ಬೆಂಗಳೂರು, ಮೇ.31 www.bengaluruwire.com: ನಟ ದರ್ಶನ್ ಜೈಲು ಸೇರಿ ವರ್ಷ ಸಮೀಪಿಸುತ್ತಿದ್ದರೂ, ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಪತಿಯ ಮೇಲಿನ ಪ್ರೀತಿ ಹಾಗೂ ಕಾಳಜಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಪತಿಯನ್ನು ದೂರವಾಗಿರುವ ನೋವನ್ನು ಅವರು ಆಗಾಗ ಭಾವುಕ ಪೋಸ್ಟ್‌ಗಳ ಮೂಲಕ ಹೊರಹಾಕುತ್ತಿದ್ದಾರೆ.
ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಸ್ಟೋರಿಯಾಗಿ ಹಂಚಿಕೊಂಡಿರುವ ವಿಜಯಲಕ್ಷ್ಮಿ, ದರ್ಶನ್ ಅವರನ್ನು ಅತಿಯಾಗಿ ಮಿಸ್ ಮಾಡಿಕೊಳ್ಳುತ್ತಿರುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋದಲ್ಲಿ ದರ್ಶನ್ ಅವರು ಬೋಟ್‌ನಲ್ಲಿ ಏಕಾಂಗಿಯಾಗಿ ನಿಂತು ದೂರದ ದ್ವೀಪವೊಂದನ್ನು ನೋಡುತ್ತಿರುವ ದೃಶ್ಯವಿದೆ.
ಸುಮಧುರ ಗೀತೆಯೊಂದಿಗೆ ಬ್ಯಾಕ್ ಲುಕ್ ದರ್ಶನ:
ಅಂದಹಾಗೆ, ಈ ಫೋಟೋ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಸೆರೆಹಿಡಿಯಲಾದ ಸುಂದರ ಕ್ಷಣವಾಗಿದೆ. ಹಿನ್ನೆಲೆಯಲ್ಲಿ ಸುಮಧುರ ಗೀತೆಯೊಂದನ್ನು ಅಳವಡಿಸಿ, ದರ್ಶನ್ ಅವರ ಆಕರ್ಷಕ ಬ್ಯಾಕ್ ಲುಕ್ ಇರುವ ಈ ಫೋಟೋಶೂಟ್ ಅನ್ನು ವಿಜಯಲಕ್ಷ್ಮಿ ಅವರು ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ದರ್ಶನ್ ಅವರು ಜೈಲುವಾಸ ಅನುಭವಿಸುತ್ತಿರುವುದು ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ತೀವ್ರ ನೋವು ತಂದಿದೆ. ಮಾಹಿತಿಯ ಪ್ರಕಾರ, ಮುಂದಿನ ಒಂದು ವರ್ಷವೂ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಆದಾಗ್ಯೂ, ವಿಜಯಲಕ್ಷ್ಮಿ ಅವರು ಆಗಾಗ ದರ್ಶನ್ ಅವರ ಹಳೆಯ ನೆನಪುಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಪತಿಯ ಬರುವಿಕೆಗಾಗಿ ಕಾಯುತ್ತಿರುವ ಮುನ್ಸೂಚನೆ ನೀಡಿದ್ದಾರೆ.




















