Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus
    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bangalore Rain | ಕಾದು ಕೆಂಡವಾಗಿದ್ದ ಬೆಂಗಳೂರಿಗೆ ತಂಪೆರೆದ ಮುಂಗಾರು ಪೂರ್ವ ಮಳೆಯ ಸಿಂಚನ  

ಜನರು ಹವಾಮಾನದಲ್ಲಿನ ಉಲ್ಲಾಸಕರ ಹಾಗೂ ತಂಪನೆಯ ವಾತಾವರಣದ ಬಗ್ಗೆ ಹಲವು ವಿಡಿಯೋ, ಫೊಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 

by Bengaluru Wire Desk
March 22, 2025
in Bengaluru Focus
Reading Time: 2 mins read
0

ಬೆಂಗಳೂರು, ಮಾ.22 www.bengaluruwire.com : ಕಾದ ಕೆಂಡದಂತಾಗಿದ್ದ ಬೆಂಗಳೂರಿಗೆ ಈ ವರ್ಷದಲ್ಲಿ ಮೊದಲ ಮುಂಗಾರು ಪೂರ್ವ ಮಳೆಯು ತಂಪೆರೆದಿದೆ. ಹಲವು ದಿನಗಳಿಂದ ಒಣಹವೆ, ಬಿಸಿಲಿನ ತಾಪಕ್ಕೆ ಬಸವಳಿದಿದ್ದ ನಗರದ ಜನತೆಗೆ ಇಂದು ಸಂಜೆ ಹಲವು ಕಡೆಗಳಲ್ಲಿ ಭಾರೀ ಗಾಳಿಯೊಂದಿಗೆ ಸುರಿದ ಮಳೆ ಸಮಾಧಾನ ತಂದಿತು. ಬಿಸಿಲಿನಿಂದ ಕಾದಿದ್ದ ನೆಲಕ್ಕೆ ಬಿದ್ದ ಮಳೆಯ ನೀರು, ಅಪರೂಪದ ಮಣ್ಣಿನ ಪರಿಮಳವನ್ನು ಹಲವರು ಅನುಭವಿಸಿ ಆನಂದಪಟ್ಟರು. ವಾರಾಂತ್ಯದ ಮೂಡ್ ನಲ್ಲಿದ್ದವರು ಎಲ್ಲಿಲ್ಲದ ಸಂತಸಪಟ್ಟರು.

ಬೆಂಗಳೂರಿನಲ್ಲಿ ನಿನ್ನೆ ಮೊತ್ತ ಮೊದಲ ಬಾರಿಗೆ ಸ್ಯಾಂಕಿ ಕರೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಇಲ್ಲಿನ ಕೆರೆಗೆ ಹಾಕಿ 30 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಭಕ್ತಿಭಾವದಿಂದ ಕಾವೇರಿ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಮರುದಿನವೇ ನಗರದಲ್ಲಿ ಉತ್ತಮ ಮಳೆಯಾಗಿರುವುದು ಕಾಕತಾಳಿಯವೇ ಸರಿ.

ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾವೇರಿ ಆರತಿ ಕಾರ್ಯಕ್ರಮದ ಚಿತ್ರ.

ಕಾವೇರಿ ಆರತಿ ಮಹಿಮೆ ; ಬೆಂಗಳೂರಿಗೆ ಪ್ರಕೃತಿಯ ಕೊಡುಗೆ : 

“ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ತಾಯಿಗೆ ಆರತಿಯ ಮೂಲಕ ಪೂಜಿಸಿದೆವು.  ಕಾವೇರಿ ಮಾತೆಯು, ಆರತಿಯಾದ 24 ಗಂಟೆಗಳಲ್ಲಿ ಬೆಂಗಳೂರಿಗೆ ಉತ್ತಮ ಮಳೆಯನ್ನು ಸುರಿಸುವಂತೆ ಹರಸಿದ್ದಾಳೆ ಎಂದು ನಾನು ನಂಬುತ್ತೇನೆ. ಜೈ ಕಾವೇರಿ”.

“ಭಕ್ತಿ ಮತ್ತು ಸಮರ್ಪಣೆಯೊಂದಿಗೆ ನಮ್ಮ ಸಾಮೂಹಿಕ ಪ್ರಾರ್ಥನೆಗಳು ಯಾವಾಗಲೂ ನಮಗೆ ಪ್ರಕೃತಿಯ ದೈವಿಕ ಆಶೀರ್ವಾದವನ್ನು ನೀಡುತ್ತವೆ. ಆದ್ದರಿಂದ ನೀರು ಮತ್ತು ನದಿ, ಸರೋವರಗಳು ಮುಂತಾದ ಜಲಮೂಲಗಳು ಸೇರಿದಂತೆ ಪ್ರಕೃತಿಗೆ ನಮ್ಮ ಕೃತಜ್ಞತೆಯನ್ನು ತೋರಿಸುವುದು ಮುಖ್ಯ”.

  • ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷರು

ಬಿಐಎಎಲ್ ರಸ್ತೆಯಲ್ಲಿ ಅತಿ ಹೆಚ್ಚು ಅಂದರೆ 40.4 ಮಿಮೀ ಮಳೆಯಾಗಿದ್ದು, ನಂತರ ಯಲಹಂಕದಲ್ಲಿ 33.4 ಮಿಮೀ ಮತ್ತು ಸಹಕಾರ ನಗರದಲ್ಲಿ 29.4 ಮಿಮೀ ಮಳೆಯಾಗಿದೆ. ಆರ್‌ಟಿ ನಗರ ಮತ್ತು ಕಮ್ಮನಹಳ್ಳಿಯಂತಹ ಇತರ ಪ್ರದೇಶಗಳಲ್ಲಿ ಕ್ರಮವಾಗಿ 22.2 ಮಿಮೀ ಮತ್ತು 17.4 ಮಿಮೀ ಮಳೆಯಾಗಿದೆ.

ಸಂಜೆ 5:30 ರ ಹೊತ್ತಿಗೆ, ವೈಟ್‌ಫೀಲ್ಡ್, ಹೂಡಿ, ಮಹದೇವಪುರ, ಕೆ.ಆರ್.ಪುರಂ ಮತ್ತು ಕಾಡುಗೋಡಿಯಲ್ಲಿ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ. ಆದರೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹಗುರವಾದ ಮಳೆಯಾಗಿದೆ.

ಸಾಮಾಜಿಕ ಮಾಧ್ಯಮ ಬಝ್ ಏನು?: 

ಅನಿರೀಕ್ಷಿತ ಮಳೆಯು ಬೆಂಗಳೂರಿಗರಲ್ಲಿ ಸಂತೋಷವನ್ನುಂಟುಮಾಡಿದೆ. ನಗರದ ನಿವಾಸಿಗಳು ಸಿಲಿಕಾನ್ ಸಿಟಿಯಲ್ಲಿ ಬಿದ್ದ ಮಳೆಯ ಬಗ್ಗೆ ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಹಲವು ಕಡೆಗಳಲ್ಲಿನ ರಸ್ತೆಯಲ್ಲಿ ನೀರು ನುಗ್ಗಿರುವ ಬಗ್ಗೆ, ಸಂಚಾರ ದಟ್ಟಣೆಯ ಬಗ್ಗೆ ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ಹವಾಮಾನದಲ್ಲಿನ ಉಲ್ಲಾಸಕರ ಹಾಗೂ ತಂಪನೆಯ ವಾತಾವರಣದ ಬಗ್ಗೆ ಹಲವು ವಿಡಿಯೋ, ಫೊಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 

ಹವಾಮಾನ ಮುನ್ಸೂಚನೆ: 

ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರೂ, ನೈಋತ್ಯ ಬೆಂಗಳೂರು ಮತ್ತು ಪಶ್ಚಿಮ ಭಾಗವು ಒಣಹವೆಯಿಂದ ಕೂಡಿತ್ತು. ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಶನಿವಾರ ಸಂಜೆ 5.30ಕ್ಕೆ ಕೊನೆಗೊಂಡ ಬೆಂಗಳೂರು ಹವಾಮಾನ ಇಲಾಖೆ ವರದಿಯ ಪ್ರಕಾರ ನಗರದಲ್ಲಿ ಗರಿಷ್ಠ ತಾಪಮಾನ 33.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22.09 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 0.2 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದೆ.

ಇನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 38.6 ಮಿ.ಮೀ ಮಳೆಯಾಗಿದೆ ಎಂದು ವರದಿ ಮಾಡಿದೆ. ಅದೇ ರೀತಿ ಎಚ್ ಎಎಲ್ ಹಳೆಯ ವಿಮಾನ ನಿಲ್ದಾಣದಲ್ಲಿ  ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Bangalore rain ❤️ pic.twitter.com/TcdWn59sfW

— Debjit Sen (@debjitsen) March 22, 2025

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Plastic Water Bottle | ಕುಡಿದ ಖಾಲಿ ವಾಟರ್ ಬಾಟಲಿ, ಚಿಲ್ಲರೆ ಅಂಗಡಿಗೆ ಕೊಟ್ರೆ ನಿಮಗೆ ಸಿಗುತ್ತೆ ಹಣ : ಸದ್ಯದಲ್ಲೇ ಹೊಸ ನಿಯಮ ಜಾರಿ

Next Post

Finance News | ಬ್ಯಾಂಕಿಂಗ್ ನಿಯಮಗಳು ಏ.1 ರಿಂದ ಬದಲಾಗುತ್ತಿವೆ : ಇಲ್ಲಿದೆ ಗ್ರಾಹಕರು ತಿಳಿದುಕೊಳ್ಳಬೇಕಾದ ಸಂಗತಿಗಳು

Next Post
ಸಾಂದರ್ಭಿಕ ಚಿತ್ರ

Finance News | ಬ್ಯಾಂಕಿಂಗ್ ನಿಯಮಗಳು ಏ.1 ರಿಂದ ಬದಲಾಗುತ್ತಿವೆ : ಇಲ್ಲಿದೆ ಗ್ರಾಹಕರು ತಿಳಿದುಕೊಳ್ಳಬೇಕಾದ ಸಂಗತಿಗಳು

Toxic Movie | ಯಶ್ ನಟನೆಯ 'ಟಾಕ್ಸಿಕ್' ಪೋಸ್ಟರ್ ಜೊತೆ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

Please login to join discussion

Like Us on Facebook

Follow Us on Twitter

Recent News

ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026

ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

September 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d