Monday, October 12, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    Mysore Dasara 2026 | ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ: ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ

    ವಿಮಾನದೊಳಗೆ ನುಗ್ಗಿ ಸಿಜೆಪಿ ಮುಖಂಡರ ಬಂಧನ: ದೆಹಲಿಯಲ್ಲಿ ಹೈಡ್ರಾಮಾ!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಅಮೆರಿಕದಲ್ಲಿ ಭಾರತೀಯ ಐಟಿ ದಿಗ್ಗಜರಿಗೆ ಬಿಗ್ ಶಾಕ್: ಗ್ರೀನ್ ಕಾರ್ಡ್ ಪ್ರಕ್ರಿಯೆಯಿಂದ ಇನ್ಫೋಸಿಸ್, ಟಿಸಿಎಸ್ ಸೇರಿ 8 ಕಂಪನಿಗಳು ಬ್ಯಾನ್

    ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

    IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

    ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: ಗೋವಾದಲ್ಲಿ ಹೃದಯಾಘಾತದಿಂದ ನಿಧನ

  • Bengaluru Focus

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

    BDA News | ಬಿಡಿಎ ಅಧ್ಯಕ್ಷ ಪೀಠದಲ್ಲಿ ವಿಶೇಷ ಚೇತನ ಬಾಲಕ: ಕಚೇರಿಯಲ್ಲಿ ಭಾವುಕ ಕ್ಷಣ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    ವೃತ್ತಿ ಬದುಕಿನ ಯಶಸ್ಸಿಗೆ ಪ್ರಾಮಾಣಿಕತೆ, ವಿನಯತೆ ಅನಿವಾರ್ಯ: ನಟ ದೊಡ್ಡಣ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW SPECIAL | ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ‘ಪ್ರಸಾದ’ಕ್ಕೆ  ಗ್ಯಾಸ್ ಸಿಲಿಂಡರ್ ಸಂಕಷ್ಟ

ಕುಕ್ಕೆ, ಬನಶಂಕರಿ ದೇವಸ್ಥಾನಗಳಲ್ಲಿ ಅಡುಗೆ ಅನಿಲ ಅಭಾವ; ಭಕ್ತರ ದಾಸೋಹಕ್ಕೆ ಅಡ್ಡಿಯಾಗುವ ಆತಂಕ; ಪರ್ಯಾಯವಾಗಿ ಕಟ್ಟಿಗೆ ಒಲೆ ಮೊರೆ ಹೋದ ಆಡಳಿತ ಮಂಡಳಿ.

by Bengaluru Wire Desk
March 11, 2026
in BW Special, News Wire, Public interest
Reading Time: 1 min read
0

ಬೆಂಗಳೂರು, ಮಾ.11 www.bengaluruwire.com: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಮತ್ತು ಇಂಧನ ಪೂರೈಕೆಯಲ್ಲಿನ ವ್ಯತ್ಯಯ ಈಗ ರಾಜ್ಯದ ಮುಜರಾಯಿ ಇಲಾಖೆಯ ‘ಎ’ ದರ್ಜೆಯ ದೇವಸ್ಥಾನಗಳ ಮೇಲೆ ನೇರ ಪರಿಣಾಮ ಬೀರಿದೆ. 

ಭಕ್ತರಿಗೆ ಪ್ರತಿದಿನ ನೀಡಲಾಗುವ ಅನ್ನದಾಸೋಹ ಹಾಗೂ ಪ್ರಸಾದ ವಿನಿಯೋಗಕ್ಕೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹಲವು ದೇವಸ್ಥಾನಗಳು ಸಂಕಷ್ಟಕ್ಕೆ ಸಿಲುಕಿವೆ.

ಕುಕ್ಕೆ ಸುಬ್ರಹ್ಮಣ್ಯ: ಮೆನುವಿನಲ್ಲಿ ಕಡಿತ, ಕಟ್ಟಿಗೆ ಒಲೆಯತ್ತ ಚಿತ್ತ

ಪ್ರತಿದಿನ ಸರಾಸರಿ 10,000 ಭಕ್ತರಿಗೆ ದಾಸೋಹ ನಡೆಸುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿತ್ಯ 20 ಸಿಲಿಂಡರ್‌ಗಳ ಅಗತ್ಯವಿದೆ. ಗ್ಯಾಸ್ ಅಭಾವದಿಂದಾಗಿ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಅನ್ನ, ಸಾಂಬಾರ್ ಜೊತೆ ಇದ್ದ ಎರಡು ಪಲ್ಯಗಳನ್ನು ಒಂದಕ್ಕೆ ಸೀಮಿತಗೊಳಿಸಲಾಗಿದೆ. “ಮುಂಜಾಗ್ರತೆಯಾಗಿ ಎರಡು ಲೋಡ್ ಕಟ್ಟಿಗೆ ತರಿಸಲಾಗಿದ್ದು, ಅನಿವಾರ್ಯವಾದರೆ ಕಟ್ಟಿಗೆ ಒಲೆಯಲ್ಲೇ ಅಡುಗೆ ಮಾಡಲಾಗುವುದು” ಎಂದು ದೇವಸ್ಥಾನದ ಅಧಿಕಾರಿ ಅರವಿಂದ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಎಚ್‌ಪಿ ಗ್ಯಾಸ್ ಏಜೆನ್ಸಿಗೆ ತುರ್ತು ಪೂರೈಕೆಗೆ ಮನವಿ ಮಾಡಲಾಗಿದೆ.

