Thursday, October 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    CREATOR: gd-jpeg v1.0 (using IJG JPEG v62), quality = 82?

    ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    Excise News | ಬೆಳಗಾವಿಯಲ್ಲಿ ಭರ್ಜರಿ ಕಾರ್ಯಾಚರಣೆ: ₹32.40 ಲಕ್ಷ ಮೌಲ್ಯದ 24,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ

    Defence News | ಭಾರತೀಯ ಸೇನೆಗೆ ‘ಭಾರತ್ ರೈಸ್’ ಪೂರೈಕೆ ಆರಂಭ: ಈ ಯೋಜನೆ ವಿಶೇಷತೆಯೇನು?

  • Bengaluru Focus

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

Power – Milk Rate Hike | ಏ.1 ರಿಂದ ಕರೆಂಟ್ ಶಾಕ್, ಹಾಲು ತುಟ್ಟಿ : ನಿಮ್ಮ ಜೇಬಿಗೆ ಎಷ್ಟು ಹೊರೆಯಾಗುತ್ತೆ? ಇಲ್ಲಿದೆ ಪಕ್ಕಾ ಲೆಕ್ಕಾಚಾರ

ಕೆಇಆರ್ ಸಿ ಗೃಹಬಳಕೆ, ವಾಣಿಜ್ಯ, ಕೈಗಾರಿಕೆ ಮತ್ತಿತರ ವರ್ಗಗಳ ಇಂಧನ ಶುಲ್ಕದಲ್ಲಿ ಯೂನಿಟ್ ಗೆ ಪೈಸೆಗಳಷ್ಟು ಲೆಕ್ಕದಲ್ಲಿ ತುಸು ಕಡಿಮೆ ಮಾಡಿ, ಸರಾಸರಿಯಾಗಿ 25 ರೂ.ನಷ್ಟು ಮಾಸಿಕ ನಿಗದಿತ ಶುಲ್ಕ ಏರಿಕೆಯನ್ನು ಮಾಡಿದೆ. | ನಂದಿನಿ ಹಾಲು ಪ್ರತಿ ಲೀ. 4 ರೂ. ನಷ್ಟು ಹೆಚ್ಚಳವಾಗಲಿದ್ದು, ಅಷ್ಟೂ ಹಣವನ್ನು ರೈತರಿಗೆ ವರ್ಗಾಯಿಸುವುದಾಗಿ ಸಹಕಾರ ಸಚಿವರು ಹೇಳಿದ್ದಾರೆ.

by Bengaluru Wire Desk
March 27, 2025
in Life Style, News Wire, Public interest
Reading Time: 2 mins read
0
Power And Milk Rate Hike

ವಿದ್ಯುತ್ ದರ ಪರಿಷ್ಕರಣೆ ಹಾಗೂ ನಂದಿನಿ ಹಾಲಿನ ದರ ಏರಿಕೆ ಬಿಂಬಿಸುವ ಪ್ರಾತಿನಿಧಿಕ ಚಿತ್ರ.

ಬೆಂಗಳೂರು, ಮಾ.27 www.bengaluruwire.com  : ರಾಜ್ಯದ ಜನತೆಗೆ ನಿರೀಕ್ಷೆಯಂತೆ ವಿದ್ಯುತ್ ನಿಯಂತ್ರಣ ಆಯೋಗ (KERC) ಕರೆಂಟ್‌ ಶಾಕ್‌ ಕೊಟ್ಟಿದೆ. ಅದೇ ರೀತಿ ರಾಜ್ಯ ಸರ್ಕಾರವು ನಂದಿನಿ ಹಾಲಿ (Nandini Milk) ನ ಬೆಲೆಯನ್ನು ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ.  ಈ ಮೂಲಕ ರಾಜ್ಯದಲ್ಲಿ ಸಾಮಾನ್ಯ ಜನರ ದೈನಂದಿನ ಅವಶ್ಯಕತೆಗಳಾದ ಹಾಲು ಮತ್ತು ವಿದ್ಯುತ್ ದರ ಏರಿಕೆಯ ಬಿಸಿಯನ್ನು ನೀಡಿದೆ.

