಗೀತೆಗೆ ಆಕರ್ಷಕ ನೃತ್ಯ.

ಜನಪದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಚಂದ್ರು ಅವರ ನೇತೃತ್ವದ ಡೊಳ್ಳು ಕುಣಿತದ ತಂಡ. ಯಕ್ಷಗಾನ ಬಾಲ ಕಲಾವಿದರು ಕೆಲ ಕಾಲ ಯಕ್ಷಗಾನ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿದರು.

ಕರ್ನಾಟಕದ ಬಾಲ ಕಲಾವಿದೆಯರಿಂದ ಯಕ್ಷನೃತ್ಯ ಪ್ರದರ್ಶನ.

ಆದಿಕವಿ ಪಂಪ ಅವರನ್ನು‌ ನೆನೆಸಿಕೊಂಡು ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥರಾದ ಆರತಿ ಹೆಚ್.ಎನ್ ಅವರು ಪ್ರಾರಂಭಿಕವಾಗಿ ಮಾತನಾಡಿ, ಕಾಶ್ಮೀರ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ವಿವರಿಸುತ್ತಾ, ಕಾಶ್ಮೀರದ ಪಂಡಿತರು ಕಾಲಕ್ರಮೇಣ ಕೊಂಕಣದ ಪರಶುರಾಮ ಕ್ಷೇತ್ರದಲ್ಲಿ ಹೇಗೆ ನೆಲೆಸಿದರು ಎಂಬುದನ್ನು ವಿವರಿಸಿದರು. 

ಕಾಶ್ಮೀರದ ನೆಲದಲ್ಲಿ ಕನ್ನಡದ ಜನಪದ‌ ಸಂಸ್ಕೃತಿಯ ಡೋಲು ಕುಣಿತ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಆರ್.ಸಂಪತ್ ರಾಜ್ ರವರು ಮಾತನಾಡಿ, ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವವನ್ನು ದೇಶದ ಸ್ವಿಜರ್ ಲ್ಯಾಂಡ್ ಎಂದೆನಿಸಿದ ಜಮ್ಮು ಮತ್ತು ಕಾಶ್ಮೀರದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಐತಿಹಾಸಿಕ ಕ್ಷಣ. ಕಾಶ್ಮೀರ ದೇಶದ ಮುಕುಟಪ್ರಾಯವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವದ ಹೂಡಿಕೆದಾರರು ಭಾರತದಲ್ಲಿ ಮೊದಲು ನೋಡುವುದು ದೆಹಲಿಯಲ್ಲ, ಬೆಂಗಳೂರನ್ನು ಎಂಬ ಮಾತನ್ನು ನೆನಪಿಸಿಕೊಂಡರು. ಉಗ್ರವಾದದಿಂದ ಭಯದ ವಾತಾವರಣವಿದ್ದರೂ ಪಹಲ್ಗಾಮ್ ನಲ್ಲಿ ಜಿಬಿಎ ಅಧಿಕಾರಿ ಮತ್ತು ನೌಕರರ ಸಂಘದ ಸದಸ್ಯರು ಇಲ್ಲಿಗೆ ಆಗಮಿಸಿ ಕಾರ್ಯಕ್ರಮ ಆಯೋಜಿಸಿದ ಕನ್ನಡದ ಕೆಚ್ಚದೆಯ ವ್ಯಕ್ತಿಗಳು ಎಂದರು.

