Wednesday, May 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    Gold Rate | ಚಿನ್ನ-ಬೆಳ್ಳಿ ಬೆಲೆ ಏರಿಕೆ ಬಿಸಿ: ಆಮದು ಸುಂಕ ಭರ್ಜರಿ ಶೇ. 15ಕ್ಕೆ ಹೆಚ್ಚಳ: ಇಂದಿನಿಂದಲೇ ಜಾರಿ

    NEET UG 2026 | ನೀಟ್ ಯುಜಿ 2026 ಪರೀಕ್ಷೆ ರದ್ದು: ಪೇಪರ್ ಲೀಕ್ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಕಠಿಣ ನಿರ್ಧಾರ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ​ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್‌ಗೆ ಮುಗಿಬಿದ್ದ ಕೈಗಾರಿಕೋದ್ಯಮಿಗಳು: ಪೂರೈಕೆಯಲ್ಲಿ ವ್ಯತ್ಯಯ, ಪ್ರಧಾನಿಗೆ ದೂರು

    Vidhana Soudha

    ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 1.5ರಷ್ಟು ಹೆಚ್ಚಳ, ಜನವರಿ 1ರಿಂದಲೇ ಪೂರ್ವಾನ್ವಯ

    ಭಾರತದ ಬತ್ತಳಿಕೆಗೆ ಮತ್ತಷ್ಟು ಬಲ: ‘ಅಗ್ನಿ’ ಕ್ಷಿಪಣಿಯ MIRV ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

    ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಸರತ್ತು: ಬಹುಮತ ಸಾಬೀತುಪಡಿಸಿದರೆ ಮಾತ್ರ ವಿಜಯ್‌ಗೆ ಅವಕಾಶ ಎಂದ ರಾಜ್ಯಪಾಲ ಅರ್ಲೇಕರ್

  • Bengaluru Focus

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

    ಬಡವರ ‘ಬಾಟಲಿ’ಗೆ ಬರೆ: ರಾಜ್ಯದಲ್ಲಿ ಮದ್ಯದ ದರ ಭಾರೀ ಏರಿಕೆ

    ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು ಉಪನಗರ ರೈಲಿಗೆ ಹೈಟೆಕ್ ಸ್ಪರ್ಶ: 153 ಮೆಟ್ರೋ ಮಾದರಿ ಬೋಗಿಗಳ ಖರೀದಿಗೆ ಐಸಿಎಫ್‌ ಜೊತೆ ಒಪ್ಪಂದ

    Vidhana Soudha

    ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 1.5ರಷ್ಟು ಹೆಚ್ಚಳ, ಜನವರಿ 1ರಿಂದಲೇ ಪೂರ್ವಾನ್ವಯ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್: “ಕಸದ ಆಫೀಸಿನ” ಹಿತ್ತಲೇ ಗಬ್ಬು; ಊರಿಗೆ ಬುದ್ಧಿ ಹೇಳುವ ಬಿಎಸ್‌ಡಬ್ಲ್ಯುಎಂಎಲ್‌ಗೆ ಸ್ವಚ್ಛತೆ  ಮರೆತೇ ಹೋಯಿತೇ?

    BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಪ್ಯಾಕೇಜ್-1: ಜೂನ್‌ನಿಂದ ಕಾಮಗಾರಿ ಆರಂಭ ಸಾಧ್ಯತೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಅಭಿನಯ ಸರಸ್ವತಿ ಬಿ. ಸರೋಜಾದೇವಿ ಇನ್ನಿಲ್ಲ: ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ

ವಯೋಸಹಜ ಅನಾರೋಗ್ಯದಿಂದ 87ನೇ ವಯಸ್ಸಿನಲ್ಲಿ ನಿಧನ: ಬಹುಭಾಷಾ ನಟಿಯ ಅಗಲಿಕೆಗೆ ಕಂಬನಿ

by Bengaluru Wire Desk
July 14, 2025
in Bengaluru Focus, News Wire
Reading Time: 1 min read
0

ಬೆಂಗಳೂರು, ಜು.14 www.bengaluruwire.com : ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತಿ ಪಡೆದಿದ್ದ ಬಿ. ಸರೋಜಾದೇವಿ ಅವರು ಇಂದು (ಜುಲೈ 14) ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 87 ವರ್ಷ ವಯಸ್ಸಿನ ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಸಮಸ್ತ ಕಲಾಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಬಿ. ಸರೋಜಾದೇವಿ, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿದ್ದರು. ಏಳು ದಶಕಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಬಹುಭಾಷಾ ನಟಿ, ಚತುರ್ಭಾಷಾ ತಾರೆ

ಸರೋಜಾದೇವಿ ಅವರು ಕನ್ನಡದಲ್ಲಿ ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಲಕ್ಷ್ಮೀ ಸರಸ್ವತಿ, ಕಥಾಸಂಗಮ ಮುಂತಾದ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪರಭಾಷೆಗಳಲ್ಲೂ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. 

