Saturday, August 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

  • Bengaluru Focus

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

​ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ; ಪಾದಚಾರಿ ಮಾರ್ಗಗಳಲ್ಲಿದ್ದ ಅನುಪಯುಕ್ತ ವಿದ್ಯುತ್ ಪರಿವರ್ತಕ ಹಾಗೂ ಇತರ ಪರಿಕರಗಳ ತೆರವು ಕಾರ್ಯಾಚರಣೆ.

by Bengaluru Wire Desk
August 8, 2026
in Bengaluru Focus, Public interest
Reading Time: 1 min read
0

​ಬೆಂಗಳೂರು, ಆ.08 www.bengaluruwire.com: ಸ್ವಚ್ಛ ಹಾಗೂ ಸುರಕ್ಷಿತ ಬೆಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಜಿಬಿಎ (GBA) ಜೊತೆ ಕೈಜೋಡಿಸಿರುವ ಬೆಸ್ಕಾಂ, ನಗರದ ಜನತೆಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡಲು ಮುಂದಾಗಿದೆ. 

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್‌. ಶಿವಶಂಕರ ಅವರ ಮುಂದಾಳತ್ವದಲ್ಲಿ ಶನಿವಾರ ಬೃಹತ್ ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಹಲವು ಭಾಗಗಳ ಪಾದಚಾರಿ ಮಾರ್ಗಗಳಲ್ಲಿದ್ದ ಸ್ಥಗಿತಗೊಂಡ ಹಾಗೂ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ವಿವಿಧ ಪರಿಕರಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.

​’ಕ್ಲೀನ್ ಅಪ್ ಬೆಂಗಳೂರು’ ಅಭಿಯಾನದ ಹಿನ್ನೆಲೆ:

​ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದ್ದ ‘ಕ್ಲೀನ್ ಅಪ್ ಬೆಂಗಳೂರು’ ತಿಂಗಳ ಅಭಿಯಾನದ ಭಾಗವಾಗಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್‌ 1ರಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿ, ನಿರಂತರವಾಗಿ ಮುಂದುವರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಶನಿವಾರ ಬೆಳಗ್ಗೆ 7 ಗಂಟೆಯಿಂದಲೇ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

​ಎಲ್ಲೆಲ್ಲಿ ನಡೆಯಿತು ಕಾರ್ಯಾಚರಣೆ?:

​ಯಲಹಂಕದಲ್ಲಿ ಬೆಳಗ್ಗೆ 7 ಗಂಟೆಗೆ ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ ಅವರು ಆಂದೋಲನಕ್ಕೆ ಚಾಲನೆ ನೀಡಿದರು. ಬಳಿಕ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಪ್ರಮುಖ ಪ್ರದೇಶಗಳಾದ:

​ಯಲಹಂಕ, ​ಸಹಕಾರ ನಗರ, ​ದಾಸರಹಳ್ಳಿ ಹಾಗೂ ಹೆಬ್ಬಾಳ, ​ಎಂಎಸ್‌ಆರ್‌ ನಗರ, ಹೆಚ್‌ಬಿಆರ್‌ ಬಡಾವಣೆ

​ಕೃಷ್ಣರಾಜಪುರ, ಚನ್ನಸಂದ್ರ ಮುಖ್ಯರಸ್ತೆ, ​ವೈಟ್‌ಫೀಲ್ಡ್‌, ಬೆಳ್ಳಂದೂರು, ​ಹೆಚ್‌ಎಸ್‌ಆರ್ ಬಡಾವಣೆ, ಜೆಪಿ ನಗರ ಹಾಗೂ ಶಿವಾಜಿ ನಗರ,  ​ಈ ಎಲ್ಲಾ ಪ್ರದೇಶಗಳ ಪಾದಚಾರಿ ಮಾರ್ಗಗಳಲ್ಲಿರುವ ಅನುಪಯುಕ್ತ ವಿದ್ಯುತ್ ಪರಿವರ್ತಕಗಳನ್ನು ಮತ್ತು ಇತರೆ ಪರಿಕರಗಳನ್ನು ತೆರವುಗೊಳಿಸಿದರು.

​ಜಾಗೃತಿ ಅಭಿಯಾನ: ಸ್ವಚ್ಛತಾ ಕಾರ್ಯದ ಬಳಿಕ ಆರ್‌ಎಂಯುಗಳ ಬಳಿ ಕಸ ಎಸೆಯದಂತೆ, ಮೂತ್ರ ವಿಸರ್ಜನೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಪತ್ರಗಳನ್ನು ಅಂಟಿಸಲಾಯಿತು. ಜೊತೆಗೆ, ಜಿಒಎಸ್‌ (GOS) ರಾಡ್‌ಗಳನ್ನು ನೆಲಮಟ್ಟದಿಂದ ಏಳು ಅಡಿ ಎತ್ತರಿಸುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.

