Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus
    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BIG EXPOSE | ಬಿಬಿಎಂಪಿಯ ದೀಪಾವಳಿ ಕಸದ ಬಿಲ್‌ ನಲ್ಲೂ “ಪರಿಶುದ್ಧ” ಭ್ರಷ್ಟಾಚಾರ?

ಆರ್ ಟಿಐ ದಾಖಲೆಗಳಿಂದ ಮೇಲ್ನೋಟಕ್ಕೆ ಅಕ್ರಮ ಬಯಲು | ನಿಯಮಾವಳಿ ಉಲ್ಲಂಘಿಸಿ ಲಕ್ಷಾಂತರ ಹಣ ಪಾವತಿ | ಹಲವು ವರ್ಷಗಳಿಂದ ಹಬ್ಬದ ಸಂದರ್ಭದಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿರುವ ಶಂಕೆ

by Bengaluru Wire Desk
April 16, 2021
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು : ಬಿಬಿಎಂಪಿ ಅಂದ್ರೆನೇ ಬೃಹತ್ ಭ್ರಷ್ಟಾಚಾರ ಮಾಡುವ ಪಾಲಿಕೆ ಎಂಬಂತಾಗಿದೆ. ದೀಪಾವಳಿ ಹಬ್ಬದ‌‌ ಕಸ ವಿಲೇವಾರಿಯಲ್ಲೂ‌‌ ಹಣ ಲೂಟಿ ಮಾಡಿರೋ ಪ್ರಕರಣ ಇದೀಗ ಹೊಸದಾಗಿ ಸೇರ್ಪಡೆಯಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿರೋ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ (119), ಹಾಗೂ ಸುಂಕೇನಹಳ್ಳಿ ವಾರ್ಡ್ (142) ಗಳಲ್ಲಿ ದೀಪಾವಳಿ ಕಸ ವಿಲೇವಾರಿ ಬಿಲ್ಲಿಂಗ್ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬೆಂಗಳೂರು ವೈರ್ ಗೆ ಲಭಿಸಿರುವ ದಾಖಲೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ.

2019-20ನೇ ಆರ್ಥಿಕ ವರ್ಷದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 26 ಅಕ್ಟೋಬರ್ ನಿಂದ 31ರ ದಿನಾಂಕದ ವರೆಗೆ ಅಂದರೆ 6 ದಿನಗಳಲ್ಲಿ 119 ಹಾಗೂ 142 ವಾರ್ಡ್ ಗಳಲ್ಲಿ ಉತ್ಪತ್ತಿಯಾದ ದೀಪಾವಳಿ ಹಬ್ಬದ ಕಸವನ್ನು ವಿಲೇವಾರಿ ಮಾಡಲು  ಪರಿಶುದ್ಧ ವೆಂಚರ್ಸ್ ಸಂಸ್ಥೆಗೆ ಗುತ್ತಿಗೆ‌ ನೀಡಲಾಗಿತ್ತು.

ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪರಿಶುದ್ಧ ಸಂಸ್ಥೆಗೆ ಕೇವಲ ಆ 6 ದಿನಗಳು ಮಾತ್ರ 119 ವಾರ್ಡ್ ನಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಕಾರ್ಮಿಕರು ಹಾಗೂ ವಾಹನಗಳನ್ನು ನಿಯೋಜಿಸಿಕೊಂಡು ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕೆ ಪಾಲಿಕೆ ದಕ್ಷಿಣ ವಲಯದ ಹಣಕಾಸು ಉಪನಿಯಂತ್ರಕರು ಬರೋಬ್ಬರಿ 15.55 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. 142 ವಾರ್ಡ್ ನಲ್ಲಿ ಇದೇ ಅವಧಿಗೆ ಒಟ್ಟಾರೆ 11.32 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದೆ.

