Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೃಹತ್ ನೋಂದಣಿ ಹಗರಣ ಬಯಲಿಗೆ: ಸರ್ಜಾಪುರ ಸೇರಿದಂತೆ 5 ಮಂದಿ ಉಪನೋಂದಣಾಧಿಕಾರಿಗಳ ಅಮಾನತು

ಕಾವೇರಿ-2 ತಂತ್ರಾಂಶದ ‘ಕೋರ್ಟ್ ಆದೇಶ’ ಆಯ್ಕೆ ದುರ್ಬಳಕೆ; ಇ-ಸ್ವತ್ತು ಇಲ್ಲದಿದ್ದರೂ ಅಕ್ರಮವಾಗಿ ದಸ್ತಾವೇಜು ನೋಂದಣಿ; ನೋಂದಣಿ ಮಹಾಪರಿವೀಕ್ಷಕ ಮುಲ್ಲೈ ಮುಹಿಲನ್ ಅವರಿಂದ ಕಠಿಣ ಕ್ರಮ.

by Bengaluru Wire Desk
January 6, 2026
in Bengaluru Focus, News Wire
Reading Time: 2 mins read
0

ಬೆಂಗಳೂರು, ಜ.06 www.bengaluruwire.com : ರಾಜಧಾನಿಯ ರಿಯಲ್ ಎಸ್ಟೇಟ್ ವಲಯದಲ್ಲಿ ತಲ್ಲಣ ಮೂಡಿಸುವಂತಹ ಬೃಹತ್ ಅಕ್ರಮ ನೋಂದಣಿ ಹಗರಣವೊಂದು ಬೆಳಕಿಗೆ ಬಂದಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ‘ಕಾವೇರಿ-2’ ತಂತ್ರಾಂಶದಲ್ಲಿನ ಲೋಪಗಳನ್ನು ಬಳಸಿಕೊಂಡು, ನ್ಯಾಯಾಲಯದ ಆದೇಶವಿದೆ ಎಂದು ಸುಳ್ಳು ಮಾಹಿತಿ ನೀಡಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಗಳನ್ನು ಅಕ್ರಮವಾಗಿ ನೋಂದಣಿ ಮಾಡಲಾಗಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಜಾಪುರ, ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪನೋಂದಣಿ ಕಚೇರಿಯ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಮುದ್ರಾಂಕಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇನ್ಫೋಸಿಸ್ ಭೂಮಿಗೆ ಕನ್ನ? ಸರ್ಜಾಪುರದಲ್ಲಿ ಮಹಾ ಮೋಸ:

ಸರ್ಜಾಪುರ ಉಪನೋಂದಣಿ ಕಚೇರಿಯಲ್ಲಿ ನಡೆದಿರುವ ಅವ್ಯವಹಾರ ಬೆಚ್ಚಿಬೀಳಿಸುವಂತಿದೆ. ಇನ್ಫೋಸಿಸ್ ಲಿಮಿಟೆಡ್ ಕಂಪನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ನಿಯಮಬಾಹಿರವಾಗಿ ಖಾಸಗಿ ಕಂಪನಿಯೊಂದಕ್ಕೆ ಪರಭಾರೆ ಮಾಡಲಾಗಿದೆ. ಸರ್ಜಾಪುರ ಉಪನೋಂದಣಾಧಿಕಾರಿ ರವಿ ಸಂಕನಗೌಡ ಎಸ್. ಅವರು, ಯಾವುದೇ ನೈಜ ಸಿವಿಲ್ ನ್ಯಾಯಾಲಯದ ಆದೇಶವಿಲ್ಲದಿದ್ದರೂ, ತಂತ್ರಾಂಶದಲ್ಲಿ ‘Conveyance of decree or final order of any Civil Court’ (ಸಬ್-ಆರ್ಟಿಕಲ್ 20) ಎಂಬ ಆಯ್ಕೆಯನ್ನು ಬಳಸಿಕೊಂಡು ಇನ್ಫೋಸಿಸ್ ಆಸ್ತಿಯನ್ನು ನೋಂದಣಿ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ 2014ರ ಸುತ್ತೋಲೆಯಂತೆ ಗ್ರಾಮಾಂತರ ಪ್ರದೇಶದ ಆಸ್ತಿಗಳಿಗೆ ‘ಇ-ಸ್ವತ್ತು’ ಕಡ್ಡಾಯವಾಗಿದ್ದರೂ, ಇನ್ಫೋಸಿಸ್ ಕಂಪನಿಯ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕತ್ವದ ವಿವರಗಳನ್ನು ಭೂಮಿ ತಂತ್ರಾಂಶದಿಂದ ಆಮದು ಮಾಡಿಕೊಳ್ಳುವಾಗ ಭೌತಿಕವಾಗಿ ತಿದ್ದಲಾಗಿದೆ. ಸುಮಾರು 24ಕ್ಕೂ ಹೆಚ್ಚು ಕ್ರಯಪತ್ರಗಳನ್ನು ಈ ರೀತಿ ಅಕ್ರಮವಾಗಿ ನೋಂದಣಿ ಮಾಡಲಾಗಿದ್ದು, ರವಿ ಸಂಕನಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ತಂತ್ರಾಂಶದ ಲೋಪ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತ ಅಧಿಕಾರಿಗಳು:

ಕೇವಲ ಸರ್ಜಾಪುರ ಮಾತ್ರವಲ್ಲದೆ, ನಗರದ ಇತರ ಕಚೇರಿಗಳಲ್ಲೂ ಇದೇ ಮಾದರಿಯ ಅಕ್ರಮಗಳು ನಡೆದಿವೆ. ಕಾವೇರಿ-2 ತಂತ್ರಾಂಶದಲ್ಲಿ ನ್ಯಾಯಾಲಯದ ಆದೇಶವಿದ್ದರೆ ಇ-ಸ್ವತ್ತು ಅಥವಾ ಖಾತಾ ಇಲ್ಲದಿದ್ದರೂ ನೋಂದಣಿಗೆ ಅವಕಾಶವಿರುವುದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಸುಳ್ಳು ಕಾರಣಗಳನ್ನು ನಮೂದಿಸಿ ದಸ್ತಾವೇಜುಗಳನ್ನು ನೋಂದಾಯಿಸಿದ್ದಾರೆ.