​ಬೆಸ್ಕಾಂ ಕೈಗೊಂಡ ಪ್ರಮುಖ ಕಾಮಗಾರಿಗಳ ಅಂಕಿ-ಅಂಶ (ಆಗಸ್ಟ್ 1 – 8ರ ವರೆಗೆ):

​ಅಭಿಯಾನದ ಸಾಧನೆಗಳ ಕುರಿತು ಮಾತನಾಡಿದ ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ, ಕಳೆದ ಒಂದು ವಾರದಲ್ಲಿ ಬೃಹತ್ ಮಟ್ಟದ ಸ್ವಚ್ಛತಾ ಕಾರ್ಯ ನಡೆದಿದೆ ಎಂದು ವಿವರಿಸಿದರು:

ಬೆಸ್ಕಾಮ್‌ನ ಸ್ವಚ್ಛತಾ ಬೆಂಗಳೂರು ಅಭಿಯಾನವು 356 ಕಂಬಗಳು, 10 ಟ್ರಾನ್ಸ್‌ಫಾರ್ಮರ್‌ ಕೇಂದ್ರಗಳು, 199 ಇತರ ಮೂಲಸೌಕರ್ಯ ಕಾರ್ಯಗಳು ಮತ್ತು 323 ಜಿಎಸ್ ಆಪರೇಟಿಂಗ್ ರಾಡ್‌ಗಳ ಮಾರ್ಪಾಡುಗಳ ಕೆಲಸವನ್ನು ಕೈಗೆತ್ತಿಕೊಂಡಿತು. ಈ ಅಭಿಯಾನವು 1,730 ಡಿಟಿಸಿ ಯಾರ್ಡ್‌ಗಳು ಮತ್ತು 411 ಆರ್‌ಎಂಯು ಯಾರ್ಡ್‌ಗಳು ಮತ್ತು 383 ಸ್ಪನ್ ಪೋಲ್/ಡಿಪಿ ಯಾರ್ಡ್‌ಗಳ ಶುಚಿಗೊಳಿಸುವಿಕೆಯನ್ನು ಒಳಗೊಂಡಿತ್ತು, ಜೊತೆಗೆ 101 ಫೀಡರ್ ಪಿಲ್ಲರ್ ಬಾಕ್ಸ್ ರಿವೈರಿಂಗ್ ಮತ್ತು ಯಾರ್ಡ್-ಕ್ಲೀನಿಂಗ್ ಕೆಲಸಗಳು ಮತ್ತು 39 ಕಂಬ ರಿವೈರಿಂಗ್ ಮತ್ತು ಯಾರ್ಡ್-ಕ್ಲೀನಿಂಗ್ ಕೆಲಸಗಳನ್ನು ಸಹ ಒಳಗೊಂಡಿತ್ತು.

ಬೆಸ್ಕಾಂ ಎಂಡಿ ಏನಂತಾರೆ?:

​”ಬೆಂಗಳೂರು ನಗರವನ್ನು ಸ್ವಚ್ವವಾಗಿಡುವ ಕಾರ್ಯದಲ್ಲಿ ಬೆಸ್ಕಾಂ ಸದಾ ಮುಂಚೂಣಿಯಲ್ಲಿರುತ್ತದೆ. ಇಂಧನ ಸಚಿವರ ಸೂಚನೆ ಮೇರೆಗೆ, ತಾಂತ್ರಿಕ ಪರಿಣಿತರ ಮಾರ್ಗದರ್ಶನದಲ್ಲಿ ಅನುಪಯುಕ್ತ ವಿದ್ಯುತ್ ಸಲಕರಣೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುತ್ತಿದ್ದೇವೆ. ಭಾನುವಾರವೂ ಈ ಕಾರ್ಯಾಚರಣೆ ಮುಂದುವರಿಯಲಿದೆ,” ಎಂದು ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.

ಇಂಧನ ​ಸಚಿವರ ಭರವಸೆ:

​”ಬೆಸ್ಕಾಂ ಕೇವಲ ಜನತೆಗೆ ವಿದ್ಯುತ್ ಒದಗಿಸುವುದಷ್ಟೇ ಅಲ್ಲ, ಅವರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತದೆ. ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಸೂಕ್ತ ಮಾರ್ಗ ಅಗತ್ಯ. ಈ ತಿಂಗಳ ಅಂತ್ಯದೊಳಗೆ ನಾವು ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಕಸಮುಕ್ತ ವಾತಾವರಣವನ್ನು ಖಂಡಿತವಾಗಿ ನಿರ್ಮಿಸಿಕೊಡಲಿದ್ದೇವೆ.”

– ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವ

WhatsApp Join our WhatsApp Channel
Previous Post

ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

Please login to join discussion

Like Us on Facebook

Follow Us on Twitter

Recent News

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

August 8, 2026

ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

August 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

August 8, 2026

ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

August 8, 2026

Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

August 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group