Wednesday, May 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

    ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ನಿಮ್ಮ ಕೇಸ್‌ಗಳಿಗೆ ಮುಕ್ತಿ: ಕರ್ನಾಟಕದ 4,328 ಪ್ರಕರಣಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಲೋಕ ಅದಾಲತ್

    ಕೆಎಸ್‌ಎಟಿ ರದ್ದತಿ ಪ್ರಸ್ತಾವನೆಗೆ ನೌಕರರ ಸಂಘದ ತೀವ್ರ ವಿರೋಧ: ‘ನ್ಯಾಯಮಂಡಳಿ ಮುಂದುವರಿಸಿ’ ಎಂದು ಸಮಿತಿಗೆ ಮನವಿ

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

  • Bengaluru Focus

    ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

    ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

    GBA News | ಬೆಂಗಳೂರು ಮಳೆಗಾಲದ ಮುನ್ನೆಚ್ಚರಿಕೆ: ಅವಘಡ ತಡೆಗೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

    ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಬೆಂಗಳೂರಿನ ಶರತ್ ಆರ್. ಅಶೋಕ್

    ಪೀಣ್ಯ ಫ್ಲೈಓವರ್ ಬಳಕೆದಾರರ ಗಮನಕ್ಕೆ: ಮೇ 5ರಿಂದ 3 ದಿನಗಳ ಕಾಲ ಸಂಚಾರ ಸಂಪೂರ್ಣ ಬಂದ್

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

SPCIAL REVIEW | ನೀಲಿ ಕುರುಂಜಿ ನೀಲಗಿರಿ ಕಾಡಿನ ನಗ್ನ ಸತ್ಯಗಳು – ಎ ಶೇರ್ಡ್ ವೈಲ್ಡ್ನೆಸ್ ಸಾಕ್ಷ್ಯಚಿತ್ರ

ನೀಲಗಿರಿ ಪರ್ವತ ಶ್ರೇಣಿಯ ಅನನ್ಯ ದೃಶ್ಯಕಾವ್ಯ | ನೀಲಗಿರಿ ಬೆಟ್ಟದಲ್ಲಿ ಪ್ರಕೃತಿಯಲ್ಲಿನ ಬದಲಾವಣೆಗಳ ಬಗ್ಗೆ ನಾಗರೀಕರನ್ನು ಎಚ್ಚರಿಸುವ ನಿಸರ್ಗದ ಕುರಿತ ಡಾಕ್ಯುಮೆಂಟರಿ

by Bengaluru Wire Desk
July 20, 2025
in BW Special, Public interest
Reading Time: 2 mins read
0
  • ಸಾಕ್ಷ್ಯಾಚಿತ್ರ ವಿಶ್ಲೇಷಣೆ : ವ್ಯೋಮಕೇಶ್.ಎಂ, ಹಿರಿಯ ಪತ್ರಕರ್ತರು

ಪಶ್ಚಿಮ ಘಟ್ಟಗಳ ಮಡಿಲಲ್ಲಿ ಅರಳಿ ನಿಂತಿರುವ ನೀಲಿ ಬೆಟ್ಟಗಳು, ಅಂದರೆ ನೀಲಗಿರಿ, ಭೌಗೋಳಿಕ ಗಡಿಗಳನ್ನು ಮೀರಿದ ಒಂದು ಅದ್ಭುತ ಲೋಕ. ತಮಿಳುನಾಡು, ಕರ್ನಾಟಕ, ಮತ್ತು ಕೇರಳ ರಾಜ್ಯಗಳ ತ್ರಿಕೋನದಲ್ಲಿ, ಪಶ್ಚಿಮ ಮತ್ತು ಪೂರ್ವ ಘಟ್ಟಗಳನ್ನು ಸಮನ್ವಯಗೊಳಿಸುವ ಈ ಪರ್ವತ ಶ್ರೇಣಿಯ ಅನಾವರಣವು “Nilgiris: A Shared Wilderness” ಎಂಬ ಸಾಕ್ಷ್ಯಚಿತ್ರದ ಮೂಲಕ ಈಗ ನಿಮ್ಮೆದುರಿದೆ. ಕನ್ನಡಿಗ ನಿರ್ದೇಶಕ ಸಂದೇಶ್ ಕಡೂರ್ ಅವರ ಕಲ್ಪನೆಯಲ್ಲಿ ಅರಳಿದ ಈ ದೃಶ್ಯಕಾವ್ಯವು ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಸೆಳೆಯುತ್ತಿದೆ.

