ಮುಂಬೈ, ಸೆ.08 www.bengaluruwire.com : ಬೇಲಿಯೇ ಎದ್ದು ಹೊಲ ಮೈಯ್ದಂಗೆ ಅನ್ನುವಂತೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಸಂಗ್ರಹಕ್ಕೆ ಬಿಟ್ರೆ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು 20 ಲಕ್ಷ ರೂ. ಪಡೆಯುವಾಗ ಮುಂಬೈ ಪಶ್ಚಿಮ ಕಮಿಷನರೇಟ್‌ನ ಸಿಜಿಎಸ್‌ಟಿ (ಆಂಟಿ-ಎವೆಷನ್) ಅಧೀಕ್ಷಕ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಸೇರಿದಂತೆ ಮೂವರನ್ನು ಸಿಬಿಐ ಬಂಧಿಸಿದೆ.
ಒಟ್ಟು ಲಂಚದ ಮೊತ್ತದಲ್ಲಿ 30 ಲಕ್ಷ ರೂಪಾಯಿಯನ್ನು ಹವಾಲಾ ಮೂಲಕ ಈ ಹಿಂದೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಿಜಿಎಸ್‌ಟಿಯ 6 ಅಧಿಕಾರಿಗಳಲ್ಲಿ ಮುಂಬೈನ ಹೆಚ್ಚುವರಿ ಸಿಜಿಎಸ್ ಟಿ ಆಯುಕ್ತ, 4 ಸೂಪರಿಂಟೆಂಡೆಂಟ್‌ಗಳು, ಒಬ್ಬರು ಜಂಟಿ ಆಯುಕ್ತರು ಮತ್ತು ಚಾರ್ಟರ್ಡ್ ಅಕೌಂಟೆಂಟ್, ಒಬ್ಬ ಖಾಸಗಿ ವ್ಯಕ್ತಿ ಸೇರಿದಂತೆ 8 ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಆರೋಪಿಗಳ ವಿವರ ಹೀಗಿದೆ ;
1. ದೀಪಕ್ ಕುಮಾರ್ ಶರ್ಮಾ, ಹೆಚ್ಚುವರಿ ಆಯುಕ್ತರು, ಸಿಜಿಎಸ್ಟಿ ಕಮಿಷನರೇಟ್, ಮುಂಬೈ ಪಶ್ಚಿಮ
2. ಸಚಿನ್ ಗೋಕುಲ್ಕಾ, ಸೂಪರಿಟೆಂಡೆಂಟ್, ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ (ಬಂಧನಕ್ಕೊಳಗಾದವರು)
3. ಬಿಜೇಂದರ್ ಜನವಾ, ಸೂಪರಿಟೆಂಡೆಂಟ್, ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ
4. ನಿಖಿಲ್ ಅಗರವಾಲ್, ಸೂಪರಿಟೆಂಡೆಂಟ್, ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ
5. ನಿತಿನ್ ಕುಮಾರ್ ಗುಪ್ತಾ, ಸೂಪರಿಟೆಂಡೆಂಟ್, ಸಿಜಿಎಸ್ ಟಿ ಕಮಿಷನರೇಟ್, ಮುಂಬೈ ಪಶ್ಚಿಮ
6. ರಾಹುಲ್ ಕುಮಾರ್, ಜಂಟಿ ಆಯುಕ್ತ ಸಿಜಿಎಸ್ ಟಿ, ಮುಂಬೈ
7. ರಾಜ್ ಅಗರ್ವಾಲ್, ಚಾರ್ಟರ್ಡ್ ಅಕೌಂಟೆಂಟ್ (ಬಂಧನಕ್ಕೊಳಗಾದವರು)
8. ಅಭಿಷೇಕ್ ಮೆಹ್ತಾ (ಖಾಸಗಿ ವ್ಯಕ್ತಿ ಹಾಗೂ ಬಂಧನಕ್ಕೊಳಗಾದವರು)
ಪ್ರಕರಣದ ಹಿನ್ನಲೆಯೇನು?:
“ಸೆ.04 ರ ಸಂಜೆ ಇಲ್ಲಿನ ಸಾಂತಾಕ್ರೂಜ್ ಸಿಜಿಎಸ್ ಟಿ ಕಛೇರಿಯಲ್ಲಿ ದೂರದಾರರನ್ನು ಇಡೀ ರಾತ್ರಿ ಕಛೇರಿಯಲ್ಲಿ ಬಂಧಿಸಿ ಸೆ.05 ರಂದು ಸುಮಾರು 18 ಗಂಟೆಗಳ ನಂತರ ಬಿಡುಗಡೆ ಮಾಡಲಾಯಿತು. ದೂರುದಾರರು ತಮ್ಮ ಬಂಧನದ ಸಮಯದಲ್ಲಿ, ಲಂಚ ಸ್ವೀಕರಿಸುವ ಆರೋಪಿಗಳಲ್ಲಿ ಒಬ್ಬರಾದ ಸಿಜಿಎಸ್‌ಟಿ ಸೂಪರಿಟೆಂಡೆಂಟ್ ಅವರು, ತಮ್ಮನ್ನು ಬಂಧಿಸಬಾರದೆಂದರೆ 80 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಶಿ ನಡೆದು ಅದನ್ನು 60 ಲಕ್ಷ ರೂ. ಗೆ ಅಂತಿಮಗೊಂಡಿತು. ಇದಲ್ಲದೆ ಆರೋಪಿ ಸೂಪರಿಂಟೆಂಡೆಂಟ್‌ನ ತನ್ನ ಇತರ ಮೂವರು ಸಹೋದ್ಯೋಗಿಗಳು (ಸಿಜಿಎಸ್‌ಟಿಯ ಎಲ್ಲಾ ಸೂಪರಿಂಟೆಂಡೆಂಟ್‌ಗಳು) ಸಹ ದೂರುದಾರರ ಮೇಲೆ ಒತ್ತಡ ಹೇರುವಲ್ಲಿ ಅವರೊಂದಿಗೆ ಸೇರಿಕೊಂಡರು ಎಂದು ದೂರುದಾರರು ಆರೋಪಿಸಿದ್ದಾರೆ” ಎಂದು ಸಿಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ದೂರುದಾರನು ಬಂಧನದಲ್ಲಿರುವಾಗ ತನ್ನ ಸಹೋದರ ಸಂಬಂಧಿಗೆ ಕರೆ ಮಾಡಿ, ದೂರುದಾರನನ್ನು ಬಂಧಿಸದಿದ್ದಕ್ಕಾಗಿ ಮತ್ತು ಸಿಜಿಎಸ್ ಟಿಯಿಂದ ನಡೆಯುತ್ತಿರುವ ತನಿಖೆಯಲ್ಲಿ ಆತನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಲು ಸಿಜಿಎಸ್ ಟಿ ಅಧಿಕಾರಿಗಳಿಗೆ ಲಂಚ ನೀಡುವಂತೆ ತಿಳಿಸಲಾಗಿತ್ತು. ಹೀಗಾಗಿ ದೂರುದಾರನ ಸೋದರ ಸಂಬಂಧಿ ಆರೋಪಿಯ ಲೆಕ್ಕ ಪರಿಶೋಧಕ(CA)ನನ್ನು ಸಂಪರ್ಕಿಸಿದ ನಂತರ ಆರೋಪಿತರಾದ ಜಂಟಿ ಆಯುಕ್ತ ಹಾಗೂ ಸಿಜಿಎಸ್‌ಟಿ ಅಧಿಕಾರಿಗಳ, ಖಾಸಗಿ ವ್ಯಕ್ತಿ ಮತ್ತು ಹಿರಿಯ ಸಿಜಿಎಸ್‌ಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ” ಎಂದು ಆರೋಪಿಸಲಾಗಿದೆ.
“ಆರೋಪಿಗಳಾದ ಸಿಎ ಮತ್ತು ಇತರ ಖಾಸಗಿ ವ್ಯಕ್ತಿ ಮಧ್ಯರಾತ್ರಿಯಲ್ಲಿ ಸಿಜಿಎಸ್‌ಟಿ ಕಚೇರಿಗೆ ಭೇಟಿ ನೀಡಿ ಸಿಜಿಎಸ್‌ಟಿ ಅಧಿಕಾರಿಗಳೊಂದಿಗೆ ಲಂಚದ ಮಾತುಕತೆ ನಡೆಸಿ ಅಂತಿಮಗೊಳಿಸಿದರು” ಎಂದು ಆರೋಪಿಸಲಾಗಿದೆ. “ಆರೋಪಿ ಸಿಎ ಮೂಲಕ ಸಿಜಿಎಸ್‌ಟಿ ಅಧಿಕಾರಿಗಳಿಗೆ ತಲುಪಿಸಲು 60 ಲಕ್ಷ ರೂ. ಸಂಧಾನದ ಲಂಚದ ಪೈಕಿ 30 ಲಕ್ಷ ರೂ. ಗಳನ್ನು ದೂರುದಾರರ ಸೋದರ ಸಂಬಂಧಿ ಅಂಗಾಡಿಯಾ ಮೂಲಕ ಪಾವತಿಸಿದ್ದಾರೆ. ಅದಾದ ಮೇಲಷ್ಟೆ ದೂರುದಾರರನ್ನು ಮರುದಿನ (ಸೆ.05) ಸಿಜಿಎಸ್ ಟಿ ಕಛೇರಿಯಿಂದ ಮುಕ್ತಿ ದೊರಕಿತು” ಪತ್ರಿಕಾ ಪ್ರಕಟಣೆಯಲ್ಲಿ ಸಿಬಿಐ ತಿಳಿಸಿದೆ.
ಟ್ರ್ಯಾಪ್ ಪ್ರಕ್ರಿಯೆಯಲ್ಲಿ ಲಂಚ ಸ್ವೀಕರಿಸಿದ ತಿಳಿಸಿದ ಎಲ್ಲಾ ಎಂಟು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಅವರನ್ನು ಮುಂಬೈನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಸೆ.10 ರವರೆಗೆ ಬಂಧಿತ ಅಧೀಕ್ಷಕ ಸಿಜಿಎಸ್ ಟಿ ಮತ್ತು ಸಿಎ ಯವರನ್ನು ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿದೆ. ಬಂಧಿತ ಖಾಸಗಿ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮುಂಬೈ ಮತ್ತು ಸುತ್ತಮುತ್ತಲಿನ ಆರೋಪಿಗಳ ಅಧಿಕೃತ ಮತ್ತು ವಸತಿ ಆವರಣದಲ್ಲಿ 9 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ವಿವಿಧ ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.