ಪೆಹಲ್ಗಾಮ್ ನಲ್ಲಿ ಯಶಸ್ವೀ ಕಾರ್ಯಕ್ರಮದ ಮೂಲಕ ದೇಶಕ್ಕೆ ಸಂದೇಶ ರವಾನೆಯಾಗಿದೆ :

ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಏ.22ರಂದು ಭಯೋತ್ಪಾದಕರು ನಮ್ಮ ದೇಶದ ಪೆಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ನಡೆಸಿದ ನರಮೇಧದಿಂದ ಸಾಕಷ್ಟು ದುಖಃ ಹಾಗೂ ಇಲ್ಲಿನ‌ ನೆಲದಲ್ಲಿ ಪ್ರವಾಸಿಗರಿಗೆ ಭಯದ ವಾತಾವರಣ ನಿರ್ಮಾಣ ಮಾಡುವ ಅವರ ಉದ್ದೇಶದ ಬಗ್ಗೆ ಸಾಕಷ್ಟು ಕೋಪವಿತ್ತು. ಹಾಗಾಗಿ ಆಗಲೇ ಈ ಬಾರಿ ಪೆಹಲ್ಗಾಮ್ ನಲ್ಲಿ ಸಂಘದ ವತಿಯಿಂದ ರಾಷ್ಟ್ರಮಟ್ಟದ ಕನ್ನಡ ರಾಜ್ಯೋತ್ಸವವನ್ನು‌ ನಡೆಸಲು ತೀರ್ಮಾನಿಸಿ ಅದರಂತೆ ಅದನ್ನು ನ.22ರಂದು ಯಶಸ್ವಿಗೊಳಿಸಿದ್ದೇವೆ” ಎಂದು ಅವರು ಹೇಳಿದರು.

ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾಧ್ಯಮಗಳ ಜೊತೆ ಮಾತನಾಡಿದರು.

“ಇದರ ಯಶಸ್ಸು ಸಂಘದ ಪ್ರತಿಯೊಬ್ಬ ಸದಸ್ಯರು, ಪೆಹಲ್ಗಾಮ್ ಪೊಲೀಸರು, ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಮತ್ತಿತರಿಗೆ ಸಲ್ಲುತ್ತದೆ. ಕೆಚ್ಚೆದೆಯ ಕನ್ನಡಿಗರು ಯಾರಿಗೂ ಹೆದರದೆ ಇಲ್ಲಿ ಕಾರ್ಯಕ್ರಮ ನಡೆಸಿ ಇಡೀ ದೇಶಕ್ಕೆ ಇಲ್ಲಿನ ಸುರಕ್ಷತೆಯ ಪ್ರವಾಸೋದ್ಯಮದ ಬಗ್ಗೆ ಸಂದೇಶ‌‌ ರವಾನೆಯಾದಂತಾಗಿದೆ” ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಪ್ರಧಾನ ಭಾಷಣ ಮಾಡುತ್ತಾ, ಏ.22 ರಂದು ಪೆಹಲ್ಗಾಮ್ ನಲ್ಲಿ 26 ರಂದು ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಅಮಾಯಕರ ಮೃತಪಟ್ಟವರಿಗಾಗಿ ನುಡಿನಮನ ಹಾಗೂ ಅವರ ಕುಟುಂಬದವರಲ್ಲಿ ಭರವಸೆ ಮೂಡಿಸಲು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಇತಿಹಾಸದ ಪುಟ ಸೇರಿತು. ಇದೇ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದ್ದು ನಿಜಕ್ಕೂ ಯತೋಚಿತವಾಗಿದೆ. ಕನ್ನಡದ ಕಾರ್ಯಕ್ರಮ ಇಲ್ಲಿ ಯಶಸ್ವಿಯಾಗುವ ಮೂಲಕ ದೇಶಕ್ಕೆ ಪೆಹಲ್ಗಾಮ್ ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದರು.

ಪಹಲ್ಗಾಮ್ ಪ್ರಕರಣದಲ್ಲಿ ಬಲಿಯಾದವರಿಗೆ ನುಡಿನಮನ ಹಾಗೂ ಒಂದು ನಿಮಿಷ ಮೌನಾಚರಣೆ ಕೈಗೊಂಡಾಗಿನ ದೃಶ್ಯ.