ನೀಲಗಿರಿ: ಹೆಸರಿನ ಹಿಂದಿನ ಸೌಂದರ್ಯ ಮತ್ತು ತತ್ವ :

‘ನೀಲಗಿರಿ’ ಅಥವಾ ‘ನೀಲಿ ಬೆಟ್ಟಗಳು’ ಎಂಬ ಹೆಸರು, ಇಲ್ಲಿ ವ್ಯಾಪಕವಾಗಿ ಕಂಡುಬರುವ ನೀಲಿಬಣ್ಣದ ಕುರಿಂಜಿ ಹೂಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ. ಈ ಹೂಗಳು ತಮ್ಮ ಅನನ್ಯ ಸೌಂದರ್ಯದಿಂದ ಬೆಟ್ಟಗಳಿಗೆ ವಿಶಿಷ್ಟ ನೀಲಿ ಛಾಯೆಯನ್ನು ನೀಡುತ್ತವೆ. ಆದರೆ, “Nilgiris: A Shared Wilderness” ಎಂಬ ಶೀರ್ಷಿಕೆ ಕೇವಲ ಭೌಗೋಳಿಕ ಅಥವಾ ಸಸ್ಯಶಾಸ್ತ್ರೀಯ ಅರ್ಥಗಳನ್ನು ಮೀರಿದೆ. 

ಸುಮಾರು ಎರಡು ಶತಮಾನಗಳ ಹಿಂದೆ ತೋಡ ಮತ್ತು ಇರುಳಿಗ ಬುಡಕಟ್ಟು ಜನಾಂಗದವರ ನೆಲೆಯಾಗಿದ್ದ ಈ ಪ್ರದೇಶ, ಇಂದು ನವನಾಗರಿಕತೆಯ ಹಿಡಿತಕ್ಕೆ ಸಿಲುಕಿ ತನ್ನ ‘ವನ್ಯತೆ’ಯ ಬಹುಭಾಗವನ್ನು ಕಳೆದುಕೊಂಡಿದೆ. ಆದರೂ, ಉಳಿದಿರುವ ಅಲ್ಪ ಪ್ರದೇಶವನ್ನು ಸಸ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಮನುಷ್ಯರೊಂದಿಗೆ ‘ಹಂಚಿಕೊಂಡು’ ಬದುಕುತ್ತಿವೆ. ಈ ಹಂಚಿಕೆ, ಸಹಬಾಳ್ವೆಯ ತತ್ವವನ್ನು ಸಾಕ್ಷ್ಯಚಿತ್ರ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.

ಮಾನವ-ವನ್ಯಜೀವಿ ಸಂಘರ್ಷದ ಮೌನ ವೇದನೆ :

ಕಾಡುಗಳ ನಾಶ, ಅತಿಯಾದ ವ್ಯವಸಾಯ ಮತ್ತು ಅನಿಯಂತ್ರಿತ ನಗರೀಕರಣದಿಂದಾಗಿ ವನ್ಯಜೀವಿಗಳ ನೆಲೆದಾಣಗಳು ತೀವ್ರವಾಗಿ ಕುಗ್ಗುತ್ತಿವೆ. ಈ ಸಂದರ್ಭದಲ್ಲಿ, ಪ್ರಾಣಿ-ಪಕ್ಷಿ ಸಂಕುಲಗಳು ಮಾನವ ನಿರ್ಮಿತ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ. ಮಾನವರು, ಅವರ ವಾಹನಗಳು, ಮತ್ತು ತ್ಯಾಜ್ಯದ ರಾಶಿಗಳ ಜೊತೆಗೇ ಬದುಕಲು ಪ್ರಾಣಿಗಳು ಕಲಿತುಕೊಂಡಿವೆ. ಚಹಾ ಮತ್ತು ಕಾಫಿ ತೋಟಗಳಲ್ಲಿ ಹಗಲಿನಲ್ಲಿ ಮಾನವರ ಸಂಚಾರವಿದ್ದರೆ, ಇರುಳಿನಲ್ಲಿ ಪ್ರಾಣಿಗಳು ಆಹಾರ ಹುಡುಕುತ್ತವೆ. ಮಾನವ ನಿರ್ಮಿತ ಆಸ್ತಿಗಳಿಗೆ ಹಾನಿಯಾಗದಂತೆ ತಮ್ಮ ಆಹಾರವನ್ನು ಕಂಡುಕೊಳ್ಳುವ ಪ್ರಾಣಿಗಳ ಸೂಕ್ಷ್ಮ ಸಂವೇದನೆ, ಮನುಷ್ಯನ ಸ್ವಾರ್ಥ ಗುಣಕ್ಕೆ ಅವುಗಳ ಬದುಕಿನ ಮೂಲಕ ವ್ಯಂಗ್ಯವಾದ ಪ್ರತಿಕ್ರಿಯೆ ನೀಡುತ್ತದೆ. ಈ ಸಂಘರ್ಷಗಳು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ನಡೆಯುವ ಹೋರಾಟವನ್ನು ಸಾಕ್ಷ್ಯಚಿತ್ರವು ಮನಮುಟ್ಟುವಂತೆ ಚಿತ್ರಿಸಿದೆ.

