Saturday, August 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Bengaluru Focus

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | Land Survey News | ರಾಜ್ಯದಲ್ಲಿ ಸರ್ವೆ ಇಲಾಖೆಯ ಹದ್ದುಬಸ್ತು ಶುಲ್ಕ ಏಕಾಏಕಿ 43 ರಿಂದ 57 ಪಟ್ಟು ಏರಿಕೆ…!

ರೈತಾಪಿ ಜನರ ಜಮೀನು ಹದ್ದುಬಸ್ತು ಮಾಡಲು ದರ ಪರಿಷ್ಕರಣೆ ಬರೆ | 2 ಎಕರೆವರೆಗೆ ಗ್ರಾಮೀಣ ಪ್ರದೇಶದಲ್ಲಿ 1,500 ರೂ., ನಗರ ಪ್ರದೇಶದಲ್ಲಿ 2,000 ರೂ. ಏರಿಕೆ

by Bengaluru Wire Desk
February 2, 2022
in BW Special, Public interest
Reading Time: 1 min read
2

ಬೆಂಗಳೂರು, (www.bengaluruwire.com) : ನಿಮ್ಮ ಜಮೀನಿನ ಹದ್ದುಬಸ್ತಿಗಾಗಿ ಕಂದಾಯ ಇಲಾಖೆಗೆ ಅರ್ಜಿ ಹಾಕ್ತಿದ್ದೀರಾ? ಭೂಮಾಪನ ಇಲಾಖೆಯು 45 ವರ್ಷಗಳ ಬಳಿಕ ರಾಜ್ಯದಾದ್ಯಂತ ಹದ್ದುಬಸ್ತು ಅರ್ಜಿ (Haddubasthu Fees) ಶುಲ್ಕವನ್ನು ಏಕಾಏಕಿ 43 ಪಟ್ಟು ಹೆಚ್ಚಳ ಮಾಡಿದೆ. ಫೆಬ್ರವರಿ 1ನೇ ತಾರೀಖಿನಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿ 43 ಪಟ್ಟು ಹದ್ದುಬಸ್ತು ಶುಲ್ಕ (35 ರೂ. ನಿಂದ 1,500ರೂ.ಗೆ) ಏರಿಕೆಯಾಗಿದ್ದರೆ, ನಗರ ಪ್ರದೇಶದಲ್ಲಿ 57 ಪಟ್ಟು (35ರೂ. ನಿಂದ 2,000 ರೂ.ಗೆ) ಏರಿಕೆ ಮಾಡಿದೆ.

ಈ ಹಿಂದೆ 4 ಸರ್ವೇ ನಂಬರ್ ಅಥವಾ 4 ಹಿಸ್ಸೆವರೆಗೆ ಅರ್ಜಿ ಶುಲ್ಕ 35 ರೂ. ನಷ್ಟಿತ್ತು. ಆನಂತರ ಪ್ರತಿ ಹೆಚ್ಚುವರಿ ಸರ್ವೆ ನಂಬರ್ ಅಥವಾ ಹಿಸ್ಸೆ ನಂಬರ್ ಗಳಿಗೆ 10 ರೂ. ನಿಗಧಿಪಡಿಸಲಾಗಿತ್ತು. ಮೋಜಿಣಿ ವ್ಯವಸ್ಥೆಯಲ್ಲಿ ಹದ್ದುಬಸ್ತು ಪ್ರಕರಣಗಳ ಆಡಳಿತಾತ್ಮಕ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ 45 ವರ್ಷಗಳ ಬಳಿಕ ಅರ್ಜಿ ಶುಲ್ಕ ಏರಿಕೆ ಮಾಡುವಂತೆ ಭೂಮಾಪನಾ ಇಲಾಖೆ ಆಯುಕ್ತರು ಕಂದಾಯ ಇಲಾಖೆಯ ಭೂಮಾಪನಾ ವ್ಯವಸ್ಥೆ ವಿಭಾಗಕ್ಕೆ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

ಚಿತ್ರಕೃಪೆ : ಸರ್ವೆ ಇಲಾಖೆ

ಗ್ರಾಮೀಣ ಪ್ರದೇಶದಲ್ಲಿ 2 ಎಕರೆಯವರೆಗೆ ಅರ್ಜಿ ಶುಲ್ಕವನ್ನು 2,000 ರೂ. ತನಕ ಹಾಗೂ 2 ಎಕರೆ ನಂತರ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 400 ರೂ‌ ನಂತೆ ಗರಿಷ್ಠ 4,000 ರೂ. ತನಕ ದರ ಮಿತಿಗೊಳಿಸಿ ಶುಲ್ಕ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ನಗರ ಪ್ರದೇಶದಲ್ಲಿ ಇದೇ ಶುಲ್ಕವನ್ನು ಎರಡು ಎಕರೆವರೆಗೆ 2,500 ರೂ. ಹಾಗೂ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 1,000 ರೂ. ನಂತೆ ಗರಿಷ್ಠ ಶುಲ್ಕ 5,000 ರೂ. ಗಳಿಗೆ ಮಿತಿಗೊಳಿಸಿ  ಶುಲ್ಕ ದರ ಏರಿಸುವಂತೆ ಕೋರಿದ್ದರು.

