Tuesday, June 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಸುದ್ದಿ ಪತ್ರಿಕೆಗಳಿಗೆ ಅಂಚೆ ರಿಯಾಯಿತಿ ಕಡಿತ: ಸೌಲಭ್ಯ ಮರುಸ್ಥಾಪಿಸಲು ಪ್ರಧಾನಿ ಮೋದಿಗೆ ಕೆಯುಡಬ್ಲ್ಯೂಜೆ ಒತ್ತಾಯ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

    Big Breaking News | ರಾಜಧಾನಿಯಲ್ಲಿ ಕಸದ ದರ್ಬಾರ್: ಬಿಎಸ್‌ಡಬ್ಲ್ಯೂಎಂಎಲ್, ಜಿಬಿಎಗೆ ಬೆವರಿಳಿಸಿದ ಲೋಕಾಯುಕ್ತ; ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು

    ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಗೆ ಶಾಕ್: ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ

    ಡಿಕೆಶಿ ನೂತನ ಸಂಪುಟ ಖಾತೆ ಹಂಚಿಕೆ: ಕೃಷ್ಣಭೈರೇಗೌಡಗೆ ‘ಗ್ರೇಟರ್ ಬೆಂಗಳೂರು’ ಹೊಣೆ, ರಾಮಲಿಂಗಾರೆಡ್ಡಿ ಅಸಮಾಧಾನ

  • Bengaluru Focus

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    BDA News | ಉದ್ಯಾನ ನಗರಿ ಮರುಸೃಷ್ಟಿಗೆ ಬಿಡಿಎ ಹೊಸ ಹೆಜ್ಜೆ: ‘ಗ್ರೀನ್ ಬೆಂಗಳೂರು’ ಜಾಲತಾಣ ಲೋಕಾರ್ಪಣೆ

    ಬೆಂಗಳೂರು ನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಾಂತರಾಜು ಪಿ.ಎಸ್ ನೇಮಕ: ಜಿ.ಜಗದೀಶ ಜಿಬಿಎ ಕೇಂದ್ರ ಪಾಲಿಕೆ ನೂತನ ಕಮಿಷನರ್

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

ಶತ್ರುಗಳ ಮೇಲೆ ಗುರಿಯಿಡಲು ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ ಬೆಸ್ಟ್

ಏರ್ ಶೋ ನಲ್ಲಿ ಗಮನ ಸೆಳೆಯುತ್ತಿದೆ ನಾಸಾ ಅಭಿವೃದ್ಧಿಪಡಿಸಿದ ವಿಟಾಲ್ ವೆಂಟಿಲೇಟರ್

by Bengaluru Wire Desk
February 4, 2021
in BW Special, News Wire
Reading Time: 1 min read
0
ಇಸ್ರೇಲ್ ತಂತ್ರಜ್ಞಾನದ ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ

ಬೆಂಗಳೂರು : ಏರೊ ಇಂಡಿಯಾ ಶೋ-2021ರಲ್ಲಿ ದೇಶ ವಿದೇಶಗಳ ರಕ್ಷಣೆ ಹಾಗೂ ವೈಮಾನಿಕ ತಂತ್ರಜ್ಞಾನಗಳ ಪ್ರದರ್ಶನದಲ್ಲಿ ಆಲ್ಫಾ ಡಿಸೈನ್ ಟೆಕ್ನಾಲಜಿಯ ಮಳಿಗೆಯಲ್ಲಿ, ಶತ್ರುಗಳ ಮೇಲೆ ಕಣ್ಗಾವಲಿಡುವ ಐವೊರಿ ಥರ್ಮಲ್ ಕ್ಯಾಮರಾ ಹಾಗೂ ನಾಸಾ ತಂತ್ರಜ್ಞಾನದ ವಿಟಾಲ್ ಸ್ಮಾರ್ಟ್ ವೆಂಟಿಲೇಟರ್ ಎಲ್ಲರ ಗಮನ ಸೆಳೆಯುತ್ತಿದೆ. 