ಹೀಗೆ ಬಿಲ್ ಪಾವತಿ ಮಾಡುವ ಮುನ್ನ ಧರ್ಮರಾಯ ಸ್ವಾಮಿ ವಾರ್ಡ್ ನಲ್ಲಿ ಆ 6 ದಿನಗಳಲ್ಲಿ ಎಷ್ಟು ಕಸ ಸಂಗ್ರಹ ಮಾಡಲಾಗಿದೆ? ಇದಕ್ಕಾಗಿ ವಾಹನ ನೋಂದಣಿ ಸಂಖ್ಯೆಯೊಂದಿಗೆ ಎಷ್ಟು ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ಗಳನ್ನು ಬಳಸಲಾಗಿದೆ? ಎಷ್ಟು ಹೆಚ್ಚುವರಿ ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ? ಕಸವನ್ನು ಎಲ್ಲಿಗೆ ಕೊಂಡೊಯ್ದು ವಿಲೇವಾರಿ ಮಾಡಲಾಗಿದೆ? ಎಂಬಿತ್ಯಾದಿ ಮಾಹಿತಿಯನ್ನು ಕಸದ ಗುತ್ತಿಗೆ ಪಡೆದ ಪರಿಶುದ್ಧ್ ವೆಂಚರ್ಸ್ ತನ್ನ ಬಿಲ್ಲಿಂಗ್ ನಲ್ಲಿ ನಮೂದಿಸಿಲ್ಲ.

ಸಾಂದರ್ಭಿಕ ಚಿತ್ರ

ಮಾಸಿಕ ಬಿಲ್ ಮಾಡುವಾಗ ಪ್ರತಿ ಕಸದ ಗುತ್ತಿಗೆದಾರರು ತಮ್ಮ ಕಸದ ವಾಹನಗಳ ಗಾಡಿ ನಂಬರ್ ಜೊತೆಗೆ ಅವುಗಳ ಆರ್ ಎಫ್ ಐಡಿ ಆಧಾರಿತ ಅಟೆಂಡೆನ್ಸ್ ಕಾಪಿ, ಕಾರ್ಮಿಕರ ಪಿಎಫ್- ಇಎಸ್ ಐ ಮಾಹಿತಿ, ವಾಹನಗಳ ಕಾರ್ಯನಿರ್ವಹಣಾ ವರದಿಯನ್ನು ಲಗತ್ತಿಸುತ್ತಾರೆ. ದೀಪಾವಳಿ ಹಬ್ಬದ ಕಸ ವಿಲೇವಾರಿ ಬಿಲ್ ಪಾವತಿ ವಿಚಾರದಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಗಾಳಿಗೆ ತೂರಿರುವುದು ಕಂಡುಬರುತ್ತಿದೆ.

ಇದರ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಲಿ, ಸೂಪರಿಟೆಂಡೆಂಟ್ ಎಂಜಿನಿಯರ್ ಆಗಲಿ ಆಕ್ಷೇಪಿಸಿಲ್ಲ. ಹಣ ಪಾವತಿಸುವ ಪಾಲಿಕೆ ದಕ್ಷಿಣ ವಲಯ ಸಹಾಯಕ ನಿಯಂತ್ರಕರು ತುಟಿಕ್ ಪಿಟಿಕ್ ಅಂದಿಲ್ಲ. ಪಾಲಿಕೆ ದಕ್ಷಿಣ ವಲಯದ ಜಂಟಿ ಆಯುಕ್ತರು ಕಣ್ಣುಮುಚ್ಚಿಕೊಂಡು ದಾಖಲೆಗಳಿಗೆ ಸಹಿ ಮಾಡಿದ್ದಾರೆ.

“ನನ್ನ ಇತಿಮಿತಿಯಲ್ಲಿ ಬಿಲ್ ಗೆ ಸಲ್ಲಿಸಿದ ಎಲ್ಲ ದಾಖಲೆ ನೋಡಿ, ಪರಿಶೀಲನೆ ಮಾಡಿ ಬಿಲ್ ಪೇಮೆಂಟ್ ಮಾಡಿದ್ದೇನೆ. ನಾನೊಬ್ಬನೆ ಅಧಿಕಾರಿಯಲ್ಲ ಎಇಇ, ಎಸ್ ಇ, ಜೆಸಿ ಎಲ್ಲರೂ ದಾಖಲೆ ಪರಿಶೀಲಿದ್ದಾರೆ. ದೀಪಾವಳಿ ಹಬ್ಬದ ಕಸದಲ್ಲಿ ಅಕ್ರಮ ನಡೆದಿದೆ ಅಥವಾ ಇಲ್ಲ ಎಂಬ ಬಗ್ಗೆ ನಾನು ಏನೂ ಹೇಳಲ್ಲ.”