ಅಮಾನತಾದ ಅಧಿಕಾರಿಗಳ ವಿವರ:

ಜಿಲ್ಲಾ ನೋಂದಣಾಧಿಕಾರಿಗಳ ತನಿಖಾ ವರದಿಯ ಅನ್ವಯ, ಈ ಕೆಳಕಂಡ ಅಧಿಕಾರಿಗಳು ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗಿದ್ದಾರೆ:

 * ರವಿ ಸಂಕನಗೌಡ ಎಸ್. (ಉಪನೋಂದಣಾಧಿಕಾರಿ, ಸರ್ಜಾಪುರ): ಇನ್ಫೋಸಿಸ್ ಆಸ್ತಿ ಪ್ರಕರಣ ಮತ್ತು ನಕಲಿ ಕೋರ್ಟ್ ಆದೇಶ ಆಯ್ಕೆ ಬಳಕೆ.

 * ಪ್ರಭಾವತಿ (ಹಿರಿಯ ಉಪನೋಂದಣಾಧಿಕಾರಿ, ಹಲಸೂರು): ಇ-ಸ್ವತ್ತು ಮಾಹಿತಿ ಇಲ್ಲದೆ 12 ದಸ್ತಾವೇಜುಗಳ ಅಕ್ರಮ ನೋಂದಣಿ.

 * ಶ್ರೀಧರ್ (ಪ್ರಥಮ ದರ್ಜೆ ಸಹಾಯಕ/ ಪ್ರಭಾರ ಸಬ್-ರಿಜಿಸ್ಟ್ರಾರ್, ಬಾಣಸವಾಡಿ): 3 ದಸ್ತಾವೇಜುಗಳ ನಿಯಮಬಾಹಿರ ನೋಂದಣಿ.

 * ಗಿರೀಶ್ಚಂದ್ರ (ಉಪನೋಂದಣಾಧಿಕಾರಿ, ವರ್ತೂರು): ಬಾಣಸವಾಡಿಯಲ್ಲಿ 1 ಮತ್ತು ವರ್ತೂರಿನಲ್ಲಿ 14 ಸೇರಿ ಒಟ್ಟು 15 ದಸ್ತಾವೇಜುಗಳ ಅಕ್ರಮ ನೋಂದಣಿ.

 * ಸತೀಶ್ ಕುಮಾರ್ ಎನ್. (ಉಪನೋಂದಣಾಧಿಕಾರಿ, ಬಾಣಸವಾಡಿ): ಬರೋಬ್ಬರಿ 28 ದಸ್ತಾವೇಜುಗಳನ್ನು ಇ-ಸ್ವತ್ತು ಇಲ್ಲದೆ ನೋಂದಣಿ ಮಾಡಿದ ಆರೋಪ.

ಸಾಕ್ಷ್ಯ ನಾಶದ ಭೀತಿ: ಕೇಂದ್ರ ಕಚೇರಿಗೆ ಎತ್ತಂಗಡಿ:

ಈ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ಪರಿಗಣಿಸಿರುವ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಮುಲ್ಲೈ ಮುಹಿಲನ್, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ನಿಯಮ 10(1)(ಡಿ) ಅನ್ವಯ ಇವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಅಮಾನತು ಅವಧಿಯಲ್ಲಿ ಇವರು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಈ ಹಗರಣವು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವುದು ಮಾತ್ರವಲ್ಲದೆ, ಕಾವೇರಿ-2 ತಂತ್ರಾಂಶದ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

WhatsApp Join our WhatsApp Channel
Previous Post

KSRTC News | ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ: ಪ್ರತಿಷ್ಠಿತ ಬಸ್‌ಗಳ ಪ್ರಯಾಣ ದರದಲ್ಲಿ ಭರ್ಜರಿ ಕಡಿತ

Next Post

ಸೋಲಾರ್ ತ್ಯಾಜ್ಯ ನಿರ್ವಹಣೆಗೆ ಹೊಸ ಅಸ್ತ್ರ: 2029ರಿಂದ ಪ್ರತ್ಯೇಕ ನಿಯಮ, ಇ-ತ್ಯಾಜ್ಯ ಪಟ್ಟಿಯಿಂದ ಮುಕ್ತಿ

Next Post

ಸೋಲಾರ್ ತ್ಯಾಜ್ಯ ನಿರ್ವಹಣೆಗೆ ಹೊಸ ಅಸ್ತ್ರ: 2029ರಿಂದ ಪ್ರತ್ಯೇಕ ನಿಯಮ, ಇ-ತ್ಯಾಜ್ಯ ಪಟ್ಟಿಯಿಂದ ಮುಕ್ತಿ

ಆಧಾರ್ PVC ಕಾರ್ಡ್ ದರದಲ್ಲಿ ಏರಿಕೆ: ಬೆಲೆ ಹೆಚ್ಚಳಕ್ಕೆ ಕಾರಣವೇನು? ಅರ್ಜಿ ಸಲ್ಲಿಕೆ ಹೇಗೆ?

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group