ವಿಸ್ಮಯಕಾರಿಯಾದ ನೀಲಗಿರಿಯ ಜೀವವೈವಿಧ್ಯ :

ಎಲ್ಲಾ ಸವಾಲುಗಳ ನಡುವೆಯೂ, ನೀಲಗಿರಿ ಬೆಟ್ಟಗಳು ಅದ್ಭುತ ಜೀವವೈವಿಧ್ಯವನ್ನು ಉಳಿಸಿಕೊಂಡಿರುವುದು ಪರಿಸರ ಪ್ರೇಮಿಗಳಿಗೆ ವಿಸ್ಮಯ ಮೂಡಿಸುತ್ತದೆ. 2637 ಮೀಟರ್ ಎತ್ತರದ ದೊಡ್ಡ ಬೆಟ್ಟ ಮತ್ತು ಸುತ್ತಲಿನ ಶೋಲಾ ಕಾಡುಗಳಲ್ಲಿ ಹುಲಿಗಳು, ಆನೆಗಳು, ಚಿರತೆಗಳು, ಕರಡಿಗಳು, ಕತ್ತೆಕಿರುಬಗಳು, ಕಾಡುನಾಯಿಗಳು, ಕಾಡುಹಂದಿ, ಕಾಡೆಮ್ಮೆಗಳು, ಜಿಂಕೆ-ಸಾರಂಗಳು ಕಾಣಸಿಗುತ್ತವೆ. ಮೋಯಾರ್ ನದಿಯ ತಟದಲ್ಲಿ ಮಂಗಗಳು, ನವಿಲು, ಮಂಗಟ್ಟೆ ಹಕ್ಕಿ, ಹದ್ದುಗಳು, ಗಿಣಿಗಳು, ಮೈನಾ ಮುಂತಾದ ಪಕ್ಷಿಗಳು ವಿಹರಿಸುತ್ತವೆ. ಅಪರೂಪದ ಕಪ್ಪೆ ಪ್ರಭೇದಗಳು, ಮತ್ತು ಶಿಲಾಯುಗದ ಮಾನವರು ರಚಿಸಿರುವ ರೇಖಾಚಿತ್ರಗಳು ಇಲ್ಲಿನ ಐತಿಹಾಸಿಕ ಮತ್ತು ಜೈವಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. ಯುನೆಸ್ಕೋ ನೀಲಗಿರಿ ಪರ್ವತ ಶ್ರೇಣಿಯನ್ನು ಭಾರತದ ಮೊದಲ ಜೀವಮಂಡಲ ಮೀಸಲು ಪ್ರದೇಶ (Biosphere Reserve) ಎಂದು ಮಾನ್ಯ ಮಾಡಿದೆ.

