Saturday, October 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಅಮೆರಿಕದಲ್ಲಿ ಭಾರತೀಯ ಐಟಿ ದಿಗ್ಗಜರಿಗೆ ಬಿಗ್ ಶಾಕ್: ಗ್ರೀನ್ ಕಾರ್ಡ್ ಪ್ರಕ್ರಿಯೆಯಿಂದ ಇನ್ಫೋಸಿಸ್, ಟಿಸಿಎಸ್ ಸೇರಿ 8 ಕಂಪನಿಗಳು ಬ್ಯಾನ್

    ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

    IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

    ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: ಗೋವಾದಲ್ಲಿ ಹೃದಯಾಘಾತದಿಂದ ನಿಧನ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    Science News | 2026ನೇ ನೊಬೆಲ್ ವೈದ್ಯಕೀಯ ಪ್ರಶಸ್ತಿ: ಮಿದುಳಿನ ನಿಗೂಢ ಶೋಧಕ್ಕೆ ಮೂವರು ವಿಜ್ಞಾನಿಗಳಿಗೆ ಗೌರವ

    ದೆಹಲಿಯಲ್ಲಿ ಪ್ರತಿಭಟನಾಕಾರರ ಬಂಧನ ಭೀತಿ: ಪತ್ರಕರ್ತರ ಮೇಲಿನ ಹಲ್ಲೆಗೆ KUWJ ತೀವ್ರ ಆಕ್ರೋಶ

  • Bengaluru Focus

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

    BDA News | ಬಿಡಿಎ ಅಧ್ಯಕ್ಷ ಪೀಠದಲ್ಲಿ ವಿಶೇಷ ಚೇತನ ಬಾಲಕ: ಕಚೇರಿಯಲ್ಲಿ ಭಾವುಕ ಕ್ಷಣ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    ವೃತ್ತಿ ಬದುಕಿನ ಯಶಸ್ಸಿಗೆ ಪ್ರಾಮಾಣಿಕತೆ, ವಿನಯತೆ ಅನಿವಾರ್ಯ: ನಟ ದೊಡ್ಡಣ್ಣ

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

ಹಿಂದುಳಿದ ವರ್ಗಗಳ ಆಯೋಗದಿಂದ ಜಿಬಿಎಗೆ 21,186 ಸಮೀಕ್ಷಾದಾರರಿಗೆ ಪಾವತಿಸಲು ₹24 ಕೋಟಿ ಅನುದಾನ 5 ನಗರ ಪಾಲಿಕೆಗಳಿಗೆ ಬಿಡುಗಡೆಯಾಗಿದೆ | ಇದುವರೆಗೂ ಪಾಲಿಕೆಗಳು ಸಂಪೂರ್ಣ ಮೊತ್ತ ಪಾವತಿಸದಿರಲು ಕಾರಣವೇನು?

by Bengaluru Wire Desk
April 28, 2026
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಏ.28 www.bengaluruwire.com: ದೇಶದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಜನಗಣತಿ-2026 ಗಣತಿ ಕಾರ್ಯಕ್ಕೆ ವಿವಿಧ ಸರ್ಕಾರಿ ಇಲಾಖೆಗಳ ನೌಕರರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಿಯೋಜಿಸಿದರೂ ಆ ಕಾರ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿರುವುದ ಹಿಂದಿನ ಸತ್ಯ ಬಯಲಾಗಿದೆ.

ಕಳೆದ ವರ್ಷ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಅರ್ಥಾತ್ ಜಾತಿಗಣತಿಯಲ್ಲಿ ಸಮೀಕ್ಷೆದಾರರಾಗಿ ತೊಡಗಿಕೊಂಡ 130 ರಿಂದ 140 ವಿವಿಧ ಇಲಾಖೆಗಳು, ನಿಗಮ, ಮಂಡಳಿಯ 21,186 ಮಂದಿಯ ಬಹುತೇಕರಿಗೆ ಗೌರವ ಧನವನ್ನೇ ಐದು ಬೆಂಗಳೂರು ನಗರ ಪಾಲಿಕೆಗಳು ಸರಿಯಾಗಿ ಪಾವತಿಸಲ್ಲ. ಹೀಗಾಗಿ ಜಿಬಿಎ ವ್ಯಾಪ್ತಿಯಲ್ಲಿ ಈ ಬಾರಿಯ ಜನಗಣತಿ ಕಾರ್ಯಕ್ಕೆ ಬರಲು ಸಾವಿರಾರು ಜನರು ಸರ್ಕಾರಿ ನೌಕರರು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ ಎಂದು ಜಿಬಿಎ ಉನ್ನತ ಮೂಲಗಳು ತಿಳಿಸಿವೆ.

