Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

    BDA News | ಉದ್ಯಾನ ನಗರಿ ಮರುಸೃಷ್ಟಿಗೆ ಬಿಡಿಎ ಹೊಸ ಹೆಜ್ಜೆ: ‘ಗ್ರೀನ್ ಬೆಂಗಳೂರು’ ಜಾಲತಾಣ ಲೋಕಾರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Big Breaking | GBA News | ಗ್ರೇಟರ್ ಬೆಂಗಳೂರಿನಲ್ಲಿ ಹೊಸ ಆಡಳಿತ ವ್ಯವಸ್ಥೆ: 5 ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಪ್ರಕಟ

ಬಿಬಿಎಂಪಿ ಅಸ್ತಿತ್ವ ಅಂತ್ಯ; ಹೊಸ ವಾರ್ಡ್ ವಿಂಗಡಣೆ ಪ್ರಕ್ರಿಯೆ ಆರಂಭ

by Bengaluru Wire Desk
September 2, 2025
in Bengaluru Focus, Public interest
Reading Time: 2 mins read
0

ಬೆಂಗಳೂರು, ಸೆ.02 www.bengaluruwire.com : ರಾಜ್ಯ ಸರ್ಕಾರವು ಅಂತು ಇಂತೂ ಅಂತಿಮವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ಅಡಿಯಲ್ಲಿ ಇಂದು (ಸೆಪ್ಟೆಂಬರ್  2) ಅಧಿಕೃತವಾಗಿ ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ಅಧಿಕೃತವಾಗಿ ರಚಿಸಿ ಅಂತಿಮ ಆದೇಶ ಹೊರಡಿಸಿದೆ.

ಆ ಮೂಲಕ 18 ವರ್ಷಗಳ ಹಿಂದೆ ರಚಿಸಲಾಗಿದ್ದ ಬಿಬಿಎಂಪಿಯು ತನ್ನ ಅಸ್ಥಿತ್ವ ಕಳೆದುಕೊಂಡು ಪೂರ್ಣ ಪ್ರಮಾಣದಲ್ಲಿ ಜಿಬಿಎ ಆಡಳಿತ ಇಂದಿನಿಂದ ಜಾರಿಗೆ ಬಂದಂತಾಗಿದೆ. ಇದರೊಂದಿಗೆ, 2008ರಲ್ಲಿ ಸ್ಥಾಪನೆಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಸ್ತಿತ್ವಕ್ಕೆ ತೆರೆ ಬಿದ್ದಿದ್ದು, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 (2025ರ ಕರ್ನಾಟಕ ಕಾಯ್ದೆ ಸಂಖ್ಯೆ 36) ಸಂಪೂರ್ಣವಾಗಿ ಜಾರಿಗೆ ಬಂದಿದೆ.

ಈ ಹೊಸ ಪಾಲಿಕೆಗಳು:

 * ಬೆಂಗಳೂರು ಕೇಂದ್ರ ನಗರ ಪಾಲಿಕೆ

 * ಬೆಂಗಳೂರು ಪೂರ್ವ ನಗರ ಪಾಲಿಕೆ

 * ಬೆಂಗಳೂರು ಪಶ್ಚಿಮ ನಗರ ಪಾಲಿಕೆ

 * ಬೆಂಗಳೂರು ಉತ್ತರ ನಗರ ಪಾಲಿಕೆ

 * ಬೆಂಗಳೂರು ದಕ್ಷಿಣ ನಗರ ಪಾಲಿಕೆ

ರಾಜ್ಯ ಸರ್ಕಾರವು ಐದು ನಗರ ಪಾಲಿಕೆಗಳ ಗಡಿಗಳನ್ನು ಗುರ್ತಿಸುವ ಬಗ್ಗೆ ಅಂತಿಮ ಅಧಿಸೂಚನೆಯ ಜೊತೆ ಜೊತೆಗೆ, ಆಯಾ ಐದು ನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ವಾರ್ಡ್ ಗಳ ರಚನೆ ಸಂಬಂಧ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿಯನ್ನು ಒಳಗೊಂಡ ವಾರ್ಡ್ ಗಳ ಪುನರ್ವಿಂಗಡನಾ ಆಯೋಗವನ್ನು 3 ತಿಂಗಳ ಅವಧಿಗೆ ಸೀಮಿತವಾಗಿ ರಚಿಸಿ ಅಧಿಸೂಚನೆ ಹೊರಡಿಸಿದೆ.

