Saturday, May 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

    ಅಕ್ಕಿ ಗೋದಾಮುವೊಂದರ ಸಾಂದರ್ಭಿಕ ಚಿತ್ರ.

    ದೇಶದ ಆಹಾರ ಭದ್ರತೆ ಭದ್ರ: ಬಫರ್ ಸ್ಟಾಕ್‌ಗಿಂತ ಮೂರು ಪಟ್ಟು ಹೆಚ್ಚು ಧಾನ್ಯ ಸಂಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಮೊದಲ ಹೈಟೆಕ್ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC) ಲೋಕಾರ್ಪಣೆ

    ಬುಲೆಟ್ ರೈಲು ಯೋಜನೆ: ಅಹಮದಾಬಾದ್‌ನಲ್ಲಿ 22 ದಿನಗಳಲ್ಲಿ 5 ಬೃಹತ್ ‘ಪೋರ್ಟಲ್ ಬೀಮ್’ ಅಳವಡಿಕೆ

    Assembly Election-2026 Results | ಪಂಚ ರಾಜ್ಯಗಳ ಚುನಾವಣಾ ಕದನ: ಅಸ್ಸಾಂ, ಬಂಗಾಳದಲ್ಲಿ ಕೇಸರಿ ಅಲೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅಬ್ಬರ

    H5N1 | ತುಮಕೂರಿನಲ್ಲಿ ನವಿಲುಗಳಿಗೆ ಹಕ್ಕಿಜ್ವರ ದೃಢ: ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

    Operation White Strike | ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: ₹1,745 ಕೋಟಿ ಮೌಲ್ಯದ 349 ಕೆಜಿ ಕೊಕೇನ್ ಜಪ್ತಿ

    ಮೊಬೈಲ್‌ಗೆ ಬಂತೇ ತುರ್ತು ಎಚ್ಚರಿಕೆ ಸಂದೇಶ? ಆತಂಕ ಬೇಡ, ಇದು ಕೇಂದ್ರ ಸರ್ಕಾರದ ಹೈಟೆಕ್ ‘ಟೆಸ್ಟ್’

    ಇನ್ನು ಟೋಲ್ ಪ್ಲಾಜಾಗಳಲ್ಲಿ ಕಾಯುವ ಕಿರಿಕಿರಿ ಇಲ್ಲ: ದೇಶದ ಮೊದಲ ‘ತಡೆರಹಿತ ಟೋಲ್’ ವ್ಯವಸ್ಥೆಗೆ ನಿತಿನ್ ಗಡ್ಕರಿ ಚಾಲನೆ

  • Bengaluru Focus

    BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

    BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

    GBA News | ಬೆಂಗಳೂರಿಗರಿಗೆ ಬಿಗ್ ರಿಲೀಫ್: ಇ-ಖಾತಾ ಅರ್ಜಿಯಲ್ಲಿ ತಪ್ಪಾಗಿದ್ದರೆ ನೀವೇ ಹಿಂಪಡೆಯಬಹುದು

    ಬಿಡಿಎ ನೌಕರರ ಸಂಘದ ಹೆಸರಿನಲ್ಲಿ ವಂಚನೆ: ಖಾಸಗಿ ವ್ಯಕ್ತಿಗೆ ಅಕ್ರಮ ನಿವೇಶನ ಹಂಚಿಕೆ, ಎಫ್‌ಐಆರ್ ದಾಖಲು

    ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗಡುವು

    ಬಿಡಿಎ ನೂತನ ಎಂಜಿನಿಯರ್ ಸದಸ್ಯರಾಗಿ ಪ್ರವೀಣ್ ಲಿಂಗಯ್ಯ ನೇಮಕ; ಸವಾಲುಗಳ ಬೆಟ್ಟದ ಮುಂದೆ ಹೊಸ ‘ಸಾರಥಿ’

    GBA Head Office Image

    ಜಿಬಿಎ ಚುನಾವಣೆ: ಮೇ 8ರಂದು ವಿಧಾನಸೌಧದಲ್ಲಿ ಮಹತ್ವದ ಸಭೆ; ಶೀಘ್ರದಲ್ಲೇ 5 ನಗರ ಪಾಲಿಕೆಗಳಿಗೆ ಮತದಾನ ದಿನಾಂಕ ಘೋಷಣೆ?