ಬನಶಂಕರಿ ದೇವಸ್ಥಾನ: ಶುಕ್ರವಾರದಿಂದ ಪ್ರಸಾದ ಬಂದ್ ಭೀತಿ?:

ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆಯಾಗಿರುವುದರಿಂದ ಪ್ರಸಾದ ಮಾಡಲು ಗ್ಯಾಸ್(Gas) ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ 3 ಸಾವಿರದಿಂದ 4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಿದರೆ ಶುಕ್ರವಾರ ಹಾಗೂ ಮಂಗಳವಾರ 4 ರಿಂದ 5 ಸಾವಿರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ ಭಕ್ತಾದಿಗಳಿಗೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್‌ಗಳನ್ನು ಪ್ರಸಾದವಾಗಿ ನೀಡಿದರೆ ಮಧ್ಯಾಹ್ನ ಅನ್ನ ಸಾಂಬರ್ ನೀಡಲಾಗುತ್ತದೆ. ಸಂಜೆಯೂ ಪ್ರಸಾದ ವಿತರಿಸಲಾಗುತ್ತದೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಅಭಾವ ತಲೆದೋರಿದೆ. ಕೇವಲ 4 ಸಿಲಿಂಡರ್‌ಗಳು ಮಾತ್ರ ಬಾಕಿ ಇವೆ. “ಇದು ನಾಳೆ ಸಂಜೆಯವರೆಗೆ ಮಾತ್ರ ಸಾಕಾಗಬಹುದು. ಸಿಲಿಂಡರ್ ಪೂರೈಕೆಯಾಗದಿದ್ದರೆ ಶುಕ್ರವಾರದಿಂದ ಪ್ರಸಾದ ವಿತರಣೆ ನಿಲ್ಲಿಸಬೇಕಾದೀತು” ಎಂದು ದೇವಸ್ಥಾನದ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಕೊಲ್ಲೂರು ಮತ್ತು ನಂಜನಗೂಡು: ಸದ್ಯಕ್ಕೆ ಪರಿಸ್ಥಿತಿ ಸುಸ್ಥಿತಿಯಲ್ಲಿದೆ:

ಕೊಲ್ಲೂರು ದೇವಸ್ಥಾನದಲ್ಲಿ ಸೀಸನ್ ಅಲ್ಲದ ಸಂದರ್ಭದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಸಂದರ್ಭದಲ್ಲಿ 10,000-12,000 ಭಕ್ತರಿಗೆ ಪ್ರಸಾದ ಹಾಗೂ ಲಡ್ಡು ವಿತರಣೆ ನೀಡಲಾಗುತ್ತೆ. ಏಪ್ರಿಲ್-ಮೇ ತಿಂಗಳಲ್ಲಿ, ಶಾಲಾ-ಕಾಲೇಜುಗಳಿಗೆ ರಜಾ ಹಾಗೂ ಹಬ್ಬದ  ಸಂದರ್ಭದಲ್ಲಿ 15,000 ರಿಂದ 16,000 ಭಕ್ತರು ಪ್ರತಿದಿನ ಊಟ ವಿತರಣೆಯಾಗುತ್ತದೆ. ಪ್ರತಿದಿನ 15-16 ಗ್ಯಾಸ್ ಸಿಲೆಂಡರ್ ಬೇಕಾಗುತ್ತದೆ, ಸೀಸನ್ ಸಮಯ 20 ಸಿಲೆಂಡರ್ ಬೇಕು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸದ್ಯ 43 ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಇದೆ. ಅಲ್ಲದೆ, ಗೃಹ ಬಳಕೆಯ ಅನಿಲ ಸಂಪರ್ಕ ಇರುವುದರಿಂದ ಸದ್ಯಕ್ಕೆ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹೇಳಿದ್ದಾರೆ. 

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಾರಕ್ಕೆ 20 ವಾಣಿಜ್ಯ ಗ್ಯಾಸ್ ಸಿಲೆಂಡರ್ ಬೇಕಾಗುತ್ತೆ. ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಭಕ್ತರಿಗೆ ನೀಡಲಾಗುತ್ತದೆ. ಹುಣ್ಣಿಮೆ, ಭಾನುವಾರ, ಸೋಮವಾರ, ಚಿಕ್ಕ- ದೊಡ್ಡ ಜಾತ್ರೆ, ಗಿರಿಜಾ ಕಲ್ಯಾಣೋತ್ಸವ, ಸರ್ಕಾರಿ ರಜಾದಿನಗಳು, ಕಾರ್ತಿಕ ಮಾಸದಲ್ಲಿ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. 

