Friday, July 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

    Energy News | ರಾಜ್ಯದಲ್ಲಿ ಮಳೆ ಕೊರತೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ

    ಎಲ್ ನಿನೋ ಭೀತಿ: ಬರ ಎದುರಿಸಲು ಕರ್ನಾಟಕ ಸರ್ಕಾರದ ‘ಮಾಸ್ಟರ್ ಪ್ಲಾನ್’ ಏನು?

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ ರಚನೆ, ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್: ಸಚಿವ ಯು.ಟಿ. ಖಾದರ್

    ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ: ಕೇಂದ್ರದ ಸಿಜಿಹೆಚ್ಎಸ್ (CGHS) ಪರಿಷ್ಕೃತ ದರಗಳ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶ

    ಉಡುಪಿಯ ಕೋಟದಲ್ಲಿ ಸರ್ವರ್ ಸಮಸ್ಯೆಯಿಂದ ಸಾಲಿನಲ್ಲಿ ನಿಂತರೂ ಪಡಿತರ ಪಡೆಯಲು ಆಗದೆ ಅಸಹಾಯಕರಾಗಿ ನಿಂತ ಪಡಿತರ ಚೀಟಿದಾರರು

    Lokayukta News | ರಾಜ್ಯದ ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

    Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

  • Bengaluru Focus

    KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ₹5,000 ದಂಡ ಏರಿಕೆ ಮಾಡಿ, ನಿಯಮ ಬಿಗಿಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಪತ್ರ

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್ ವರದಿ ಹಿನ್ನಲೆ: ಶಿವಾಜಿನಗರ ಪಾದಾಚಾರಿ ಮಾರ್ಗ ಒತ್ತುವರಿ ತೆರವು: ಪಾಲಿಕೆ ಅಧಿಕಾರಿಗಳ ಮೇಲೆ ಪುಂಡರ ಅಟ್ಯಾಕ್ ಅಕ್ಷಮ್ಯ!!

    Namma Metro Green Train

    Namma Metro News | ನಮ್ಮ ಮೆಟ್ರೋ ಹಸಿರು ಮಾರ್ಗ: ವಿದ್ಯುತ್ ವ್ಯತ್ಯಯ ಸರಿಪಡಿಸಿದ ಬೆನ್ನಲ್ಲೇ ಸೇವೆ ಪುನರಾರಂಭ

    BWSSB News | ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ಬುಧವಾರ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ರಾಜ್ಯಕ್ಕೆ 1,122 ಹೊಸ ವೈದ್ಯಕೀಯ ಸೀಟುಗಳ ಬಂಪರ್; ‘ನೀಟ್’ ರದ್ದತಿಗೆ ಸರ್ಕಾರದ ಬಲವಾದ ಆಗ್ರಹ

ಕೇಂದ್ರದಿಂದ ಒಪ್ಪಿಗೆಯ ಮುದ್ರೆ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹರ್ಷ; ಗ್ರಾಮೀಣ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಕೆಇಎ ಮೂಲಕ ಹಳೇ ಸಿಇಟಿ ಮಾದರಿ ಮರುಜಾರಿಗೆ ಒತ್ತಾಯ

by Bengaluru Wire Desk
May 16, 2026
in News Wire, Public interest
Reading Time: 1 min read
0

ಬೆಂಗಳೂರು, ಮೇ.16 www.bengaluruwire.com: ರಾಜ್ಯದ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಅತ್ಯಂತ ಸಂತಸದ ಸುದ್ದಿಯೊಂದು ಸಿಕ್ಕಿದೆ. ಕರ್ನಾಟಕದಲ್ಲಿ ವೈದ್ಯಕೀಯ ಪದವಿ (MBBS) ಹಾಗೂ ಸ್ನಾತಕೋತ್ತರ ಪದವಿ (PG) ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೇ 15 ರಂದು ಅಂತಿಮ ಮುದ್ರೆ ಒತ್ತಿದೆ. 

ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಒಟ್ಟು 1,122 ಯುಜಿ ಮತ್ತು ಪಿಜಿ ಸೀಟುಗಳು ಲಭ್ಯವಾಗಲಿವೆ. ​ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ, ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 72 ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ 13,945 ಯುಜಿ ಹಾಗೂ 7,727 ಪಿಜಿ ಸೀಟುಗಳು ಲಭ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ. 