ಯುದ್ಧ ಸಂದರ್ಭದಲ್ಲಿ ಮತ್ತು ದೇಶದ ರಕ್ಷಣೆ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ಆಲ್ಫಾ ಕಂಪನಿ ಅಭಿವೃದ್ಧಿಪಡಿಸಿರುವ ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ ಬಹಳ ಉಪಯುಕ್ತವಾಗಿದೆ. 5 ಕಿಲೋ ಮೀಟರ್ ದೂರದಲ್ಲಿನ ಶತ್ರು ಪಾಳೇಯದ ಮೇಲೆ ಹದ್ದುಗಣ್ಣನಿಟ್ಟು ಯುದ್ಧದ ಟ್ಯಾಂಕರ್ ಗಳ ಮೂಲಕ ಗುರಿಯಿಟ್ಟು ಹೊಡೆಯುವ ಅವಕಾಶವಿದೆ.

ಇದೇ ರೀತಿ ಚಲಿಸುವ ವಸ್ತುಗಳನ್ನು ಥರ್ಮಲ್ ಇಮೇಜ್ ತಂತ್ರಜ್ಞಾನದ ಮೂಲಕ ಗುರುತಿಸಬಹುದಾಗಿದೆ. ಆ ಮೂಲಕ ಉಗ್ರರು ಅಥವಾ ಶತ್ರುಗಳ ಮೇಲೆ ಶಸ್ತ್ರಾಸ್ತ್ರ ಬಳಸಿ ಫೈರಿಂಗ್ ಮಾಡಬಹುದಾಗಿದೆ. ಸಾಮಾನ್ಯವಾಗಿ ಈ ಯಂತ್ರಗಳನ್ನು ಗಡಿಭದ್ರತೆ, ವಾಯುಪಡೆ, ನೌಕಾಪಡೆ ಮತ್ತಿತರ ಕಡೆ ಬಳಸಲಾಗುತ್ತದೆ.

ಪಾಲಿಕೋಟೆಡ್ ಕಾರ್ಬನ್ ವಸ್ತುವಿನಿಂದ ತಯಾರಿಸಲಾದ ಐವೊರಿ ಥರ್ಮಲ್ ಇಮೇಜ್ ಕ್ಯಾಮರಾ, ಶತ್ರು ರಾಷ್ಟ್ರಗಳ ರಾಡಾರ್ ನಿಂದ ಗುರುತಿಸಲು ಸಾಧ್ಯವಾಗುವುದಿಲ್ಲ. ಆಲ್ಫಾ ಕಂಪನಿಯು ಈಗಾಗಲೇ 700ಕ್ಕೂ ಹೆಚ್ಚು ಈ ರೀತಿಯ ಕ್ಯಾಮರಾಗಳನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್ )ಗೆ ಪೂರೈಕೆ ಮಾಡಿದೆ.  ಭಾರತೀಯ ನೌಕಾಪಡೆ, ವಾಯುಪಡೆಗೂ ಈ ಯಂತ್ರವನ್ನು ಸದ್ಯದಲ್ಲೇ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ.

ನಾಸಾದಿಂದ 45 ದಿನದಲ್ಲಿ ಪುಟ್ಟಗಾತ್ರದ ವೆಂಟಿಲೇಟರ್ ಉತ್ಪಾದನೆ :

ಕೋವಿಡ್ ಸಂಕಷ್ಠದ ಕಾಲದಲ್ಲಿ ಕೇವಲ 45 ದಿನಗಳಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಟಾಲ್ ಎಂಬ ಪರಿಣಾಮಕಾರಿ ವೆಂಟಿಲೇಟರ್ ಗಳನ್ನು ತಯಾರು ಮಾಡಿತ್ತು. ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಎರಡು ಕೆಜಿ ಗಾತ್ರದ ಈ ಪುಟ್ಟ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ಬಳಸಿಕೊಂಡು ಅಮ್ಲಜನಕ ಸಿಲಿಂಡರ್ ಸಹಾಯದಿಂದ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ. ಕೋವಿಡ್ ಸೋಂಕು ತಾರಕಕ್ಕೇರಿದ ಸಂದರ್ಭದಲ್ಲಿ ದೇಶವೂ ಸೇರಿದಂತೆ ವಿಶ್ವದ ಎಲ್ಲೆಡೆ ಕೋವಿಡ್ ಸೋಂಕಿನಿಂದ ಗಂಭೀರ ಉಸಿರಾಟದ ತೊಂದರೆಯಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಅನುಕೂಲ ಹೊಂದಿದೆ.

