Wednesday, May 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

    ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

  • Bengaluru Focus

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

    GBA News | ಬೆಂಗಳೂರು ಮಳೆಗಾಲದ ಮುನ್ನೆಚ್ಚರಿಕೆ: ಅವಘಡ ತಡೆಗೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

    ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಬೆಂಗಳೂರಿನ ಶರತ್ ಆರ್. ಅಶೋಕ್

    ಪೀಣ್ಯ ಫ್ಲೈಓವರ್ ಬಳಕೆದಾರರ ಗಮನಕ್ಕೆ: ಮೇ 5ರಿಂದ 3 ದಿನಗಳ ಕಾಲ ಸಂಚಾರ ಸಂಪೂರ್ಣ ಬಂದ್

    ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: 461 ವಿದ್ಯುತ್ ಕಂಬಗಳು ನೆಲಸಮ, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ‘ಸಣ್ಣ ಹುಡುಗ’ vs ‘ಅನುಭವವಿಲ್ಲದ ಆತುರ’ದ ರಾಜಕೀಯ ಜಟಾಪಟಿ

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಖಾರವಾದ ಪ್ರತಿಕ್ರಿಯೆ: ‘ಬೆಂಗಳೂರಿನ ಹಿತಾಸಕ್ತಿಗಾಗಿ ಆತುರ’ ಎಂದ ಸೂರ್ಯ

by Bengaluru Wire Desk
August 7, 2025
in Bengaluru Focus, News Wire
Reading Time: 1 min read
0

ಬೆಂಗಳೂರು, ಆ.07 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿ ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆ ಮಾಡಲಿರುವ ಬೆನ್ನಲ್ಲೇ, ಈ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ತಾರಕಕ್ಕೇರಿದೆ. 

ಯೆಲ್ಲೋ ಲೈನ್ ಉದ್ಘಾಟನೆಗೆ ‘ಸಣ್ಣ ಹುಡುಗ ಅನಗತ್ಯ ಅವಸರ ಮಾಡುತ್ತಿದ್ದಾನೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಾರ್ಗದ ಉದ್ಘಾಟನೆ ಕುರಿತು ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಅವರನ್ನು ಉದ್ದೇಶಿಸಿ, “ಅನುಭವವಿಲ್ಲದ ಆತುರದ ಹುಡುಗ, ಈ ಕೆಲಸಗಳನ್ನು ಆತುರದಲ್ಲಿ ಮಾಡಲು ಆಗುವುದಿಲ್ಲ” ಎಂದು ಹೇಳಿದ್ದರು. 

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಸಂಸದ ತೇಜಸ್ವಿ ಸೂರ್ಯ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಪ್ರಕಟಿಸಿದ್ದಾರೆ. “ಹೌದು, ನಾನು ಅವಸರದಲ್ಲಿದ್ದೇನೆ, ಏಕೆಂದರೆ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳಲು ದಶಕಗಳು ಬೇಕಾಗಬಾರದು ಎಂದು ನಾನು ನಂಬಿದ್ದೇನೆ. 

ಬೆಂಗಳೂರಿನ ಜನತೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಮಯ ವ್ಯರ್ಥ ಮಾಡುವುದನ್ನು ನಾನು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ವಿಳಂಬ ರಾಜಕಾರಣವನ್ನು ಪ್ರತಿನಿಧಿಸುತ್ತದೆ. ಆದರೆ ನಾನು ಮೋದಿ ಅವರ ಹೊಸ ಭಾರತವನ್ನು ಪ್ರತಿನಿಧಿಸುತ್ತೇನೆ. ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿ, ಅದನ್ನು ಉದ್ಘಾಟಿಸುವುದೂ ಸಹ ಅವರೇ” ಎಂದು ಸೂರ್ಯ ಬರೆದಿದ್ದಾರೆ.

