Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

110 ವರ್ಷಗಳ ಇತಿಹಾಸದಲ್ಲಿ ಮೈಸೂರು ಸ್ಯಾಂಡಲ್ ಹೊಸ ಮೈಲುಗಲ್ಲು; ವಿಜಯಪುರ ಘಟಕಕ್ಕೆ ₹229 ಕೋಟಿ ಘೋಷಣೆ

by Bengaluru Wire Desk
April 28, 2026
in News Wire
Reading Time: 1 min read
0

ಬೆಂಗಳೂರು, ಏ.28 www.bengaluruwire.com: ನೂರತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಚಾರಿತ್ರಿಕ ಸಾಧನೆ ಮಾಡಿದೆ. 

2025-26ನೇ ಹಣಕಾಸು ವರ್ಷದಲ್ಲಿ ಸಂಸ್ಥೆಯು ₹2,016 ಕೋಟಿ ವಹಿವಾಟು ನಡೆಸುವ ಮೂಲಕ ಹೊಸ ವಿಕ್ರಮ ಸ್ಥಾಪಿಸಿದೆ. ಅಷ್ಟೇ ಅಲ್ಲದೆ, ₹507 ಕೋಟಿ ಲಾಭ ಗಳಿಸುವ ಮೂಲಕ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಮಾದರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

​ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ’ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಅರವಿಂದ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದರು.

​ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಸಾಧನೆ:

“ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟು ತಲುಪಲು 105 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ ಕೇವಲ ನಾಲ್ಕು ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ಗುರಿಯನ್ನು ತಲುಪಿರುವುದು ಶ್ಲಾಘನೀಯ. 2022-23ರಲ್ಲಿ ₹1,375 ಕೋಟಿ ಇದ್ದ ವಹಿವಾಟು, ಕಳೆದ ಮೂರು ವರ್ಷಗಳಲ್ಲಿ ₹2,016 ಕೋಟಿಗೆ ಏರಿಕೆಯಾಗಿದೆ. ಅಲ್ಪಾವಧಿಯಲ್ಲಿ ₹641 ಕೋಟಿ ಹೆಚ್ಚಳ ದಾಖಲಿಸಿರುವುದು ಸಂಸ್ಥೆಯ ದಕ್ಷತೆಗೆ ಸಾಕ್ಷಿ” ಎಂದು ಸಚಿವರು ವಿವರಿಸಿದರು.

​ಹೊಸ ಉತ್ಪನ್ನಗಳು ಮತ್ತು ಉತ್ಪಾದನಾ ಸಾಮರ್ಥ್ಯ:

“ಹಿಂದೆ ಕೇವಲ 34 ಉತ್ಪನ್ನಗಳಿದ್ದವು, ಕಳೆದ ಮೂರು ವರ್ಷಗಳಲ್ಲಿ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಪ್ರಸ್ತುತ 94 ಉತ್ಪನ್ನಗಳು ಕೆಎಸ್‌ಡಿಎಲ್ ಪಟ್ಟಿಯಲ್ಲಿವೆ. ಯಾವುದೇ ಹೊಸ ನೇಮಕಾತಿ ಅಥವಾ ಹೆಚ್ಚುವರಿ ಯಂತ್ರೋಪಕರಣಗಳಿಲ್ಲದೆ, ಪರಿಣಾಮಕಾರಿ ಕಾರ್ಯವೈಖರಿಯಿಂದ ಉತ್ಪಾದನಾ ಸಾಮರ್ಥ್ಯವನ್ನು 26 ಸಾವಿರ ಮೆಟ್ರಿಕ್ ಟನ್‌ನಿಂದ 47 ಸಾವಿರ ಮೆಟ್ರಿಕ್ ಟನ್‌ಗೆ ಏರಿಸಲಾಗಿದೆ” ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಲಾಭದ ಮೊತ್ತದಲ್ಲಿ ₹157 ಕೋಟಿ ಡಿವಿಡೆಂಡ್ ಹಾಗೂ ಸಿಎಂ ಪರಿಹಾರ ನಿಧಿಗೆ ₹5 ಕೋಟಿ ನೀಡಲಾಗುವುದು ಎಂದರು.

​2030ಕ್ಕೆ ₹5 ಸಾವಿರ ಕೋಟಿ ಗುರಿ:

ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್ ಮೂಲಕ ಕ್ರಮವಾಗಿ ₹420 ಕೋಟಿ ಹಾಗೂ ₹120 ಕೋಟಿ ವಹಿವಾಟು ನಡೆದಿದೆ. 2028ರ ವೇಳೆಗೆ ₹3 ಸಾವಿರ ಕೋಟಿ ಹಾಗೂ 2030ರ ವೇಳೆಗೆ ₹5 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಜಯಪುರದಲ್ಲಿ ₹229 ಕೋಟಿ ವೆಚ್ಚದಲ್ಲಿ ನೂತನ ಘಟಕ ಸ್ಥಾಪನೆಯಾಗಲಿದೆ ಎಂದು ಎಂ.ಬಿ. ಪಾಟೀಲ ಮಾಹಿತಿ ನೀಡಿದರು.

​ರೈತರಿಗೆ ಶ್ರೀಗಂಧದ ಉತ್ತೇಜನ:

‘ಗ್ರೋ ಮೋರ್ ಸ್ಯಾಂಡಲ್’ ಯೋಜನೆಯಡಿ ಮುಂದಿನ 10 ವರ್ಷಗಳಲ್ಲಿ 10 ಸಾವಿರ ಎಕರೆ ಗಂಧದ ತೋಟ ಬೆಳೆಸುವ ಗುರಿ ಇದೆ. ಪ್ರತಿ ಗಿಡಕ್ಕೆ ₹500 ಪ್ರೋತ್ಸಾಹಧನ ನೀಡಲಾಗುವುದು. ಬೆಂಗಳೂರಿನ ಜಿಕೆವಿಕೆ ಮತ್ತು ವಿಜಯಪುರ ಕೃಷಿ ವಿವಿಯಲ್ಲಿ ಶ್ರೀಗಂಧದ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

​ಅಧ್ಯಕ್ಷರು ಮತ್ತು ಅಧಿಕಾರಿಗಳ ಮಾತು:

ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಮಾತನಾಡಿ, “ಸಚಿವರ ಸಹಕಾರದಿಂದ ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಿದ್ದೇವೆ. ಮುಂದೆ ಯುಎಇ ಮಾರುಕಟ್ಟೆಗೂ ಲಗ್ಗೆ ಇಡಲಿದ್ದೇವೆ” ಎಂದರು. 

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿಕೆಎಂ ಪ್ರಶಾಂತ್ ಮಾತಮಾಡಿ, ಸಂಸ್ಥೆಯ ನೌಕರರಿಗೆ 4.83 ಕೋಟಿ ರೂಪಾಯಿಯನ್ನು ವೇತನ ಒಪ್ಪಂದದ ಮೂಲಕ ನೀಡಲಾಗಿದೆ. 20 ಕೋಟಿ ರೂಪಾಯಿ ಕ್ಯಾಂಪಸ್ ಸಂರಕ್ಷಣೆಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಸಂಸ್ಥೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

WhatsApp Join our WhatsApp Channel
Previous Post

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

Next Post

ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

Next Post
Vidhana Soudha

ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: 'ಸೆನ್ಸಿಟಿವ್ ವಲಯ' ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group