ನಾಸಾ ಅಭಿವೃದ್ಧಪಡಿಸಿದ ಹಾಗೂ ಅಲ್ಫಾ ಡಿಸೈನ್ ಉತ್ಪಾದಿಸಿರುವ ವಿಟಾಲ್ ಕಂಪ್ರೆಸರ್ ವೆಂಟಿಲೇಟರ್

ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲದ ಸ್ಥಳದಲ್ಲಿ, ಸಿಯಾಚಿನ್ ನಂತಹ ವಿಶ್ವದ ಎತ್ತಿ ಎತ್ತರದ ಹಿಮದ ಕಣಿವೆಯಲ್ಲೂ ಸುಲಭವಾಗಿ ಪುಟ್ಟ ಗಾತ್ರದ ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ಆಮ್ಲಜನಕ ಸಿಲಿಂಡರ್ ಬಳಸಿಕೊಂಡು ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬಹುದಾಗಿದೆ.

ನಾಸಾ ಅಭಿವೃದ್ಧಿಪಡಿಸಿದ ಈ ವಿಟಾಲ್ ಕಂಪ್ರೆಸರ್ ವೆಂಟಿಲೇಟರ್ ಗಳನ್ನು ವಿಶ್ವದ 500 ಕಂಪನಿಗಳು ಉತ್ಪಾದಿಸಲು ಅನುಮತಿ ನೀಡುವಂತೆ ಅರ್ಜಿ ಹಾಕಿತ್ತು. ಆ ಪೈಕಿ 30 ಕಂಪನಿಗಳಿಗೆ ಮಾತ್ರ ನಾಸಾ ಲೈಸೆನ್ಸ್ ನೀಡಿತ್ತು. ದೇಶದಲ್ಲಿ ಆಲ್ಫಾ ಡಿಸೈನ್ ಟೆಕ್ನಾಲಜಿ ಸೇರಿದಂತೆ ಕೇವಲ 3 ಕಂಪನಿಗಳಿಗೆ ಮಾತ್ರ ವಿಟಾಲ್ ಯಂತ್ರ ಉತ್ಪಾದಿಸಲು ಲೈಸೆನ್ಸ್ ಲಭಿಸಿದೆ. ಸಾಮಾನ್ಯವಾಗಿ ಕೃತಕ ಉಸಿರಾಟದ ವ್ಯವಸ್ಥೆಯ ಯಂತ್ರಗಳನ್ನು ಎಲೆಕ್ಟ್ರಾನಿಕ್ ಬಿಡಿಭಾಗಗಳೇ ಹೆಚ್ಚಿರುತ್ತದೆ. ಆದ್ರೆ ಈ ವೆಂಟಿಲೇಟರ್ ಎಲೆಕ್ಟ್ರೋ ಮೆಕಾನಿಕ್  ಆಧಾರಿತವಾಗಿದ್ದು, ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

WhatsApp Join our WhatsApp Channel
Previous Post

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ….

Next Post

ಆಕಾಶ ಸಮರಕ್ಕೆ ಕ್ಯಾಟ್ ವಾರಿಯರ್ ದ್ರೋಣ್

Next Post
ಎಚ್ಎಎಲ್ ನಿರ್ಮಿಸಲು ಹೊರಟಿರುವ ಕ್ಯಾಟ್ಸ್ ವಾರಿಯರ್ ದ್ರೋಣ್ ಮಾದರಿ

ಆಕಾಶ ಸಮರಕ್ಕೆ ಕ್ಯಾಟ್ ವಾರಿಯರ್ ದ್ರೋಣ್

ಮೈಸೂರು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಇಸ್ರೋ ಗಗನಯಾನಿಗಳಿಗೆಂದು ಸಿದ್ಧವಾದ ರೆಡಿ-ಟು ಈಟ್ ಆಹಾರ ಪೊಟ್ಟಣಗಳು

ಮೈಸೂರಿನಲ್ಲಿ ತಯಾರಾಯಿತು ಇಸ್ರೋ ಗಗನಯಾತ್ರಿಗಳ ಆಹಾರ

Please login to join discussion

Like Us on Facebook

Follow Us on Twitter

Recent News

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

June 8, 2026

Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

June 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

June 8, 2026

Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

June 8, 2026

ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

June 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group