ಈ ಬಾರಿ 23,000ಕ್ಕೂ ಹೆಚ್ಚು ಗಣತಿದಾರರು ಮತ್ತು ಸುಮಾರು 2,500 ಮೇಲ್ವಿಚಾರಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. 7-8 ಸಾವಿರ ಸಿಬ್ಬಂದಿಗೆ ವಿವಿಧ ಕಾರಣಗಳಿಗಾಗಿ ವಿನಾಯಿತಿ ನೀಡಲಾಗಿದೆ ಎಂದು ಜಿಬಿಎ ವ್ಯಾಪ್ತಿಯ ಜನಗಣತಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. 

ಇತ್ತ ಗೌರವ ಧನವಿಲ್ಲ ಅತ್ತ ಪ್ರತಿ ಮನೆ ಸಮೀಕ್ಷೆ ಹಣವೂ ಇಲ್ಲ:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನಿಗಧಿಪಡಿಸಲಾದ ತಲಾ ₹5000 ಗೌರವಧನ ಈತನಕ ಪಾವತಿಯಾಗಿಲ್ಲ. ಇದಲ್ಲದೆ ಒಬ್ಬರಿಂದ ಇಬ್ಬರು ಸದಸ್ಯರಿರುವ ಮನೆ ಸಮೀಕ್ಷೆಗೆ ₹50 ಹಾಗೂ ಮೂರು ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿರುವ ಪ್ರತಿ ಮನೆ ಸಮೀಕ್ಷೆಗೆ ₹100 ನಂತೆ ಒಟ್ಟಾರೆ 19,25,961 ಮನೆಗಳನ್ನು ಸಮೀಕ್ಷೆ ಮಾಡಿದ ಸರ್ಕಾರಿ ನೌಕರರ ಪೈಕಿ ಶೇ.60ರಷ್ಟು ಮಂದಿಗೆ ಮಾತ್ರ ಹಣ ಪಾವತಿಸಲಾಗಿದೆ ಎಂದು ಜಿಬಿಎ ಉನ್ನತ ಮೂಲಗಳು ತಿಳಿಸಿವೆ.

ಗೌರವಧನ ಪಾವತಿಸದ ಎಫೆಕ್ಟ್: ಗಣತಿ ಕಾರ್ಯಕ್ಕೆ ಹಿಂದೇಟು:

ಇತ್ತೀಚೆಗೆ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಬಿಎ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯಕ್ಕೆ ನಿಯೋಜಿಲಾಗಿದ್ದರೂ ಬಹುತೇಕ ಸಿಬ್ಬಂದಿ ಜನಗಣತಿ ಕಾರ್ಯಕ್ಕೆ ನೋಟಿಸ್ ಸೇರಿದಂತೆ ಹಲವು ರೀತಿಯ ಒತ್ತಡಗಳನ್ನು ಮಾಡಿಯೂ ಗಣತಿ ಕಾರ್ಯಕ್ಕರ ಬರಲು ಒಪ್ಪಲಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೇವಲ 495 ಬಿ ಮತ್ತು ಸಿ ವೃಂದದ ಸಿಬ್ಬಂದಿ ಮಾತ್ರ ಜಿಬಿಎ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯದಲ್ಲಿ ತೊಡಗಿಕೊಂಡರು. ಇದು ಹಿಂದಿನ ಸಮೀಕ್ಷಾ ಕಾರ್ಯದಲ್ಲಿ ಗೌರವಧನ ಸರಿಯಾಗಿ ಪಾವತಿಯಾಗದಿರುವುದರ ಪರಿಣಮ ಎಂದು ವಿಶ್ಲೇಷಿಸಲಾಗುತ್ತಿದೆ.