ಸಂದೇಶ್ ಕಡೂರ್ ಅವರ ದೃಶ್ಯ ವೈಭವ :

ಅತ್ಯುತ್ತಮ ಛಾಯಾಗ್ರಹಣದಿಂದ ಕೂಡಿದ 75 ನಿಮಿಷಗಳ ಈ ಸಾಕ್ಷ್ಯಚಿತ್ರ, ತನ್ನ ಸಂದೇಶವನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ. ಸಂದೇಶ್ ಕಡೂರ್ ಮತ್ತು ನಕುಲ್ ರಾಜ್ ಅವರ ಅದ್ಭುತ ಕ್ಯಾಮರಾ ವರ್ಕ್, ನೀಲ್ ಅಧಿಕಾರಿ ಮತ್ತು ಸ್ಯಾಮ್ ಮಿಲ್ಸ್ ಅವರ ಮನಮುಟ್ಟುವ ಸಂಗೀತ, ಮತ್ತು ಸುಶೀಲಾ ರಾಮನ್ ಅವರ ಆಕರ್ಷಕ ನಿರೂಪಣಾ ಧ್ವನಿ ಸಾಕ್ಷ್ಯಚಿತ್ರಕ್ಕೆ ಜೀವ ತುಂಬಿವೆ. ಸಾಕ್ಷ್ಯಚಿತ್ರವು ಪರಿಸರ ಪ್ರೀತಿಯನ್ನು ಹೆಚ್ಚಿಸುವುದಲ್ಲದೆ, ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ದನಿ ಎತ್ತುವಂತೆ ಜಾಗೃತಿ ಮೂಡಿಸುತ್ತದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಸರ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚಿಂತಿಸುವಂತೆ ಎಚ್ಚರಿಸುತ್ತದೆ.

ಜುಲೈ 18 ರಂದು ಮಳೆಗಾಲದ ಹಸಿರು ಸಿರಿಯಿಂದ ಕಂಗೊಳಿಸುವ ಈ ಸಂದರ್ಭದಲ್ಲಿ, ನೀಲಗಿರಿ ಕಾಡಿನ ಕುರಿತಂತೆ ಬಿಡುಗಡೆಗೊಂಡ “Nilgiris: A Shared Wilderness” ಕೇವಲ ಒಂದು ಸಾಕ್ಷ್ಯಚಿತ್ರವಲ್ಲ, ಬದಲಾಗಿ ಮನುಕುಲ ಮತ್ತು ಪ್ರಕೃತಿಯ ನಡುವಿನ ಸೂಕ್ಷ್ಮ ಸಂಬಂಧವನ್ನು ಎತ್ತಿಹಿಡಿಯುವ ಒಂದು ಮಹತ್ವದ ಹೆಜ್ಜೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ದೃಶ್ಯಕಾವ್ಯ.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್, ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Felis Creations & Rohini Nilekani Philanthropies are delighted to share that 𝐍𝐢𝐥𝐠𝐢𝐫𝐢𝐬 – 𝐀 𝐒𝐡𝐚𝐫𝐞𝐝 𝐖𝐢𝐥𝐝𝐞𝐫𝐧𝐞𝐬𝐬, an award-winning documentary film by Sandesh Kadur, will be in cinemas from Friday, July 18th.

🎟️ Tickets on BookMyShowhttps://t.co/MsSnlXv1Ap pic.twitter.com/TVatI9gnKD

— Nandan Nilekani (@NandanNilekani) July 17, 2025
WhatsApp Join our WhatsApp Channel
Previous Post

ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ಬತ್ತಳಿಕೆಯಲ್ಲಿದೆ ಹಲವು ಅಸ್ತ್ರಗಳು

Next Post

ಮೈಸೂರಿಗೆ ಭವ್ಯ ಹೈಟೆಕ್ ಬಸ್ ನಿಲ್ದಾಣ: ₹120 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ

Next Post

ಮೈಸೂರಿಗೆ ಭವ್ಯ ಹೈಟೆಕ್ ಬಸ್ ನಿಲ್ದಾಣ: ₹120 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ

ಧರ್ಮಸ್ಥಳ ನಾಪತ್ತೆ ಪ್ರಕರಣ: ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ : ಸಾರ್ವಜನಿಕ ಒತ್ತಡಕ್ಕೆ ಕೊನೆಗೂ ಮಣಿದ ಸರ್ಕಾರ

Please login to join discussion

Like Us on Facebook

Follow Us on Twitter

Recent News

ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

May 6, 2026

ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

May 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

May 6, 2026

ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

May 6, 2026

ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

May 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group