Tuesday, August 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

    Science News | ಚಂದ್ರನಲ್ಲಿ ಮಾನವನ ವಸಾಹತು: ನಾಸಾದ ಮೂನ್ ಬೇಸ್ ಯೋಜನೆಗೆ ಇಸ್ರೋಗೆ ಆಹ್ವಾನ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

  • Bengaluru Focus

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಬೆಂಗಳೂರಿನಲ್ಲಿ ಹಾರಾಡಲಿವೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು: ಬೆಸ್ಟ್ ಮತ್ತು ಸಾರ್ಲಾ ಏವಿಯೇಷನ್ ನಡುವೆ ಐತಿಹಾಸಿಕ ಒಪ್ಪಂದ

    ಲೋಕಾಯುಕ್ತರ ಮಿಂಚಿನ ದಾಳಿ: ಖಜಾನೆ ಇಲಾಖೆಯಲ್ಲಿ ಬಟಾಬಯಲಾದ ಭ್ರಷ್ಟಾಚಾರ, ಫೋನ್‌ಪೇನಲ್ಲಿ ಲಕ್ಷಾಂತರ ರೂ. ವಹಿವಾಟು ಪತ್ತೆ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

    ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಇಲಾಖೆ ಭರ್ಜರಿ ದಾಳಿ: Zomato, Zepto ಹಾಗೂ ಇಂದಿರಾ ಕ್ಯಾಂಟೀನ್‍ಗಳಿಗೆ ಶಾಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಮುಂಬೈ ಕರಾವಳಿಯಲ್ಲಿ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ನಡೆಸುತ್ತಿದ್ದ 3 ಹಡಗುಗಳು ವಶಕ್ಕೆ; ಕೋಟ್ಯಂತರ ರೂ. ತೆರಿಗೆ ವಂಚನೆಯ ಸ್ಮಗ್ಲಿಂಗ್

ನಡುಸಮುದ್ರದಲ್ಲಿ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ಜಾಲವನ್ನು ಯೋಜಿತ ಕಾರ್ಯಾಚರಣೆ ನಡೆಸಿ ಭೇದಿಸಿದ ಕರಾವಳಿ ಕಾವಲು ಪಡೆ | ಇಲ್ಲಿದೆ ರೋಚಕ ಕಾರ್ಯಾಚರಣೆ ವಿವರ

by Bengaluru Wire Desk
February 9, 2026
in News Wire, Public interest
Reading Time: 1 min read
0

ಮುಂಬೈ, ಫೆ.09 www.bengaluruwire.com : ಭಾರತೀಯ ಕರಾವಳಿ ಕಾವಲು ಪಡೆ (ICG) ಮತ್ತೊಂದು ರೋಚಕ ಮತ್ತು ಸಾಹಸಮಯ ಕಾರ್ಯಾಚರಣೆಯ ಮೂಲಕ ಬೃಹತ್ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ಜಾಲವನ್ನು (Oil Smuggling Racket) ಭೇದಿಸುವಲ್ಲಿ ಯಶಸ್ವಿಯಾಗಿದೆ. 

ಫೆಬ್ರವರಿ 05 ಮತ್ತು 06 ರಂದು ಸಮುದ್ರ ಮತ್ತು ಆಗಸದ ಮೂಲಕ ನಡೆಸಲಾದ ಅತ್ಯಂತ ಯೋಜಿತವಾದ ಸಂಯುಕ್ತ ಕಾರ್ಯಾಚರಣೆಯಲ್ಲಿ, ಸಂಘರ್ಷ ಪೀಡಿತ ಪ್ರದೇಶಗಳಿಂದ ಅಕ್ರಮವಾಗಿ ತೈಲ ಮತ್ತು ತೈಲ ಆಧಾರಿತ ಸರಕುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಮಟ್ಟಹಾಕಲಾಗಿದೆ.

ವಶಪಡಿಸಿಕೊಳ್ಳಲಾದ ಹಡಗು.