    ಕೆ.ಆರ್. ವೃತ್ತದ ಕೆಳಸೇತುವೆ ಜಲಾವೃತ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೋಕಾಯುಕ್ತ ಗರಂ

    GBA News | ಬೆಂಗಳೂರು ಮಳೆಗಾಲದ ಮುನ್ನೆಚ್ಚರಿಕೆ: ಅವಘಡ ತಡೆಗೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Others

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರಿಗೆ ಮನವಿ: ರಾಜ್ಯಕ್ಕೆ 2 ರಕ್ಷಣಾ ಕಾರಿಡಾರ್‌ಗೆ ಪ್ರಬಲ ಬೇಡಿಕೆ

ಕರ್ನಾಟಕದ ರಕ್ಷಣಾ ವಲಯದ ಸಾಮರ್ಥ್ಯಕ್ಕೆ ಸಿಗಲಿದೆಯೇ ಮನ್ನಣೆ? ಮೇಕ್ ಇನ್ ಇಂಡಿಯಾಗೆ ಬಲ ತುಂಬಲು ಸರ್ಕಾರದಿಂದ ಹೊಸ ಹೆಜ್ಜೆ

by Bengaluru Wire Desk
July 10, 2025
in Others
Reading Time: 1 min read
0

ನವದೆಹಲಿ, ಜು.10 www.bengaluruwire.com : ಕರ್ನಾಟಕಕ್ಕೆ ಎರಡು ಪ್ರತ್ಯೇಕ ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಬುಧವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. 

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಲ್ಲಿ ಈ ಕಾರಿಡಾರ್‌ಗಳನ್ನು ಸ್ಥಾಪಿಸುವಂತೆ ನಿಯೋಗವು ಪ್ರಬಲವಾಗಿ ಒತ್ತಾಯಿಸಿದೆ.

ಈ ನಿಯೋಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಇಂಧನ ಸಚಿವ ಕೆ.ಜೆ. ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಉಪಸ್ಥಿತರಿದ್ದರು.

ಕರ್ನಾಟಕದ ರಕ್ಷಣಾ ವಲಯದ ಬೃಹತ್ ಕೊಡುಗೆ:

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್‌ ಕಾರಿಡಾರ್‌ಗಳನ್ನು ಮಂಜೂರು ಮಾಡಿದೆ. ಆದರೆ, ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ.75ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ಮೂರನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಗಳಿಸಿದೆ ಎಂದು ರಕ್ಷಣಾ ಸಚಿವರ ಗಮನಕ್ಕೆ ತಂದರು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ತಲಾ ಒಂದೊಂದು ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡುವುದರಿಂದ ಇದು ಕೇಂದ್ರದ ‘ಮೇಕ್‌ ಇನ್‌ ಇಂಡಿಯಾ’ ಉಪಕ್ರಮಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಸಹ ಪೂರಕ ಮಾಹಿತಿಗಳನ್ನು ಒದಗಿಸಿದರು.

ಉತ್ತರ ಕರ್ನಾಟಕದ ರಕ್ಷಣಾ ಉತ್ಪಾದನಾ ಕೇಂದ್ರಗಳು:

ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಾಲೂ ಫೋರ್ಜ್‌, ಏಕಸ್‌, ಬಿಕಾರ್‌ ಏರೋಸ್ಪೇಸ್‌, ವಾಲ್‌ಚಂದ್‌ ನಗರ್‌ ಇಂಡಸ್ಟ್ರೀಸ್‌ ಮುಂತಾದ ಪ್ರಮುಖ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಿಯೋಗವು ಎತ್ತಿ ತೋರಿಸಿತು. ಇದರ ಜೊತೆಗೆ, ಬೆಳಗಾವಿಯಲ್ಲಿ 250 ಎಕರೆ ವಿಸ್ತೀರ್ಣದಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್‌ ಉತ್ಪಾದನೆಯ ವಿಶೇಷ ಆರ್ಥಿಕ ವಲಯ (SEZ) ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ನಿಯೋಗವು ಮಾಹಿತಿ ನೀಡಿತು.