ವಾರ್ಡ್ ಪುನರ್ವಿಂಗಡಣೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ :

ಐದು ನಗರ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್‌ಗಳ ಪುನರ್ವಿಂಗಡಣೆ ಪ್ರಕ್ರಿಯೆಗಾಗಿ ಸರ್ಕಾರವು ಮಾರ್ಗಸೂಚಿಗಳನ್ನು ರಚಿಸಿ ಆದೇಶಿಸಿದೆ. ಈ ಉದ್ದೇಶಕ್ಕಾಗಿ, ವಾರ್ಡ್‌ಗಳ ಪುನರ್ವಿಂಗಡಣಾ ಆಯೋಗವನ್ನು ಮೂರು ತಿಂಗಳ ಅವಧಿಗೆ ರಚಿಸಲಾಗಿದೆ.

ವಾರ್ಡ್ ವಿಂಗಡಣೆಯ ಪ್ರಮುಖ ಮಾರ್ಗಸೂಚಿಗಳು:

 * ಜನಸಂಖ್ಯೆ: ವಾರ್ಡ್‌ಗಳ ಜನಸಂಖ್ಯೆಯು ಸಾಧ್ಯವಾದಷ್ಟು ಸಮಾನವಾಗಿರಬೇಕು. ಹಿಂದಿನ ಜನಗಣತಿಯ (2011) ಪ್ರಕಾರ, ಪ್ರತಿ ವಾರ್ಡ್‌ನಲ್ಲಿ ಸರಾಸರಿ ಜನಸಂಖ್ಯೆಯನ್ನು 20,000 ಎಂದು ನಿರ್ಧರಿಸಲಾಗಿದೆ. ಜನಸಾಂದ್ರತೆಯ ವ್ಯತ್ಯಾಸದಿಂದಾಗಿ, ಪ್ರತಿ ನಗರ ಪಾಲಿಕೆಯ ವಾರ್ಡ್‌ನಲ್ಲಿನ ಸರಾಸರಿ ಜನಸಂಖ್ಯೆಯು 20,000ದ ±25%ರ ಒಳಗೆ ಇರಬೇಕು. ಒಂದು ನಗರ ಪಾಲಿಕೆಯಲ್ಲಿ ವಾರ್ಡ್‌ಗಳ ಸಂಖ್ಯೆ 150ಕ್ಕಿಂತ ಹೆಚ್ಚಿರಬಾರದು.

 * ಭೌಗೋಳಿಕ ಗಡಿಗಳು: ವಾರ್ಡ್‌ಗಳನ್ನು ವಿಧಾನಸಭೆ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯೊಳಗೆ ವಿಂಗಡಿಸಬೇಕು ಮತ್ತು ಒಂದು ವಾರ್ಡ್ ಇತರ ವಿಧಾನಸಭಾ ಕ್ಷೇತ್ರಗಳಿಗೆ ವ್ಯಾಪಿಸಬಾರದು. ಅವು ಭೌಗೋಳಿಕವಾಗಿ ದಟ್ಟವಾದ ಪ್ರದೇಶಗಳಾಗಿರಬೇಕು ಮತ್ತು ಮರುವಿಂಗಡಣೆ ಮಾಡುವಾಗ ಭೌತಿಕ ಲಕ್ಷಣಗಳು, ಸಂವಹನ ಸೌಲಭ್ಯಗಳು, ಮತ್ತು ಸಾರ್ವಜನಿಕರ ಅನುಕೂಲತೆಗಳನ್ನು ಪರಿಗಣಿಸಬೇಕು.