ಶ್ರೀಕಂಠೇಶ್ವರ ದೇವಸ್ಥಾನದಲ್ಲೂ ಸದ್ಯ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಧಾರ್ಮಿಕ ದತ್ತಿ ಅಧಿಕಾರಿ ಸಿ.ಜೆ. ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 15 ದಿನಗಳ ತನಕ ಗ್ಯಾಸ್ ಸಂಗ್ರಹವಿದೆ:

ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸದ್ಯಕ್ಕೆ 15 ದಿನಗಳಿಗೆ ಆಗುವಷ್ಟು ವಾಣಿಜ್ಯ ಸಿಲಿಂಡರ್ ಸಂಗ್ರಹವಿದೆ. ಇವತ್ತು ಎಚ್ ಪಿ ಹಾಗೂ ಇಂಡೇನ್ ಗ್ಯಾಸ್ ಏಜನ್ಸಿ ಅವರಿಗೆ ಗ್ಯಾಸ್ ಸಿಲೆಂಡರ್ ಪೂರೈಸುವಂತೆ ಕೇಳಿದ್ದೇವೆ. ಪ್ರತಿದಿನ ಬೆಳಗ್ಗೆ 1,300 ಜನಕ್ಕೆ, ಮಧ್ಯಾಹ್ನ 3,000 ಜನಕ್ಕೆ, ಸಂಜೆ 1,000 ಸರಾಸರಿಯಾಗಿ ದೇವಸ್ಥಾನದಿಂದ ಪ್ರಸಾದ ವಿನಿಯೋಗ ಮಾಡುತ್ತೇವೆ. ಒಟ್ಟಾರೆ ಪ್ರತಿದಿನ ಸರಾಸರಿಯಾಗಿ 5000 ಜನರಿಗೆ ಪ್ರಸಾದ ರೂಪದಲ್ಲಿ ಊಟ ಬಡಿಸಲಾಗುತ್ತದೆ. ದೇವಿ ದೇವಸ್ಥಾನವಾದ್ದರಿಂದ ಮಂಗಳವಾರ, ಶನಿವಾರ ದಿನಗಳಲ್ಲಿ ಕನಿಷ್ಠ 10,000 ಜನಕ್ಕೆ ಪ್ರಸಾದ ವಿನಿಯೋಗ ಆಗುತ್ತೆ ಎಂದು ದೇವಸ್ಥಾನದ ಧಾರ್ಮಿಕ ದತ್ತಿ ಅಧಿಕಾರಿ ರೂಪಾ.ಎಂ.ಜೆ ಬೆಂಗಳೂರು ವೈರ್ ಗೆ ಮಾಹಿತಿ ನೀಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರಿದರೆ, ಮುಂಬರುವ ಏಪ್ರಿಲ್-ಮೇ ತಿಂಗಳ ‘ಸೀಸನ್’ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ಪ್ರಸಾದ ನೀಡಲು ಮುಜರಾಯಿ ಇಲಾಖೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. (AI Graphic Poster Courtesy : Gemini)

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BDA News | ಬಿಡಿಎಗೆ ಬಿಗ್ ಶಾಕ್: ನಾಡಪ್ರಭು ಕೆಂಪೇಗೌಡ ಬಡಾವಣೆಗೂ ‘ರೆರಾ’ ಅನ್ವಯ; ಹಂಚಿಕೆದಾರರ ಹಿತರಕ್ಷಣೆಗೆ ಟ್ರಿಬ್ಯೂನಲ್ ಆದೇಶ ಬೆಂಗಾವಲು

Next Post

LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

Next Post

LPG GAS SUPPLY | ಅಡುಗೆ ಅನಿಲ ಕೊರತೆ ಭೀತಿ ಬೇಡ: ಗೃಹ ಬಳಕೆಗೆ ತೊಂದರೆಯಿಲ್ಲ, ಮಿತಬಳಕೆಗೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ

GBA News | ಪರವಾನಿಗೆ ಇಲ್ಲದ 7 ಉದ್ದಿಮೆಗಳಿಗೆ ಬೀಗ: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಖಡಕ್ ಕ್ರಮ

Please login to join discussion

Like Us on Facebook

Follow Us on Twitter

Recent News

ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

October 12, 2026

Mysore Dasara 2026 | ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ: ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ

October 11, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

October 12, 2026

Mysore Dasara 2026 | ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ: ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ

October 11, 2026

ವಿಮಾನದೊಳಗೆ ನುಗ್ಗಿ ಸಿಜೆಪಿ ಮುಖಂಡರ ಬಂಧನ: ದೆಹಲಿಯಲ್ಲಿ ಹೈಡ್ರಾಮಾ!

October 10, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d