​ಸ್ವಯಂ ಗಣತಿಯಲ್ಲಿ ಜಿಬಿಎ ಪೇಲ್!

​ಒಂದೆಡೆ ಸಿಬ್ಬಂದಿ ಕೊರತೆಯಾದರೆ, ಇನ್ನೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಬಿಎ ಸಂಪೂರ್ಣ ವಿಫಲವಾಗಿದೆ. ಐಟಿ ಸಿಟಿಯಲ್ಲಿ ಆನ್‌ಲೈನ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಲು ನೀಡಿದ್ದ ಅವಕಾಶವನ್ನು ಬಳಸಿಕೊಂಡವರು ಕೇವಲ ಶೇ.2 ಕ್ಕಿಂತ ಕಡಿಮೆ. 1.45 ಕೋಟಿ ಜನಸಂಖ್ಯೆಯ ನಗರದಲ್ಲಿ ಈ ನೀರಸ ಪ್ರತಿಕ್ರಿಯೆ ಪಾಲಿಕೆಗಳ ಪ್ರಚಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

2025ರ ಡಿ.12ರಂದೇ 5 ನಗರ ಪಾಲಿಕೆಗಳಿಗೆ ಸಂಪೂರ್ಣ ಅನುದಾನ ಬಿಡುಗಡೆ:

ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗದಿಂದ 40 ದಿನಗಳ ಕಾಲ ಬೆಂಗಳೂರಿನಲ್ಲಿ‌ ನಡೆದ ಸಮೀಕ್ಷಾ ಕಾರ್ಯದಲ್ಲಿ 21,186 ಸಮೀಕ್ಷಾದಾರರು ಒಟ್ಟು16,949 ಬ್ಲಾಕ್ ಗಳಲ್ಲಿ 19.25 ಲಕ್ಷ ಮನೆಗಳ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ ಅವರು ₹23,87,47,200 (₹23.87 ಕೋಟಿ) ಅನುದಾನವನ್ನು 18-11-2025 ರಂದೇ ಜಿಬಿಎಗೆ ಪಾವತಿಸುವಂತೆ ಆದೇಶಿಸಿದ್ದರು. ಅದಾದ ಬಳಿಕ ಜಿಬಿಎ ಮುಖ್ಯ ಲೆಕ್ಕಾಧಿಕಾರಿ ಕಚೇರಿ 12-12-2025 ರಂದು ಐದು ನಗರ ಪಾಲಿಕೆಗಳಿಗೆ ಹಿಂದುಳಿದ ವರ್ಗದ ಆಯೋಗದ ಇಡಿಸಿಎಸ್ (EDCS) ನಲ್ಲಿನ ಸಮೀಕ್ಷಾದಾರರ ವಿವರದಂತೆ ಆಯಾ ಪಾಲಿಕೆಗಳಿಗೆ ಹಣ ಪಾವತಿಸಿದೆ.

ಹಣ ಬಿಡುಗಡೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದಿಂದ ಹಣ ಪಾವತಿಯಾಗಿದ್ದರೂ ಐದು

ಕಾರ್ಪೊರೇಷನ್ ಗಳು ಇನ್ನೂ ಪೂರ್ತಿಯಾಗಿ ಸಮೀಕ್ಷಾದಾರರಿಗೆ ಹಣ ಪಾವತಿ ಮಾಡಿಲ್ಲ.