– ರವಿ, ಬಿಬಿಎಂಪಿ ದಕ್ಷಿಣ ವಲಯ ಉಪನಿಯಂತ್ರಕ

ದೀಪಾವಳಿ ಕಸ ವಿಲೇವಾರಿಯಲ್ಲಿ ಹೇಗೆ ಅಕ್ರಮ ನಡೆದಿದೆ?

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಸಾಮಾನ್ಯ ದಿನಗಳಲ್ಲಿ 45 ರಿಂದ 50 ಟನ್ ಕಸ ಉತ್ಪತ್ತಿಯಾದರೆ, ಹಬ್ಬ- ಹರಿದಿನಗಳಲ್ಲಿ ದಿನಕ್ಕೆ 10 ಟನ್ ಹೆಚ್ಚುವರಿ ಕಸ ಉತ್ಪತ್ತಿಯಾದರೆ ಹೆಚ್ಚೆಚ್ಚು.

ಒಂದು ಕಾಂಪ್ಯಾಕ್ಟರ್ 10 ಟನ್ ತ್ಯಾಜ್ಯವನ್ನು ಏಕ ಕಾಲಕ್ಕೆ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಒಂದು ಆಟೊ ಟಿಪ್ಪರ್ 700 ರಿಂದ 750 ಕೆಜಿ ಕಸ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಆಟೊ ಟಿಪ್ಪರ್, ಕಸವನ್ನು ಕಾಂಪ್ಯಾಕ್ಟರ್ ಅಥವಾ ಟಿಪ್ಪರ್ ಲಾರಿಗೆ ಶಿಫ್ಟ್ ಮಾಡುವ ಸ್ಥಳದ ತನಕ ಕೊಂಡೊಯ್ಯತ್ತೆ. ಅಲ್ಲಿಂದ ಕಾಂಪ್ಯಾಕ್ಟರ್ ಬೆಳ್ಳಳ್ಳಿ ಭೂಭರ್ತಿ ಘಟಕ ಅಥವಾ ಇನ್ನಿತರೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ದು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತದೆ.

ಕೆಆರ್ ಮಾರುಕಟ್ಟೆ ಸರ್ಕಲ್ ನಲ್ಲಿನ ಕಸದ ರಾಶಿ (ಸಂಗ್ರಹ ಚಿತ್ರ)

ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಪ್ರತಿದಿನ ಹೆಚ್ಚುವರಿಯಾಗಿ ಉತ್ಪತ್ತಿಯಾದ 10 ಟನ್ ದೀಪಾವಳಿ ಕಸವನ್ನು ಸಂಗ್ರಹಿಸಲು 13 ಆಟೊ ಟಿಪ್ಪರ್ ಬಳಸಿಕೊಳ್ಳಬೇಕಾಗುತ್ತೆ.

ಈ ವಾರ್ಡ್ ನ ಗುತ್ತಿಗೆದಾರರಿಗೆ ಸಾಮಾನ್ಯವಾಗಿ ಮಾಸಿಕ ಬಿಲ್ ಪಾವತಿಸುವಾಗ ಒಂದು ಆಟೊ ಟಿಪ್ಪರ್ ಗೆ 30 ದಿನಕ್ಕೆಂದು ಚಾಲಕ ಮತ್ತು ಕ್ಲೀನರ್ ವೇತನ ಸೇರಿ 56,316 ರೂ. ಹಣವನ್ನು ಬಿಲ್ ಪಾವತಿ ಮಾಡುತ್ತೆ. ಒಂದು ಆಟೋಗೆ ದಿನಕ್ಕೆ ಕಸ ಸಂಗ್ರಹಿಸಲು 1,877 ರೂಪಾಯಿ ಅಂತ ಲೆಕ್ಕ ಹಾಕಿದರೂ 13 ಆಟೋ 6 ದಿನ ಕಾರ್ಯ ನಿರ್ವಹಿಸಿದಕ್ಕೆ 1.46 ಲಕ್ಷ ರೂ. ಬಿಲ್ ಮೊತ್ತವಾಗಲಿದೆ.

