ಬೆಂಗಳೂರು, ಜು.23 www.bengaluruwire.com: ಸಿಲಿಕಾನ್ ಸಿಟಿ ಮಂದಿ ಕಾತುರದಿಂದ ಕಾಯುತ್ತಿರುವ ಲಾಲ್ಬಾಗ್ನ (Lalbagh) ಪ್ರಸಿದ್ಧ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ.
ಈ ಬಾರಿ 2026ರ ಆಗಸ್ಟ್ 6 ರಿಂದ 17ರವರೆಗೆ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನವು “ಶ್ರೀ ಗಂಗ ಸಾಮ್ರಾಜ್ಯ ವೈಭವ – ಕರ್ನಾಟಕದ ಮೊಟ್ಟ ಮೊದಲ ರಾಜವಂಶ” ಎಂಬ ಆಕರ್ಷಕ ಐತಿಹಾಸಿಕ ವಿಷಯದೊಂದಿಗೆ ಕಂಗೊಳಿಸಲು ಸಜ್ಜಾಗಿದೆ.
ಈ ಫಲಪುಷ್ಪ ಪ್ರದರ್ಶನದ ಪ್ರಯುಕ್ತ, ತೋಟಗಾರಿಕೆ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು, ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳಿಗಾಗಿ ಅನೇಕ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಿದೆ. ಜೊತೆಗೆ, ಲಾಲ್ಬಾಗ್ ಆವರಣದಲ್ಲಿ ಇಲಾಖಾ ಮಳಿಗೆಗಳ ಹಂಚಿಕೆಗೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ಪರ್ಧೆಗಳ ವಿವರ ಮತ್ತು ಅರ್ಜಿ ಸಲ್ಲಿಸುವ ದಿನಾಂಕ:

1. ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ತರಕಾರಿ ಕೆತ್ತನೆ ಸ್ಪರ್ಧೆ:
ಅರ್ಜಿ ವಿತರಣೆ: ಜುಲೈ 27 ರಿಂದ ಆಗಸ್ಟ್ 04
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 04
ಸಂಪರ್ಕಿಸಬೇಕಾದವರು: ತೋಟಗಾರಿಕೆ ಅಪರ ನಿರ್ದೇಶಕರು (ಯೋಜನೆ), ಲಾಲ್ಬಾಗ್.
ಮಾಹಿತಿಗಾಗಿ ಸಂಪರ್ಕಿಸಿ: ತಾರಕೇಶ್ವರಿ ಕೆ.ಆರ್ (8497048733) ಅಥವಾ ಪುಷ್ಪಲತಾ ಎಂ (8904592122).
2. ಉದ್ಯಾನವನಗಳು, ತೋಟಗಳು ಹಾಗೂ ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆ:
ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನಗಳು, ತಾರಸಿ ತೋಟ, ತರಕಾರಿ ಮತ್ತು ಔಷಧಿ ಗಿಡಗಳ ಸ್ಪರ್ಧೆ ಇದಾಗಿದೆ.
ಅರ್ಜಿ ವಿತರಣೆ: ಜುಲೈ 27 ರಿಂದ ಆಗಸ್ಟ್ 04, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 06, 2026
ಸಂಪರ್ಕಿಸಬೇಕಾದವರು: ತೋಟಗಾರಿಕೆ ಅಪರ ನಿರ್ದೇಶಕರು (ತೋಟದ ಬೆಳೆಗಳು), ಲಾಲ್ಬಾಗ್.
ಮಾಹಿತಿಗಾಗಿ ಸಂಪರ್ಕಿಸಿ: ಚಂದ್ರಶೇಖರ್ ವೈ. ಸಿ (9845549545), ವಿನೋದ್ ರಾಯರ್ (9886819217) ಅಥವಾ ನವೀನ್ ಕುಮಾರ್ (9844199867).
3. ಇಲಾಖಾ ಮಳಿಗೆಗಳ ಹಂಚಿಕೆ:
ಅರ್ಜಿ ವಿತರಣೆ: ಜುಲೈ 27 ಮತ್ತು 28, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2026
ಸಂಪರ್ಕಿಸಬೇಕಾದವರು: ತೋಟಗಾರಿಕೆ ಅಪರ ನಿರ್ದೇಶಕರು (ಉದ್ಯಾನವನಗಳು ಮತ್ತು ಪುಷ್ಪಾಭಿವೃದ್ಧಿ).
ಮಾಹಿತಿಗಾಗಿ ಸಂಪರ್ಕಿಸಿ: ಶ್ರೀಮತಿ ಸಕ್ಕುಬಾಯಿ (8217377805) ಅಥವಾ ಚಿಕ್ಕಣ್ಣ ಗೌಡ (9964763539).
ಗಮನಿಸಿ: ಆಸಕ್ತರು ಕಚೇರಿ ವೇಳೆಯಲ್ಲಿ (ಬೆಳಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ) ಖುದ್ದಾಗಿ ಭೇಟಿ ನೀಡಿ ಅರ್ಜಿ ಪಡೆಯಬಹುದು. ಉದ್ಯಾನವನಗಳ ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿಗಳನ್ನು ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ https://horticulturedir.karnataka.gov.in ಮೂಲಕವೂ ಆನ್ಲೈನ್ನಲ್ಲಿ ಪಡೆಯಬಹುದಾಗಿದೆ ಎಂದು ಲಾಲ್ಬಾಗ್ ಸಸ್ಯತೋಟದ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