ಯಾವಾಗ, ಎಲ್ಲಿದ್ದೀರಿ? ಎಂಬ ಪ್ರಶ್ನೆಗಳ ಸುರಿಮಳೆ:

ಯೆಲ್ಲೋ ಲೈನ್ ಯೋಜನೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರ ಪಾತ್ರದ ಕುರಿತು ತೇಜಸ್ವಿ ಸೂರ್ಯ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗಳ ಸಮಯದಲ್ಲಿ, ಪೂರ್ಣಾವಧಿ ಬಿಎಂಆರ್‌ಸಿಎಲ್ ಎಂಡಿ ನೇಮಕಕ್ಕಾಗಿ ಹೋರಾಡಿದಾಗ, ಮತ್ತು ರೋಲಿಂಗ್ ಸ್ಟಾಕ್ ಪೂರೈಕೆಗಾಗಿ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಿದಾಗ ಡಿ.ಕೆ.ಶಿವಕುಮಾರ್ ಎಲ್ಲಿದ್ದರು ಎಂದು ಸೂರ್ಯ ಪ್ರಶ್ನಿಸಿದ್ದಾರೆ.

ವಿದೇಶಿ ಇಂಜಿನಿಯರ್‌ಗಳಿಗೆ ವೀಸಾ ಪಡೆಯಲು ಪ್ರಯತ್ನಿಸಿದಾಗ ಹಾಗೂ ಉದ್ಘಾಟನೆಗೆ ನಿರ್ದಿಷ್ಟ ದಿನಾಂಕಕ್ಕಾಗಿ ತಾವು ನಾಗರಿಕರೊಂದಿಗೆ ಪ್ರತಿಭಟನೆ ನಡೆಸಿದಾಗಲೂ ಡಿಸಿಎಂ ಕಾಣಿಸಿಕೊಂಡಿರಲಿಲ್ಲ ಎಂದು ಸೂರ್ಯ ಹೇಳಿದ್ದಾರೆ. 

ಪ್ರಧಾನಿ ಭೇಟಿಗೆ ಕೇವಲ ಮೂರು ದಿನಗಳ ಮೊದಲು ಮಾಧ್ಯಮಗಳ ಮುಂದೆ ಬಂದು, ಈ ಯೋಜನೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಫೋಟೋ-ಆಪ್ ರಾಜಕಾರಣವಲ್ಲ, ಬದಲಾಗಿ ಕಾರ್ಯಕ್ಷಮತೆ ಆಧಾರಿತ ರಾಜಕಾರಣದ ಸಮಯ ಎಂದು ಸೂರ್ಯ ತಮ್ಮ ಪೋಸ್ಟ್‌ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೆಟ್ರೋ ಯೆಲ್ಲೋ ಲೈನ್ ಮಹತ್ವ:

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲುದಾರಿಕೆಯಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸುವ ಈ ಮಾರ್ಗ, ಮೆಟ್ರೋ ಹಂತ-3 ರ ನಿರ್ಮಾಣಕ್ಕೂ ನಾಂದಿ ಹಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ಈ ಮಾರ್ಗವನ್ನು ಉದ್ಘಾಟಿಸಲಿದ್ದು, ₹15,611 ಕೋಟಿ ವೆಚ್ಚದ ಮೆಟ್ರೋ ಹಂತ-3ರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

WhatsApp Join our WhatsApp Channel
Previous Post

ಉಪ್ಪಿನಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಮತ್ತು ಲಕ್ಷ್ಮಿ ಕೃಪಾಕಟಾಕ್ಷ ! ಹಿಂದೂ ಧರ್ಮದಲ್ಲಿ ಉಪ್ಪಿಗಿದೆ ವಿಶೇಷ ಸ್ಥಾನ

Next Post

ನಾಗಮೋಹನ್ ದಾಸ್ ವರದಿ: ಸಚಿವರಲ್ಲಿ ಪರ-ವಿರೋಧ, ಮುಖ್ಯಮಂತ್ರಿ ಮಧ್ಯಪ್ರವೇಶ

Next Post
ವಿಧಾನಸೌಧದ ಸಾಂದರ್ಭಿಕ ಚಿತ್ರ

ನಾಗಮೋಹನ್ ದಾಸ್ ವರದಿ: ಸಚಿವರಲ್ಲಿ ಪರ-ವಿರೋಧ, ಮುಖ್ಯಮಂತ್ರಿ ಮಧ್ಯಪ್ರವೇಶ

ತಿರುಚನೂರಿನ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತ ಸಂಭ್ರಮ

Please login to join discussion

Like Us on Facebook

Follow Us on Twitter

Recent News

ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

May 6, 2026
GBA Head Office Image

ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

May 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

May 6, 2026
GBA Head Office Image

ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

May 6, 2026

ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

May 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group