ದಕ್ಷಿಣ ಕರ್ನಾಟಕದ ವೈಮಾನಿಕ ಶಕ್ತಿ:

ಇನ್ನು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾರ್ವಜನಿಕ ವಲಯದ ಎಚ್‌ಎಎಲ್‌, ಕಾಲಿನ್ಸ್‌ ಏರೋಸ್ಪೇಸ್‌, ಡೈನಮ್ಯಾಟಿಕ್‌ ಟೆಕ್ನಾಲಜೀಸ್‌, ಸೆಂಟಮ್, ಸಾಸ್ಮೋಸ್‌, ಬೆಲ್ಲಾಟ್ರಿಕ್ಸ್‌ ಮುಂತಾದ ಪ್ರಮುಖ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಿವೆ. ಟಿಎಎಸ್‌ಎಲ್‌ ತನ್ನ ಅಂತಿಮ ಜೋಡಣಾ ಘಟಕವನ್ನು ಇಲ್ಲಿ ಆರಂಭಿಸುತ್ತಿದೆ.

ಏರ್‌ ಇಂಡಿಯಾ ಮತ್ತು ಇಂಡಿಗೋ ಕಂಪನಿಗಳು ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ (Maintenance, Repair, and Overhaul) ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ. ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸಹ ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ಕ್ರಾಫ್ಟ್‌ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ.67ರಷ್ಟಿದೆ ಎಂಬುದನ್ನೂ ನಿಯೋಗವು ರಕ್ಷಣಾ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿತು.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕರ್ನಾಟಕಕ್ಕೆ ಎರಡು ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗವು ರಾಜನಾಥ್‌ ಸಿಂಗ್‌ ಅವರನ್ನು ಒತ್ತಾಯಿಸಿತು. ಮನವಿ ಸ್ವೀಕರಿಸಿದ ರಾಜನಾಥ್‌ ಸಿಂಗ್‌, ಈ ಪ್ರಸ್ತಾವನೆಗಳನ್ನು ಸೂಕ್ತವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

WhatsApp Join our WhatsApp Channel
Previous Post

ಶಕ್ತಿ ಯೋಜನೆಗೆ ಭಾರಿ ಯಶಸ್ಸು: 500 ಕೋಟಿ ಪ್ರಯಾಣಿಕರ ಗಡಿ ದಾಟಿದ ಹಿನ್ನೆಲೆಯಲ್ಲಿ ಬಸ್ ಪೂಜೆಗೆ ಸಿದ್ಧತೆ

Next Post

Nursing Fees | ನರ್ಸಿಂಗ್ ಶುಲ್ಕ ಹೆಚ್ಚಳವಿಲ್ಲ: ಡಾ. ಶರಣಪ್ರಕಾಶ್‌ ಪಾಟೀಲ್‌ ಸ್ಪಷ್ಟನೆ

Next Post

Nursing Fees | ನರ್ಸಿಂಗ್ ಶುಲ್ಕ ಹೆಚ್ಚಳವಿಲ್ಲ: ಡಾ. ಶರಣಪ್ರಕಾಶ್‌ ಪಾಟೀಲ್‌ ಸ್ಪಷ್ಟನೆ

ಗಾಳಿ ಆಂಜನೇಯ ದೇವಸ್ಥಾನ ಸರ್ಕಾರಕ್ಕೆ: ಹುಂಡಿ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಕ್ರಮ

Please login to join discussion

Like Us on Facebook

Follow Us on Twitter

Recent News

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

May 9, 2026

BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ

May 8, 2026

ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

May 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group