ಇನ್ನು ಮಿಶ್ರ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಕ್ವಾರಿಗೆ ಕಸ ಕೊಂಡೊಯ್ಯಲು ಪ್ರತಿ ಕಾಂಪ್ಯಾಕ್ಟರ್ ಗೆ ತಿಂಗಳಿಗೆ 1.86 ಲಕ್ಷ ರೂ. ಬಿಬಿಎಂಪಿಯಿಂದ ಕಸ ಕಾಂಟ್ರಾಕ್ಟರ್ ಗೆ ಪಾವತಿಸಲಾಗುತ್ತೆ. ಅಂದರೆ ಒಂದು ದಿನ ಕಸ ಸರಬರಾಜು ಮಾಡಲು 6,228 ರೂ. ಆದಂತಾಯ್ತು.

ಹೀಗಿದ್ದಾಗ 10 ಟನ್ ಕಸವನ್ನು ಕೊಂಡೊಯ್ಯುವ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್ ಅನ್ನು 6 ದಿನ ಬಳಸಿಕೊಂಡರೆ 37,368 ರೂ. ಗಳಾಗುತ್ತೆ. ಜೆಸಿಬಿ ಯಂತ್ರ ಬಳಕೆ ಸೇರಿ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ 6 ದಿನಕ್ಕೆ, ಕಸದ ಕಾಂಟ್ರಾಕ್ಟರ್ ಗೆ ದೀಪಾವಳಿ ಹಬ್ಬದ ಹೆಚ್ಚುವರಿ ಕಸ ವಿಲೇವಾರಿಗಾಗಿ ಹೆಚ್ಚೆಂದರೆ 2 ಲಕ್ಷ ಮೊತ್ತದ ಬಿಲ್ ಪಾವತಿಸಬೇಕಾಗುತ್ತದೆ.

2 ಲಕ್ಷ ಬಿಲ್ ಆಗುವ ಕಡೆ 13.55 ಲಕ್ಷ ರೂ. ಹೆಚ್ಚುವರಿ ಬಿಲ್ ?

ಆದರೆ ಈ ಪ್ರಕರಣದಲ್ಲಿ ಒಟ್ಟಾರೆ 6 ದಿನಕ್ಕೆ 15.55 ಲಕ್ಷ ಬಿಲ್ ಮಾಡಲಾಗಿದ್ದು 13.55 ಲಕ್ಷ ರೂ. ಹಣವನ್ನು ಹೆಚ್ಚುವರಿಯಾಗಿ ಪಾವತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಏಕೆಂದರೆ ಸಾಮಾನ್ಯವಾಗಿ ಈ ವಾರ್ಡ್ ನಲ್ಲಿ ತಿಂಗಳಿಗೆ (30 ದಿನ) ಕಾರ್ಯನಿರ್ವಹಿಸಿದರೆ 32 ಲಕ್ಷ ಬಿಲ್ ಪಾವತಿಸಲಾಗುತ್ತದೆ. ಆದರೆ ದೀಪಾವಳಿ ಕಸದ ವಿಲೇವಾರಿ ಹೆಸರಲ್ಲಿ ಕೇವಲ 6 ದಿನಕ್ಕೆ 15.55 ಲಕ್ಷ ರೂ. ಬಿಲ್ ಮಾಡಲಾಗಿದೆ.

ಸುಂಕೇನಹಳ್ಳಿಯಲ್ಲಿ 6 ದಿನಕ್ಕೆ 11.32 ಲಕ್ಷ ಪೇಮೆಂಟ್?

ಇನ್ನು ಗಾಂಧಿ ಬಜಾರ್ ಬಿಟ್ಟರೆ ಬೇರೆ ಹೇಳಿಕೊಳ್ಳುವಂತಹ ದೊಡ್ಡ ಮಾರುಕಟ್ಟೆ ಸುಂಕೇನಹಳ್ಳಿ ವಾರ್ಡ್ (142) ನಲ್ಲಿಲ್ಲ. ಇಲ್ಲಿ ಹಬ್ಬದ ಸಂದರ್ಭದಲ್ಲಿ ಹೆಚ್ಚೆಂದರೂ 1 ಲೋಡ್ ಕಸ ಉತ್ಪತ್ತಿಯಾಗುತ್ತೆ.  ಆದರೂ ದೀಪಾವಳಿ ತ್ಯಾಜ್ಯ ವಿಲೇವಾರಿಯಲ್ಲಿ 6 ದಿನಕ್ಕೆ ಒಟ್ಟಾರೆ 11.32 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದೆ.