ಪ್ರತಿ ಯೂನಿಟ್‌ ವಿದ್ಯುತ್ ದರ 36 ಪೈಸೆ ಏರಿಕೆ ಮಾಡಿ ಕೆಇಆರ್‌ಸಿ (KERC) ಆದೇಶ ಹೊರಡಿಸಿದೆ. ಇನ್ನೊಂದೆಡೆ ಪ್ರತಿ ಲೀಟರ್ ಹಾಲಿನ ದರ 4 ರೂ. ಏರಿಕೆಯಾಗಲಿದೆ. ಇವೆರಡರ ಪರಿಷ್ಕೃತ ದರಗಳು  ಏಪ್ರಿಲ್ 1 ರಿಂದಲೇ ಪರಿಷ್ಕೃತ  ಜಾರಿಗೆ ಬರಲಿದೆ. ಏಪ್ರಿಲ್ ತಿಂಗಳ ಪರಿಷ್ಕೃತ ವಿದ್ಯುತ್ ಏರಿಕೆ ಮೇ ತಿಂಗಳ ಬಿಲ್ ನಲ್ಲಿ ಕಂಡುಬರಲಿದೆ. ಈಗಾಗಲೇ ಬಸ್ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ ಏರಿಕೆಯು ಸಾಮಾನ್ಯ ಜನರ ಆದಾಯವನ್ನು ಕಸಿದುಕೊಂಡಿದೆ.

ಪ್ರತಿ ಯೂನಿಟ್‌ಗೆ ಪಿಂಚಣಿ ಹಾಗೂ ಗ್ರಾಜ್ಯುಟಿ (P&G) ಕಲಮ್ ಅಡಿಯಲ್ಲಿ ಸರ್ ಚಾರ್ಜ್ (Surcharge) ದರ 36 ಪೈಸೆ ದರ ವಿಧಿಸಿ ಕೆಇಆರ್‌ಸಿ ಆದೇಶಿಸಿದೆ. ಇನ್ನುಳಿದಂತೆ ವಾರ್ಷಿಕ ವಿದ್ಯುತ್ ಶುಲ್ಕ (Annual electricity charges) ಏರಿಕೆ ಮಾಡುವ ಗೋಜಿಗೆ ಹೋಗಿಲ್ಲ. ಬದಲಿಗೆ ಗೃಹಬಳಕೆ ಸೇರಿದಂತೆ ಕೆಲವೊಂದು ವರ್ಗಗಳಿಗೆ ವಿದ್ಯುತ್ ದರ ಕಡಿತ ಮಾಡಿದೆ. ಒಟ್ಟಾರೆ ಪಿ& ಜಿ ವರ್ಗದಡಿ ಸರ್ಕಾರದ ದರ ಏರಿಕೆ ಪ್ರಸ್ತಾವನೆಗೆ ಕೆಇಆರ್ ಸಿ ಒಪ್ಪಿಗೆ ಸೂಚಿಸಿದೆ.

ನಂದಿನಿ ಹಾಲಿನ ಸಾಂದರ್ಭಿಕ ಚಿತ್ರ.

