Monday, August 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    “ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

  • Bengaluru Focus

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳು ಪತ್ತೆ ; 28 ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲು

ಔಷಧ ನಿಯಂತ್ರಣ ಮತ್ತು ಆಹಾರ ಸುರಕ್ಷತಾ ಇಲಾಖೆಯ ಕಾರ್ಯಾಚರಣೆ

by Bengaluru Wire Desk
April 9, 2025
in Life Style, Public interest
Reading Time: 2 mins read
0

ಬೆಂಗಳೂರು, ಏ.9 www.bengaluruwire.com : ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಔಷಧಗಳು ಹಾಗೂ ಕಾಂತಿವರ್ಧಕಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತೀವ್ರ ನಿಗಾ ವಹಿಸಿದೆ. ಇಲಾಖೆಯ ಔಷಧ ಆಡಳಿತ ವಿಭಾಗವು ಮಾರ್ಚ್ 2025 ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 41 ಅನುತ್ತಮ ಗುಣಮಟ್ಟದ ಔಷಧಗಳನ್ನು ಪತ್ತೆ ಮಾಡಿದೆ.

ಔಷಧ ಮಾದರಿಗಳ ವಿಶ್ಲೇಷಣೆ :

ಇಲಾಖೆಯ ಅಮಲು ಜಾರಿ ಅಧಿಕಾರಿಗಳು ಮಾರ್ಚ್ ತಿಂಗಳಲ್ಲಿ ಒಟ್ಟು 1,891 ಔಷಧ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದರು. ಈ ಮಾದರಿಗಳನ್ನು ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 1,298 ಮಾದರಿಗಳು ಉತ್ತಮ ಗುಣಮಟ್ಟದ್ದೆಂದು ದೃಢಪಟ್ಟಿವೆ. ಆದರೆ, 41 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ.

ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕ್ರಮ :

2024-25ನೇ ಸಾಲಿನಲ್ಲಿ ಔಷಧ ಮತ್ತು ಕಾಂತಿವರ್ಧಕಗಳ ಕಾಯ್ದೆ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಫೆಬ್ರವರಿ ತಿಂಗಳಲ್ಲಿ 10 ಮತ್ತು ಮಾರ್ಚ್ ತಿಂಗಳಲ್ಲಿ 18 ಸೇರಿದಂತೆ ಒಟ್ಟು 28 ಮೊಕದ್ದಮೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ ಕಳಪೆ ಗುಣಮಟ್ಟ :

ನಿರ್ದಿಷ್ಟವಾಗಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ 196 ಬ್ಯಾಚ್‌ಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 113 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಯಾರಿಕಾ ಸಂಸ್ಥೆಯಾದ ಪಶ್ಚಿಮ್ ಬಂಗಾ ಫಾರ್ಮಾಸ್ಯೂಟಿಕಲ್ಸ್ (Paschim Banga Pharmaceuticals) ವಿರುದ್ಧ ಮಾರ್ಚ್ ಅಂತ್ಯದವರೆಗೆ 78 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಇನ್ನಿತರ ಔಷಧ ತಯಾರಕರ ವಿರುದ್ಧ ಮೊಕದ್ದಮೆ :

ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸಿದ ಮತ್ತು ನಿಯಮ ಉಲ್ಲಂಘನೆ ಮಾಡಿದ ಇತರ ತಯಾರಿಕಾ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಅಂತಹ 43 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಇಲಾಖೆ ಅನುಮತಿ ನೀಡಿದೆ.

ಔಷಧ ಮಳಿಗೆಗಳ ಪರಿಶೀಲನೆ ಮತ್ತು ಲೈಸೆನ್ಸ್ ಅಮಾನತು :

ಫೆಬ್ರವರಿ 2025 ರಲ್ಲಿ ಔಷಧ ಆಡಳಿತದ ಅಧಿಕಾರಿಗಳು 1,872 ಔಷಧ ಮಾದರಿಗಳನ್ನು ವಿಶ್ಲೇಷಣೆಗಾಗಿ ಪಡೆದಿದ್ದು, 2,078 ಔಷಧ ಮಳಿಗೆಗಳನ್ನು ಪರಿಶೀಲಿಸಿದ್ದಾರೆ. ಈ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದ 215 ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

ಮಾರುಕಟ್ಟೆಯಿಂದ ಕಳಪೆ ಔಷಧ ಹಿಂಪಡೆಯುವಿಕೆ :

ರಾಜ್ಯದಲ್ಲಿ ಕಳಪೆ ಗುಣಮಟ್ಟವೆಂದು ಪತ್ತೆಯಾದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ವಿಶೇಷ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಲಾಗಿದೆ. ಈ ಅವಧಿಯಲ್ಲಿ ಸುಮಾರು 24,29,479/- ರೂಪಾಯಿ ಮೌಲ್ಯದ ಕಳಪೆ ಗುಣಮಟ್ಟದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುಧಾರಣಾ ಕ್ರಮಗಳು ಜಾರಿ :

ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಕಳಪೆ ದಾಸ್ತಾನುಗಳನ್ನು ಹಿಂಪಡೆಯಲು ಹಾಗೂ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಮತ್ತು ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ತಂತ್ರಾಂಶವು ಶೀಘ್ರದಲ್ಲೇ ಜಾರಿಗೆ ಬರಲಿದೆ.