ಇದೀಗ ಕೇಂದ್ರ ಸರ್ಕಾರದ “ಭಾರತದಲ್ಲಿನ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳ ಬಲವರ್ಧನೆ ಮತ್ತು ಮೇಲ್ದರ್ಜೆಗೇರಿಸುವಿಕೆ” ಯೋಜನೆಯಡಿ ಸೀಟುಗಳ ಹೆಚ್ಚಳಕ್ಕೆ ನಮ್ಮ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರನ್ವಯ 11 ವೈದ್ಯಕೀಯ ಸಂಸ್ಥೆಗಳಲ್ಲಿ 550 ಎಂಬಿಬಿಎಸ್ (UG) ಸೀಟುಗಳು ಹಾಗೂ 23 ಸಂಸ್ಥೆಗಳಲ್ಲಿ 572 ಪಿಜಿ ಸೀಟುಗಳನ್ನು ಹೆಚ್ಚಿಸಲು ಅನುಮೋದನೆ ದೊರೆತಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

​ಪ್ರತಿ ಸೀಟು ಹೆಚ್ಚಳಕ್ಕೆ ತಗಲುವ 1.5 ಕೋಟಿ ರೂಪಾಯಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಭರಿಸಲಿವೆ. ಯುಜಿ ಸೀಟುಗಳ ಹೆಚ್ಚಳಕ್ಕಾಗಿ ಒಟ್ಟು 825 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರದ ಪಾಲು 495 ಕೋಟಿ ರೂ. ಹಾಗೂ ರಾಜ್ಯದ ಪಾಲು 330 ಕೋಟಿ ರೂ. ಆಗಿದೆ. 

ಅದೇ ರೀತಿ ಪಿಜಿ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ 20 ವೈದ್ಯಕೀಯ ಕಾಲೇಜುಗಳ 528 ಸೀಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಧನಸಹಾಯ ನೀಡಲಿವೆ. ಇನ್ನುಳಿದ 4 ಸ್ವತಂತ್ರ ಸ್ನಾತಕೋತ್ತರ ಸಂಸ್ಥೆಗಳ 44 ಪಿಜಿ ಸೀಟುಗಳಿಗೆ ಕೇಂದ್ರ ಸರ್ಕಾರವೇ ಶೇ. 100 ರಷ್ಟು ಸಂಪೂರ್ಣ ಧನಸಹಾಯ ನೀಡಲಿದೆ. ಈ ಪ್ರಕ್ರಿಯೆಯನ್ನು ಮುಂದುವರಿಸಲು ಶೀಘ್ರದಲ್ಲೇ ಒಪ್ಪಂದಕ್ಕೆ (MOU) ಸಹಿ ಹಾಕಲಾಗುವುದು ಮತ್ತು ಎಸ್‌ಎನ್‌ಎ-ಸ್ಪರ್ಶ್ (SNA-Sparsh) ಖಾತೆಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

​ನೀಟ್ (NEET-UG) ಪರೀಕ್ಷೆ ರದ್ದತಿಗೆ ಸಚಿವರ ಮತ್ತೊಮ್ಮೆ ಬಲವಾದ ಒತ್ತಾಯ:

​ಈ ಮಹತ್ವದ ವೈದ್ಯಕೀಯ ಸೀಟುಗಳ ಹೆಚ್ಚಳದ ಬೆನ್ನಲ್ಲೇ, ರಾಜ್ಯ ಸರ್ಕಾರವು ವೈದ್ಯಕೀಯ ಪ್ರವೇಶಾತಿ ಪ್ರಕ್ರಿಯೆಯಲ್ಲಿನ ಮತ್ತೊಂದು ದೊಡ್ಡ ಸುಧಾರಣೆಗೆ ಧ್ವನಿ ಎತ್ತಿದೆ. 2026ನೇ ಸಾಲಿನಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET-UG) ಸಂಪೂರ್ಣವಾಗಿ ರದ್ದುಪಡಿಸಬೇಕು ಮತ್ತು ರಾಜ್ಯಗಳಿಗೆ ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET) ನಡೆಸಲು ಮುಕ್ತ ಅವಕಾಶ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಬಲವಾಗಿ ಆಗ್ರಹಿಸಿದ್ದಾರೆ.

​ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಅತ್ಯಂತ ಪಾರದರ್ಶಕ, ನ್ಯಾಯಸಮ್ಮತ ಮತ್ತು ವಿದ್ಯಾರ್ಥಿ ಸ್ನೇಹಿ ರೀತಿಯಲ್ಲಿ ಹಳೆಯ ಸಿಇಟಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಕೇಂದ್ರ ಸರ್ಕಾರ ಕೂಡಲೇ ಕಾನೂನುಬದ್ಧ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

​ಕೆಇಎ ಮಾದರಿ ಅತ್ಯಂತ ವಿಶ್ವಾಸಾರ್ಹ ಮತ್ತು ಪಾರದರ್ಶಕ:

​ಕರ್ನಾಟಕವು ಕಳೆದ ಹಲವು ದಶಕಗಳಿಂದ ಕೆಇಎ ಪ್ರಾಧಿಕಾರದ ಮೂಲಕ ಅತ್ಯಂತ ಶಿಸ್ತುಬದ್ಧ ಹಾಗೂ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಿಕೊಂಡು ಬಂದ ಇತಿಹಾಸವನ್ನು ಹೊಂದಿದೆ. ರಾಜ್ಯದ ಈ ಸಿಇಟಿ ವ್ಯವಸ್ಥೆಯು ಗ್ರಾಮೀಣ, ಮಧ್ಯಮ ವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇದು ಕೇವಲ ಪರೀಕ್ಷೆಯಾಗಿರದೆ, ಶುದ್ಧ ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ಮನ್ನಣೆ ನೀಡುವ ಅತ್ಯಂತ ವಿಶ್ವಾಸಾರ್ಹ ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು.