ಆದರೆ ಇದರ ಇದೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಬಳಿಕ  ಕಂದಾಯ ವ್ಯವಸ್ಥೆಯ ಭೂಮಾಪನಾ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗುರುಮೂರ್ತಿ ಗ್ರಾಮೀಣ ಪ್ರದೇಶದಲ್ಲಿ 2 ಎಕರೆಯವರೆಗೆ ಅರ್ಜಿ ಶುಲ್ಕವನ್ನು 1,500 ರೂ. ತನಕ ಹಾಗೂ 2 ಎಕರೆ ನಂತರ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 300 ರೂ‌ ನಂತೆ ಗರಿಷ್ಠ 3,000 ರೂ. ತನಕ ದರ ಮಿತಿಗೊಳಿಸಿ ಶುಲ್ಕ ಪರಿಷ್ಕರಣೆ ಮಾಡಿ ಆದೇಶಿಸಿದ್ದಾರೆ.

ಭೂಮಾಪನಾ ಇಲಾಖೆಯ ಸರ್ಕಾರಿ ಆದೇಶ

ಇನ್ನು ನಗರ ಪ್ರದೇಶದಲ್ಲಿ ಇದೇ ಶುಲ್ಕವನ್ನು ಎರಡು ಎಕರೆವರೆಗೆ 2,000 ರೂ. ಹಾಗೂ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 400 ರೂ. ನಂತೆ ಗರಿಷ್ಠ ಶುಲ್ಕ 4,000 ರೂ. ಗಳಿಗೆ ಮಿತಿಗೊಳಿಸಿ ಶುಲ್ಕ ದರ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದ್ದಾರೆ.

ಆದರೆ ಈ ಹಿಂದಿನಂತೆ ಪ್ರತಿ ಬಾಜುದಾರರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ನೀಡಿಕೆ ವಿಧಿಸಿದ್ದ 25 ರೂ.‌ದರವನ್ನೇ ಬದಲಾಯಿಸದೇ, ಹಾಗೆಯೇ ಮುಂದುವರೆಸಲಾಗಿದೆ. ಈಗಾಗಲೇ ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸಿ ಬಾಕಿ ಉಳಿದ ಪ್ರಕರಣಗಳಿಗೆ ಹೊಸ ಶುಲ್ಕ ಅನ್ವಯವಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ 240 ತಾಲೂಕುಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಹದ್ದುಬಸ್ತಿಗಾಗಿ ಪ್ರತಿ ತಿಂಗಳು ಸರಾಸರಿ 50 ರಿಂದ 100 ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸದ್ಯ ಭೂಮಾಪನಾ ಇಲಾಖೆಯಲ್ಲಿ 3,500 ಸರ್ಕಾರಿ ಸೆರ್ವೇಯರ್ ಗಳು ಹಾಗೂ 3,000 ಖಾಸಗಿ ಸರ್ವೇಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಮುನೀಷ್ ಮೌದ್ಗಿಲ್, ಐಎಎಸ್

“ಭೂಮಾಪನಾ ಇಲಾಖೆಯಲ್ಲಿ 45 ವರ್ಷಗಳಿಂದ ಮೋಜಿಣಿ ವ್ಯವಸ್ಥೆಯಲ್ಲಿ ಹದ್ದುಬಸ್ತಿನ ಅರ್ಜಿ ಶುಲ್ಕ ಹೆಚ್ಚಳವಾಗಿರಲಿಲ್ಲ. ಆಡಳಿತಾತ್ಮಕ ಹಾಗೂ ನಿರ್ವಹಣೆ ವೆಚ್ಚ ಸಾಕಷ್ಟು ಹೆಚ್ಚಳವಾಗಿದೆ. ಈ ದೃಷ್ಟಿಯಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿತ್ತು. ಫೆ.1 ರಿಂದ ನೂತನ ದರ ಜಾರಿಗೆ ಬಂದಿದೆ.”

– ಮುನಿಷ್ ಮೌದ್ಗಿಲ್, ಆಯುಕ್ತರು, ಭೂಮಾಪನಾ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ
WhatsApp Join our WhatsApp Channel
Previous Post

FM Rainbow | ಎಫ್.ಎಂ.ರೇನ್ ಬೋ ರೇಡಿಯೋ ವಾಹಿನಿ ವಿಲೀನಕ್ಕೆ ಕರವೇ ವಿರೋಧ

Next Post

TEENS COVID VACCINE | ಕರ್ನಾಟಕದಲ್ಲಿ ಶೇ.72 ರಷ್ಟು ಹದಿಹರಯದವರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಪ್ರಗತಿ

Next Post

TEENS COVID VACCINE | ಕರ್ನಾಟಕದಲ್ಲಿ ಶೇ.72 ರಷ್ಟು ಹದಿಹರಯದವರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಪ್ರಗತಿ

ಸಚಿವ ಕೆ.ಎಸ್.ಈಶ್ವರಪ್ಪರಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಗೆ ಭೇಟಿ

Please login to join discussion

Like Us on Facebook

Follow Us on Twitter

Recent News

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

August 8, 2026

ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

August 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

August 8, 2026

ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

August 8, 2026

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group