ಕಾಲಮಿತಿ: ಅಂತಿಮ ಅಧಿಸೂಚನೆ ನವೆಂಬರ್ 1ರೊಳಗೆಸರ್ಕಾರವು ವಾರ್ಡ್‌ಗಳ ರಚನೆಗೆ ಕಾಲಾನುಕ್ರಮಣಿಕೆಯನ್ನು ನಿಗದಿಪಡಿಸಿದೆ.

ವಾರ್ಡ್‌ಗಳ ಪುನರ್ವಿಂಗಡಣಾ ಆಯೋಗವು ವಾರ್ಡ್ ಗಳ ರಚನೆ ಬಗ್ಗೆ ಮೂರು ವಾರಗಳಲ್ಲಿ (ಸೆ.23) ಸರ್ಕಾರಕ್ಕೆ ವಾರ್ಡುಗಳ ರಚನಾ ವರದಿಯನ್ನು ಸಲ್ಲಿಕೆ ಮಾಡಲಿದೆ. ಸರ್ಕಾರದಿಂದ (ಸೆ.26) ಕರಡು ವರದಿ ಪ್ರಕಟ, ಸಲಹೆ, ಅಕ್ಷೇಪಣೆಗಳಿಗೆ ಎರಡು ವಾರಗಳ ಕಾಲಾವಧಿ (ಅ.10), ವಾರ್ಡ್ ಪುನರ್ವಿಂಗಡಣಾ ಆಯೋಗವು ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಶಿಫಾರಸ್ಸನ್ನು ಸರ್ಕಾರಕ್ಕೆ (ಅ.17) ಸಲ್ಲಿಕೆ ಮಾಡಲಿದೆ. ಅಂತಿಮವಾಗಿ 5 ನಗರ ಪಾಲಿಕೆಗಳ ವಾರ್ಡ್ ರಚನೆ ಬಗ್ಗೆ ನವೆಂಬರ್ 11ರ ಒಳಗಾಗಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ.

ಇಂದು ಐದು ನಗರ ಪಾಲಿಕೆ ರಚನೆ ಕುರಿತಂತೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ನೂತನ ಜಿಬಿಎ ಆಡಳಿತ ಪ್ರಕ್ರಿಯೆ ಹಂತ ಹಂತವಾಗಿ ಅನುಷ್ಠಾನವಾಗಲಿದೆ.

ಬೆಂಗಳೂರಿಗೆ ಇಂದು ಐತಿಹಾಸಿಕ ದಿನ : ಡಿಸಿಎಂ

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು‌ ಮಾತನಾಡಿದ‌ ಉಪ ಮಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಮಹಾನಗರ ಪಾಲಿಕೆ ಬೆಂಗಳೂರಿನ ಹೆಸರನ್ನು ಇಟ್ಟುಕೊಂಡೇ ಇಂದು ಅಸ್ತಿತ್ವಕ್ಕೆ ಬಂದಿದೆ. ಆ ಮೂಲಕ ಐತಿಹಾಸಿಕ ದಿನಕ್ಕೆ ಬೆಂಗಳೂರಿನ ಜನತೆ ಸಾಕ್ಷಿಯಾಗಿದ್ದಾರೆ. ಈಗ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಲ್ಲಿನ ಆಡಳಿತಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಕಾನೂನಿನಲ್ಲೇ ಬೆಂಗಳೂರು ಹೆಸರಿಗೆ ಧಕ್ಕೆಯಾಗದಂತೆ ಅವಕಾಶ ಮಾಡಿಕೊಳ್ಳಲಾಗಿದೆ. ಸೆ.02 ರ ಒಳಗಾಗಿ ಐದು ಮಹಾನಗರ ಪಾಲಿಕೆ ಅಧಿಸೂಚನೆ ಹೊರಡಿಸಲಾಗಿದೆ. ನ.01 ಒಳಗಾಗಿ ವಾರ್ಡ್ ಪುನರ್ವಿಂಗಡಣೆ, ವಾರ್ಡ್ ಮೀಸಲಾತಿ ನಿಗದಿತ ಅವಧಿಯೊಳಗೆ ಅಧಿಸೂಚನೆ ಮಾಡುತ್ತೇವೆ ಎಂದು ಸುಪ್ರೀಂಕೋರ್ಟಿಗೆ ಸರ್ಕಾರ ತಿಳಿಸಿದೆ ಎಂದರು.