ಇನ್ನು ಕರ್ನಾಟಕ (Karnataka) ದಲ್ಲಿ ಹಾಲಿನ ಬೆಲೆಗಳು ಏಪ್ರಿಲ್ 1 ರಿಂದ ಲೀಟರ್‌ಗೆ ₹4 ರಷ್ಟು ಹೆಚ್ಚಾಗಲಿವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ (Cooperation Minister KN Rajanna) ಗುರುವಾರ (ಮಾರ್ಚ್ 27, 2025) ಹೇಳಿದ್ದಾರೆ. ಹಾಲು ಒಕ್ಕೂಟಗಳು ಮತ್ತು ರೈತರ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಇಂದಿಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, “ಹಾಲಿನ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರವನ್ನು ಹಾಲು ಒಕ್ಕೂಟ ತೆಗೆದುಕೊಂಡಿದೆ. ಒಕ್ಕೂಟಗಳು ಲೀಟರ್‌ಗೆ ₹5 ಹೆಚ್ಚಳ ಕೇಳುತ್ತಿದ್ದರು, ಸರ್ಕಾರ 4 ರೂ. ಹೆಚ್ಚಳಕ್ಕೆ ಒಪ್ಪಿಕೊಂಡು ಏಪ್ರಿಲ್ 1 ರಿಂದ ನೂತನ ದರ ಅನುಷ್ಠಾನಕ್ಕೆ ನಿರ್ಧರಿಸಿತು. ಹೆಚ್ಚಿಸಲಾದ ಸಂಪೂರ್ಣ ₹4 ರೈತರಿಗೆ ಹೋಗಲಿದೆ”  ಎಂದು ಅವರು ತಿಳಿಸಿದರು.

ಮಾಸಿಕ ವಿದ್ಯುತ್ ಸರಾಸರಿ ನಿಗದಿತ ಶುಲ್ಕ 25 ರೂ. ಏರಿಕೆ :

ಆದರೆ ಮಾಸಿಕ ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ (Fixed Charges) ದರವನ್ನು ಸರಾಸರಿಯಾಗಿ 25 ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ನಿಗದಿತ ಶುಲ್ಕ 120 ರೂ.ನಿಂದ 145 ರೂ.ಗೆ ಏರಿಕೆಯಾಗಲಿದೆ. ಒಂದು ಕಡೆ ವಿದ್ಯುತ್ ದರ ತುಸು ಕಡಿಮೆ ಮಾಡಿದಂತೆ ಮಾಡಿ ನಿಗದಿತ ಶುಲ್ಕ ಏರಿಸಿ ಕೆಇಆರ್ ಸಿ ಗ್ರಾಹಕರ ಜೇಬಿಗೆ ವಿದ್ಯುತ್ ಏರಿಕೆಯ ಭರಪೂರ ಭಾರವನ್ನು ಹೊರೆಸಿದೆ.

ವಿದ್ಯುತ್ ಪ್ರಸರಣ ಕುರಿತ ಸಾಂದರ್ಭಿಕ ಚಿತ್ರ.

ಎಲ್ ಟಿ ಗೃಹಬಳಕೆ (LT Household) ಗಾಗಿ 2025-26 ರಲ್ಲಿ 10 ಪೈಸೆ ಮತ್ತು 2027-28 ರಲ್ಲಿ 5 ಪೈಸೆಯನ್ನು ವಿದ್ಯುತ್ ಶುಲ್ಕದಲ್ಲಿ ಕಡಿತ ಮಾಡಲಾಗಿದೆ. ಈ ದರಗಳು  ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ ಒಂದು ರೂಪಾಯಿ ಮತ್ತು ಹತ್ತು ಪೈಸೆ ಕಡಿತ ಮಾಡಲಾಗಿದೆ ಎಂದು ಕೆಇಆರ್ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯ ಗ್ರಾಹಕನ ಮೇಲೆ ವಿದ್ಯುತ್ ಶುಲ್ಕ, ಹಾಲಿನ ದರ ಏರಿಕೆ ಒಟ್ಟಾರೆ ಎಷ್ಟು ಹೆಚ್ಚಾಗಲಿದೆ?