ಬಾಟಲಿ ಕುಡಿಯುವ ನೀರಿನ ಗುಣಮಟ್ಟ ಕಳಪೆ :

ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದ್ದು, 255 ಮಾದರಿಗಳ ವರದಿ ಬಂದಿದೆ. ಅದರಲ್ಲಿ 72 ಮಾದರಿಗಳು ಸುರಕ್ಷಿತವಾಗಿದ್ದರೆ, 95 ಅಸುರಕ್ಷಿತ ಮತ್ತು 88 ಕಳಪೆ ಗುಣಮಟ್ಟದ್ದೆಂದು ತಿಳಿದುಬಂದಿದೆ.

ಕರಿದ ಬಟಾಣಿಗಳಲ್ಲಿ ಕೃತಕ ಬಣ್ಣ ಪತ್ತೆ :

ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 115 ಮಾದರಿಗಳನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. 46 ಮಾದರಿಗಳು ಸುರಕ್ಷಿತವಾಗಿದ್ದರೆ, 69 ಮಾದರಿಗಳು ಅಸುರಕ್ಷಿತವೆಂದು ವರದಿಯಾಗಿವೆ.

ಇತರ ಆಹಾರ ಪದಾರ್ಥಗಳ ತಪಾಸಣೆ :

ಮಾರ್ಚ್ ತಿಂಗಳಲ್ಲಿ ತುಪ್ಪ, ಖೋವಾ, ಪನ್ನೀರ್, ಸಿಹಿತಿಂಡಿ ಮತ್ತು ಖಾರ ಮಿಕ್ಚರ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗಿದೆ. ಇದಲ್ಲದೆ, ಸ್ಥಳೀಯ ಜ್ಯೂಸ್, ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್‌ಗಳ ಮಾದರಿಗಳನ್ನು ಸಹ ಪರೀಕ್ಷಿಸಲಾಗಿದೆ. ಲೋಪ ಕಂಡುಬಂದ 92 ಘಟಕಗಳಿಗೆ ನೋಟಿಸ್ ನೀಡಲಾಗಿದ್ದು, 6 ಘಟಕಗಳಿಗೆ ದಂಡ ವಿಧಿಸಲಾಗಿದೆ.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ :

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕ್ರಿಮಿ ಕೀಟಗಳ ನಿಯಂತ್ರಣ ಕ್ರಮಗಳ ಕುರಿತು 590 ಸ್ಥಳಗಳಿಗೆ ಭೇಟಿ ನೀಡಲಾಗಿದೆ. ನಿಯಮ ಪಾಲಿಸದ 214 ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, 11 ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

WhatsApp Join our WhatsApp Channel
Previous Post

PUC Results | ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ. 76.07 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ! ; ಈ ರೀತಿ ಫಲಿತಾಂಶ ನೋಡಿ

Next Post

ಮಲ್ಲೇಶ್ವರದ ಅನಧಿಕೃತ ವಾಣಿಜ್ಯ ಕಟ್ಟಡಕ್ಕೆ ಸ್ವಾಧೀನ ಪತ್ರ ನೀಡದಂತೆ ಹೈಕೋರ್ಟ್ ನಿರ್ದೇಶನ

Next Post
ಸಾಂದರ್ಭಿಕ ಚಿತ್ರ

ಮಲ್ಲೇಶ್ವರದ ಅನಧಿಕೃತ ವಾಣಿಜ್ಯ ಕಟ್ಟಡಕ್ಕೆ ಸ್ವಾಧೀನ ಪತ್ರ ನೀಡದಂತೆ ಹೈಕೋರ್ಟ್ ನಿರ್ದೇಶನ

BWSSB News | ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ : ಪರಿಷ್ಕೃತ ದರ ಮೇ ತಿಂಗಳ ಬಿಲ್ಲಿಗೆ ಅನ್ವಯ

Please login to join discussion

Like Us on Facebook

Follow Us on Twitter

Recent News

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026

ಭಾರತೀಯರ ಮನೆಗಳಲ್ಲಿನ ಒಟ್ಟಾರೆ ಚಿನ್ನದ ಸಂಗ್ರಹ ಬೆಟ್ಟದಷ್ಟು ಎತ್ತರವಿದೆ!!

August 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026

ಭಾರತೀಯರ ಮನೆಗಳಲ್ಲಿನ ಒಟ್ಟಾರೆ ಚಿನ್ನದ ಸಂಗ್ರಹ ಬೆಟ್ಟದಷ್ಟು ಎತ್ತರವಿದೆ!!

August 9, 2026

Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

August 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group