Wednesday, October 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    Excise News | ಬೆಳಗಾವಿಯಲ್ಲಿ ಭರ್ಜರಿ ಕಾರ್ಯಾಚರಣೆ: ₹32.40 ಲಕ್ಷ ಮೌಲ್ಯದ 24,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ

    Defence News | ಭಾರತೀಯ ಸೇನೆಗೆ ‘ಭಾರತ್ ರೈಸ್’ ಪೂರೈಕೆ ಆರಂಭ: ಈ ಯೋಜನೆ ವಿಶೇಷತೆಯೇನು?

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    Mysore Dasara 2026 | ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ: ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ

    ವಿಮಾನದೊಳಗೆ ನುಗ್ಗಿ ಸಿಜೆಪಿ ಮುಖಂಡರ ಬಂಧನ: ದೆಹಲಿಯಲ್ಲಿ ಹೈಡ್ರಾಮಾ!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

  • Bengaluru Focus

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

    BDA News | ಬಿಡಿಎ ಅಧ್ಯಕ್ಷ ಪೀಠದಲ್ಲಿ ವಿಶೇಷ ಚೇತನ ಬಾಲಕ: ಕಚೇರಿಯಲ್ಲಿ ಭಾವುಕ ಕ್ಷಣ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

‘ಜಾತಿ ಜನಗಣತಿ’ ವರದಿ ಸಚಿವ ಸಂಪುಟದಲ್ಲಿ ಮಂಡನೆ : ಏ.17ಕ್ಕೆ ವಿಶೇಷ ಕ್ಯಾಬಿನೆಟ್ ಸಭೆ

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಶೇಷ ಸಭೆಯಲ್ಲಿ ವಿಸ್ತ್ರತ ಚರ್ಚೆಗೆ ನಿರ್ಧಾರ

by Bengaluru Wire Desk
April 11, 2025
in News Wire
Reading Time: 1 min read
0
ವಿಧಾನಸೌಧದ ಸಾಂದರ್ಭಿಕ ಚಿತ್ರ

ವಿಧಾನಸೌಧದ ಸಾಂದರ್ಭಿಕ ಚಿತ್ರ

ಬೆಂಗಳೂರು, ಏ.11 www.bengaluruwire.com : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ)ಯ ದತ್ತಾಂಶಗಳ ಅಧ್ಯಯನ ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. 

ಈ ಕುರಿತು ವಿಸ್ತೃತ ಚರ್ಚೆ ನಡೆಸಲು ಇದೇ ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರು ತೆರೆದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ ಶೆಟ್ಟೆಣ್ಣನವರ ಅವರು ವರದಿಯ ಮುಖ್ಯ ಅಂಶಗಳನ್ನು ಸಚಿವ ಸಂಪುಟಕ್ಕೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2024ರ ಫೆಬ್ರವರಿ 29 ರಂದು ಸಲ್ಲಿಸಿರುವ 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿ ಹಾಗೂ ಅಂಕಿ ಅಂಶಗಳ ಸಮೀಕ್ಷಾ ವರದಿಯನ್ನು ಸಚಿವ ಸಂಪುಟದ ಮುಂದೆ ಪರಿಶೀಲನೆಗಾಗಿ ಮಂಡಿಸಲಾಗಿದೆ ಎಂದು ತಿಳಿಸಿದರು.

ಏಪ್ರಿಲ್ 17 ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಕುರಿತು ವಿಸ್ತೃತವಾಗಿ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು.

2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ 54 ಮಾನದಂಡಗಳ ಆಧಾರದ ಮೇಲೆ ನಡೆಸಲಾಗಿತ್ತು. ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನರ ಗಣತಿ ಈ ಸಮೀಕ್ಷೆಯಲ್ಲಿ ನಡೆದಿದೆ. ಒಟ್ಟು 1.35 ಕೋಟಿ ಕುಟುಂಬಗಳು ಮಾಹಿತಿ ಸಂಗ್ರಹಣೆಯಲ್ಲಿ ಭಾಗವಹಿಸಿದ್ದು, ಇದು ಶೇ 94.17 ರಷ್ಟಿದೆ. ಸುಮಾರು 37 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

2015ರಲ್ಲಿ ಶ್ರೀ ಹೆಚ್. ಕಾಂತರಾಜ ಅವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11 ರಿಂದ ಮೇ 30 ರವರೆಗೆ ರಾಜ್ಯಾದ್ಯಂತ ಈ ಸಮೀಕ್ಷೆಯನ್ನು ನಡೆಸಿತ್ತು. ಪ್ರತಿ ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು 54 ಮಾನದಂಡಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲಾಗಿತ್ತು.