ಕಾರ್ಯಾಚರಣೆಯ ವಿವರ:

ಫೆಬ್ರವರಿ 05 ರಂದು ಮುಂಬೈ ಕರಾವಳಿಯಿಂದ ಪಶ್ಚಿಮಕ್ಕೆ ಸುಮಾರು 100 ನಾಟಿಕಲ್ ಮೈಲಿ ದೂರದಲ್ಲಿ, ಮೂರು ಶಂಕಿತ ಹಡಗುಗಳನ್ನು ಭಾರತೀಯ ಕರಾವಳಿ ಕಾವಲು ಪಡೆಯ ಹಡಗುಗಳು ತಡೆದವು. ಹಡಗುಗಳಲ್ಲಿದ್ದ ಎಲೆಕ್ಟ್ರಾನಿಕ್ ಡೇಟಾ ಪರಿಶೀಲನೆ, ದಾಖಲೆಗಳ ತಪಾಸಣೆ ಮತ್ತು ಸಿಬ್ಬಂದಿಯ ತೀವ್ರ ವಿಚಾರಣೆಯ ನಂತರ, ಈ ಹಡಗುಗಳು ಅಕ್ರಮ ದಂಧೆಯಲ್ಲಿ ತೊಡಗಿರುವುದು ದೃಢಪಟ್ಟಿದೆ. ಐಸಿಜಿ (ICG) ವಿಶೇಷ ತಂಡಗಳು ನಡೆಸಿದ ಶೋಧನೆಯಲ್ಲಿ ಕಳ್ಳಸಾಗಣೆಯ ಸಂಪೂರ್ಣ ಚಿತ್ರಣ ಬಯಲಿಗೆ ಬಂದಿದೆ.

ದಂಧೆಯ ಸ್ವರೂಪ (Modus Operandi) ಹೇಗೆ?:

ಈ ಕಳ್ಳಸಾಗಣೆ ಸಿಂಡಿಕೇಟ್ ಒಂದು ವಿಶಿಷ್ಟವಾದ ತಂತ್ರವನ್ನು ಬಳಸುತ್ತಿತ್ತು. ಸಂಘರ್ಷ ಪೀಡಿತ ರಾಷ್ಟ್ರಗಳಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಿ, ಅದನ್ನು ಸಾಮಾನ್ಯ ಹಡಗುಗಳ ಮೂಲಕ ಸಾಗಿಸಲಾಗುತ್ತಿತ್ತು. ನಂತರ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ (International Waters) ಮೋಟಾರ್ ಟ್ಯಾಂಕರ್‌ಗಳಿಗೆ ನಡುಸಮುದ್ರದಲ್ಲೇ ಈ ತೈಲವನ್ನು ವರ್ಗಾಯಿಸಲಾಗುತ್ತಿತ್ತು. ಈ ಜಾಲವು ಅನೇಕ ದೇಶಗಳಲ್ಲಿ ಹರಡಿಕೊಂಡಿದ್ದು, ಹಡಗುಗಳ ನಡುವೆ ಸರಕು ವರ್ಗಾವಣೆ ಮತ್ತು ಮಾರಾಟವನ್ನು ನಿಯಂತ್ರಿಸುವ ಹ್ಯಾಂಡ್ಲರ್‌ಗಳನ್ನು ಒಳಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಶಪಡಿಸಿಕೊಳ್ಳಲಾದ ಹಡಗು.

ತಂತ್ರಜ್ಞಾನದ ಕಣ್ಣು:

ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ (EEZ) ಮೋಟಾರ್ ಟ್ಯಾಂಕರ್ ಒಂದರ ಅನುಮಾನಾಸ್ಪದ ಚಟುವಟಿಕೆಯನ್ನು ಐಸಿಜಿಯ ಹೈಟೆಕ್ ಕಣ್ಗಾವಲು ವ್ಯವಸ್ಥೆ ಪತ್ತೆ ಹಚ್ಚಿತ್ತು. ಇದರ ಬೆನ್ನಲ್ಲೇ ನಡೆಸಲಾದ ಡಿಜಿಟಲ್ ತನಿಖೆ ಮತ್ತು ಹಡಗುಗಳ ಚಲನವಲನಗಳ ವಿಶ್ಲೇಷಣೆಯಿಂದ, ಇತರೆ ಎರಡು ಹಡಗುಗಳು ಈ ಟ್ಯಾಂಕರ್‌ನತ್ತ ಧಾವಿಸುತ್ತಿರುವುದು ಕಂಡುಬಂದಿತು.