​ಆದರೆ, ಪ್ರಸ್ತುತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತಿರುವ ‘ನೀಟ್’ ಪರೀಕ್ಷೆಯು ದೇಶಾದ್ಯಂತ ಭಾರೀ ವಿವಾದಗಳನ್ನು ಸೃಷ್ಟಿಸುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸುವುದು, ಸಂಘಟಿತ ಅಕ್ರಮ ಜಾಲಗಳು, ಅಂಕಗಳ ತಿರುಚಾಟ ಹಾಗೂ ತಾಂತ್ರಿಕ ದೋಷಗಳು ನಿರಂತರವಾಗಿ ಕೇಳಿಬರುತ್ತಿವೆ. ಇವೆಲ್ಲವೂ ನೀಟ್ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

​ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಮಾನಸಿಕ ಒತ್ತಡ: ಕೇಂದ್ರದ ವೈಫಲ್ಯ:

​ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆಯ ಸುತ್ತ ನಡೆದಿರುವ ಸಾಲು ಸಾಲು ಅಕ್ರಮಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಮಾನಸಿಕ ಒತ್ತಡ, ಆತಂಕ ಹಾಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡಿದೆ. ರಾಷ್ಟ್ರ ಮಟ್ಟದಲ್ಲಿ ಇಷ್ಟು ದೊಡ್ಡ ಪರೀಕ್ಷೆಯನ್ನು ದೋಷರಹಿತವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಕಟುವಾಗಿ ಟೀಕಿಸಿದರು.

​ವೈದ್ಯಕೀಯ ಕ್ಷೇತ್ರವು ದೇಶದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದೆ. ಇಂತಹ ಪವಿತ್ರ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಸಂಪೂರ್ಣ ಭ್ರಷ್ಟಾಚಾರರಹಿತವಾಗಿರಬೇಕು. ಈಗಾಗಲೇ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯಗಳ ಮೇಲೆ ಇಂತಹ ದೋಷಪೂರಿತ ಕೇಂದ್ರೀಕೃತ ವ್ಯವಸ್ಥೆಯನ್ನು ಬಲವಂತವಾಗಿ ಹೇರುವುದು ಸರಿಯಲ್ಲ. 

ರಾಜ್ಯಗಳ ಭಾಷಾ ವೈವಿಧ್ಯತೆ, ಪಠ್ಯಕ್ರಮ ಮತ್ತು ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳನ್ನು ಆಯಾ ರಾಜ್ಯ ಸರ್ಕಾರಗಳೇ ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲವು.

​ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಪಾತ್ರ ಮತ್ತು ಹಕ್ಕುಗಳನ್ನು ಗೌರವಿಸುವುದು ಭಾರತದ ಸಂವಿಧಾನದ ಫೆಡರಲ್ ವ್ಯವಸ್ಥೆಯ ಆತ್ಮವಾಗಿದೆ. ಈ ಹಿನ್ನೆಲೆಯಲ್ಲಿ ನೀಟ್ ರದ್ದುಪಡಿಸಿ ಸಿಇಟಿ ಮರುಜಾರಿಗೆ ತರಲು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಅಧಿಕೃತ ಪತ್ರ ಬರೆದಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಪರೀಕ್ಷಾ ಅವ್ಯವಸ್ಥೆಗಳ ಕಾರಣಕ್ಕೆ ಹಾಳುಮಾಡಲು ಬಿಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

WhatsApp Join our WhatsApp Channel
Previous Post

ಮಾಲಿನ್ಯಕ್ಕೆ ಬ್ರೇಕ್: ದೆಹಲಿಯಲ್ಲಿ ಇನ್ನು ಮುಂದೆ ಇ-ಆಟೋಗಳದ್ದೇ ಪಾರುಪತ್ಯ

Next Post

ಯುದ್ಧದ ಭೀತಿ ನಡುವೆ, ಹಾರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ ಎಲ್‌ಪಿಜಿ ಟ್ಯಾಂಕರ್, ನಿರಾಳವಾದ ಇಂಧನ ವಲಯ

Next Post

ಯುದ್ಧದ ಭೀತಿ ನಡುವೆ, ಹಾರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ ಎಲ್‌ಪಿಜಿ ಟ್ಯಾಂಕರ್, ನಿರಾಳವಾದ ಇಂಧನ ವಲಯ

ಬರ್ಮುಡಾ ಟ್ರಯಾಂಗಲ್ ರಹಸ್ಯ ಭೇದಿಸಿದ ವಿಜ್ಞಾನಿಗಳು: ಸಾಗರದ ಆಳದಲ್ಲಿದೆ ನಿಗೂಢ ಭೂವೈಜ್ಞಾನಿಕ ರಚನೆ!!!

Please login to join discussion

Like Us on Facebook

Follow Us on Twitter

Recent News

KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

July 23, 2026

ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

July 23, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

July 23, 2026

ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

July 23, 2026

ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

July 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group