ಬೆಂಗಳೂರು, ಅ.21 www.bengaluruwire.com : ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ, ನಗರ ಪ್ರದೇಶಗಳಲ್ಲಿನ ಆನ್‌ಲೈನ್ ಸೇವೆಗಳಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಪ್ರಕಟಣೆಯಲ್ಲಿ ತಿಳಿಸಿದೆ.
ಸೇವೆ ಅಲಭ್ಯತೆಯ ದಿನಾಂಕ ಮತ್ತು ಅವಧಿ:
* ತುರ್ತು ನಿರ್ವಹಣೆ ಆರಂಭ: ಅಕ್ಟೋಬರ್ 24, ಶುಕ್ರವಾರ, ರಾತ್ರಿ 8 ಗಂಟೆಯಿಂದ.
* ಅಂತ್ಯ: ಅಕ್ಟೋಬರ್ 25, ಶನಿವಾರ, ಮಧ್ಯಾಹ್ನ 1 ಗಂಟೆಯವರೆಗೆ.

ಅಲಭ್ಯವಾಗುವ ಪ್ರಮುಖ ಆನ್‌ಲೈನ್ ಸೇವೆಗಳು:
ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ (tariff change) ಮತ್ತು ಹೊಸ ಸಂಪರ್ಕ ಕೋರಿಕೆ ಸೇರಿದಂತೆ ಎಲ್ಲಾ ಆನ್‌ಲೈನ್ ಆಧರಿತ ಸೇವೆಗಳು ಲಭ್ಯವಿರುವುದಿಲ್ಲ.
ಯಾವುದೇ ಪಾವತಿ ವಿಧಾನ ಲಭ್ಯವಿರಲ್ಲ:
ಎಲ್ಲಾ ಐದು ಎಸ್ಕಾಂಗಳ ಅಧಿಕೃತ ಪೋರ್ಟಲ್‌ಗಳಾದ:
- www.cescmysore.in ಗಳಲ್ಲಿನ ಸೇವೆಗಳು ಅಲಭ್ಯವಾಗಲಿವೆ.
ಅಲ್ಲದೆ, ವಿದ್ಯುತ್ ಬಿಲ್ ಪಾವತಿಗಾಗಿ ಬಳಸಲಾಗುವ ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಇತರೆ ಯಾವುದೇ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿಯೂ ಸಹ ಆನ್‌ಲೈನ್ ಸೇವೆಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಸೇವೆ ಅಲಭ್ಯವಾಗುವ ಪ್ರದೇಶಗಳು (ನಗರ ಉಪ ವಿಭಾಗಗಳು):
ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ, ಕೋಲಾರ, ತುಮಕೂರು, ದಾವಣಗೆರೆ ಸೇರಿದಂತೆ ಒಟ್ಟು 27 ಪ್ರಮುಖ ನಗರ ಉಪ ವಿಭಾಗಗಳು ಹಾಗೂ ರಾಜ್ಯದ ಇತರೆ ನಾಲ್ಕು ಎಸ್ಕಾಂಗಳ (ಸೆಸ್ಕ್, ಮೆಸ್ಕಾಂ, ಜೆಸ್ಕಾಂ ಮತ್ತು ಹೆಸ್ಕಾಂ) ಕೆಳಕಂಡ ಪ್ರಮುಖ ನಗರ ಉಪ ವಿಭಾಗಗಳಲ್ಲಿ ಸೇವೆಗಳು ಅಲಭ್ಯವಾಗಲಿವೆ.
ಬೆಸ್ಕಾಂ : ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚೆನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್ , ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ.
ಸೆಸ್ಕ್ : ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ ಆರ್ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ, ಚನ್ನರಾಯಪಟ್ಟಣ.
ಮೆಸ್ಕಾಂ : ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು.
ಜೆಸ್ಕಾಂ : ಮಾನವಿ, ಸಿಂಧನೂರು, ಬೀದರ್, ಗಂಗಾವತಿ, ಗುಲ್ಬರ್ಗ ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್, ಭಾಲ್ಕಿ ಶಹಾಬಾದ್, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್, ಹೊಸಪೇಟೆ.
ಹೆಸ್ಕಾಂ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಲ್, ದಾಂಡೇಲಿ, ಇಂಡಿ, ಸೌದತ್ತಿ, ಸೇವನೂರು, ಸಿರ್ಸಿ, ಕುಮಟಾ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್, ಮುಧೋಳ, ರಾಣೆಬೆನ್ನೂರು, ವಿಜಾಪುರ ನಗರ ಉಪ ವಿಭಾಗಗಳು.
ಗ್ರಾಹಕರು ಈ ನಿರ್ವಹಣಾ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಬೆಸ್ಕಾಂ ವಿನಂತಿಸಿದೆ. ಈ ಅಡಚಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಆನ್‌ಲೈನ್ ಸೇವೆಗಳನ್ನು ನಿಗದಿತ ಅವಧಿಗೆ ಮುನ್ನ ಅಥವಾ ನಂತರ ಬಳಸಿಕೊಳ್ಳುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಕೋರಿವೆ.






