ಯಾವುದೇ ನಗರ ಪಾಲಿಕೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಆಯುಕ್ತರನ್ನು ನೇಮಕ ಮಾಡಿದ್ದೇವೆ. ಹೆಚ್ಚುವರಿ ಆಯುಕ್ತರು ಐಎಎಸ್ ಅಧಿಕಾರಿ ಇರಲಿದ್ದಾರೆ. ಇಂದಿನಿಂದ ಸಂಗ್ರಹವಾಗುವ ಆಸ್ತಿ ತೆರಿಗೆ, ಕಂದಾಯವನ್ನು ಆಯಾ ನಗರ ಪಾಲಿಕೆಗಳಿಗೆ ಸೇರಲಿದೆ.

ಒಂದೊಂದು ಕಾರ್ಪೊರೇಷನ್ ಗೆ ಗರಿಷ್ಠ 150 ವಾರ್ಡ್ ರಚಿಸಲು ಅವಕಾಶವಿದೆ. ತಲಾ 100 ವಾರ್ಡ್ ಗಳಂತೆ ಎಲ್ಲಾ ನಗರ ಪಾಲಿಕೆ ಸೇರಿದಂತೆ 500 ಕಾರ್ಪೊರೇಟರ್ ಗಳನ್ನು ಅವಕಾಶ ಮಾಡಿಕೊಡಲಿದ್ದೇವೆ. ಮಹಿಳೆಯರಿಗೂ  ಕಾರ್ಪೊರೇಟರ್ ಆಗಿ ಸ್ಪರ್ಧಿಸಲು ಅವಕಾಶ ನೀಡುತ್ತೇವೆ. ಜಿಬಿಎ ಮೆಗಾ ಪ್ರಾಜೆಕ್ಟ್ ನಿರ್ವಹಿಸಲಿದೆ. ಜಿಬಿಎ ಕೆಳಗಿನ ನಗರ ಪಾಲಿಕೆ ಚುನಾವಣೆ 2011 ಜನಗಣತಿಯಂತೆ 20,000 ಕನಿಷ್ಠ ಜನಸಂಖ್ಯೆಯಂತೆ ಒಂದರಂತೆ ವಾರ್ಡ್ ರಚನೆಯಾಗಲಿದೆ.

ಜಿಬಿಎ ಪ್ರದೇಶ ವ್ಯಾಪ್ತಿ ವಿಸ್ತರಿಸಲು ಕಾನೂನಿನಲ್ಲಿ ಆವಕಾಶ ಮಾಡಿಕೊಟ್ಟಿದೆ. ಸದ್ಯ ಬಿಬಿಎಂಪಿ ಪ್ರದೇಶದ ವ್ಯಾಪ್ತಿಯೊಳಗೆ ವಾರ್ಡ್ ರಚನೆಯಾಗಲಿದೆ.  ನಾನು ರಾಜಕಾರಣ ಅವಕಾಶಕ್ಕಾಗಿ, ಲಾಭಕ್ಕಾಗಿ ಜಿಬಿಎ ಅಥವಾ ಐದು ನಗರ ಪಾಲಿಕೆ ರಚನೆ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಕೆಲವೊಂದು ನಗರ ಪಾಲಿಕೆಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಾಗಿದೆ ಅಂತ ಅದನ್ನು ಬೇರೆ ನಗರ ಪಾಲಿಕೆಗಳಿಗೆ ಸೇರಿಸಲಾಗುವುದಿಲ್ಲ ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿದರು.