ಹಿಂದುಳಿದ ವರ್ಗಗಳ ಆಯೋಗದವರು ಏನಂತಾರೆ?:

ಈ ಬಗ್ಗೆ ಹಿಂದುಳಿದ ವರ್ಗದ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿದ್ದು, ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಜಿಬಿಎ/ಪಾಲಿಕೆ ಅಧಿಕಾರಿಗಳನ್ನು ಕರೆಸಿ ಸಭೆ ಕರೆದು ಹೇಳಿದಿವಿ. ಸಮೀಕ್ಷೆ ಹಣ ಬಿಡಿಗಡೆ ಮಾಡಿದೆ. ಗೌರವಧನದ ಹಣ ಬಿಡುಗಡೆ ಮಾಡಿ ಅಂತ ಪತ್ರ ಬರೆದಿದ್ದೇವೆ. ಇಷ್ಟಾಗಿಯೂ ಸಂಪೂರ್ಣವಾಗಿ ಹಣ ಪಾವತಿಸಿಲ್ಲ ಅಂದರೆ ಹೇಗೆ?” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಬೆಂಗಳೂರು ನಗರ ಪಾಲಿಕೆಯಲ್ಲಿ ಒಟ್ಟು 3971 ಸಮೀಕ್ಷೆದಾರರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. 3971 ರಲ್ಲಿ, 3851 ಗಣತಿದಾರರಿಗೆ ಮನೆಗಳ ಸಮೀಕ್ಷೆಗಾಗಿ ಹಣ ಪಾವತಿಸಲಾಗಿದೆ. ಪಾವತಿಸಿದ ಮೊತ್ತ 3,24,97,650 (₹3.24 ಕೋಟಿ). ಉಳಿದ 120 ಗಣತಿದಾರರ ಬ್ಯಾಂಕ್ ಮಾಹಿತಿಯಲ್ಲಿ ಸಮಸ್ಯೆಗಳಿದ್ದವು. ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಗಣತಿ ಬ್ಲಾಕ್‌ಗೆ 5000 ರೂ.ಗಳ ಮೊತ್ತಕ್ಕೆ ಸಂಬಂಧಿಸಿದಂತೆ – ಈವರೆಗೆ 1000 ಗಣತಿದಾರರಿಗೆ ಹಣ ಪಾವತಿಸಲಾಗಿದೆ. ಉಳಿದ ಗಣತಿದಾರರಿಗೆ 7 ದಿನಗಳಲ್ಲಿ ಹಣ ಪಾವತಿಸಲಾಗುವುದು.”

– ಪೊಮ್ಮಲ ಸುನಿಲ್ ಕುಮಾರ್, ಆಯುಕ್ತರು, ಬೆಂಗಳೂರು ಉತ್ತರ ನಗರ ಪಾಲಿಕೆ

ಒಟ್ಟಾರೆಯಾಗಿ ಹಿಂದಿನ ಬಿಬಿಎಂಪಿ ಕೇಂದ್ರಾಡಳಿದಿಂದ ಈಗಿನ ಜಿಬಿಎ ಹಾಗೂ 5 ನಗರ ಪಾಲಿಕೆಗಳ ವಿಕೇಂದ್ರಿಕೃತ ವ್ಯವಸ್ಥೆಗೆ ಹೊಂದಿಕೊಳ್ಳಲು ಇನ್ನು ಸಮಯವಕಾಶ ಬೇಕಾಗುತ್ತದೆ. ಹೌದು.‌ ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಂತಹ ಪ್ರಮುಖವಾದ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಈತನಕ ಗೌರವ ಧನ ಪಾವತಿಯಾಗದಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಸಮೀಕ್ಷಾದಾರರು ಹಿಡಿಶಾಪ ಹಾಕುತ್ತಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

Next Post

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

Next Post

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

Vidhana Soudha

ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

Please login to join discussion

Like Us on Facebook

Follow Us on Twitter

Recent News

KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

October 9, 2026

ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

October 9, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

October 9, 2026

ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

October 9, 2026

ಅಮೆರಿಕದಲ್ಲಿ ಭಾರತೀಯ ಐಟಿ ದಿಗ್ಗಜರಿಗೆ ಬಿಗ್ ಶಾಕ್: ಗ್ರೀನ್ ಕಾರ್ಡ್ ಪ್ರಕ್ರಿಯೆಯಿಂದ ಇನ್ಫೋಸಿಸ್, ಟಿಸಿಎಸ್ ಸೇರಿ 8 ಕಂಪನಿಗಳು ಬ್ಯಾನ್

October 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d