ಈ ವಾರ್ಡ್ ನಲ್ಲಿ 30 ದಿನ ಕಾರ್ಯನಿರ್ವಹಿಸುವಾಗಲೇ ಮಾಸಿಕ ಬಿಲ್ 18 ಲಕ್ಷ ರೂ. ಆಸುಪಾಸಿನಲ್ಲಿ  ಪಾವತಿಸಲಾಗುತ್ತೆ. ಹೀಗಿರುವಾಗ 6 ದಿನಕ್ಕೆ 11.32 ಲಕ್ಷ ರೂ. ಮೊತ್ತ ಪಾವತಿಸಿರುವುದನ್ನು ಗಮನಿಸಿದರೆ ಎಂತಹವರಿಗೂ ಇಲ್ಲಿ ಭ್ರಷ್ಟಾಚಾರ ನಡೆದಿರುವುದು ತಿಳಿದು ಬರುತ್ತದೆ.

ಹಬ್ಬದ ಬಿಲ್ ಅಕ್ರಮದ ಬಗ್ಗೆ ಚಿಕ್ಕಪೇಟೆ ವಿಭಾಗದ ಎಇಇ ನರಸಿಂಹಯ್ಯ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ  ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ನಗರದಾದ್ಯಂತ ಹಬ್ಬದ ಕಸದಲ್ಲಿ ಕೋಟ್ಯಾಂತರ ರೂ. ಅಕ್ರಮ ನಡೆದಿರುವ ಸಾಧ್ಯತೆ !!

ಬಿಲ್ ಪಾವತಿ ಮಾಡುವ ಮುನ್ನ ಕಾನೂನು ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ದಾಖಲೆಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಇದನ್ನೆಲ್ಲಾ ಗಮನಿಸಿದರೆ ಬೆಂಗಳೂರಿನಾದ್ಯಂತ ವಿವಿಧ ವಾರ್ಡ್ ಗಳಲ್ಲೂ ಸಂಕ್ರಾಂತಿ ಹಬ್ಬ, ಯುಗಾದಿ ಹಬ್ಬ, ಗಣೇಶನ ಹಬ್ಬ, ಆಯುಧಪೂಜೆ, ದೀಪಾವಳಿ ಹಬ್ಬದಲ್ಲಿ ಹೆಚ್ಚುವರಿ ಕಸದ ಹೆಸರಿನಲ್ಲಿ ಕೋಟ್ಯಾಂತರ ರೂ. ಅಕ್ರಮ ನಡೆದಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಗುತ್ತಿಗೆದಾರರು ಮತ್ತು ಘನತ್ಯಾಜ್ಯ ವಿಲೇವಾರಿ ಅಧಿಕಾರಿಗಳು, ಲೆಕ್ಕಾಧಿಕಾರಿಗಳು ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಸಾಧ್ಯತೆಗಳ ಬಗ್ಗೆ ಮುಖ್ಯ ಆಯುಕ್ತ ಗೌರವ ಗುಪ್ತ ಕೂಲಂಕಷ ತನಿಖೆ ನಡೆಸಲು ಆದೇಶಿಸಿದರೆ ಸತ್ಯದ ಅನಾವರಣವಾಗಲಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಐತಿಹಾಸಿಕ ಕರಗ ಉತ್ಸವ ಸರಳ ಆಚರಣೆಗೆ ಆದ್ಯತೆ : ಬಿಬಿಎಂಪಿ ಚೀಫ್ ಕಮಿಷನರ್ ಹೇಳಿಕೆ

Next Post

ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮ ಸ್ಥಗಿತಕ್ಕೆ ಟಿ.ಎಸ್.ನಾಗಾಭರಣ ಖಂಡನೆ

Next Post

ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮ ಸ್ಥಗಿತಕ್ಕೆ ಟಿ.ಎಸ್.ನಾಗಾಭರಣ ಖಂಡನೆ

Covid News | ಮೆಡಿಕಲ್ ಆಕ್ಸಿಜನ್ - ರೆಮಿಡಿಸಿವಿರ್ ಇಂಜಕ್ಷನ್ ಲಭ್ಯತೆ ಕುರಿತ ಸಹಾಯ ಕೇಂದ್ರ ರಾಜ್ಯದಲ್ಲಿ ಆರಂಭ

Please login to join discussion

Like Us on Facebook

Follow Us on Twitter

Recent News

ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026

ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

September 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d