ನವದೆಹಲಿ , ಮಾ.03 www.bengaluruwire.com : ಕೇಂದ್ರ ಸರ್ಕಾರವು ಪಾಸ್‌ಪೋರ್ಟ್ (Passport) ನಿಯಮಗಳಲ್ಲಿ ಕೆಲವೊಂದು ತಿದ್ದುಪಡಿ ತಂದಿದೆ. ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದ ಪಾಸ್ ಪೋರ್ಟ್ ಅರ್ಜಿದಾರರಿಗೆ ಜನನ ಪ್ರಮಾಣಪತ್ರಗಳನ್ನು ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.
ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಿದ ಕೇಂದ್ರವು ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರಿಗೆ ಸೂಕ್ತ ಅಧಿಕಾರಿಗಳು ನೀಡಿದ ಜನನ ಪ್ರಮಾಣಪತ್ರಗಳನ್ನು ಜನ್ಮ ದಿನಾಂಕದ ಏಕೈಕ ದಾಖಲೆಯನ್ನಾಗಿ ಕಾನೂನು ತಿದ್ದುಪಡಿ ಮಾಡಿದೆ.
1980 ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಪಾಸ್‌ಪೋರ್ಟ್‌ಗಳು(ತಿದ್ದುಪಡಿ) ನಿಯಮಗಳು 2025ರ ಹೊಸ ಮಾನದಂಡಗಳ ಅಡಿಯಲ್ಲಿ,, ಜನನ ಮತ್ತು ಮರಣಗಳ ನೋಂದಣಿ, ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969 ರ ಅಡಿಯಲ್ಲಿ ಅಧಿಕಾರ ಪಡೆದ ಯಾವುದೇ ಇತರ ಪ್ರಾಧಿಕಾರವು ನೀಡಿದ ಜನನ ಪ್ರಮಾಣಪತ್ರಗಳನ್ನು ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದ ವ್ಯಕ್ತಿಗಳಿಗೆ ಜನ್ಮ ದಿನಾಂಕದ ದಾಖಲೆಯಾಗಿ ಸ್ವೀಕರಿಸಲಾಗುತ್ತದೆ.
ಇತರ ಪಾಸ್ ಪೋರ್ಟ್ ಅರ್ಜಿದಾರರು ಚಾಲನಾ ಪರವಾನಗಿ (Driving Licence) , ಪ್ಯಾನ್ ಕಾರ್ಡ್ (Pancard), ಚುನಾವಣಾ ಫೋಟೋ ಗುರುತಿನ ಚೀಟಿ (Election ID Card) ಅಥವಾ ಶಾಲೆ ಬಿಡುವ ಪ್ರಮಾಣಪತ್ರಗಳಂತಹ ಪರ್ಯಾಯ ದಾಖಲೆಗಳನ್ನು ಜನ್ಮ ದಿನಾಂಕದ ಪುರಾವೆಯಾಗಿ ಸಲ್ಲಿಸಬಹುದು.