ಮಾಜಿ ಮೇಯರ್ ಗೌತಮ್ ಮಾತನಾಡಿ, ವ್ಯವಸ್ಥಿತವಾಗಿ ಪ್ರಥಮ ಬಾರಿಗೆ 2022ರಲ್ಲಿ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ 2023ರಲ್ಲಿ ನೇಪಾಳದ ಪಶುಪತಿ ದೇವಾಲಯ ಸನ್ನಿಧಾನದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು 2024ರಲ್ಲಿ ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈಗ ನಾಲ್ಕನೇ ಬಾರಿ ರಾಜ್ಯದ ಹೊರಗೆ ಯಶಸ್ವಿಯಾಗಿ ಪೆಹಲ್ಗಾಮ್ ನಲ್ಲಿ ಕನ್ನಡದ ಕಂಪನ್ನು ಹರಿಸಿದ್ದಾರೆ. ಸಂಘದ ಅಧ್ಯಕ್ಷ ಅಮೃತ್ ರಾಜ್ ನೇತೃತ್ವದಲ್ಲಿ ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಹಾಗೂ ಪೆಹಲ್ಗಾಮ್ ನಲ್ಲಿ ಮಡಿದವರಿಗೆ ನುಡಿನಮನ ಕೈಗೊಳ್ಳಲಾಗಿದೆ. ಇದು ಹೆಮ್ಮೆಯ ವಿಷಯ ಎಂದರು.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗರವರು, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಕರ್ನಾಟಕದ ಹೊರಗೆ ಕನ್ನಡದ ರಾಜ್ಯೋತ್ಸವವನ್ನು‌ ಆಯೋಜಿಸುವ ಅವಶ್ಯಕತೆ ಬಗ್ಗೆ ಹಿಂದೆ ಕರ್ನಾಟಕ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿಗಳು ಆ ಬಗ್ಗೆ ಪ್ರಶ್ನಿಸಿದ್ರು. ಅವರಿಗೆ ಈಗ ಉತ್ತರ ಸಿಕ್ಕಿದೆ. ದೇಶದಲ್ಲಿ ಮೊದಲ ಬಾರಿಗೆ ಅಧಿಕೃತ ಬಾವುಟ, ಅಧಿಕೃತ ನಾಡಗೀತೆ ಆಗಿರೋದು ಕನ್ನಡದಲ್ಲಿ. ಕನ್ನಡ ನಾಡಿನ ಶಕ್ತಿ, ಸೌಂದರ್ಯ ಹಾಗೂ ಪ್ರಕೃತಿ ಸೊಬಗಿನ ಬಗ್ಗೆ ಹೊರ ರಾಜ್ಯದ ಮಾಲ್ ಗಳಲ್ಲಿ‌ ಪ್ರವಾಸೋದ್ಯಮ ಇಲಾಖೆ ಪ್ರಚುರಪಡಿಸಬೇಕಿದೆ ಎಂದರು. 

ಪಹಲ್ಗಾಮ್ ಕೃತ್ಯ ನಡೆಸಿದ ಭಯೋತ್ಪಾಕರ ನೀಚಕೃತ್ಯ ಹೇಯವಾದದ್ದು. ನಮ್ಮ ದೇಶದ ಸೇನೆ “ಆಪರೇಷನ್ ಸಿಂಧೂರ” ಮೂಲಕ ಭಯೋತ್ಪಾದಕರಿಗೆ ಉತ್ತರ ನೀಡಿದೆ. ಕರ್ನಾಢಕದ ಗಡಿಭಾಗದಲ್ಲಿ ಕನ್ನಡದಿಂದ ವಂಚಿತವಾಗುವುದನ್ನು ತಪ್ಪಿಸಲು ರಾಜ್ಯಸರ್ಕಾರ ಇತರ ಭಾಷೆಗಳನ್ನು ನಿಲ್ಲಿಸಿ, ಕನ್ನಡಕ್ಕೆ ಶಾಲೆಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಕೀಲರಾದ ವಿ.ಶ್ರೀನಿವಾಸ್ ಮಾತನಾಡಿ, ನಮ್ಮ ಜಿಬಿಎ ಪಾಲಿಕೆ ನೌಕರರ ಸಂಘ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಇತರ ರಾಜ್ಯಗಳು ಕಾಶ್ಮೀರದಲ್ಲಿ ಕಾರ್ಯಕ್ರಮ ಆಯೋಜಿಸಿ ಕಾಶ್ಮೀರ ಭಾರತದ ಅಂಗ ಎಂಬ ಸಂದೇಶ ರವಾನಿಸಿಬೇಕು ಎಂದು ಕರೆ ನೀಡಿದರು, ಲಗಾಯಕಿ ಅನುರಾಧ ಭಟ್ ಮಾತನಾಡಿದರು.