ಸಮೀಕ್ಷೆಯ ಕಾರ್ಯಕ್ಕಾಗಿ ಆರು ಜನ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವರದಿಗೆ ಬೇಕಾದ ಅಂಶಗಳು ಮತ್ತು ಮಾನದಂಡಗಳನ್ನು ಸಿದ್ಧಪಡಿಸಲು ಒಟ್ಟು 16 ವಿಷಯ ತಜ್ಞರ ಸಭೆಗಳನ್ನು ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದರು. ಈ ಸಮಿತಿಯಲ್ಲಿ ಪ್ರೊ. ಜೋಗನ್ ಶಂಕರ್, ಪ್ರೊ. ಅಬ್ದುಲ್ ಅಜೀಜ್, ಡಾ. ಆಂಬ್ರೋಸ್ ಪಿಂಟೋ, ಡಾ. ಸಿ.ಎಂ. ಲಕ್ಷö್ಮಣ್, ಶ್ರೀ ಲಕ್ಷಿö್ಮÃಪತಿ ಹಾಗೂ ಪ್ರೊ. ರಾಜಲಕ್ಷಿö್ಮ ಕಾಮತ್ ಅವರ ಪರವಾಗಿ ಶ್ರೀ ನವೀನ್ ಭಾರತಿ ಅವರು ಸೇರಿದ್ದರು.

ಸಮೀಕ್ಷೆಯಲ್ಲಿ ಲಭ್ಯವಿದ್ದ ಅಂಕಿ ಅಂಶಗಳನ್ನು ಆಯಾ ಜಿಲ್ಲೆಗಳಲ್ಲಿಯೇ ಗಣಕೀಕರಣಗೊಳಿಸಲಾಗಿದ್ದು, ಇದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHARAT ELECTRONICS LTD) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಗಣಕೀಕರಣಕ್ಕಾಗಿ ಒಟ್ಟು 43.09 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು. ಈ ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ 7.00 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 185.79 ಕೋಟಿ ರೂಪಾಯಿಗಳು ಸೇರಿದಂತೆ ಒಟ್ಟು 192.79 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದುವರೆಗೆ ಒಟ್ಟು 165.51 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

2015ರ ಸಮೀಕ್ಷೆಯ ದತ್ತಾಂಶಗಳನ್ನು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management) ಸಂಸ್ಥೆಯು ಮೌಲ್ಯೀಕರಣಗೊಳಿಸಿ ವರದಿಯನ್ನು ನೀಡಿದ್ದು, 2015ರ ಎಸ್.ಇ.ಎಸ್. ದತ್ತಾಂಶವು 2011ರ ಜನಗಣತಿಯೊಂದಿಗೆ ಸ್ಥಿರವಾಗಿದೆ ಎಂದು ದೃಢಪಡಿಸಿದೆ. 2019ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರಿಂದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. 

ನಂತರ  ಕೆ. ಜಯಪ್ರಕಾಶ ಹೆಗ್ಡೆ ಅವರ ನೇತೃತ್ವದಲ್ಲಿ ಹೊಸ ಆಯೋಗವನ್ನು 2020ರಲ್ಲಿ ನೇಮಿಸಲಾಯಿತು. ಈ ಆಯೋಗವು 2015ರ ದತ್ತಾಂಶಗಳನ್ನು ಬಳಸಿಕೊಂಡು 2024ರ ಫೆಬ್ರವರಿ 29 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಬೆಂಗಳೂರು ಘನತ್ಯಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ ಮೆಚ್ಚುಗೆ ; ನೂತನ ತಂತ್ರಜ್ಞಾನಕ್ಕೆ ಪ್ರೋತ್ಸಾಹ

Next Post

ಪಿಯುಸಿ ಫಲಿತಾಂಶ ಉತ್ತಮಪಡಿಸಲು ಇನ್ನೂ ಇದೆ ಎರಡು ಅವಕಾಶ : ಸಿಇಟಿ ಪರೀಕ್ಷೆ ಬರೆಯಲು ಕೆಇಎ ಸಲಹೆ

Next Post

ಪಿಯುಸಿ ಫಲಿತಾಂಶ ಉತ್ತಮಪಡಿಸಲು ಇನ್ನೂ ಇದೆ ಎರಡು ಅವಕಾಶ : ಸಿಇಟಿ ಪರೀಕ್ಷೆ ಬರೆಯಲು ಕೆಇಎ ಸಲಹೆ

ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರಸಿದ್ಧ ಯಾತ್ರಾ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತೇವೆ : ಡಿಸಿಎಂ ಡಿ ಕೆ ಶಿವಕುಮಾರ್

Please login to join discussion

Like Us on Facebook

Follow Us on Twitter

Recent News

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

October 13, 2026

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

October 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

October 13, 2026

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

October 13, 2026

Excise News | ಬೆಳಗಾವಿಯಲ್ಲಿ ಭರ್ಜರಿ ಕಾರ್ಯಾಚರಣೆ: ₹32.40 ಲಕ್ಷ ಮೌಲ್ಯದ 24,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ

October 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d