ಉದಾಹರಣೆಯೊಂದಿಗೆ ಇಂಧನ ಶುಲ್ಕದ ಲೆಕ್ಕಾಚಾರ

ರಾಜ್ಯದ ಸಾಮಾನ್ಯ ವಿದ್ಯುತ್ ಗ್ರಾಹಕನೊಬ್ಬ ತಿಂಗಳಿಗೆ 3 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಪಡೆದಿದ್ದು, 100 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ, ಕೆಇಆರ್ ಸಿ ವಿದ್ಯುತ್ ದರ ಪರಿಷ್ಕರಣೆಯಿಂದ ಮಾಸಿಕ ವಿದ್ಯುತ್ ದರದಲ್ಲಿ 65 ರೂ. ಏರಿಕೆಯನ್ನು ಅನುಭವಿಸುತ್ತಾನೆ. ಪ್ರಸ್ತುತ 3 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕದ ನಿಗದಿತ ಶುಲ್ಕ 360 ರೂ. ಹಾಗೂ ಪ್ರತಿ ಯೂನಿಟ್ ವಿದ್ಯುತ್ ದರ 5.90 ರೂ. ನಂತೆ 590 ರೂ.ನಷ್ಟು ಇಂಧನ ಶುಲ್ಕ ಸೇರಿದಂತೆ 950 ರೂ. ಕಟ್ಟುತ್ತಿದ್ದಾನೆ. ಇದು 2025-26 ಆರ್ಥಿಕ ವರ್ಷದಲ್ಲಿ ಫಿಕ್ಸೆಡ್ ಚಾರ್ಜಸ್ ದರ 360 ರೂ. ಇದ್ದಿದ್ದು 435 ರೂ. ಅಂದರೆ 75 ರೂ. ನಷ್ಟು ಏರಿಕೆಯಾದರೆ, ಇಂಧನ ಶುಲ್ಕ 590 ರೂ. ಇದ್ದಿದ್ದು, 10ರೂ. ಕಡಿಮೆಯಾಗಿ 580 ರೂ. ನಷ್ಟಾಗಲಿದೆ. ಒಟ್ಟಾರೆ ಪ್ರತಿ ತಿಂಗಳು 950 ರೂ. ಕಟ್ಟುವ ಕಡೆ 1015 ರೂ. ಕಟ್ಟಬೇಕಾಗುತ್ತದೆ.

ಇನ್ನು ಗಂಡ ಹೆಂಡತಿ, ಇಬ್ಬರು ಮಕ್ಕಳಿರುವ ಮನೆಯಲ್ಲಿ ಪ್ರತಿದಿನ ಒಂದು ಲೀ. ಹಾಲು ಖರೀದಿಸುತ್ತಿದ್ದರೆ ಅವರಿಗೆ ಈತನಕ ಪ್ರತಿ ತಿಂಗಳಿಗೆ 1,320 ರೂ. ವೆಚ್ಚವಾಗುತ್ತಿತ್ತು. ಇದೀಗ ಹಾಲಿನ ದರ ಏರಿಕೆಯಿಂದ ಇನ್ನು ಮುಂದೆ 1,440 ರೂ. ವೆಚ್ಚವಾಗಲಿದೆ. ಅಂದರೆ ತಿಂಗಳಿಗೆ 120 ರೂ. ಹೆಚ್ಚವಾಗಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಗೃಹ ವಿದ್ಯುತ್ ಬಳಕೆದಾರರಿಗೆ ಪರಿಷ್ಕೃತ ವಿದ್ಯುತ್ ದರ ಏರಿಕೆ ಬಿಸಿ ಅಷ್ಟಾಗಿ ತಟ್ಟದು. ಆದರೆ ಮಾಸಿಕ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರಿಗೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಇಂಧನ ಕ್ಷೇತ್ರದ ತಜ್ಞರು ಹೇಳಿದ್ದಾರೆ.

ಪ್ರತಿ ಯೂನಿಟ್ ವಿದ್ಯುತ್ ಕಡಿತ ಯಾರಿಗೆಲ್ಲಾ?:

ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸುವ ಹೋಂಸ್ಟೇ (Homestay)ಗಳಿಗೆ ಇನ್ಮುಂದೆ ಗೃಹಬಳಕೆಯ ವಿದ್ಯುತ್ ಬಿಲ್ ಜಾರಿಯಾಗಲಿದೆ. ಬಿಎಂಆರ್‌ಸಿಎಲ್‌ (BMRCL)ಗೆ ರಿಯಾಯಿತಿ ದರ ಇರಲಿದೆ. ಎಲ್ ಟಿ ವರ್ಗದಲ್ಲಿ ಬರುವ ಉದ್ಯಮಗಳಿಗೆ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 160 ಪೈಸೆ ಕಡಿತ. ಹೈಟೆನ್ಶನ್ (HT) ಉದ್ಯಮದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಕಡಿತ. ಹೈಟೆನ್ಶನ್ (HT)  ವಾಣಿಜ್ಯದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 205 ಪೈಸೆ ಕಡಿತ. ಎಲ್‌ಟಿ ವಾಣಿಜ್ಯದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 100 ಪೈಸೆ ಹೊರೆ ಕಡಿಮೆಯಾಗಲಿದೆ. ಹೈಟೆನ್ಶನ್ (HT) ವರ್ಗದ  ವಸತಿ ಸಂಕೀರ್ಣಗಳಿಗೆ ಪ್ರತಿ ಯೂನಿಟ್‌ಗೆ 35 ಪೈಸೆಯಷ್ಟು ವಿದ್ಯುತ್ ಶುಲ್ಕ ಕಡಿತ. ಎಲ್ ಟಿ ವರ್ಗದಲ್ಲಿನ ಖಾಸಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 50 ಪೈಸೆಯಷ್ಟು ಕಡಿತ. ಹೆಚ್‌ಟಿ ವಾಣಿಜ್ಯ ವರ್ಗದಲ್ಲಿ ಮಾಲ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳಿಗೆ ಪ್ರತಿ ಯೂನಿಟ್‌ನಲ್ಲಿ 205 ಪೈಸೆಗಳಷ್ಟು ವಿದ್ಯುತ್ ದರ ಕಡಿತವಾಗಲಿದೆ.

ಸೌರ ಮೇಲ್ಛಾವಣಿ, ಇವಿ ಚಾರ್ಜಿಂಗ್ ಕೇಂದ್ರಗಳಿಗೆ ರಿಯಾಯಿತಿ :

10 ಕಿಲೋ ವ್ಯಾಟ್ ವರೆಗೆ ಸೌರ ಮೇಲ್ಛಾವಣಿ (Solar roof Top ) ವ್ಯವಸ್ಥೆಗಳನ್ನು ಹೊಂದಿರುವ ಎಲ್ ಟಿ ಗೃಹ ಬಳಕೆದಾರರಿಗೆ ಅನ್ವಯವಾಗುವ ಸ್ಥಿರ ಶುಲ್ಕಗಳ ಮೇಲೆ ಪ್ರತಿ ಕಿಲೋ ವ್ಯಾಟ್ ಗೆ ₹25 ರಿಯಾಯಿತಿ ಅನುಮತಿ ನೀಡಲಾಗಿದೆ. ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ವಿದ್ಯುತ್ ಸುಂಕವು ಪ್ರತಿ ಯೂನಿಟ್‌ಗೆ ₹4.50 ಆಗಿ ಮುಂದುವರಿಯುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ಇಂಧನ ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು, ಹೈಟೆನ್ಶನ್ ವರ್ಗದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 50 ಪೈಸೆಯ ಹಸಿರು ಸುಂಕವು (Green tariff) ಮುಂದುವರಿಯುತ್ತದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ -2025 : ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ನಾಮಪತ್ರ ಸಲ್ಲಿಕೆ

Next Post

KAS EXAM | ಕೆಎಎಸ್ 384 ಹುದ್ದೆಗಳ ನೇಮಕಾತಿ : ಮುಖ್ಯ ಪರೀಕ್ಷೆ ದಿನಾಂಕ ಪ್ರಕಟ

Next Post

KAS EXAM | ಕೆಎಎಸ್ 384 ಹುದ್ದೆಗಳ ನೇಮಕಾತಿ : ಮುಖ್ಯ ಪರೀಕ್ಷೆ ದಿನಾಂಕ ಪ್ರಕಟ

ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಮಹಿಳಾ ದಿನಾಚರಣೆ

Please login to join discussion

Like Us on Facebook

Follow Us on Twitter

Recent News

ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

October 15, 2026

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

October 15, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

October 15, 2026

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

October 15, 2026

ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

October 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d