Thursday, October 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    CREATOR: gd-jpeg v1.0 (using IJG JPEG v62), quality = 82?

    ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    Excise News | ಬೆಳಗಾವಿಯಲ್ಲಿ ಭರ್ಜರಿ ಕಾರ್ಯಾಚರಣೆ: ₹32.40 ಲಕ್ಷ ಮೌಲ್ಯದ 24,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ

    Defence News | ಭಾರತೀಯ ಸೇನೆಗೆ ‘ಭಾರತ್ ರೈಸ್’ ಪೂರೈಕೆ ಆರಂಭ: ಈ ಯೋಜನೆ ವಿಶೇಷತೆಯೇನು?

  • Bengaluru Focus

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಅನ್ನಭಾಗ್ಯ: ಅಕ್ಕಿ ಬದಲು ಬಂತು ‘ಇಂದಿರಾ ಕಿಟ್’; ರೇಷನ್ ಪಡೆಯಲು ಕ್ಯೂಆರ್ ಕೋಡ್ (QR Code) ಕಡ್ಡಾಯ

ತೊಗರಿಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಉಚಿತ; ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

by Bengaluru Wire Desk
December 2, 2025
in News Wire, Public interest
Reading Time: 1 min read
0

ಬೆಂಗಳೂರು, ಡಿ.02 www.bengaluruwire.com : ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಇನ್ಮುಂದೆ ಪೌಷ್ಟಿಕಾಂಶಯುಕ್ತ ‘ಇಂದಿರಾ ಆಹಾರ ಕಿಟ್’ (Indira Food Kit) ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪಡಿತರ ಚೀಟಿದಾರರಿಗೆ ಈ ಕಿಟ್ ತಲುಪಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ (QR Code) ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಆಹಾರ ಇಲಾಖೆಯ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. ಪಡಿತರ ವಿತರಣೆಯಲ್ಲಿ ಸೋರಿಕೆ ತಡೆಗಟ್ಟಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದ ಚಿತ್ರ.

ಕ್ಯೂಆರ್ ಕೋಡ್ ಇಲ್ಲದೆ ರೇಷನ್ ಇಲ್ಲ :

ಯೋಜನೆಯ ಅತ್ಯಂತ ಪ್ರಮುಖ ಅಂಶವೆಂದರೆ ತಂತ್ರಜ್ಞಾನದ ಅಳವಡಿಕೆ. ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿರಾ ಕಿಟ್ ವಿತರಣೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ತಂತ್ರಾಂಶವನ್ನು (Software) ಅಳವಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪಡಿತರ ಚೀಟಿದಾರರ ಕಾರ್ಡ್ ಸ್ಕ್ಯಾನ್ ಆದ ಬಳಿಕವಷ್ಟೇ ಆಹಾರ ಕಿಟ್ ವಿತರಣೆಯಾಗಲಿದ್ದು, ಇದರಿಂದ ನಕಲಿ ಫಲಾನುಭವಿಗಳಿಗೆ ಕಡಿವಾಣ ಬೀಳಲಿದೆ.

ಇಂದಿರಾ ಆಹಾರ ಕಿಟ್‌ನಲ್ಲಿ ಏನೇನಿರಲಿದೆ? :

ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕಿಟ್ ವಿತರಣೆಯಾಗಲಿದ್ದು, ಇದರಲ್ಲಿ ಪ್ರಮುಖವಾಗಿ ಈ ಕೆಳಗಿನ ವಸ್ತುಗಳಿರಲಿವೆ:

 * ಪೌಷ್ಟಿಕಾಂಶಯುಕ್ತ ತೊಗರಿ ಬೇಳೆ

 * ಸೂರ್ಯಕಾಂತಿ ಎಣ್ಣೆ

 * ಸಕ್ಕರೆ

 * ಉಪ್ಪು

ತಿಂಗಳಿಗೆ 466 ಕೋಟಿ ರೂ. ವೆಚ್ಚ :