ಪೆಹಲ್ಗಾಮ್ ಡಿವೈಎಸ್ ಪಿ ಪೆಹಲ್ಗಾಮ್ ಫಾರೂಕ್, ಇಲ್ಲಿನ ಕಾರ್ಯಕ್ರಮ ಬಹಳ ಸೊಗಸಾಗಿತ್ತು.‌ ಪಹಲ್ಗಾಮ್ ಬಲಿಯಾದವರಿಗೆ ನುಡಿನಮನ ಆಯೋಜಿಸಿದ್ದಕ್ಕಾಗಿ ತಮಗೆಲ್ಲಾ ಅಭಿನಂದನೆ. ನಾವು ಪೊಲೀಸರು ಭದ್ರತೆಗೆ ಫೀಲ್ಡ್ ನಲ್ಲಿದ್ದರೂ, ಈ ಕಾರ್ಯಕ್ರಮ ನಮ್ಮ ಮನಸೂರೆಗೊಂಡಿತು. ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದೇನೆ ಎಂದರು.

ಇನ್ಸೆಪೆಕ್ಟರ್ ಪರ್ವೇಜ್ ಅಹ್ಮದ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

ಕಾರ್ಮಿಕ ಕಾನೂನುಗಳಲ್ಲಿ ಐತಿಹಾಸಿಕ ಬದಲಾವಣೆ: 29 ಹಳೆಯ ಕಾಯ್ದೆಗಳ ಬದಲಿಗೆ ನಾಲ್ಕು ಹೊಸ ಸಂಹಿತೆ ಜಾರಿ : ಕಾರ್ಮಿಕರಿಗೆ ಹೇಗೆ ಅನುಕೂಲ?

Next Post

Video News | ಕಾಶ್ಮೀರದ ಪೆಹಲ್ಗಾಮ್ ನಿಂದ ಬೆಂಗಳೂರು ವೈರ್ Reporting : ಭಯೋತ್ಪಾದನಾ ದಾಳಿಯಿಂದ ಕಂಗೆಟ್ಟಿದ್ದ ಸ್ಥಳದ ಪರಿಸ್ಥಿತಿಯ ಸಾಕ್ಷಾತ್ ವರದಿ

Next Post

Video News | ಕಾಶ್ಮೀರದ ಪೆಹಲ್ಗಾಮ್ ನಿಂದ ಬೆಂಗಳೂರು ವೈರ್ Reporting : ಭಯೋತ್ಪಾದನಾ ದಾಳಿಯಿಂದ ಕಂಗೆಟ್ಟಿದ್ದ ಸ್ಥಳದ ಪರಿಸ್ಥಿತಿಯ ಸಾಕ್ಷಾತ್ ವರದಿ

BW Special Report | ಕಾಶ್ಮೀರದ ಮೋಡಿ: ಎಬಿಸಿ ಕಣಿವೆಗಳ ಸೌಂದರ್ಯ ಮತ್ತು ಗುಲ್ಮಾರ್ಗ್ ರೋಪ್‌ವೇ ರೋಮಾಂಚನ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group