ತಮಿಳಿನ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲಯಾಳಂನ ಮುತ್ತುಮಿಂತ್ರೋ ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮಿ ಕಪೂರ್, ಸುನಿಲ್‌ದತ್ ಅವರಂತಹ ಖ್ಯಾತ ನಟರೊಂದಿಗೆ ನಟಿಸುವ ಮೂಲಕ ‘ಚತುರ್ಭಾಷಾ ತಾರೆ’ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡದ ನಟಿ ಎನಿಸಿದ್ದಾರೆ. 2019ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಅವರ ಕೊನೆಯ ಚಿತ್ರವಾಗಿತ್ತು.

ಗೌರವಗಳು ಮತ್ತು ವೈಯಕ್ತಿಕ ಜೀವನ :

ಸಿನಿಮಾ ಕ್ಷೇತ್ರದಲ್ಲಿನ ಅವರ ಅಮೋಘ ಸಾಧನೆಗಾಗಿ 2009ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಅರಸಿ ಬಂದಿದ್ದವು.

ಸರೋಜಾದೇವಿ ಅವರು ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರನ್ನು 1967ರ ಮಾರ್ಚ್ 1ರಂದು ವಿವಾಹವಾಗಿದ್ದರು. ಇವರಿಗೆ ಇಂದಿರಾ ಹಾಗೂ ಗೌತಮ್ ರಾಮಚಂದ್ರನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ ದುರದೃಷ್ಟವಶಾತ್, 1986ರಲ್ಲಿ ಪತಿ ಶ್ರೀಹರ್ಷ ಅವರು ಹೃದಯಾಘಾತದಿಂದ ನಿಧನರಾದರು.

ಕೊಡಿಗೆಹಳ್ಳಿಯಲ್ಲಿ ಅಂತ್ಯಕ್ರಿಯೆ :

ಮೂಲಗಳ ಪ್ರಕಾರ, ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆಯು ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ, ಪತಿ ಶ್ರೀಹರ್ಷ ಅವರ ಸಮಾಧಿ ಪಕ್ಕದಲ್ಲೇ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದೆ. ಸರೋಜಾದೇವಿ ಅವರ ನಿಧನವು ಕನ್ನಡ ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿದ್ದು, ಅವರ ನೆನಪು ಸದಾ ಹಸಿರಾಗಿರಲಿದೆ.

WhatsApp Join our WhatsApp Channel
Previous Post

ಯುಜಿಸಿಇಟಿ-25 ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ, ವೈದ್ಯಕೀಯ ಕೋರ್ಸ್ ದಾಖಲಾತಿ ಪರಿಶೀಲನೆಗೆ ಸೂಚನೆ

Next Post

ಶರಾವತಿ ಹಿನ್ನೀರಿನ ಮೇಲೆ ಬೃಹತ್ ಸೇತುವೆ ಲೋಕಾರ್ಪಣೆ: ಸಿಗಂದೂರು-ಸಾಗರ ಸಂಪರ್ಕ ಇನ್ನಷ್ಟು ಸುಗಮ

Next Post

ಶರಾವತಿ ಹಿನ್ನೀರಿನ ಮೇಲೆ ಬೃಹತ್ ಸೇತುವೆ ಲೋಕಾರ್ಪಣೆ: ಸಿಗಂದೂರು-ಸಾಗರ ಸಂಪರ್ಕ ಇನ್ನಷ್ಟು ಸುಗಮ

ಸಮೋಸಾ, ಜಿಲೇಬಿ, ವಡಾ ಪಾವ್, ಚಹಾ ಬಿಸ್ಕತ್‌ಗಳಿಗೂ ಸಿಗರೇಟ್‌ ಪ್ಯಾಕ್ ಮೇಲಿರುವಂತೆ ಎಚ್ಚರಿಕೆ ಸಂದೇಶ

Please login to join discussion

Like Us on Facebook

Follow Us on Twitter

Recent News

BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

May 13, 2026
GBA Head Office Image

ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

May 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

May 13, 2026
GBA Head Office Image

ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

May 13, 2026

Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

May 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group