ಭಾರತ ಸೇರಿದಂತೆ ಕರಾವಳಿ ರಾಷ್ಟ್ರಗಳಿಗೆ ಪಾವತಿಸಬೇಕಾದ ಭಾರಿ ಮೊತ್ತದ ಸುಂಕವನ್ನು (Duties) ವಂಚಿಸುವ ಉದ್ದೇಶದಿಂದ ಈ ಹಡಗುಗಳು ಅಕ್ರಮವಾಗಿ ‘ಶಿಪ್-ಟು-ಶಿಪ್’ (Ship-to-Ship) ಸರಕು ವರ್ಗಾವಣೆಯಲ್ಲಿ ತೊಡಗಿದ್ದವು.

ಮೂರೂ ಹಡಗುಗಳು ವಶಕ್ಕೆ:

ಫೆಬ್ರವರಿ 05 ರಂದು ನಡೆಸಲಾದ ದಾಳಿಯಲ್ಲಿ ಈ ಅಕ್ರಮ ಚಟುವಟಿಕೆ ಸಾಬೀತಾಗಿದ್ದು, ಮೂರೂ ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಡಲ ಸುರಕ್ಷತಾ ಏಜೆನ್ಸಿಗಳ ಕಣ್ತಪ್ಪಿಸಲು ಈ ಹಡಗುಗಳು ಆಗಾಗ್ಗೆ ತಮ್ಮ ಹೆಸರು ಮತ್ತು ಗುರುತನ್ನು ಬದಲಾಯಿಸುತ್ತಿದ್ದವು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಹಡಗುಗಳ ಮಾಲೀಕರು ವಿದೇಶಿ ಪ್ರಜೆಗಳಾಗಿದ್ದು, ಹೆಚ್ಚಿನ ತನಿಖೆಗಾಗಿ ಹಡಗುಗಳನ್ನು ಮುಂಬೈಗೆ ಕರೆತರಲಾಗುತ್ತಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಇವುಗಳನ್ನು ಭಾರತೀಯ ಕಸ್ಟಮ್ಸ್ ಮತ್ತು ಇತರ ಕಾನೂನು ಜಾರಿ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗುವುದು.

ಡಿಜಿಟಲ್ ಕಣ್ಗಾವಲು ಮತ್ತು ಕರಾವಳಿ ಕಾವಲು ಪಡೆಯ ನಿರಂತರ ಜಾಗರೂಕತೆಯಿಂದಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಮುದ್ರದಲ್ಲಿ ಅಂತರಾಷ್ಟ್ರೀಯ ನಿಯಮಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಕಡಲ ಭದ್ರತೆಯನ್ನು ಒದಗಿಸುವಲ್ಲಿ ಭಾರತದ ಪ್ರಮುಖ ಪಾತ್ರವನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

WhatsApp Join our WhatsApp Channel
Previous Post

ಭಾರತದ ಕ್ಯಾಥೊಲಿಕ್ ಬಿಷಪ್‌ಗಳ ಮಂಡಳಿ (ಸಿಬಿಸಿಐ) ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ

Next Post

ಮೆಟ್ರೋ ಪ್ರಯಾಣ ದರ ಏರಿಕೆ ಫೈಟ್: ಕೇಂದ್ರದ ಪಾತ್ರವಿಲ್ಲ ಎಂದ ಅಶೋಕ್, ತಾರತಮ್ಯದ ಅಸ್ತ್ರ ಪ್ರಯೋಗಿಸಿದ ಡಿ.ಕೆ.ಸುರೇಶ್

Next Post
Metro New Railway Line Testing

ಮೆಟ್ರೋ ಪ್ರಯಾಣ ದರ ಏರಿಕೆ ಫೈಟ್: ಕೇಂದ್ರದ ಪಾತ್ರವಿಲ್ಲ ಎಂದ ಅಶೋಕ್, ತಾರತಮ್ಯದ ಅಸ್ತ್ರ ಪ್ರಯೋಗಿಸಿದ ಡಿ.ಕೆ.ಸುರೇಶ್

#Viralvedio | "ನಾನು ಠಾಕೂರ್, ನನ್ನ ತಂಟೆಗೆ ಬರಬೇಡ": ಗ್ರಾಹಕನ ಮೇಲೆ ಹಲ್ಲೆಗೆ ಮುಂದಾದ ಎಚ್‌ಡಿಎಫ್‌ಸಿ ಸಿಬ್ಬಂದಿ : ಕಾನ್ಪುರದಲ್ಲಿ ನಡೆದ ಘಟನೆ

Please login to join discussion

Like Us on Facebook

Follow Us on Twitter

Recent News

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

August 17, 2026

ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

August 17, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

August 17, 2026

ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

August 17, 2026

ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

August 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group