Sunday, October 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಪತ್ನಿ ರಶ್ಮಿಕಾರನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ವಿಜಯ್ ದೇವರಕೊಂಡ? ವೈರಲ್ ವದಂತಿಯ ಅಸಲಿ ಸತ್ಯವೇನು?

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

  • Bengaluru Focus

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Breaking News | ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್: ಬಿಜೆಪಿ ಆಕ್ಷೇಪ, ಭದ್ರತಾ ವಲಯದಲ್ಲಿ ಹೇಗೆ ಅನುಮತಿ ದೊರೆತಿದೆ?

ಟರ್ಮಿನಲ್ 2ರಲ್ಲಿ ನಡೆದ ಘಟನೆ: ಸರ್ಕಾರದಿಂದ ಸ್ಪಷ್ಟನೆ ಕೇಳಿದ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್

by Bengaluru Wire Desk
November 10, 2025
in Bengaluru Focus, Public interest
Reading Time: 1 min read
0

ಬೆಂಗಳೂರು, ನ.10 www.bengaluruwire.com : ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ (Mass Namaz) ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. 

ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಬಿಜೆಪಿ (Karnataka BJP), ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ (High Security Zone) ಇಂತಹ ಧಾರ್ಮಿಕ ಚಟುವಟಿಕೆಗೆ ಹೇಗೆ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ.

ಘಟನೆ ವಿವರ ಹೀಗಿದೆ :

ವರದಿಗಳ ಪ್ರಕಾರ, ಹಜ್ ಯಾತ್ರಿಕರನ್ನು (Hajj Pilgrims) ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರ ಪೈಕಿ ಕೆಲವರು ಟರ್ಮಿನಲ್ 2 ರ ಆವರಣದಲ್ಲಿ ಒಟ್ಟಾಗಿ ನಮಾಜ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ವಕ್ತಾರರಿಂದ ಸ್ಪಷ್ಟನೆಗೆ ಆಗ್ರಹ:

ಕರ್ನಾಟಕ ಬಿಜೆಪಿ ವಕ್ತಾರರಾದ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಗುರಿಯಾಗಿಸಿ ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.

ಭಾನುವಾರ ರಾತ್ರಿ ಟ್ವೀಟ್ ಮಾಡಿರುವ ಅವರು, “ಈ ವ್ಯಕ್ತಿಗಳು ಹೆಚ್ಚಿನ ಭದ್ರತಾ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ, “ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್​ಎಸ್​ಎಸ್ ಪಾಠ ಸಂಚಾಲನೆ ನಡೆಸಿದಾಗ ಸರ್ಕಾರ ಏಕೆ ಆಕ್ಷೇಪಿಸುತ್ತದೆ, ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಕಣ್ಣು ಮುಚ್ಚಿ ಕುಳಿತಿದೆ?” ಎಂದು ಪ್ರಶ್ನಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದಾರೆ.

ಈ ಬೆಳವಣಿಗೆಯು ರಾಜ್ಯದಲ್ಲಿ ಧಾರ್ಮಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯೆ ನೀಡಬೇಕಿದೆ. (ಸುದ್ದಿ ಮೂಲ : ANI)

How is this even allowed inside the T2 Terminal of Bengaluru International Airport?
Hon’ble Chief Minister @siddaramaiah and Minister @PriyankKharge do you approve of this?

Did these individuals obtain prior permission to offer Namaz in a high-security airport zone?
Why is it… pic.twitter.com/iwWK2rYWZa

— Vijay Prasad (@vijayrpbjp) November 9, 2025

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಶಂಕರ್‌ನಾಗ್‌ ಜಯಂತಿ: ಸಂಕಷ್ಠದಲ್ಲಿರುವ ಆಟೋ ಚಾಲಕರ ಮಕ್ಕಳಿಗೆ ಆದಿಚುಂಚನಗಿರಿ ಮಠದಿಂದ ಉಚಿತ ಶಿಕ್ಷಣ

Next Post

ಕೆಎಸ್‌ಆರ್‌ಟಿಸಿಗೆ ‘ಉತ್ಕೃಷ್ಟ ನಗರ ಸಾರಿಗೆ’ ಪ್ರಶಸ್ತಿ: ಶಬರಿಮಲೆ ಯಾತ್ರೆಗೆ ನ.28ರಿಂದ ನೂತನ ವೋಲ್ವೋ ಸೇವೆ ಆರಂಭ

Next Post

ಕೆಎಸ್‌ಆರ್‌ಟಿಸಿಗೆ 'ಉತ್ಕೃಷ್ಟ ನಗರ ಸಾರಿಗೆ' ಪ್ರಶಸ್ತಿ: ಶಬರಿಮಲೆ ಯಾತ್ರೆಗೆ ನ.28ರಿಂದ ನೂತನ ವೋಲ್ವೋ ಸೇವೆ ಆರಂಭ

BDA News | ಅರ್ಕಾವತಿ ನಿವೇಶನದಾರರಿಗೆ ಒಂದೇ ದಿನ 784 ಬದಲಿ ನಿವೇಶನ ಹಂಚಿಕೆ ಮಾಡಿದ ಬಿಡಿಎ

Please login to join discussion

Like Us on Facebook

Follow Us on Twitter

Recent News

ಪತ್ನಿ ರಶ್ಮಿಕಾರನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ವಿಜಯ್ ದೇವರಕೊಂಡ? ವೈರಲ್ ವದಂತಿಯ ಅಸಲಿ ಸತ್ಯವೇನು?

October 25, 2026

BW IMPACT | ‘ಬೆಂಗಳೂರು ವೈರ್’ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಕನ್ನಡಿಗರಿಗೆ ಉದ್ಯೋಗ ವಂಚಿಸುವ ಐಟಿ ಕಂಪನಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ!

October 25, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಪತ್ನಿ ರಶ್ಮಿಕಾರನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ವಿಜಯ್ ದೇವರಕೊಂಡ? ವೈರಲ್ ವದಂತಿಯ ಅಸಲಿ ಸತ್ಯವೇನು?

October 25, 2026

BW IMPACT | ‘ಬೆಂಗಳೂರು ವೈರ್’ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಕನ್ನಡಿಗರಿಗೆ ಉದ್ಯೋಗ ವಂಚಿಸುವ ಐಟಿ ಕಂಪನಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ!

October 25, 2026

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d