ರಾಜ್ಯದಲ್ಲಿ ಪ್ರಸ್ತುತ ಪ್ರತಿ ತಿಂಗಳು ಸುಮಾರು 1,25,08,262 ಇಂದಿರಾ ಆಹಾರ ಕಿಟ್ ಗಳ ಅಗತ್ಯವಿದ್ದು, ಇದಕ್ಕಾಗಿ 466 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ತಿಂಗಳಿಗೆ ಅಗತ್ಯವಿರುವ ತೊಗರಿ ಬೇಳೆ: 18,628 ಮೆಟ್ರಿಕ್ ಟನ್ ಹಾಗೂ ಅವಶ್ಯಕವಿರುವ ಎಣ್ಣೆ, ಸಕ್ಕರೆ, ಉಪ್ಪು: ತಲಾ 12,419 ಮೆಟ್ರಿಕ್ ಟನ್ ಗಳಾಗಿದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ: ಸಿಎಂ ಖಡಕ್ ವಾರ್ನಿಂಗ್ :

“ಜನರಿಗೆ ನೀಡುವ ಆಹಾರ ಸಾಮಾಗ್ರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ತೂಕದಲ್ಲಿ ಮೋಸವಾಗಬಾರದು ಅಥವಾ ಕಳಪೆ ವಸ್ತುಗಳನ್ನು ನೀಡುವಂತಿಲ್ಲ. ಒಂದು ವೇಳೆ ಗುಣಮಟ್ಟದ ಬಗ್ಗೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ತೊಗರಿ ಬೇಳೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀಡಲು ಮತ್ತು ಖರೀದಿ ಪ್ರಕ್ರಿಯೆಯನ್ನು ನಾಫೆಡ್ (NAFED) ಅಥವಾ ಎನ್‌ಸಿಸಿಎಫ್ (NCCF) ನಂತಹ ಕೇಂದ್ರ ಸಂಸ್ಥೆಗಳ ಮೂಲಕ ಪಾರದರ್ಶಕವಾಗಿ (ಕೆಟಿಪಿಪಿ ಅನ್ವಯ) ನಡೆಸಲು ಸೂಚಿಸಲಾಗಿದೆ.

ಕಿಟ್ ವಿತರಣೆ ಯಾವಾಗ? :

ಸರಬರಾಜಾದ ಫುಡ್‌ಕಿಟ್‌ಗಳನ್ನು ನಿಗಮದ ಗೋದಾಮುಗಳ ಮೂಲಕ ಪ್ರತಿ ತಿಂಗಳು 10ನೇ ತಾರೀಖಿನ ಒಳಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಬೇಕು ಎಂದು ಗಡುವು ವಿಧಿಸಲಾಗಿದೆ.

ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್-2026: ಗೆದ್ದವರಿಗೆ ₹10 ಲಕ್ಷ ಬಹುಮಾನ; ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್ ಟೂರ್ನಿ

Next Post

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಿಕ್-ಅಪ್ ನಿಯಮ ಬದಲು: ವಾಹನ ನಿಲುಗಡೆ ಸಮಯ ಮೀರಿದರೆ ದಂಡ ಫಿಕ್ಸ್

Next Post
Kempegowda International Airport

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಿಕ್-ಅಪ್ ನಿಯಮ ಬದಲು: ವಾಹನ ನಿಲುಗಡೆ ಸಮಯ ಮೀರಿದರೆ ದಂಡ ಫಿಕ್ಸ್

ಸಾಂದರ್ಭಿಕ ಚಿತ್ರ

Court News | ಸ್ಮಾರ್ಟ್ ಮೀಟರ್ ಹಗರಣ ಆರೋಪ: ಸಚಿವ ಕೆ.ಜೆ. ಜಾರ್ಜ್‌ಗೆ ಹೈಕೋರ್ಟ್‌ನಿಂದ 'ಬಿಗ್ ರಿಲೀಫ್'

Please login to join discussion

Like Us on Facebook

Follow Us on Twitter

Recent News

ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

October 15, 2026

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

October 15, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

October 15, 2026

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಕೇಂದ್ರದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

October 15, 2026

ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

October 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d