ಐದು ನಗರ ಪಾಲಿಕೆಗಳಿಗೆ ನ.1 ಸ್ವಂತ ಕಟ್ಟಡ ಕಟ್ಟಲು ಶಂಕುಸ್ಥಾಪನೆ :

ನವೆಂಬರ್ 1 ರಂದು ಐದು‌ ನಗರ ಪಾಲಿಕೆಗಳಿಗೆ ಸ್ವಂತ ಕಟ್ಟಡಗಳನ್ನು ಕಟ್ಟಲು ಸೂಕ್ತ ಜಾಗಕ್ಕೆ ಸ್ಥಳ ಗುರ್ತಿಸಿದ್ದೇವೆ. ಅಂದು ಭೂಮಿ ಪೂಜೆ ನಡೆಸುತ್ತೇವೆ. ಬಿಬಿಎಂಪಿ ಕಟ್ಟಡದಂತೆ ಪಾರಂಪರಿಕ ಕಟ್ಟಡ ವಿನ್ಯಾಸದಂತೆ ಅಪರೂಪದ ಕಟ್ಟಡಕ್ಕೆ ಸಾರ್ವಜನಿಕರು, ತಂತ್ರಜ್ಞರು ಸಲಹೆ ಸೂಚನೆ ನೀಡಬಹುದು. ಜಿಬಿಎ ಹಾಗೂ ಐದು‌ ನಗರ ಪಾಲಿಕೆ ಲೋಗೋಗಳ ವಿನ್ಯಾಸವನ್ನು ಸಾರ್ವಜನಿಕರು ನೀಡಬಹುದು. 

WhatsApp Join our WhatsApp Channel
Previous Post

BW SPECIAL | GBA News | ಬಿಬಿಎಂಪಿ 291 ಬ್ಯಾಂಕ್ ಖಾತೆಗಳನ್ನು ಹಂತ ಹಂತವಾಗಿ ಮುಚ್ಚಲು ಸರ್ಕಾರದ ಆದೇಶ: ಆಡಳಿತ ಪುನರ್ರಚನೆಯ ಮೊದಲ ಹೆಜ್ಜೆ

Next Post

GBA News | ಗ್ರೇಟರ್ ಬೆಂಗಳೂರು ಪ್ರಾಧಿಕಾರ ಫಲಕ ಅಳವಡಿಕೆ, ಐದು ಹೊಸ ನಗರ ಪಾಲಿಕೆಗಳಿಗೆ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರ ನೇಮಕ

Next Post

GBA News | ಗ್ರೇಟರ್ ಬೆಂಗಳೂರು ಪ್ರಾಧಿಕಾರ ಫಲಕ ಅಳವಡಿಕೆ, ಐದು ಹೊಸ ನಗರ ಪಾಲಿಕೆಗಳಿಗೆ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರ ನೇಮಕ

ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಇರಲಿ ಎಚ್ಚರಿಕೆ: ಆರೋಗ್ಯ ವಿಮೆ ಇದ್ದವರು, ಇಲ್ಲದವರು ಹಣಕಾಸಿನ ಸಂಕಷ್ಟದಿಂದ ಪಾರಾಗಲು ಇಲ್ಲಿದೆ ಮಾರ್ಗದರ್ಶಿ

Please login to join discussion

Like Us on Facebook

Follow Us on Twitter

Recent News

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

June 12, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

June 12, 2026

Human Interest Story | ಕೇವಲ 3 ನಿಮಿಷ ನಿದ್ದೆಗೆ ಜಾರಿದ, ಕಸಿದಿತ್ತು 8 ವರ್ಷದ ಘನತೆ: ಇದು ರಾತ್ರಿ ಕಾವಲುಗಾರನೊಬ್ಬನ ಮನಕಲಕುವ ಕಥೆ

June 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group